ಕರ್ನಾಟಕ ಲೋಕ ಸೇವಾ ಆಯೋಗವು ವಾಣಿಜ್ಯ ತೆರಿಗೆ ಇನ್‌ಸ್ಪೆಕ್ಟರ್ ಹುದ್ದೆಗಳ ನೇಮಕಕ್ಕೆ ಸಂಬಂಧಪಟ್ಟಂತೆ ಉತ್ತರ ಕೀ ಪ್ರಕಟಿಸಿದೆ. ಒಟ್ಟು 245 ಹುದ್ದೆಗಳ ನೇಮಕಕ್ಕೆ ಸಂಬಂಧಪಟ್ಟ ಸ್ಪರ್ಧಾತ್ಮಕ ಪರೀಕ್ಷೆಯ ಉತ್ತರ ಕೀಗಳನ್ನು ಪ್ರಕಟಿಸಿದೆ. ಪರೀಕ್ಷೆ ಬರೆದ ಅಭ್ಯರ್ಥಿಗಳು 29-08-2023 ಸಾಲಿನ ಅಧಿಸೂಚನೆಗೆ ಸಂಬಂಧಪಟ್ಟ ಈ ಉತ್ತರ ಕೀಗಳನ್ನು ಕೆಪಿಎಸ್‌ಸಿ ವೆಬ್‌ಸೈಟ್‌ನಲ್ಲಿ ವೀಕ್ಷಿಸಬಹುದು. ಕೆಪಿಎಸ್‌ಸಿ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಆನ್ಸರ್ ಕೀಗಳನ್ನು ನೇರವಾಗಿ ನೋಡಲು ಕೆಪಿಎಸ್‌ಸಿ ವೆಬ್‌ಸೈಟ್‌ಗೆ ಹೋಗಬಹುದು.
Blog
-

NTPC Jobs: ಎನ್‌ಟಿಪಿಸಿ ಲಿಮಿಟೆಡ್‌ನಲ್ಲಿ ಉದ್ಯೋಗಾವಕಾಶ, 55 ಸಾವಿರ ರೂ ವೇತನ, 223 ಹುದ್ದೆಗಳಿಗೆ ಅರ್ಜಿ ಸಲ್ಲಿಸಿ
ಭಾರತದ ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮ (ಎನ್‌ಟಿಪಿಸಿ ಲಿಮಿಟೆಡ್)ವು ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಹುದ್ದೆಗಳನ್ನು ಭರ್ತಿ ಮಾಡುತ್ತಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಮುನ್ನ ಹುದ್ದೆಗಳ ವಿವರ, ವಿದ್ಯಾರ್ಹತೆ, ವಯೋಮಿತಿ, ಅರ್ಜಿ ಸಲ್ಲಿಸುವ ವಿಧಾನ, ಆಯ್ಕೆ ಪ್ರಕ್ರಿಯೆ, ಅಧಿಸೂಚನೆ ಪಿಡಿಎಫ್ ಸೇರಿದಂತೆ ಸಂಪೂರ್ಣ ವಿವರವನ್ನು ಇಲ್ಲಿ ಪಡೆಯಿರಿ.
ಹುದ್ದೆಗಳ ವಿವರ
ಒಟ್ಟು 223 ಹುದ್ದೆಗಳಿವೆ. ಇವುಗಳಲ್ಲಿ ಸಾಮಾನ್ಯ ಅಭ್ಯರ್ಥಿಗಳಿಗೆ 98, ಇಡಬ್ಲ್ಯುಎಸ್‌ಗೆ 22, ಒಬಿಸಿಗೆ 40, ಎಸ್‌ಸಿ ಅಭ್ಯರ್ಥಿಗಳಿಗೆ 39 ಮತ್ತು ಎಸ್‌ಟಿ ಅಭ್ಯರ್ಥಿಗಳಿಗೆ 24 ಹುದ್ದೆಗಳನ್ನು ಮೀಸಲಿಡಲಾಗುತ್ತದೆ.
ವಿದ್ಯಾರ್ಹತೆ: ಎಲೆಕ್ಟ್ರಿಕಲ್/ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು. 100 ಮೆಗಾವ್ಯಾಟ್ ಅಥವಾ ಅದಕ್ಕಿಂತ ಹೆಚ್ಚು ಸಾಮರ್ಥ್ಯದ ಪವರ್ ಪ್ಲಾಂಟ್‌ನಲ್ಲಿ ಒಂದು ವರ್ಷದ ಆಪರೇಷನ್/ ಮೇಂಟೆನ್ಸ್ ಅನುಭವ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕು. ಪದವಿಯಲ್ಲಿ ಕನಿಷ್ಠ 40ಕ್ಕಿಂತ ಹೆಚ್ಚು ಅಂಕ ಪಡೆದಿರಬೇಕು.RRB ALP Recruitment 2024: ಭಾರತೀಯ ರೈಲ್ವೆಯಲ್ಲಿ ಉದ್ಯೋಗ, 5696 ಅಸಿಸ್ಟೆಂಟ್ ಲೊಕೊ ಪೈಲಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಆರ್‌ಆರ್‌ಬಿ
ಸೇವೆಯ ಅವಧಿ: ಇದು 3 ವರ್ಷದ ಗುತ್ತಿಗೆ ಆಧರಿತ ಉದ್ಯೋಗ, ಎರಡು ವರ್ಷಗಳ ಕಾಲ ವಿಸ್ತರಣೆ ಮಾಡುವ ಸಾಧ್ಯತೆ ಇರುತ್ತದೆ. ರಾತ್ರಿ ಶಿಫ್ಟ್ ಸೇರಿದಂತೆ ವಿವಿಧ ಪಾಳಿಗಳಲ್ಲಿ ಕೆಲಸ ಮಾಡಲು ಸಿದ್ಧರಿರುವವರು ಮಾತ್ರ ಅರ್ಜಿ ಸಲ್ಲಿಸಬಹುದು.
ವಯೋಮಿತಿ
35 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ವಯೋಮಿತಿಯಲ್ಲಿ ಅರ್ಹ ಅಭ್ಯರ್ಥಿಗಳಿಗೆ ಸಡಿಲಿಕೆ ಇರುತ್ತದೆ.
ವೇತನ ಎಷ್ಟು?
55,000 ರೂ. ಮಾಸಿಕ ವೇತನ ಇರುತ್ತದೆ. ಹೆಚ್ಚುವರಿಯಾಗಿ ಎಚ್‌ಆರ್‌ಎ/ ಕಂಪನಿ ಸೌಕರ್ಯಗಳು ಇರುತ್ತವೆ. ಇದರೊಂದಿಗೆ ರಾತ್ರಿ ಪಾಳಿಗೆ ಹೆಚ್ಚುವರಿ ವೇತನವೂ ಇರುತ್ತದೆ. ಕುಟುಂಬಕ್ಕೆ ವೈದ್ಯಕೀಯ ಸೌಕರ್ಯಗಳು ಇರುತ್ತವೆ.ಅರ್ಜಿ ಸಲ್ಲಿಸುವುದು ಹೇಗೆ?
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಆಸಕ್ತ ಅಭ್ಯರ್ಥಿಗಳು ಮೊದಲಿಗೆ https://www.ntpc.co.in/ ವೆಬ್‌ಸೈಟ್‌ಗೆ ಭೇಟಿ ನೀಡಿ. ಇದಾದ ಬಳಿಕ ಕರಿಯರ್ ಪುಟಕ್ಕೆ ಹೋಗಿ ಅಲ್ಲಿ ಅರ್ಜಿ ಸಲ್ಲಿಸಿರಿ. ಆನ್‌ಲೈನ್ ಹೊರತುಪಡಿಸಿ ಬೇರೆ ಯಾವುದೇ ವಿಧಾನಗಳ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿಲ್ಲ.
ಅರ್ಜಿ ಶುಲ್ಕ ಎಷ್ಟು?
ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 300 ರೂಪಾಯಿ ಅರ್ಜಿ ಶುಲ್ಕ ಪಾವತಿಸಬೇಕು. ಎಸ್‌ಸಿ/ಎಸ್‌ಟಿ ಮತ್ತು ಮಹಿಳಾ ಅಭ್ಯರ್ಥಿಗಳು ಯಾವುದೇ ಶುಲ್ಕ ಪಾವತಿಸುವ ಅಗತ್ಯವಿರುವುದಿಲ್ಲ. ಅರ್ಜಿ ಶುಲ್ಕವನ್ನು ಎಸ್‌ಬಿಐ ಬ್ಯಾಂಕ್ ಖಾತೆಯಲ್ಲಿ ಸಲ್ಲಿಸಬಹುದು. ಈ ಕುರಿತು ಹೆಚ್ಚಿನ ವಿವರವನ್ನು ಈ ಕೆಳಗೆ ನೀಡಲಾದ ಅಧಿಸೂಚನೆಯಿಂದ ಪಡೆಯಿರಿ. ಸರಕಾರಿ ಉದ್ಯೋಗಗಳ ಮಾಹಿತಿಗಾಗಿ ನಿರಂತರವಾಗಿ sarakarijobs.comಗೆ ಭೇಟಿ ನೀಡಿ.
ಡಿಸ್ಕ್ಲೈಮರ್: ಉದ್ಯೋಗಾಂಕ್ಷಿಗಳಿಗೆ ಮಾಹಿತಿ ನೀಡುವ ಸಲುವಾಗಿ ಸರಕಾರಿಜಾಬ್ಸ್.ಕಾಂ ತಾಣವು ಉದ್ಯೋಗ ಅಧಿಸೂಚನೆ ಆಧರಿತ ವಿವರಗಳನ್ನು ಇಲ್ಲಿ ನೀಡುತ್ತಿದೆ. ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ನಿಗದಿತ ಸಂಸ್ಥೆಯ ವೆಬ್‌ಸೈಟ್‌ನಿಂದ ಅಧಿಸೂಚನೆ ಡೌನ್‌ಲೋಡ್ ಮಾಡಿಕೊಂಡು ಸಂಪೂರ್ಣ ಮಾಹಿತಿ ಪಡೆದು ಅರ್ಜಿ ಸಲ್ಲಿಸಿರಿ.́ -
ಪಿಎಸ್ಐ ಅಕ್ರಮದ ವರದಿ ಕುರಿತು ಸಿಎಂ ಜತೆ ಚರ್ಚಿಸಿ ಕ್ರಮ: ಗೃಹ ಸಚಿವ ಡಾ. ಜಿ.ಪರಮೇಶ್ವರ
ಬೆಂಗಳೂರು (ಜ.23):- ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿ ಪಿಎಸ್ಐ ಮರುಪರೀಕ್ಷೆ ನಡೆಸಲಾಗುತ್ತಿದ್ದು, ಅಭ್ಯರ್ಥಿಗಳು ಯಾವುದೇ ರೀತಿಯ ಆತಂಕ ಪಡುವ ಅಗತ್ಯವಿಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದರು.
ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಹಳ ದಿನದಿಂದ ನೆನೆಗುದಿಗೆ ಬಿದ್ದಿದ್ದ ಪಿಎಸ್ಐ ಪರೀಕ್ಷೆ ಇವತ್ತು ನಡೆಯುತ್ತಿದೆ. ಕಳೆದ ಬಾರಿ ರೀತಿ ಆಗದಂತೆ ಈ ಪರೀಕ್ಷೆಯನ್ನ ಎಚ್ಚರಿಕೆಯಿಂದ ನಡೆಸುತ್ತಿದ್ದೇವೆ. ಹೈಕೋರ್ಟ್ ಆದೇಶದ ಪ್ರಕಾರ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ವಹಿಸಲಾಗಿದೆ. ಯಾವುದೇ ಸಮಸ್ಯೆ ಆಗುವುದಿಲ್ಲ ಎಂಬ ವಿಶ್ವಾಸವಿದೆ ಎಂದರು.
ಕಳೆದ ಬಾರಿ ಅಕ್ರಮದ ಕುರಿತು ನ್ಯಾ. ವೀರಪ್ಪ ಅವರ ಆಯೋಗದ ವರದಿ ಕೊಟ್ಟಿದೆ. ನಾನು ಅ ವರದಿಯನ್ನ ನೋಡಿಲ್ಲ. ಮುಖ್ಯಮಂತ್ರಿಯವರಿಗೆ ನೀಡಿದ್ದಾರೆ. ವರದಿಯಲ್ಲಿ ಏನು ಶಿಫಾರಸು ಮಾಡಿದ್ದಾರೋ ಪರಿಶೀಲನೆ ಮಾಡಿ ಕ್ರಮ ತೆಗೆದುಕೊಳ್ಳಲಾಗುವುದು. ಅದರಲ್ಲಿ ಯಾರ ಹೆಸರು ಇದೆ ಎಂಬುದು ಗೊತ್ತಿಲ್ಲ. ನಾವೆಲ್ಲ ಸಿಎಂ ಜೊತೆ ಕುಳಿತು ವರದಿ ವಿಶ್ಲೇಷಣೆ ಮಾಡುತ್ತೇವೆ. ಅಕ್ರಮದ ಬಗ್ಗೆ ಬಹಿರಂಗ ಹೇಳಿಕೆ ನೀಡಿದವರು ಸಮಿತಿಯು ವಿಚಾರಣೆ ವೇಳೆ ಕರೆದಾಗ ಹೋಗಿರಲಿಲ್ಲ. ಅದು ಯಾವ ರೀತಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಮುಂದಿನ ನಿರ್ಧಾರ ಏನು ಮಾಡು ಎಂಬುದನ್ನು ತೀರ್ಮಾನಿಸುತ್ತೇವೆ ಎಂದು ಹೇಳಿದರು
ಆಡಿಯೋ ವೈರಲ್ ಪ್ರಕರಣಕ್ಕು ಪಿಎಸ್ಐ ಮರುಪರೀಕ್ಷೆಗೂ ಯಾವುದೇ ಸಂಬಂಧವಿಲ್ಲ. ಈಗಾಗಲೇ ಎಸ್ಐ ಲಿಂಗಯ್ಯ ಎಂಬುವರನ್ನು ಸಿಸಿಬಿ ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ. ಆರೋಪಿತ ಎಸ್ಐ ಇಂಟಲಿಜೆನ್ಸ್‌ನಲ್ಲಿ ಕರ್ತವ್ಯನಿರ್ವಹಿಸುತ್ತಿದ್ದ. ಈ ಪರೀಕ್ಷೆಯಲ್ಲಿಯೂ ಅಕ್ರಮ ನಡೆಯುತ್ತಿರಬಹುದು. ಅದರ ಸುಳಿವು ಸಿಗಬಹುದು ಎಂಬ ನಿಟ್ಟಿನಲ್ಲಿ ನಕಲಿ (Fake call) ಕರೆ ಮಾಡಿರುವುದಾಗಿ ಹೇಳಿಕೆ ನೀಡಿದ್ದಾನೆ. ಸಿಸಿಬಿ ಅವರು ತನಿಖೆ ಮುಂದುವರಿಸಿದ್ದಾರೆ ಎಂದು ತಿಳಿಸಿದರು.
ರಾಹುಲ್ ಗಾಂಧಿ ಅವರು ಹಿಂದೆ ಭಾರತ್ ಜೋಡೋ ಪಾದ ಯಾತ್ರೆ ಮಾಡಿದ್ದರು. ದೇಶದಲ್ಲಿ ಒಳ್ಳೆ ವಾತಾವರಣ ಆಗಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಂತಿ ಇರಬೇಕು ಎಂಬುದು ಪಾದಯಾತ್ರೆಯ ಉದ್ದೇಶ. ಅದು ಮುಂದುವರೆದ ಭಾಗವಾಗಿ ಈಗ 6 ಸಾವಿರ ಕಿ.ಮೀ ಮತ್ತೆ ಪಾದಯಾತ್ರೆ ಆರಂಭಿಸಿದ್ದಾರೆ. ಅದು ಶಾಂತಿಯುತವಾಗಿ ಕೈಗೊಂಡಿದ್ದಾರೆ. ಶಾಂತಿ ಸಂದೇಶ ಸಾರಲು ನಡೆಸುತ್ತಿದ್ದಾರೆ. ಅದರೆ ಅಸ್ಸಾಂ ಮುಖ್ಯಮಂತ್ರಿಯವರು ಬೇಕಂತಲೇ ಅಡ್ಡಿ ಪಡಿಸುತ್ತಿದ್ದಾರೆ ಎಂದರು.
ಬಿಜೆಪಿಯವರು ಉದ್ದೇಶಪೂರ್ವಕವಾಗಿ ಪಾದಯಾತ್ರೆಯನ್ನು ತಡೆಯುವುದು, ಯಾತ್ರಿಗಳ ಮೇಲೆ ಗಲಾಟೆ ಮಾಡುತ್ತಿದ್ದಾರೆ. ಯಾತ್ರೆಯಿಂದ ಬಿಜೆಪಿಗೆ ಭಯ ಅಗುತ್ತಿರಬಹುದು ಅನ್ನಿಸುತ್ತದೆ. ಅಸ್ಸಾಂ ಮುಖ್ಯಮಂತ್ರಿಗೆ ಏನು ನೋವಿದೆಯೋ ಗೊತ್ತಿಲ್ಲ. ಅವರು ನಮ್ಮ ಪಕ್ಷದಲ್ಲಿ ಇದ್ದವರು. ಇಂತಹ ಯಾತ್ರೆಗೆ ಅವಕಾಶ ಕೊಡಲಿಲ್ಲ ಅಂದರೆ ಹೇಗೆ. ರಾಹುಲ್ ಗಾಂಧಿಗೆ ಹೀಗೆ ಆದರೆ, ದೇಶದಲ್ಲಿನ ಸಾಮಾನ್ಯ ಜನರ ಕಥೆ ಏನು? ಹೀಗಾಗಿ ದೇಶ್ಯಾದ್ಯಂತ ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಹೇಳಿದರು.
ನಿಗಮ-ಮಂಡಳಿಗಳಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರರನ್ನು ನೇಮ ಮಾಡೋವಾಗ ನಮ್ಮ ಅಭಿಪ್ರಾಯವನ್ನು ಯಾರು ಕೇಳಿಲ್ಲ. ಒಂದೆರಡು ಹೆಸರು ಕೊಡಿ ಅಂದಾಗ ಕೊಟ್ಟಿದ್ದೇನೆ. ಆದರೆ, ನಮ್ಮ ಜತೆ ಮಾತಾಡಿ ಪಟ್ಟಿ ಮಾಡಿಲ್ಲ. ಜಿಲ್ಲಾ ಮಟ್ಟದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿರುವ ಮುಖಂಡರ ಕೆಲಸ ನಮಗೆ ಗೊತ್ತಿರುತ್ತೆ. ಸಿಎಂ ಹಾಗೂ ಪಕ್ಷದ ಅಧ್ಯಕ್ಷರು ಇದ್ದಾರೆ. ಆಯ್ಕೆ ವಿಚಾರದ ಜವಾಬ್ದಾರಿಯನ್ನು ಅವರಿಗೆ ಬಿಡಬೇಕು ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರು ಜಿಲ್ಲಾ ನಾಯಕರ ಜತೆ ಮಾತಾಡಿ ಪಟ್ಟಿ ಮಾಡಬೇಕು. ಅದರೆ ಈಗ ಪಕ್ಷದ ಪ್ರಧಾನ ಕಾರ್ಯದರ್ಶಿಯವರೇ ಮಾಡುತ್ತಿದ್ದಾರೆ. ಹೀಗಾಗಿ ಪಟ್ಟಿ ಸಿದ್ಧಪಡಿಸುವುದು ನಿಧಾನವಾಗಿದೆ. ನೋಡೋಣ ಏನ್ ಮಾಡ್ತಾರೆ ಅಂತ ಎಂದರು.
ನಾನು ಸಹ 8 ವರ್ಷ ಪಕ್ಷದ ಅಧ್ಯಕ್ಷನಾಗಿದ್ದೆ. ಯಾರು ಯಾರು ಕೆಲಸ ಮಾಡಿದ್ದಾರೆ ಎಂಬುದು ನನಗೆ ಗೊತ್ತಿದೆ. ಹತ್ತಾರು ವರ್ಷ ಪಕ್ಷಕ್ಕೆ ದುಡಿದವರಿದ್ದಾರೆ. ಅವರಿಗೆ ಅಧಿಕಾರ ಕೊಡಬೇಕು. ನಮ್ಮ ಅಭಿಪ್ರಾಯ ಪಡೆಯದೇ ಇರುವುದರಿಂದ ಹೀಗೆ ಆಗಿದೆ. ಕೆಲಸ ಮಾಡದವರಿಗೆ ಅಧಿಕಾರ ಕೊಟ್ಟರೆ, ಕೆಲಸ ಮಾಡಿರುವರಿಗೆ ನೋವು, ಅಸಮಾಧಾನವಾಗುತ್ತದೆ. ಹೀಗಾಗಿ ಮುಖಂಡರು, ಜಿಲ್ಲಾ ಅಧ್ಯಕ್ಷರ ಸಲಹೆಗಳನ್ನು ಕೇಳಬೇಕಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೈ ಶ್ರೀರಾಮ್ ಅಂದರೆ ತಪ್ಪೇನು. ನಾವೆಲ್ಲರೂ ಜೈ ಶ್ರೀರಾಮ್ ಅಂತ ಹೇಳಿದ್ದೇವೆ. ಹೇಳದೇ ಇದ್ದರೆ ಶ್ರೀರಾಮನ ವಿರೋಧ ಅಂತಾರೆ. ಹೇಳಿದರೆ ಹೀಗೆ ಅಂತಾರೆ. ಇದರಲ್ಲಿ ಯಾವುದು ಸರಿ ಎಂದರು.
ನಾವೆಲ್ಲ ಶ್ರೀರಾಮನ ಭಕ್ತರೇ. ಒಂದಲ್ಲ ಒಂದು ರೀತಿ ಶ್ರೀರಾಮನ ಆದರ್ಶ ಪಾಲನೆ ಮಾಡಬೇಕು ಅಂತ ಹೇಳುತ್ತೀವಿ. ಶ್ರೀರಾಮ ಬರೀ ನಾಲ್ಕು ಜನಕ್ಕೆ ಸೀಮಿತವಲ್ಲ. ನಮಗೆ ದಶರಥ ರಾಮ ಬೇಕು. ಮೋದಿಯ ರಾಮ ಬೇಕಾಗಿಲ್ಲ. ನಮಗೆ ಈ ದೇಶವನ್ನು ರಾಮರಾಜ್ಯ ಮಾಡಿದ ದಶರಥ ರಾಮ ಬೇಕೆ ಹೊರತು. ರಾಮನ ಹೆಸರು ಹೇಳಿಕೊಂಡು ಒಡೆದಾಳುವ ನೀತಿ ಆಚರಣೆ ಮಾಡುವವರು ಬೇಕಿಲ್ಲ ಎಂದು ಹೇಳಿದರು.
-

Success Story: ವಾಟ್ಸ್‌ಆ್ಯಪ್ ಸ್ಥಾಪಕ ಜಾನ್ ಕೋಮ್ ಯಶೋಗಾಥೆ
ಜಗತ್ತಿನ ಸುಮಾರು 109 ದೇಶಗಳಲ್ಲಿ ಜನಪ್ರಿಯತೆ ಪಡೆದಿರುವ ವಾಟ್ಸ್‌ಆ್ಯಪ್ ಬಗ್ಗೆ ಗೊತ್ತಿಲ್ಲದೆ ಇರುವವರು ಯಾರೂ ಇರಲಿಕ್ಕಿಲ್ಲ. ಇದನ್ನು ಬರೋಬ್ಬರಿ 1600 ಕೋಟಿ ಡಾಲರ್ ಕೊಟ್ಟು ಫೇಸ್‌ಬುಕ್ ಖರೀದಿಸಿತ್ತು.
ಇಷ್ಟೊಂದು ದುಬಾರಿ ಮೊತ್ತಕ್ಕೆ ಬಿಕರಿಯಾದ ವಾಟ್ಸ್‌ಆ್ಯಪ್ ಅನ್ನು ಆರಂಭಿಸಿದ್ದು ಜಾನ್ ಕೋಮ್. ಈತನ ಬಾಲ್ಯ, ಬದುಕು, ಸಾಧನೆ ಎಲ್ಲರಿಗೂ ಸೂಧಿರ್ತಿ ನೀಡುವಂತದ್ದು.
ಈತನ ಕತೆ ಆರಂಭವಾಗುವುದು ದೂರದ ಉಕ್ರೈನ್‌ನಿಂದ. ಅದು 1992ನೇ ಇಸವಿ. ಜಾನ್ ಕೋಮ್ ಎಂಬ ಬಾಲಕನಿಗೆ 16 ವರ್ಷ ವಯಸ್ಸು. ಅರ್ಥವ್ಯವಸ್ಥೆ ಕೆಟ್ಟದಾಗಿತ್ತು. ಯಾರ ಕೈಯಲ್ಲಿಯೂ ದುಡ್ಡಿರಲಿಲ್ಲ. ದಟ್ಟ ದರಿದ್ರ ಪರಿಸ್ಥಿತಿ. ಇಂತಹ ವಾತಾವರಣದಲ್ಲಿ ಮಗನ ಭವಿಷ್ಯ ರೂಪಿಸಲು ಸಾಧ್ಯವೇ ಇಲ್ಲವೆಂದು ಜಾನ್ ಕೋಮ್ ತಾಯಿಗೆ ತಿಳಿಯಿತು. ಆ ಕಡು ಬಡತನದಲ್ಲಿ ಆ ಮಹಾತಾಯಿ ಮಗನ ಭವಿಷ್ಯಕ್ಕಾಗಿ ಅಮೆರಿಕಕ್ಕೆ ವಲಸೆ ಹೋಗಲು ನಿರ್ಧರಿಸಿದರು. ತಂದೆ ಉಕ್ರೇನ್‌ನಲ್ಲಿಯ ಉಳಿದರು. ಮಗನ ಭವಿಷ್ಯಕ್ಕಾಗಿ ಅಪ್ಪ-ಅಮ್ಮ ದೂರದೂರ ಇರಬೇಕಾಯಿತು. ಅಮೆರಿಕಕ್ಕೆ ಬಂದಾಗ ಕೈಯಲ್ಲಿ ಹಣವಿಲ್ಲ. ಹೊಟ್ಟೆ ತುಂಬಲು ಸರಕಾರದ ರೇಷನ್ ಇತ್ತು. ಬಾಲಕ ಕೋಮ್ ದಿನಸಿ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಂಡ.ಪ್ರೋಗ್ರಾಮಿಂಗ್ ಪ್ರೀತಿ
18ನೇ ವಯಸ್ಸಿಗೆ ಪ್ರೋಗ್ರಾಮಿಂಗ್ ಭಾಷೆ ಕಲಿಯಲು ಜಾನ್ ಬಯಸಿದ. ಕಾಲೇಜಿಗೆ ಹೋಗಿ ಕಲಿಯಲು ಅಷ್ಟೊಂದು ದುಡ್ಡೆಲ್ಲಿತ್ತು?. ಸೆಕೆಂಡ್ ಹ್ಯಾಂಡ್ ಬುಕ್ ಪುಸ್ತಕದಂಗಡಿಗಳಿಂದ ಪುಸ್ತಕಗಳನ್ನು ತಂದು ಓದತೊಡಗಿದ. ಓದಿದ ನಂತರ ಆ ಪುಸ್ತಕವನ್ನು ಅದೇ ಅಂಗಡಿಗಳಿಗೆ ವಾಪಸ್ ನೀಡುತ್ತಿದ್ದ. ಕಲಿಕೆ ಮತ್ತು ಗಳಿಕೆ ಜೊತೆಯಾಗಿ ಮಾಡುತ್ತಿದ್ದ. ಕೆಲವೇ ಸಮಯದಲ್ಲಿ ಶಾಲೆಗೆ ಹೋಗುವುದನ್ನು ಆತ ಇಷ್ಟಪಡಲಿಲ್ಲ. ಯಾಹೂನಲ್ಲಿ ಕೆಲಸ ಸಿಕ್ಕಿದಾಗ ಅಲ್ಲಿ ಮತ್ತೊಬ್ಬ ಗೆಳೆಯ ಸಿಕ್ಕ. ಅವನ ಹೆಸರು ಬ್ರೈನ್ ಆ್ಯಕ್ಟನ್.
ಕೋಮ್ ತಾಯಿ ಕ್ಯಾನ್ಸರ್‌ನಿಂದ 2000ನೇ ಇಸವಿಯಲ್ಲಿ ಮೃತಪಟ್ಟರು. 1997ರಲ್ಲಿ ಉಕ್ರೇನ್‌ನಲ್ಲಿ ಆತನ ತಂದೆಯೂ ಇಲ್ಲವಾದರು. ಆತ ಒಂಟಿಯಾದ. ಆಗ ಆತನಿಗೆ ಆ್ಯಕ್ಟನ್ ಗೆಳೆತನವೇ ಬಂಧುಬಳಗವಾಯಿತು. ಇವರಿಬ್ಬರು ಯಾಹೂ ಕೆಲಸವನ್ನು ಎಂಜಾಯ್ ಮಾಡುತ್ತಿರಲಿಲ್ಲ. ಅತ್ಯುತ್ತಮ ಜಾಹೀರಾತು ತರಲು ಯಾಹೂ ಮಾಡಲು ಉದ್ದೇಶಿದಕ್ಕಿಂತ ಭಿನ್ನವಾಗಿ ಕೆಲಸ ಮಾಡತೊಡಗಿದರು. ಇದರಿಂದ ಕೆಲಸವನ್ನೂ ಬಿಡಬೇಕಾಯಿತು.2007ರಲ್ಲಿ ಕೋಮ್ ಮತ್ತು ಆ್ಯಕ್ಟನ್ ಯಾಹೂ ಬಿಟ್ಟರು. ಮುಂದೇನೂ ಎನ್ನುವುದು ಅವರಿಗೆ ಸ್ಪಷ್ಟವಾಗಲಿಲ್ಲ. ತಮ್ಮ ಮನಸ್ಸಿನ ಸಮಧಾನಕ್ಕಾಗಿ ಅವರು ಒಂದು ವರ್ಷ ದಕ್ಷಿಣ ಅಮೆರಿಕದ್ಯಾಂತ ಸುತ್ತಿದರು. ಆದರೂ, ಅವರಿಗೆ ಯಾವುದೇ ಐಡಿಯಾ ಸಿಗಲಿಲ್ಲ.
2009ರಲ್ಲಿ ಕೋಮ್ ಒಂದು ಐಫೋನ್ ಖರೀದಿಸಿದರು. ಆ್ಯಪ್ ಸ್ಟೋರ್ ಎನ್ನುವುದು ಆಗಮಿಸಿ ಕೆಲವೇ ಸಮಯವಾಗಿತ್ತು. ಐಫೋನ್ ನೋಡುತ್ತಿದ್ದಂತೆ, ಕೋಮ್ ಮನಸ್ಸಲ್ಲಿ ಹೊಸ ಉದ್ಯಮವೊಂದರ ಕಲ್ಪನೆ ಕಣ್ಣ ಮುಂದೆ ಬಂತು. ಇದೆಲ್ಲ ಆಗೋಲ್ಲ ಬಿಡು ಎಂಬ ಭಾವ ಆತನಲ್ಲಿ ಇರಲಿಲ್ಲ. ಒಂದು ಹೊಸ ಆ್ಯಪ್ ಅಭಿವೃದ್ಧಿಪಡಿಸುವ ಕುರಿತು ಆಲೋಚನೆ ಆತನಿಗೆ ಬಂತು.
ಐಫೋನ್ ಡೆವಲಪರ್ ಜೊತೆ ಸೇರಿ ಒಂದು ಆ್ಯಪ್ ರಚಿಸಿದರು. ಆದರೆ, ಅದು ಹೆಚ್ಚು ಜನರನ್ನು ತಲುಪಲಿಲ್ಲ.. 2009ರಲ್ಲಿ ಆ್ಯಪಲ್ ಫುಷ್ ನೋಟಿಫಿಕೇಷನ್ ಆರಂಭಿಸಿತು. ಆ ನೋಟಿಫಿಕೇಷನ್ ಮೂಲಕ ಈ ಆ್ಯಪ್‌ನ ಪ್ರಚಾರ ಮಾಡಿದರು. ಆತನ ಸ್ನೇಹಿತರು ಇದನ್ನು ನೋಡಿ ಜೋಕ್ ಮಾಡಿದರು. ಆದರೆ, ಕೆಲವೇ ದಿನಗಳಲ್ಲಿ ಈ ಆ್ಯಪ್ ಅನ್ನು 2.5 ಲಕ್ಷ ಜನರು ಡೌನ್‌ಲೋಡ್ ಮಾಡಿಕೊಂಡಿದ್ದರು. ಆ ಸಮಯದಲ್ಲಿ ಆ್ಯಕ್ಟನ್ ಇನ್ನೂ ನಿರುದ್ಯೋಗಿಯಾಗಿದ್ದ. ಕೋಮ್ ಆತನಿಗೆ ಈ ಆ್ಯಪ್ ಸಂಸ್ಥೆಗೆ ಸಹ-ಸ್ಥಾಪಕರಾಗುವಂತೆ ಆಫರ್ ನೀಡಿದರು. ಆ್ಯಕ್ಟನ್ ಮತ್ತು ಯಾಹೂನಲ್ಲಿದ್ದ ಆತನ ಸ್ನೇಹಿತರು 2,50,000 ಡಾಲರ್ ಹೂಡಿಕೆ ಮಾಡಿದರು. ಮುಂದೆ ನಡೆದದ್ದು ಇತಿಹಾಸ. ಕೋಮ್ ಮತ್ತು ಆ್ಯಕ್ಟನ್ ಅನ್ವೇಷಣೆಯ ಪ್ರತಿಫಲವೇ ನಮ್ಮನಿಮ್ಮೆಲ್ಲರ ಕೈಯಲ್ಲಿರುವ ವಾಟ್ಸ್‌ಆ್ಯಪ್ ಎಂಬ ಮೆಸೆಂಜರ್ ಆ್ಯಪ್. 900 ಮಿಲಿಯನ್‌ಗೂ ಅಧಿಕ ಬಳಕೆದಾರರನ್ನು ಹೊಂದಿರುವ ಇದನ್ನು ನಂತರ ಬಹುಕೋಟಿ ಡಾಲರ್‌ಗೆ ಫೇಸ್‌ಬುಕ್ ಖರೀದಿಸಿತು.
ನೀತಿ: ನಾವು ಹುಟ್ಟುವಾಗ ಬಡವರಾಗಿರಬಹುದು. ನಾವು ಬಡವರೆಂದು ಹಳಿಯುತ್ತ ಕೂರುವುದು ಬೇಡ. ಕರಿಯರ್ ಕ್ಷೇತ್ರದಲ್ಲಿ ಈಗ ಅಗಾಧ ಅವಕಾಶಗಳಿವೆ. ನಿಂತಲ್ಲಿ ನಿಲ್ಲದೆ ಅತ್ಯುತ್ತಮ ಕರಿಯರ್ ಗುರಿ ಸಾಧಿಸಲು ಕಠಿಣ ಪರಿಶ್ರಮಪಟ್ಟರೆ ಯಶಸ್ಸು ಪಡೆದೇ ಪಡೆಯಬಹುದು. -

NIACL Assistant Jobs: ನ್ಯೂ ಇಂಡಿಯಾ ಅಸ್ಯೂರೆನ್ಸ್‌ನಲ್ಲಿ ಉದ್ಯೋಗಾವಕಾಶ, 300 ಅಸಿಸ್ಟೆಂಟ್ ಹುದ್ದೆಗಳಿಗೆ ಫೆಬ್ರವರಿ 19ರ ಮೊದಲು ಅರ್ಜಿ ಸಲ್ಲಿಸಿ
ಭಾರತದ ಪ್ರಮುಖ ವಿಮಾ ಕಂಪನಿಯಾದ ನ್ಯೂ ಇಂಡಿಯಾ ಅಸ್ಯುರೆನ್ಸ್ ಕಂಪನಿ ಲಿಮಿಟೆಡ್ (NIACL Assistant Online Form 2024) ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಒಟ್ಟು 300 ಹುದ್ದೆಗಳಿವೆ. ಹುದ್ದೆಗಳ ವಿವರ, ವರ್ಗೀಕರಣ, ಅರ್ಜಿ ಸಲ್ಲಿಸುವ ವಿಧಾನ, ವಿದ್ಯಾರ್ಹತೆ, ವಯೋಮಿತಿ, ಅರ್ಜಿ ಶುಲ್ಕ, ಅಧಿಸೂಚನೆ ಸೇರಿದಂತೆ ಸಂಪೂರ್ಣ ವಿವರ ಇಲ್ಲಿದೆ.
ಒಟ್ಟು ಹುದ್ದೆಗಳ ಸಂಖ್ಯೆ: 300
ಹುದ್ದೆಯ ಹೆಸರು: ಅಸಿಸ್ಟೆಂಟ್
ನೇಮಕ ಮಾಡುವ ಕಂಪನಿ: New India Assurance Company Limited (NIACL)ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: ಫೆಬ್ರವರಿ 1, 2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಫೆಬ್ರವರಿ 15, 2024ಅರ್ಜಿ ಸಲ್ಲಿಸುವುದು ಹೇಗೆ?
ಆನ್‌ಲೈನ್ ಮೂಲಕ
ಅರ್ಜಿ ಸಲ್ಲಿಸಲು ವಯೋಮಿತಿ
ಕನಿಷ್ಠ ವರ್ಷ: 21 ವರ್ಷ. ಗರಿಷ್ಠ ವಯೋಮಿತಿ 30 ವರ್ಷ. ವಯೋಮಿತಿಯಲ್ಲಿ ಸರಕಾರದ ನಿಯಮದಂತೆ ಅರ್ಹ ಅಭ್ಯರ್ಥಿಗಳಿಗೆ ಸಡಿಲಿಕೆ ನೀಡಲಾಗುತ್ತದೆ.
ವಿದ್ಯಾರ್ಹತೆ ಏನು?
ಯಾವುದೇ ವಿಷಯದಲ್ಲಿ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು. ವಿವರವಾದ ಅಧಿಸೂಚನೆ ಇನ್ನಷ್ಟೇ ಬಿಡುಗಡೆಯಾಗಬೇಕಾಗಿದೆ. ಹೆಚ್ಚಿನ ವಿವರ ಪಡೆಯಲು sarakarijobs.com ಗೆ ನಿಯಮಿತವಾಗಿ ಭೇಟಿ ನೀಡುತ್ತಿರಿ.
ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ವಿವರ ಪಡೆಯಲು ಭೇಟಿ ನೀಡಬೇಕಾದ ನ್ಯೂ ಇಂಡಿಯಾ ಅಸ್ಯುರೆನ್ಸ್ ಕಂಪನಿಯ ವೆಬ್ ಸೈಟ್ ವಿಳಾಸ: https://www.newindia.co.in/
ಅಧಿಸೂಚನೆ

-

ನಿಮ್ಹಾನ್ಸ್‌ನಲ್ಲಿ ಉದ್ಯೋಗಾವಕಾಶ, 40 ಸಾವಿರ ರೂಪಾಯಿ ವೇತನ
ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಮಾನಸಿಕ ಆರೋಗ್ಯ ಸಂಸ್ಥೆ (ನಿಮ್ಹಾನ್ಸ್)ಯಲ್ಲಿ 1 ಪ್ರಾಜೆಕ್ಟ್ ಅಸೋಸಿಯೇಟ್ ಹುದ್ದೆಯಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ವಿದ್ಯಾರ್ಹತೆ: ಪ್ರಾಜೆಕ್ಟ್ ಅಸೋಸಿಯೇಟ್ ಹುದ್ದೆಗೆ ಲೈಫ್ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿ/ ಬಯೊಲಾಜಿಕಲ್ ಸೈನ್ಸ್/ ಬಯೋ ಟೆಕ್ನಾಲಜಿಯಲ್ಲಿ ಸ್ನಾತಕೋತ್ತರ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು.
ಅನುಭವಿಗಳಿಗೆ ಆದ್ಯತೆ: ಮಾಲಿಕ್ಯುಲರ್ ಬಯೋಲಜಿ ಟೆಕ್ನಿಕ್ಸ್- ಡಿಎನ್‌ಎ/ ಆರ್‌ಎನ್‌ಎ/ ಪ್ರೊಟಿನ್, ಟಿಸ್ಯೂ ಕಲ್ಚರ್, ಸೆಲ್ ಕಲ್ವರ್ ಟೆಕ್ನಿಕ್ಸ್ ಆಂಡ್ ಇಮೇಜಿಂಗ್ ಟೆಕ್ನಿಕ್ಸ್ ಮುಂತಾದ ಮಾಲಿಕ್ಯುಲರ್ ಬಯೋಲಜಿ ಟೆಕ್ನಿಕ್ಸ್‌ನಲ್ಲಿ ಆರು ತಿಂಗಳ ರಿಸರ್ಚ್ ಅನುಭವ ಇರುವವರಿಗೆ ಆದ್ಯತೆ ನೀಡಲಾಗುತ್ತದೆ.
ವಯೋಮಿತಿ: ಅರ್ಜಿ ಸಲ್ಲಿಸಲು ಗರಿಷ್ಠ 30 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.
ವೇತನ: ತಿಂಗಳಿಗೆ 40 ಸಾವಿರ ರೂಪಾಯಿ ವೇತನ ನೀಡಲಾಗುತ್ತದೆ.
ಕೆಲಸದ ಅವಧಿ: ಒಂದು ವರ್ಷ
ಆಯ್ಕೆ ಪ್ರಕ್ರಿಯೆ: ನೇರ ಸಂದರ್ಶನ
ಸಂದರ್ಶನ ದಿನಾಂಕ: ಜನವರಿ 29, 2024
ಸಂದರ್ಶನ ನಡೆಯುವ ಸ್ಥಳ: Committee Room, beside old Registrar Office, Administrative Block, NIMHANS,
Bengaluru-29ಲಿಖಿತ ಪರೀಕ್ಷೆ/ಸ್ಕಿಲ್ ಟೆಸ್ಟ್ ನಡೆಯುವ ಹತ್ತು ನಿಮಿಷದ ಮೊದಲು ಅಭ್ಯರ್ಥಿಗಳು ಸ್ಥಳದಲ್ಲಿ ಹಾಜರಿರಬೇಕು. ಹೆಚ್ಚಿನ ಮಾಹಿತಿಗೆ ಭೇಟಿ ನೀಡಬೇಕಾದ ವೆಬ್‌ಸೈಟ್ ವಿಳಾಸ: nimhans.ac.in
Download Notification
