Author: Mallika

  • ದಿ ಶಿರಸಿ ಅರ್ಬನ್ ಸಹಕಾರಿ ಬ್ಯಾಂಕ್ ಲಿಮಿಟೆಡ್ ನಲ್ಲಿ ಹುದ್ದೆ, ಈ ಕೂಡಲೇ ಅರ್ಜಿ ಸಲ್ಲಿಸಿ

    ದಿ ಶಿರಸಿ ಅರ್ಬನ್ ಸಹಕಾರಿ ಬ್ಯಾಂಕ್ ‌ಲಿಮಿಟೆಡ್ ಇಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಈ ಕೆಳಗೆ ನೀಡಲಾಗಿರುವ ಮಾಹಿತಿಯನ್ನು ಓದಿ ಅರ್ಜಿಯನ್ನು ಸಲ್ಲಿಸಬಹುದು. ವಿವರಗಳನ್ನು ಈ ಕೆಳಗೆ ನೀಡಲಾಗಿದೆ.

    ಹುದ್ದೆ : ಮ್ಯಾನೇಜಿಂಗ್ ಡೈರೆಕ್ಟರ್ ಹುದ್ದೆಯನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಿದೆ.

    ಬ್ಯಾಂಕಿಂಗ್/ ಕೋಅಪರೇಟಿವ್ ‌ಬ್ಯಾಂಕಿಂಗ್ / ಡಿಪ್ಲೋಮಾ ಇನ್ ಬ್ಯಾಂಕಿಂಗ್ ಆಂಡ್ ಫೈನಾನ್ಸ್/ ಡಿಪ್ಲೋಮಾ ಇನ್ ಕೋಅಪರೇಟಿವ್ ಬಿಸಿನೆಸ್ ಮ್ಯಾನೇಜ್ಮೆಂಟ್ ಅಥವಾ ಎಂಬಿಎ( ಫೈನಾನ್ಸ್)/ಚಾರ್ಟರ್ಡ್/ಕಾಸ್ಟ್ ಅಕೌಂಟೆಂಟ್ ಅಥವಾ ಪೋಸ್ಟ್ ಗ್ರಾಜ್ಯುಯೇಶನ್ ಇನ್ ಇಕಾನಾಮಿಕ್ಸ್/ ಅಕೌಂಟೆನ್ಸಿ/ ಸ್ಟಾಟಿಸ್ಟಿಕ್ಸ್/ ಮ್ಯಾತ್ಸ್/ ಲಾ ಮಾಡಿರಬೇಕು.

    ವಯೋಮಿತಿ : ಕನಿಷ್ಠ 45 ಹಾಗೂ ಗರಿಷ್ಠ 65 ವರ್ಷ ಮೀರಿರಬಾರದು.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 07 ಆಗಸ್ಟ್ 2021

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

  • NMPT ಮಂಗಳೂರು : ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನ

    ನ್ಯೂ ಮ್ಯಾಂಗಲೂರ್ ಪೋರ್ಟ್ ಟ್ರಸ್ಟ್ , ಮಂಗಳೂರು ಪಣಂಬೂರು ಇಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

    ಹುದ್ದೆ : ಅಸಿಸ್ಟೆಂಟ್ ಮ್ಯಾನೇಜರ್ ( ಫೈನಾನ್ಸ್)

    ಹುದ್ದೆ ಸಂಖ್ಯೆ : 3

    ವೇತನ : ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.70,000/- ವೇತನ ನಿಗದಿಪಡಿಸಲಾಗಿದೆ.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 31-08-2021

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ.

  • RTO ನಿಂದ 2000 ಕ್ಕೂ ಅಧಿಕ ಹುದ್ದೆಗೆ ಅಧಿಸೂಚನೆ ಪ್ರಕಟ

    ಕರ್ನಾಟಕ ರಾಜ್ಯ ಸರಕಾರವು 2000 ಕ್ಕೂ ಅಧಿಕ ಹುದ್ದೆಗಳನ್ನು ಭರ್ತಿ ಮಾಡಲು ಅಂತಿಮ ಕರಡು ನಿಯಮಗಳನ್ನು ಸಿದ್ಧಪಡಿಸಿದೆ.

    ಮೋಟಾರು ವಾಹನ ಶಾಖೆಯಲ್ಲಿ ಭರ್ತಿ ಮಾಡಲು ಅಂತಿಮ ಕರಡು ನಿಯಮಗಳನ್ನು ಸಿದ್ಧಪಡಿಸಿ ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದೆ.

    ಈ ಹುದ್ದೆಗಳನ್ನು ಭರ್ತಿ ಮಾಡಲು ಶೀಘ್ರದಲ್ಲೇ ಅಧಿಸೂಚನೆ ಬಿಡುಗಡೆ ಮಾಡಲಾಗುವುದು.

    ಹುದ್ದೆಗಳ ವಿವರ : ಆಯುಕ್ತರು, ಸಾರಿಗೆ ಮತ್ತು ರಸ್ತೆ ಸುರಕ್ಷತೆ – 1 ಹುದ್ದೆ
    ಅಪರ ಸಾರಿಗೆ ಆಯುಕ್ತರು – 06 ಹುದ್ದೆ
    ಜಂಟಿ ಸಾರಿಗೆ ಆಯುಕ್ತರು – 06 ಹುದ್ದೆ
    ಉಪ ಸಾರಿಗೆ ಆಯುಕ್ತರು – 06 ಹುದ್ದೆ
    ಉಪ ಸಾರಿಗೆ ಆಯುಕ್ತರು ಮತ್ತು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ – 03 ಹುದ್ದೆ
    ಪ್ರಾದೇಶಿಕ ಸಾರಿಗೆ ಅಧಿಕಾರಿ -47 ಹುದ್ದೆ
    ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ 93 ಹುದ್ದೆ
    ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ( ಆಡಳಿತ ) 10 ಹುದ್ದೆ
    ಹಿರಿಯ ಮೋಟಾರು ವಾಹನ ನಿರೀಕ್ಷಕರು – 214 ಹುದ್ದೆ
    ಮೋಟಾರು ವಾಹನ ನಿರೀಕ್ಷಕರು 430 ಹುದ್ದೆ
    ಸಹಾಯಕ ಕಾರ್ಯದರ್ಶಿ, ಖಜಾನೆ ತೆರಿಗೆ ಅಧಿಕಾರಿ – 15 ಹುದ್ದೆ
    ಅಧೀಕ್ಷಕರು – 160 ಹುದ್ದೆ
    ಪ್ರಥಮ ದರ್ಜೆ ಸಹಾಯಕರು -435 ಹುದ್ದೆ
    ಶೀಘ್ರಲಿಪಿಗಾರರು – 50 ಹುದ್ದೆ
    ಹಿರಿಯ ಬೆರಳಚ್ಚುಗಾರರು – 09 ಹುದ್ದೆ
    ಹಿರಿಯ ಚಾಲಕರು – 24 ಹುದ್ದೆ
    ದ್ವಿತೀಯ ದರ್ಜೆ ಸಹಾಯಕರು – 545 ಹುದ್ದೆ
    ಬೆರಳಚ್ಚುಗಾರರು – 107 ಹುದ್ದೆ
    ಚಾಲಕರು – 141 ಹುದ್ದೆ
    ಜವಾನರು/ ಜಾರಿಕಾರರು- 30 ಹುದ್ದೆ
    ಖಜಾನೆ ರಕ್ಷಕರು – 09 ಹುದ್ದೆ
    ಸೇವಕ- 343 ಹುದ್ದೆ
    ಕಾನೂನು ಅಧಿಕಾರಿ 01 ಹುದ್ದೆ
    ಸಹಾಯಕ ಕಾನೂನು ಅಧಿಕಾರಿ – 02 ಹುದ್ದೆ
    ಸಾರಿಗೆ ಆಯುಕ್ತರ ಆರ್ಥಿಕ ‌ಸಲಹೆಗಾರರು – 02 ಹುದ್ದೆ
    ಲೆಕ್ಕಾಧಿಕಾರಿ ‌- 06 ಹುದ್ದೆ
    ಲೆಕ್ಕಾಧೀಕ್ಷಕರು – 26 ಹುದ್ದೆ
    ಲೆಕ್ಕಿಗರು – 36 ಹುದ್ದೆ
    ಸಾಂಖ್ಯಿಕ ಸಹಾಯಕ ನಿರ್ದೇಶಕರು 01 ಹುದ್ದೆ
    ಸಹಾಯಕ ಸಾಂಖ್ಯಿಕ ಅಧಿಕಾರಿ – 03 ಹುದ್ದೆ
    ಸಿಸ್ಟಂ ಮ್ಯಾನೇಜರ್ 01 ಹುದ್ದೆ
    ಸಿಸ್ಟಂ ಅನಾಲಿಸ್ಟ್ – 02 ಹುದ್ದೆ
    ಸೀನಿಯರ್ ಪ್ರೋಗ್ರಾಮರ್ 02 ಹುದ್ದೆ
    ಜೂನಿಯರ್ ಪ್ರೋಗ್ರಾಮರ್ 07 ಹುದ್ದೆ
    ಕನ್ಸೋಲರ್ ಅಪರೇಟರ್ – 02 ಹುದ್ದೆ

    ಈ ಮೇಲಿನ ಹುದ್ದೆಗಳಿಗೆ ಅಭ್ಯರ್ಥಿಗಳು ಅಗತ್ಯವಾದ ತಯಾರಿಗಳನ್ನು ಇಂದಿನಿಂದಲೇ ಮಾಡಬಹುದು.

    ಕನಿಷ್ಠ 8 ನೇ ತರಗತಿಯಿಂದ ಎಸ್ ಎಸ್ ಎಲ್ ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ‌ಪದವಿ‌ ವಿದ್ಯಾರ್ಹತೆಯುಳ್ಳವರಿಗೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

    ನೇರ ನೇಮಕಾತಿ ಮೂಲಕ ಆಯ್ಕೆ ಮಾಡುವ ಹುದ್ದೆಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುವುದು.

    ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ಈ ಮೇಲ್ಕಂಡ ಹುದ್ದೆಗಳಿಗೆ ಶೀಘ್ರವೇ ಅಧಿಸೂಚನೆ ಹೊರಡಿಸುತ್ತದೆ. ಎಲ್ಲಾ ಮಾಹಿತಿ ಅಂದರೆ ಕೊನೆಯ ದಿನಾಂಕ, ಅರ್ಜಿ ಶುಲ್ಕ, ವಯೋಮಿತಿ ಕುರಿತಂತೆ ಹೆಚ್ಚಿನ ಮಾಹಿತಿಯನ್ನು ಪ್ರಕಟಿಸಲಾಗುವುದು.

    ರಾಜ್ಯಪತ್ರ ಈ ಕೆಳಗೆ ನೀಡಲಾಗಿದೆ

  • ಬೆಂಗಳೂರಿನ ಜಿಪಿಒ ಅಂಚೆ ವಿಭಾಗದಲ್ಲಿ ಕೆಲಸ, ನೇರ ಸಂದರ್ಶನ, ಎಸ್ ಎಸ್ ಎಲ್ ಸಿ ಪಾಸಾದವರಿಗೆ ಆದ್ಯತೆ

    ಭಾರತೀಯ ಅಂಚೆ ಇಲಾಖೆ ವತಿಯಿಂದ ಬೆಂಗಳೂರಿನ ಜಿಪಿಒ ಅಂಚೆ ವಿಭಾಗದಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ವಿವರಗಳನ್ನು ಈ ಕೆಳಗೆ ನೀಡಲಾಗಿದೆ.

    ಹುದ್ದೆ : ಅಂಚೆ ಜೀವ ವಿಮೆ ಏಜೆಂಟ್ ಆಗಿ ಕಾರ್ಯನಿರ್ವಹಿಸಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

    ವಯೋಮಿತಿ : 18 ರಿಂದ 60 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

    ವಿದ್ಯಾರ್ಹತೆ : ಎಸ್ ಎಸ್ ಎಲ್ ಸಿ ಪಾಸಾಗಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

    ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ತಮ್ಮ ಆಧಾರ್ ಕಾರ್ಡ್, ಪಾನ್ ಕಾರ್ಡ್, ಎಸ್ ಎಸ್ ಎಲ್ ಸಿ ಅಂಕಪಟ್ಟಿಯ ಮೂಲ ಪ್ರತಿ ಹಾಗೂ 2 ಪಾಸ್ ಪೋರ್ಟ್ ಅಳತೆಯ ಭಾವಚಿತ್ರಗಳೊಂದಿಗೆ ಬೆಂಗಳೂರು ಜಿಪಿಓ ಅಂಚೆ ಕಚೇರಿಯಲ್ಲಿ ಆಗಸ್ಟ್ 5 ರಿಂದ 7 ರವರೆಗೆ ನಡೆಯುವ ಸಂದರ್ಶನದಲ್ಲಿ ಭಾಗಿಯಾಗಬಹುದು.

    ಹೆಚ್ಚಿನ ಮಾಹಿತಿಗಾಗಿ ದೂ.ಸಂ.080 22850002, 9901354022 ಗೆ ಸಂಪರ್ಕಿಸಬಹುದಾಗಿದೆ.

  • ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಹುದ್ದೆ, ನೇರ ಸಂದರ್ಶನ

    ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್ , ಬೆಂಗಳೂರು ಇಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಹುದ್ದೆ : ವೆಟರಿನಯನ್ (Veterinaian)

    ಹುದ್ದೆ ಸಂಖ್ಯೆ : 1 ಹುದ್ದೆ

    ವೇತನ : 52,000/- ರೂ. ನಿಗದಿಪಡಿಸಲಾಗಿದೆ

    ಸಂದರ್ಶನ ದಿನಾಂಕ ಮತ್ತು ಸ್ಥಳ : ಆಸಕ್ತ ಅಭ್ಯರ್ಥಿಗಳು ತಮ್ಮ ಬಯೋಡೇಟಾ ಹಾಗೂ ದಾಖಲೆಗಳೊಂದಿಗೆ ದಿನಾಂಕ 30-07-2021 ರಂದು ಬೆಳಿಗ್ಗೆ 11.30 ಕ್ಕೆ Executive Officer, Bannerghatt Biological Park ಇಲ್ಲಿ ಹಾಜರಿರತಕ್ಕದ್ದು.

    ಅಭ್ಯರ್ಥಿಗಳು ಅರ್ಜಿಯನ್ನು ದಿನಾಂಕ 28-07-2021 ರೊಳಗೆ [email protected] ಗೆ ಸಲ್ಲಿಸಬೇಕು.

  • ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿಯು, ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಹುದ್ದೆ : ಕನ್ಸಲ್ಟೆಂಟ್- ಮೆಟಮಲ್ ಹೆಲ್ತ್ ಆಂಡ್ ಫ್ಯಾಮಿಲಿ ಪ್ಲ್ಯಾನಿಂಗ್ – RCH – 1 ಹುದ್ದೆ
    ಲಾಕ್ವಾಶ್ಯ ಕೋರ್ಡಿನೇಟರ್ -MH : 1 ಹುದ್ದೆ
    ಸಿಎಸ್ ಟಿ ಕೋರ್ಡಿನೇಟರ್ ಎನ್ ವಿಹೆಚ್ ಸಿಪಿ: 1 ಹುದ್ದೆ
    ಕನ್ಸಲ್ಟೆಂಟ್ ಹೆಚ್& ಪಿ- ಎನ್ ಯುಹೆಚ್ ಎಂ : 1 ಹುದ್ದೆ
    ಪ್ರೊಗ್ರಾಮ್ ಅಸಿಸ್ಟೆಂಟ್ – cphc uhc – 1 ಹುದ್ದೆ
    ಪ್ರೋಗ್ರಾಂ ಅಸಿಸ್ಟೆಂಟ್ – ntcp- 1 ಹುದ್ದೆ
    ಕೋರ್ಡಿನೇಟರ್ – ಡೆಮೋಗ್ರಾಫಿ- 1 ಹುದ್ದೆ
    ಕನ್ಸಲ್ಟೆಂಟ್ – ಚೈಲ್ಡ್ ಹೆಲ್ತ್ – 1 ಹುದ್ದೆ

    ಹುದ್ದೆಯು ಒಂದು ವರ್ಷದ ಅವಧಿಗೆ ತಾತ್ಕಾಲಿಕವಾಗಿದ್ದು, ಮತ್ತು ಗುತ್ತಿಗೆ ಆಧಾರದ ಹುದ್ದೆಯಾಗಿರುತ್ತದೆ.

    ಅರ್ಜಿಯನ್ನು ಗೂಗಲ್ ಫಾರಂ ಲಿಂಕ್ ಮೂಲಕ ಸಲ್ಲಿಸಬೇಕು. ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 05-08-2021( ಸಂಜೆ 5.30 ರೊಳಗೆ )

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ