ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿ, ಮಂಡ್ಯ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

Written By Mallika

Lorem ipsum dolor sit amet consectetur pulvinar ligula augue quis venenatis. 

Advertisements

ಮಂಡ್ಯ ಜಿಲ್ಲೆಯಲ್ಲಿ 2021-22 ನೇ ಸಾಲಿನಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ವಿವಿಧ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಆರ್.ಸಿ.ಹೆಚ್.ಕಚೇರಿ 08232-228700 , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, 08232- 224027 ಇಲ್ಲಿಗೆ ಸಂಪರ್ಕಿಸಬಹುದಾಗಿದೆ.

ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ : 27-07-2021 ರಿಂದ ( ಬೆಳಿಗ್ಗೆ 10 ರಿಂದ ಮಧ್ಯಾಹ್ನ 03.00 ), ಅರ್ಜಿ ಸಲ್ಲಿಸಲು ಕಡೆಯ ದಿನಾಂಕ 03-08-2021ರವರೆಗೆ ( ಸಾರ್ವತ್ರಿಕ ರಜಾ ದಿನ ಹೊರತು ಪಡಿಸಿ) ಬೆಳಿಗ್ಗೆ 10 ರಿಂದ ಮಧ್ಯಾಹ್ನ 3.00 ಗಂಟೆಯವರೆಗೆ. ಮೂಲ ದಾಖಲಾತಿ ಪರಿಶೀಲನೆಗೆ ಹಾಜರಾಗಬೇಕಾದ ದಿನಾಂಕ 05-08-2021 ಬೆಳಿಗ್ಗೆ 10 ರಿಂದ ಮಧ್ಯಾಹ್ನ. 03.00 ರವರೆಗೆ.

ಹುದ್ದೆ : ಮಕ್ಕಳ ತಜ್ಞರು, ಹುದ್ದೆಗಳ ಸಂಖ್ಯೆ : 2
ನೇಮಕ ಮಾಡುವ ಸ್ಥಳ : ಎಸ್.ಎನ್.ಸಿ.ಯು ಕೆ.ಆರ್. ಪೇಟೆ 01 ಮತ್ತು ತಾಯಿ ಆರೋಗ್ಯ ಕಾರ್ಯಕ್ರಮ -01.
ವಿದ್ಯಾರ್ಹತೆ ; ಡಿ.ಎಂ.ನಿಯೋನೇಟಾಲಜಿ, ಫೆಲೋಷಿಪ್ ಇನ್ ನಿಯೋನೇಟಾಲಜಿ, ಎಂಡಿ ಪಿಡಿಯಾಟ್ರಿಕ್/ ಡಿ.ಎನ್.ಬಿ( ಮಕ್ಕಳ ಆರೋಗ್ಯ), ಡಿಸಿಹೆಚ್ ಹಾಗೂ ಕೆಎಂಸಿ ರಿಜಿಸ್ಟ್ರೇಶನ್ ಸರ್ಟಿಫಿಕೇಟ್ ಹಾಗೂ ತಜ್ಞತೆಯನ್ನು ಕರ್ನಾಟಕದ ಮೆಡಿಕಲ್ ಕೌನ್ಸಿಲ್ ನಲ್ಲಿ ನೊಂದಾಯಿಸಿರಬೇಕು.
ವಯೋಮಿತಿ : 45 ವರ್ಷ ವಯಸ್ಸಿನೊಳಗಿನವರಿಗೆ ಮೊದಲ ಆದ್ಯತೆ. ಸದರಿ ವಯಸ್ಸಿನವರು ಲಭ್ಯವಿಲ್ಲದಿದ್ದಲ್ಲಿ60 ವರ್ಷದ ವಯೋಮಾನದೊಳಗಿನವರನ್ನು ಪರಿಗಣಿಸಲಾಗುವುದು. ( ದೈಹಿಕವಾಗಿ ಎಲ್ಲಾ ಕರ್ತವ್ಯ ನಿರ್ವಹಿಸಲು ಸದೃಢರಾಗಿರಬೇಕು) ಮಾಸಿಕ ವೇತನ : ರೂ. 1,10,000/-

ಅರವಳಿಕೆ ತಜ್ಞರು. ಹುದ್ದೆ ಸಂಖ್ಯೆ 1. ಕಾರ್ಯಕ್ರಮ/ನೇಮಕ ಮಾಡುವ ಸ್ಥಳ : ತಾಯಿ ಆರೋಗ್ಯ ( ಎಫ್. ಆರ್.ಯು) ವಿದ್ಯಾರ್ಹತೆ : ಎಂಡಿ ಅನಸ್ತೀಶಿಯ/ಡಿಎನ್ ಬಿ/ಡಿಎ ಹಾಗೂ ಕೆಎಂಸಿ ರಿಜಿಸ್ಟ್ರೇಶನ್ ಸರ್ಟಿಫಿಕೇಟ್ ಹಾಗೂ ತಜ್ಞತೆಯನ್ನು ಕರ್ನಾಟಕದ ಮೆಡಿಕಲ್ ಕೌನ್ಸಿಲ್ ನಲ್ಲಿ ನೋಂದಾಯಿಸಿರಬೇಕು. ವಯೋಮಿತಿ : 70 ವರ್ಷದ ಒಳಗಿರಬೇಕು ಹಾಗೂ ದೈಹಿಕವಾಗಿ ಎಲ್ಲಾ ಕರ್ತವ್ಯ ನಿರ್ವಹಿಸಲು ಸದೃಢರಾಗಿರಬೇಕು. ಮಾಸಿಕ ಸಂಚಿತ ವೇತನ : ರೂ. 1,10,000/-

ಎಪಿಡಮಾಲಜಿಸ್ಟ್ : ಹುದ್ದೆಗಳ ಸಂಖ್ಯೆ : 1 . ಕಾರ್ಯಕ್ರಮ / ನೇಮಕ ಮಾಡುವ ಸ್ಥಳ : ಐ.ಡಿ.ಎಸ್.ಪಿ ವಿದ್ಯಾರ್ಹತೆ : ಎಂಬಿಬಿಎಸ್ ಜೊತೆಗೆ ಸ್ನಾತಕೋತ್ತರ ಪದವಿ/ಡಿಪ್ಲೋಮಾ ಇನ್ ಪ್ರಿವೆಂಟಿವ್ ಮತ್ತು ಸೋಷಿಯಲ್ ಮೆಡಿಸಿನ್/ ಡಿಪ್ಲೋಮಾ ಇನ್ ಪಬ್ಲಿಕ್‌ ಹೆಲ್ತ್ ಅಥವಾ ಎಪಿಡಮಾಲಜಿ ( ಎಂ.ಪಿ.ಹೆಚ್.ಡಿ, ಡಿ.ಪಿ.ಹೆಚ್, ಎಂ‌ಎಇ) ಅಥವಾ ಬಿ.ಡಿ.ಎಸ್/ಬಿ.ಎ.ಎಂ.ಎಸ್/ ಬಿ.ಹೆಚ್.ಎಂ.ಎಸ್ ಜೊತೆಗೆ ‌ಎಂ.ಪಿ.ಹೆಚ್/ಎಂ.ಎ.ಇ‌ ಮಾಡಿರಬೇಕು. ಹಾಗೂ ಪಬ್ಲಿಕ್ ಹೆಲ್ತ್ ಅಥವಾ ಎಪಿಡಮಾಲಜಿಯಲ್ಲಿ 2 ವರ್ಷದ ಸೇವಾನುಭವ ಇರುವವರಿಗೆ ಆದ್ಯತೆ. ವಯೋಮಿತಿ : 40 ವರ್ಷದ ಒಳಗಿರಬೇಕು. ಮಾಸಿಕ ಸಂಚಿತ ವೇತನ : ರೂ.30,000/-

ಯೋಗ ಇನ್ಸಟ್ರಕ್ಟರ್. ಹುದ್ದೆಗಳ ಸಂಖ್ಯೆ : 53. ಕಾರ್ಯಕ್ರಮ ‌/ ನೇಮಕ ಮಾಡುವ ಸ್ಥಳ : ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಉಪ ಕೇಂದ್ರ ಮಟ್ಟದಲ್ಲಿ. ವಿದ್ಯಾರ್ಹತೆ : ಅಭ್ಯರ್ಥಿಗಳು ಪಿಯುಸಿ ತೇರ್ಗಡೆ ಹೊಂದಿರಬೇಕು. ಯೋಗ ತರಬೇತಿ ಹೊಂದಿರುವ ಸರ್ಟಿಫಿಕೇಟ್ ನ್ನು ಹೊಂದಿರಬೇಕು ಹಾಗೂ‌ ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಪ್ರತೀ ಸೆಷನ್ ಗೆ ರೂ.250/- ರಂತೆ ಮಾಸಿಕ ಗರಿಷ್ಠ 20 ಸೆಷನ್ ಗಳಿಗೆ ಗೌರವಧನ ನೀಡಲಾಗುವುದು. ಸ್ಥಳೀಯರಿಗೆ ಆದ್ಯತೆ. ಗರಿಷ್ಠ 45 ವರ್ಷ.

ಲ್ಯಾಬ್ ಟೆಕ್ನಿಶಿಯನ್ : ಹುದ್ದೆ ಸಂಖ್ಯೆ 1. ಕಾರ್ಯಕ್ರಮ/ ನೇಮಕ ಮಾಡುವ ಸ್ಥಳ : ಎನ್.ಟಿ.ಇ.ಸಿ ಕಾರ್ಯಕ್ರಮ. ( ಪ್ರಾ.ಆ.ಕೇಂದ್ರ. ಗಂಜಿಗೆರೆ ಕೆ.ಆರ್.ಪೇಟೆ) ವಿದ್ಯಾರ್ಹತೆ : ಇಂಟರ್ ಮೀಡಿಯೆಟ್ ( 10+2) ಮತ್ತು ಡಿಪ್ಲೋಮಾ/ ಸರ್ಟಿಫೈಡ್ ಕೋರ್ಸ್ ಇನ್ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ/ ಸಮಾನ ಪದವಿ. ಒಂದು ವರ್ಷ ಆರ್.ಎನ್.ಟಿ.ಪಿ.ಸಿ ಕಾರ್ಯಕ್ರಮ / ಸ್ಪೂಟಮ್ ಸ್ಕಿಯರ್ ಮೈಕ್ರೋಸ್ಕೋಪಿ. ಹೆಚ್ಚುವರಿ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳಿಗೆ ( ಉದಾಹರಣೆ ಪದವಿ) ಆದ್ಯತೆ ನೀಡಲಾಗುವುದು. ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ವಯೋಮಿತಿ : 45 ವರ್ಷದ ಒಳಗಿರಬೇಕು. ಮಾಸಿಕ ಸಂಚಿತ ವೇತನ : ರೂ. 13,500/-

ವಿಶೇಷ ಸೂಚನೆ : ಸದರಿ ಪ್ರಕಟಣೆಯ ರೋಲಿಂಗ್ ಪ್ರಕಟಣೆಯಾಗಿದ್ದು, ಪ್ರಕಟಣಾ ದಿನದಿಂದ 31 ಮಾರ್ಚ್ 2022 ರವರೆಗೆ ಚಾಲ್ತಿಯಲ್ಲಿರುತ್ತದೆ. ಆದ್ದರಿಂದ ರೋಸ್ಟರ್ ಅನ್ವಯವಾಗುವುದಿಲ್ಲ. ಮೂಲ ದಾಖಲಾತಿ ಪರಿಶೀಲನೆಗೆ ಹಾಜರಾಗುವ ಅಭ್ಯರ್ಥಿಗಳು ವಿದ್ಯಾರ್ಹತೆಗೆ ಸಂಬಂಧಿಸಿದ ಎಲ್ಲಾ ಮೂಲ ಅಂಕಪಟ್ಟಿಗಳು, ಎಲ್ಲಾ ಪ್ರಮಾಣ ಪತ್ರಗಳು, ಭಾವಚಿತ್ರ ಹಾಗೂ ಗುರುತಿನ ಚೀಟಿ ಹಾಗೂ ಸದರಿ ದಾಖಲೆಗಳ 01 ಸೆಟ್ ಜೆರಾಕ್ಸ್ ಪ್ರತಿಯೊಂದಿಗೆ ನಿಗದಿತ ಸಮಯದೊಳಗೆ ಮೂಲ ದಾಖಲಾತಿ ಪರಿಶೀಲನೆಗೆ ಹಾಜರಾಗುವುದು. ಸದರಿ ನೇಮಕಾತಿ ಪ್ರಕ್ರಿಯೆಯು ಜಿಲ್ಲಾ ಆರೋಗ್ಯ ಸಂಘದ ಆದೇಶಕ್ಕೆ ಅನುಗುಣವಾಗಿ ಮುಂದಿನ ಮಾರ್ಪಾಡುಗಳಿಗೆ ಒಳಪಟ್ಟಿರುತ್ತದೆ.

Leave a Comment