NTPC Jobs: ಎನ್‌ಟಿಪಿಸಿ ಲಿಮಿಟೆಡ್‌ನಲ್ಲಿ ಉದ್ಯೋಗಾವಕಾಶ, 55 ಸಾವಿರ ರೂ ವೇತನ, 223 ಹುದ್ದೆಗಳಿಗೆ ಅರ್ಜಿ ಸಲ್ಲಿಸಿ

Written By sarkari

Lorem ipsum dolor sit amet consectetur pulvinar ligula augue quis venenatis. 

Advertisements

ಭಾರತದ ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮ (ಎನ್‌ಟಿಪಿಸಿ ಲಿಮಿಟೆಡ್‌)ವು ಅಸಿಸ್ಟೆಂಟ್‌ ಎಕ್ಸಿಕ್ಯೂಟಿವ್‌ ಹುದ್ದೆಗಳನ್ನು ಭರ್ತಿ ಮಾಡುತ್ತಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಮುನ್ನ ಹುದ್ದೆಗಳ ವಿವರ, ವಿದ್ಯಾರ್ಹತೆ, ವಯೋಮಿತಿ, ಅರ್ಜಿ ಸಲ್ಲಿಸುವ ವಿಧಾನ, ಆಯ್ಕೆ ಪ್ರಕ್ರಿಯೆ, ಅಧಿಸೂಚನೆ ಪಿಡಿಎಫ್‌ ಸೇರಿದಂತೆ ಸಂಪೂರ್ಣ ವಿವರವನ್ನು ಇಲ್ಲಿ ಪಡೆಯಿರಿ.

ಹುದ್ದೆಗಳ ವಿವರ

ಒಟ್ಟು 223 ಹುದ್ದೆಗಳಿವೆ. ಇವುಗಳಲ್ಲಿ ಸಾಮಾನ್ಯ ಅಭ್ಯರ್ಥಿಗಳಿಗೆ 98, ಇಡಬ್ಲ್ಯುಎಸ್‌ಗೆ 22, ಒಬಿಸಿಗೆ 40, ಎಸ್‌ಸಿ ಅಭ್ಯರ್ಥಿಗಳಿಗೆ 39 ಮತ್ತು ಎಸ್‌ಟಿ ಅಭ್ಯರ್ಥಿಗಳಿಗೆ 24 ಹುದ್ದೆಗಳನ್ನು ಮೀಸಲಿಡಲಾಗುತ್ತದೆ.

ವಿದ್ಯಾರ್ಹತೆ: ಎಲೆಕ್ಟ್ರಿಕಲ್‌/ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು. 100 ಮೆಗಾವ್ಯಾಟ್‌ ಅಥವಾ ಅದಕ್ಕಿಂತ ಹೆಚ್ಚು ಸಾಮರ್ಥ್ಯದ ಪವರ್‌ ಪ್ಲಾಂಟ್‌ನಲ್ಲಿ ಒಂದು ವರ್ಷದ ಆಪರೇಷನ್‌/ ಮೇಂಟೆನ್ಸ್‌ ಅನುಭವ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕು. ಪದವಿಯಲ್ಲಿ ಕನಿಷ್ಠ 40ಕ್ಕಿಂತ ಹೆಚ್ಚು ಅಂಕ ಪಡೆದಿರಬೇಕು.RRB ALP Recruitment 2024: ಭಾರತೀಯ ರೈಲ್ವೆಯಲ್ಲಿ ಉದ್ಯೋಗ, 5696 ಅಸಿಸ್ಟೆಂಟ್‌ ಲೊಕೊ ಪೈಲಟ್‌ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಆರ್‌ಆರ್‌ಬಿ

ಸೇವೆಯ ಅವಧಿ: ಇದು 3 ವರ್ಷದ ಗುತ್ತಿಗೆ ಆಧರಿತ ಉದ್ಯೋಗ, ಎರಡು ವರ್ಷಗಳ ಕಾಲ ವಿಸ್ತರಣೆ ಮಾಡುವ ಸಾಧ್ಯತೆ ಇರುತ್ತದೆ. ರಾತ್ರಿ ಶಿಫ್ಟ್‌ ಸೇರಿದಂತೆ ವಿವಿಧ ಪಾಳಿಗಳಲ್ಲಿ ಕೆಲಸ ಮಾಡಲು ಸಿದ್ಧರಿರುವವರು ಮಾತ್ರ ಅರ್ಜಿ ಸಲ್ಲಿಸಬಹುದು.

ವಯೋಮಿತಿ

35 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ವಯೋಮಿತಿಯಲ್ಲಿ ಅರ್ಹ ಅಭ್ಯರ್ಥಿಗಳಿಗೆ ಸಡಿಲಿಕೆ ಇರುತ್ತದೆ.

ವೇತನ ಎಷ್ಟು?
55,000 ರೂ. ಮಾಸಿಕ ವೇತನ ಇರುತ್ತದೆ. ಹೆಚ್ಚುವರಿಯಾಗಿ ಎಚ್‌ಆರ್‌ಎ/ ಕಂಪನಿ ಸೌಕರ್ಯಗಳು ಇರುತ್ತವೆ. ಇದರೊಂದಿಗೆ ರಾತ್ರಿ ಪಾಳಿಗೆ ಹೆಚ್ಚುವರಿ ವೇತನವೂ ಇರುತ್ತದೆ. ಕುಟುಂಬಕ್ಕೆ ವೈದ್ಯಕೀಯ ಸೌಕರ್ಯಗಳು ಇರುತ್ತವೆ.

ಅರ್ಜಿ ಸಲ್ಲಿಸುವುದು ಹೇಗೆ?

ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಆಸಕ್ತ ಅಭ್ಯರ್ಥಿಗಳು ಮೊದಲಿಗೆ https://www.ntpc.co.in/ ವೆಬ್‌ಸೈಟ್‌ಗೆ ಭೇಟಿ ನೀಡಿ. ಇದಾದ ಬಳಿಕ ಕರಿಯರ್‌ ಪುಟಕ್ಕೆ ಹೋಗಿ ಅಲ್ಲಿ ಅರ್ಜಿ ಸಲ್ಲಿಸಿರಿ. ಆನ್‌ಲೈನ್‌ ಹೊರತುಪಡಿಸಿ ಬೇರೆ ಯಾವುದೇ ವಿಧಾನಗಳ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿಲ್ಲ.

ಅರ್ಜಿ ಶುಲ್ಕ ಎಷ್ಟು?

ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 300 ರೂಪಾಯಿ ಅರ್ಜಿ ಶುಲ್ಕ ಪಾವತಿಸಬೇಕು. ಎಸ್‌ಸಿ/ಎಸ್‌ಟಿ ಮತ್ತು ಮಹಿಳಾ ಅಭ್ಯರ್ಥಿಗಳು ಯಾವುದೇ ಶುಲ್ಕ ಪಾವತಿಸುವ ಅಗತ್ಯವಿರುವುದಿಲ್ಲ. ಅರ್ಜಿ ಶುಲ್ಕವನ್ನು ಎಸ್‌ಬಿಐ ಬ್ಯಾಂಕ್‌ ಖಾತೆಯಲ್ಲಿ ಸಲ್ಲಿಸಬಹುದು. ಈ ಕುರಿತು ಹೆಚ್ಚಿನ ವಿವರವನ್ನು ಈ ಕೆಳಗೆ ನೀಡಲಾದ ಅಧಿಸೂಚನೆಯಿಂದ ಪಡೆಯಿರಿ. ಸರಕಾರಿ ಉದ್ಯೋಗಗಳ ಮಾಹಿತಿಗಾಗಿ ನಿರಂತರವಾಗಿ sarakarijobs.comಗೆ ಭೇಟಿ ನೀಡಿ.


ಡಿಸ್ಕ್ಲೈಮರ್‌: ಉದ್ಯೋಗಾಂಕ್ಷಿಗಳಿಗೆ ಮಾಹಿತಿ ನೀಡುವ ಸಲುವಾಗಿ ಸರಕಾರಿಜಾಬ್ಸ್‌.ಕಾಂ ತಾಣವು ಉದ್ಯೋಗ ಅಧಿಸೂಚನೆ ಆಧರಿತ ವಿವರಗಳನ್ನು ಇಲ್ಲಿ ನೀಡುತ್ತಿದೆ. ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ನಿಗದಿತ ಸಂಸ್ಥೆಯ ವೆಬ್‌ಸೈಟ್‌ನಿಂದ ಅಧಿಸೂಚನೆ ಡೌನ್‌ಲೋಡ್‌ ಮಾಡಿಕೊಂಡು ಸಂಪೂರ್ಣ ಮಾಹಿತಿ ಪಡೆದು ಅರ್ಜಿ ಸಲ್ಲಿಸಿರಿ.́

RRB ALP Recruitment 2024: ಭಾರತೀಯ ರೈಲ್ವೆಯಲ್ಲಿ ಉದ್ಯೋಗ, 5696 ಅಸಿಸ್ಟೆಂಟ್‌ ಲೊಕೊ ಪೈಲಟ್‌ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಆರ್‌ಆರ್‌ಬಿ