ದಿ ಜನತಾ ಕೋ- ಅಪರೇಟಿವ್ ಬ್ಯಾಂಕ್ ಲಿ. ಮಲ್ಲೇಶ್ವರಂ ಬೆಂಗಳೂರು ಇಲ್ಲಿ ಖಾಲಿ ಇರುವ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗಾಗಿ ಸಂದರ್ಶನದ ಮೂಲಕ ನೇರ ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ವಿದ್ಯಾರ್ಹತೆ : ಪದವಿ ಜೊತೆಗೆ (ಎ) ಸಿಎಐಐಬಿ/ಡಿಬಿಎಫ್/ಡಿಪ್ಲೋಮಾ ಇನ್ ಕೋ ಅಪರೇಟಿವ್ ಬಿಜಿನೆಸ್ ಮ್ಯಾನೇಜ್ಮೆಂಟ್ ಅಥವಾ ತತ್ಸಮಾನ ಅರ್ಹತೆ ಅಥವಾ (ಬಿ) ಚಾರ್ಟರ್ಡ್ / ಕಾಸ್ಟ್ ಅಕೌಂಟೆಂಟ್ಸ್ ಅಥವಾ ( ಸಿ) ಯಾವುದೇ ಸ್ನಾತಕೋತ್ತರ ಪದವಿ.
ವಯೋಮಿತಿ: 35 ವರ್ಷ ಮೇಲ್ಪಟ್ಟು 65 ವರ್ಷದೊಳಗೆ.
ವೇತನ : ಒಟ್ಟುಗೂಡಿಸಿದ ಮಾಸಿಕ ವೇತನ : ರೂ.1,00,000/-
ಅನುಭವ: ಬ್ಯಾಂಕಿಂಗ್ ವಲಯದ ಒಂದು ಸಂಸ್ಥೆಯಲ್ಲಿ ಮಧ್ಯಮ/ಹಿರಿಯ ಹಂತದಲ್ಲಿ ಕನಿಷ್ಠ ಹತ್ತು ವರ್ಷಗಳ ಸತತ ಸೇವೆ ಸಲ್ಲಿಸಿದ ಅನುಭವ ಇರುವುದು ಕಡ್ಡಾಯ.
ಅವಧಿ: ಹುದ್ದೆಯ ಅವಧಿ 6 ವರ್ಷಗಳು.
ಈ ಹುದ್ದೆಯ ಸ್ವರೂಪ ಗುತ್ತಿಗೆ ನಿಯಮಗೊಳಪಟ್ಟಂತೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 09.08.2021
ಅರ್ಜಿ ಸಲ್ಲಿಸುವ ವಿಧಾನ: ಅರ್ಹ ಅಭ್ಯರ್ಥಿಗಳು ನಿಗದಿತ ವೆಬ್‌ಸೈಟ್ ನಿಂದ ಅರ್ಜಿ ನಮೂನೆಯನ್ನು www.jcbank.in ನಿಂದ ಡೌನ್‌ಲೋಡ್ ಮಾಡಿಕೊಂಡು ಅಥವಾ ಬ್ಯಾಂಕಿನಿಂದ ಖುದ್ದಾಗಿ ಪಡೆದುಕೊಂಡು ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಲಗತ್ತಿಸಿಕೊಂಡು ಮುಚ್ಚಿದ ಲಕೋಟೆಯಲ್ಲಿ ಬ್ಯಾಂಕಿನ ವಿಳಾಸಕ್ಕೆ ಕಳುಹಿಸಬೇಕು.
ಹೆಚ್ಚಿನ ವಿವರಗಳಿಗಾಗಿ: ದಿ ಜನತಾ ಕೋ ಅಪರೇಟಿವ್ ಬ್ಯಾಂಕ್ ಲಿ. ಮುಖ್ಯ ಕಾರ್ಯನಿರ್ವಹಣಾಧಿಕಾರಿ, 9449842016