Tag: upsc recruitment 2021

  • ಯುಪಿಎಸ್‌ಸಿ ವಿವಿಧ ಉದ್ಯೋಗವಕಾಶ

    ಯುಪಿಎಸ್‌ಸಿ ವಿವಿಧ ಉದ್ಯೋಗವಕಾಶ

    ಯುಪಿಎಸ್‌ಸಿ ( ಯುನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್) ನಲ್ಲಿ ವಿವಿಧ ಹುದ್ದೆಗಳಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಈಗಾಗಲೇ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು 01 ಎಪ್ರಿಲ್ 2021ಕೊನೆಯ ದಿನಾಂಕವಾಗಿದೆ. ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಶುಲ್ಕ ಇತ್ಯಾದಿ ವಿವರಗಳನ್ನು ಮುಂದೆ ನೀಡಲಾಗಿದೆ.

    ಅರ್ಜಿ ಸಲ್ಲಿಸುವುದು ಹೇಗೆ ?
    ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ : 13-03-2021
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 01-04-2021
    ಪ್ರಿಂಟಿಂಗ್ ಅಪ್ಲಿಕೇಶನ್ ಸಲ್ಲಿಸಲು ಕೊನೆಯ ದಿನಾಂಕ : 02-04-2021

    ಯುಪಿಎಸ್‌ಸಿ ಯಲ್ಲಿ ಮೆಡಿಕಲ್ ಆಫೀಸರ್ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಹುದ್ದೆ ಸ್ಥಳ : ಆಲ್ ಇಂಡಿಯಾ

    ಒಟ್ಟು ಹುದ್ದೆಗಳ ಸಂಖ್ಯೆ : 5

    ಹುದ್ದೆಗಳ ವಿವರ : ಲೇಡಿ ಮೆಡಿಕಲ್ ಆಫೀಸರ್ -2
    ಪ್ರಿನ್ಸಿಪಲ್ ಡಿಸೈನ್ ಆಫೀಸರ್-1
    ಶಿಪ್ ಸರ್ವೆ ಅಥವಾ ಕಮ್- ಡೆಪ್ಯುಟಿ ಡೈರೆಕ್ಟರ್ ಜನರಲ್-1
    ಅಸಿಸ್ಟೆಂಟ್ ಆರ್ಕಿಟೆಕ್ಟ್ -1

    ವಿದ್ಯಾರ್ಹತೆ : ಲೇಡಿ ಮೆಡಿಕಲ್ ಆಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಂಬಿಬಿಎಸ್(ಎಂಡಿ,ಎಂ.ಎಸ್‌) ಹೊಂದಿರಬೇಕು. ಪ್ರಿನ್ಸಿಪಲ್ ಡಿಸೈನ್ ಆಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿ.ಇ,ಬಿ.ಟೆಕ್ ಹೊಂದಿರಬೇಕು. ಶಿಪ್ ಸರ್ವೆ ಅಥವಾ ಕಮ್- ಡೆಪ್ಯುಟಿ ಡೈರೆಕ್ಟರ್ ಜನರಲ್ ಹುದ್ದೆಗೆ ಡಿಗ್ರಿ ಇನ್ ನವಲ್ ಆರ್ಕಿಟೆಕ್ಚರ್ ಪದವಿ ಹೊಂದಿರಬೇಕು.
    ಅಸಿಸ್ಟೆಂಟ್ ಆರ್ಕಿಟೆಕ್ಟ್ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಡಿಗ್ರಿ ಇನ್ ಆರ್ಕಿಟೆಕ್ಚರ್ ಅಥವಾ ಡಿಪ್ಲೋಮಾ ಹೊಂದಿರಬೇಕು.

    ವೇತನ : ಲೇಡಿ ಮೆಡಿಕಲ್ ಆಫೀಸರ್ ಹಾಗೂ ಪ್ರಿನ್ಸಿಪಲ್ ಡಿಸೈನ್ ಆಫೀಸರ್ ಹುದ್ದೆಗೆ ಯುಪಿಎಸ್‌ಸಿ ನೇಮಕಾತಿ ನಿಯಮಾನುಸಾರವಿರುತ್ತದೆ.
    ಶಿಪ್ ಸರ್ವೆ ಅಥವಾ ಕಮ್- ಡೆಪ್ಯುಟಿ ಡೈರೆಕ್ಟರ್ ಜನರಲ್ ಹಾಗೂ ಅಸಿಸ್ಟೆಂಟ್ ಆರ್ಕಿಟೆಕ್ಟ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ. 15,600/-ರಿಂದ ರೂ. 39,100/- ರವರೆಗೆ ತಿಂಗಳ ವೇತನವಿರುತ್ತದೆ.

    ವಯೋಮಿತಿ : ಲೇಡಿ ಮೆಡಿಕಲ್ ಆಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಗರಿಷ್ಠ 33 ವಯಸ್ಸು ಮೀರಿರಬಾರದು.
    ಪ್ರಿನ್ಸಿಪಲ್ ಡಿಸೈನ್ ಆಫೀಸರ್ ಹಾಗೂ ಶಿಪ್ ಸರ್ವೆ ಅಥವಾ ಕಮ್- ಡೆಪ್ಯುಟಿ ಡೈರೆಕ್ಟರ್ ಜನರಲ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 45 ವಯಸ್ಸನ್ನು ಮೀರಿರಬಾರದು. ಅಸಿಸ್ಟೆಂಟ್ ಆರ್ಕಿಟೆಕ್ಟ್ ಹುದ್ದೆಗೆ 35 ವಯಸ್ಸನ್ನು ಮೀರಿರಬಾರದು.
    ಒಬಿಡಿ ಅಭ್ಯರ್ಥಿಗಳಿಗೆ 3 ವರ್ಷ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ಪಿಡ್ಬ್ಯುಡಿ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

    ಅರ್ಜಿ ಶುಲ್ಕ : ಜನರಲ್ /ಒಬಿಸಿ/ಇಡಬ್ಲುಎಸ್ ಅಭ್ಯರ್ಥಿಗಳಿಗೆ ರೂ.25/- ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ ಪಿಡ್ಬ್ಲುಬಿಡಿ/ ಮಹಿಳಾ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ.

    ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲಿರುವುದರಿಂದ ಸಂಸ್ಥೆಯ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ ಅರ್ಜಿ ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಲಗತ್ತಿಸಿ ದಿನಾಂಕ 01-04-2021 ರೊಳಗೆ ಸಲ್ಲಿಸಬೇಕು.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

  • ಯುಪಿಎಸ್ ಸಿ ವಿವಿಧ ಹುದ್ದೆ: ಕೂಡಲೇ ಅರ್ಜಿ ಸಲ್ಲಿಸಿ

    ಯುಪಿಎಸ್ ಸಿ ವಿವಿಧ ಹುದ್ದೆ: ಕೂಡಲೇ ಅರ್ಜಿ ಸಲ್ಲಿಸಿ

    ಯುನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (ಯುಪಿಎಸ್ ಸಿ) ನಲ್ಲಿ ವಿವಿಧ ಹುದ್ದೆಗಳಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಮಾರ್ಚ್ 18, ಕೊನೆಯ ದಿನಾಂಕವಾಗಿದೆ. ಒಟ್ಟು ಹುದ್ದೆಗಳ ವಿವರ, ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಶುಲ್ಕ ಇತ್ಯಾದಿ ವಿವರಗಳನ್ನು ಮುಂದೆ ನೀಡಲಾಗಿದೆ.

    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 27-02-2021
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 18-03-2021
    ಅರ್ಜಿ ಶುಲ್ಕ:

    ಈ ಹುದ್ದೆಗಳಿಗೆ ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಆನ್ಲೈನ್ ಹೊರತುಪಡಿಸಿ ಬೇರೆ ಯಾವುದೇ ವಿಧಾನದಲ್ಲಿ ಅರ್ಜಿ ಇಲ್ಲ.

    ಯುಪಿಎಸ್ ಸಿ ನಲ್ಲಿ ಅಸಿಸ್ಟೆಂಟ್ ಎಕ್ಸಿಕ್ಯುಟಿವ್ ಇಂಜಿನಿಯರ್, ಪಬ್ಲಿಕ್ ಪ್ರಾಸಿಕ್ಯೂಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.

    ಒಟ್ಟು ಹುದ್ದೆಗಳ ಸಂಖ್ಯೆ 89 ಇದ್ದು, ಇದರಲ್ಲಿ ಇಕಾನಮಿಕ್ ಆಫೀಸರ್ -1, ಅಸಿಸ್ಟೆಂಟ್ ಎಕ್ಸಿಕ್ಯುಟಿವ್ ಇಂಜಿನಿಯರ್ 10, ಪ್ರಾಗ್ರಾಮರ್ ಗ್ರೇಡ್ ಎ. 1, ಪಬ್ಲಿಕ್ ಪ್ರಾಸಿಕ್ಯೂಟರ್ 43, ಅಸಿಸ್ಟೆಂಟ್ ಪಬ್ಲಿಕ್ ಪ್ರಾಸಿಕ್ಯೂಟರ್ 26, ಸೀನಿಯರ್ ಸೈನ್ಟಿಫಿಕ್ ಆಫೀಸರ್-8 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

    ಅರ್ಜಿ ಶುಲ್ಕ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆನ್ಲೈನ್ ಪಾವತಿ ವಿಧಾನದ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಬಹುದು.

    ಜನರಲ್ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.25/-, ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ.

    ಆಯ್ಕೆ ಪ್ರಕ್ರಿಯೆ : ಅಭ್ಯರ್ಥಿಗಳ ನ್ನು ಲಿಖಿತ ಪರೀಕ್ಷೆ ಹಾಗೂ ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

    ವಯೋಮಿತಿ : ಎಕಾನಮಿಕ್ ಆಫೀಸರ್, ಅಸಿಸ್ಟೆಂಟ್ ಪಬ್ಲಿಕ್ ಪ್ರಾಸಿಕ್ಯೂಟರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಗರಿಷ್ಠ 30 ವಯೋಮಿತಿ ಹೊಂದಿರಬೇಕು.

    ಅಸಿಸ್ಟೆಂಟ್ ಎಕ್ಸಿಕ್ಯುಟಿವ್ ಇಂಜಿನಿಯರ್, ಪಬ್ಲಿಕ್ ಪ್ರಾಸಿಕ್ಯೂಟರ್, ಪ್ರಾಗ್ರಾಮರ್ ಗ್ರೇಡ್ ಎ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ ಆಗಿರಬೇಕು.

    ಸೀನಿಯರ್ ಸೈನ್ಟಿಫಿಕ್ ಆಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಗರಿಷ್ಠ 38 ವಯೋಮಿತಿ ಹೊಂದಿರಬೇಕು.

    ವಿದ್ಯಾರ್ಹತೆ ; ಹುದ್ದೆಗಳಿಗನುಸಾರವಾಗಿ ಅಭ್ಯರ್ಥಿಗಳು ಎಕಾನಮಿಕ್ ಆಫೀಸರ್ ಹುದ್ದೆಗೆ ಪೋಸ್ಟ್ ಗ್ರಾಜ್ಯುಯೇಶನ್, ಅಸಿಸ್ಟೆಂಟ್ ಎಕ್ಸಿಕ್ಯುಟಿವ್ ಇಂಜಿನಿಯರ್ ಹುದ್ದೆಗೆ ಬಿ.ಇ/ಬಿ.ಟೆಕ್, ಪ್ರೊಗ್ರಾಮರ್ ಗ್ರೇಡ್ ಎ ಹುದ್ದೆಗೆ ಮಾಸ್ಟರ್ಸ್ ಡಿಗ್ರಿ, ಪಬ್ಲಿಕ್ ಪ್ರಾಸಿಕ್ಯೂಟರ್ ಹಾಗೂ ಅಸಿಸ್ಟೆಂಟ್ ಪಬ್ಲಿಕ್ ಪ್ರಾಸಿಕ್ಯೂಟರ್ ಹುದ್ದೆಗೆ ಡಿಗ್ರಿ ಇನ್ ಲಾ , ಸೀನಿಯರ್ ಸೈನ್ಟಿಫಿಕ್ ಹುದ್ದೆಗೆ ಮಾಸ್ಟರ್ಸ್ ಡಿಗ್ರಿ ಹೊಂದಿರಬೇಕು.

    ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ನೀಡಿ ಅರ್ಜಿ ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಲಗತ್ತಿಸಿ ದಿನಾಂಕ 18-03-2021 ರೊಳಗೆ ಸಲ್ಲಿಸಬೇಕು.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ: https://www.upsc.gov.in/

  • ಯುಪಿಎಸ್ಸಿ ಜಂಟಿ ಕಾರ್ಯದರ್ಶಿ ಮತ್ತು ನಿರ್ದೇಶಕ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ)‌ ಜಂಟಿ ಕಾರ್ಯದರ್ಶಿ ಹಾಗೂ ನಿರ್ದೇಶಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು. ವಿವರಗಳು ಈ ಕೆಳಗಿನಂತಿವೆ :

    ಹುದ್ದೆಯ ಹೆಸರು
    ಜಂಟಿ ಕಾರ್ಯದರ್ಶಿ
    ನಿರ್ದೇಶಕ

    ಹುದ್ದೆಯ ಸಂಖ್ಯೆ -30

    ವೇತನ

    ಜಂಟಿ ಕಾರ್ಯದರ್ಶಿ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗರ 2,21,000ರೂ. ನಿರ್ದೇಶಕ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ.1,82,000.

    ಆಯ್ಕೆ ಪ್ರಕ್ರಿಯೆಯು ನೇರ ಸಂದರ್ಶನದ ಮೂಲಕ ನಡೆಯುತ್ತದೆ.

    ವಿದ್ಯಾರ್ಹತೆ
    ಸ್ನಾತಕೋತ್ತರ ಪದವಿ/ಸಿಎ/ಐಸಿಡಬ್ಲ್ಯೂಎ/ಬಿ.ಇ/ಬಿ.ಟೆಕ್, ಬಿ.ಎಸ್ಸಿ, ಪಿಜಿ ಡಿಪ್ಲೋಮಾ ಮತ್ತು ಎಲ್‌ಎಲ್‌ಬಿ
    ಮಾನ್ಯತೆ ಪಡೆದ ಬೋರ್ಡ್/ಸಂಸ್ಥೆ/ವಿಶ್ವವಿದ್ಯಾಲಯದಿಂದ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

    ವಯೋಮಿತಿ : ಜಂಟಿಕಾರ್ಯದರ್ಶಿ ಹುದ್ದೆಗೆ ಕನಿಷ್ಠ 40 ಹಾಗ ಗರಿಷ್ಠ 55 ವಯಸ್ಸಾಗಿರಬೇಕು.
    ನಿರ್ದೇಶಕ ಹುದ್ದೆಗೆ‌ ಕನಿಷ್ಟ 35 ಹಾಗೂ 45 ವಯಸ್ಸಾಗಿರಬೇಕು.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಮಾರ್ಚ್ 22, 2021(11.59ಗಂಟೆಯ ಒಳಗೆ)

    ಅರ್ಜಿ ಸಲ್ಲಿಸುವುದು ಹೇಗೆ ?
    ಅಭ್ಯರ್ಥಿಗಳು ಯುಪಿಎಸ್ಸಿ ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ನೀಡಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದು.

    ಅಧಿಕೃತ ವೆಬ್‌ಸೈಟ್‌ ಗಾಗಿ ಈ ಲಿಂಕನ್ನು ಕ್ಲಿಕ್ ಮಾಡಿ. https://www.upsconline.nic.in/

    ನೇಮಕಾತಿ ಬಗೆಗಿನ ಅಧಿಸೂಚನೆಯ ನ್ನು ಓದಲು ಇಲ್ಲಿ ಕ್ಲಿಕ್ ಮಾಡಿ