RTO ನಿಂದ 2000 ಕ್ಕೂ ಅಧಿಕ ಹುದ್ದೆಗೆ ಅಧಿಸೂಚನೆ ಪ್ರಕಟ

Written By Mallika

Lorem ipsum dolor sit amet consectetur pulvinar ligula augue quis venenatis. 

Advertisements

ಕರ್ನಾಟಕ ರಾಜ್ಯ ಸರಕಾರವು 2000 ಕ್ಕೂ ಅಧಿಕ ಹುದ್ದೆಗಳನ್ನು ಭರ್ತಿ ಮಾಡಲು ಅಂತಿಮ ಕರಡು ನಿಯಮಗಳನ್ನು ಸಿದ್ಧಪಡಿಸಿದೆ.

ಮೋಟಾರು ವಾಹನ ಶಾಖೆಯಲ್ಲಿ ಭರ್ತಿ ಮಾಡಲು ಅಂತಿಮ ಕರಡು ನಿಯಮಗಳನ್ನು ಸಿದ್ಧಪಡಿಸಿ ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದೆ.

ಈ ಹುದ್ದೆಗಳನ್ನು ಭರ್ತಿ ಮಾಡಲು ಶೀಘ್ರದಲ್ಲೇ ಅಧಿಸೂಚನೆ ಬಿಡುಗಡೆ ಮಾಡಲಾಗುವುದು.

ಹುದ್ದೆಗಳ ವಿವರ : ಆಯುಕ್ತರು, ಸಾರಿಗೆ ಮತ್ತು ರಸ್ತೆ ಸುರಕ್ಷತೆ – 1 ಹುದ್ದೆ
ಅಪರ ಸಾರಿಗೆ ಆಯುಕ್ತರು – 06 ಹುದ್ದೆ
ಜಂಟಿ ಸಾರಿಗೆ ಆಯುಕ್ತರು – 06 ಹುದ್ದೆ
ಉಪ ಸಾರಿಗೆ ಆಯುಕ್ತರು – 06 ಹುದ್ದೆ
ಉಪ ಸಾರಿಗೆ ಆಯುಕ್ತರು ಮತ್ತು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ – 03 ಹುದ್ದೆ
ಪ್ರಾದೇಶಿಕ ಸಾರಿಗೆ ಅಧಿಕಾರಿ -47 ಹುದ್ದೆ
ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ 93 ಹುದ್ದೆ
ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ( ಆಡಳಿತ ) 10 ಹುದ್ದೆ
ಹಿರಿಯ ಮೋಟಾರು ವಾಹನ ನಿರೀಕ್ಷಕರು – 214 ಹುದ್ದೆ
ಮೋಟಾರು ವಾಹನ ನಿರೀಕ್ಷಕರು 430 ಹುದ್ದೆ
ಸಹಾಯಕ ಕಾರ್ಯದರ್ಶಿ, ಖಜಾನೆ ತೆರಿಗೆ ಅಧಿಕಾರಿ – 15 ಹುದ್ದೆ
ಅಧೀಕ್ಷಕರು – 160 ಹುದ್ದೆ
ಪ್ರಥಮ ದರ್ಜೆ ಸಹಾಯಕರು -435 ಹುದ್ದೆ
ಶೀಘ್ರಲಿಪಿಗಾರರು – 50 ಹುದ್ದೆ
ಹಿರಿಯ ಬೆರಳಚ್ಚುಗಾರರು – 09 ಹುದ್ದೆ
ಹಿರಿಯ ಚಾಲಕರು – 24 ಹುದ್ದೆ
ದ್ವಿತೀಯ ದರ್ಜೆ ಸಹಾಯಕರು – 545 ಹುದ್ದೆ
ಬೆರಳಚ್ಚುಗಾರರು – 107 ಹುದ್ದೆ
ಚಾಲಕರು – 141 ಹುದ್ದೆ
ಜವಾನರು/ ಜಾರಿಕಾರರು- 30 ಹುದ್ದೆ
ಖಜಾನೆ ರಕ್ಷಕರು – 09 ಹುದ್ದೆ
ಸೇವಕ- 343 ಹುದ್ದೆ
ಕಾನೂನು ಅಧಿಕಾರಿ 01 ಹುದ್ದೆ
ಸಹಾಯಕ ಕಾನೂನು ಅಧಿಕಾರಿ – 02 ಹುದ್ದೆ
ಸಾರಿಗೆ ಆಯುಕ್ತರ ಆರ್ಥಿಕ ‌ಸಲಹೆಗಾರರು – 02 ಹುದ್ದೆ
ಲೆಕ್ಕಾಧಿಕಾರಿ ‌- 06 ಹುದ್ದೆ
ಲೆಕ್ಕಾಧೀಕ್ಷಕರು – 26 ಹುದ್ದೆ
ಲೆಕ್ಕಿಗರು – 36 ಹುದ್ದೆ
ಸಾಂಖ್ಯಿಕ ಸಹಾಯಕ ನಿರ್ದೇಶಕರು 01 ಹುದ್ದೆ
ಸಹಾಯಕ ಸಾಂಖ್ಯಿಕ ಅಧಿಕಾರಿ – 03 ಹುದ್ದೆ
ಸಿಸ್ಟಂ ಮ್ಯಾನೇಜರ್ 01 ಹುದ್ದೆ
ಸಿಸ್ಟಂ ಅನಾಲಿಸ್ಟ್ – 02 ಹುದ್ದೆ
ಸೀನಿಯರ್ ಪ್ರೋಗ್ರಾಮರ್ 02 ಹುದ್ದೆ
ಜೂನಿಯರ್ ಪ್ರೋಗ್ರಾಮರ್ 07 ಹುದ್ದೆ
ಕನ್ಸೋಲರ್ ಅಪರೇಟರ್ – 02 ಹುದ್ದೆ

ಈ ಮೇಲಿನ ಹುದ್ದೆಗಳಿಗೆ ಅಭ್ಯರ್ಥಿಗಳು ಅಗತ್ಯವಾದ ತಯಾರಿಗಳನ್ನು ಇಂದಿನಿಂದಲೇ ಮಾಡಬಹುದು.

ಕನಿಷ್ಠ 8 ನೇ ತರಗತಿಯಿಂದ ಎಸ್ ಎಸ್ ಎಲ್ ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ‌ಪದವಿ‌ ವಿದ್ಯಾರ್ಹತೆಯುಳ್ಳವರಿಗೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ನೇರ ನೇಮಕಾತಿ ಮೂಲಕ ಆಯ್ಕೆ ಮಾಡುವ ಹುದ್ದೆಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುವುದು.

ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ಈ ಮೇಲ್ಕಂಡ ಹುದ್ದೆಗಳಿಗೆ ಶೀಘ್ರವೇ ಅಧಿಸೂಚನೆ ಹೊರಡಿಸುತ್ತದೆ. ಎಲ್ಲಾ ಮಾಹಿತಿ ಅಂದರೆ ಕೊನೆಯ ದಿನಾಂಕ, ಅರ್ಜಿ ಶುಲ್ಕ, ವಯೋಮಿತಿ ಕುರಿತಂತೆ ಹೆಚ್ಚಿನ ಮಾಹಿತಿಯನ್ನು ಪ್ರಕಟಿಸಲಾಗುವುದು.

ರಾಜ್ಯಪತ್ರ ಈ ಕೆಳಗೆ ನೀಡಲಾಗಿದೆ

Leave a Comment