ಯುಪಿಎಸ್‌ಸಿ ವಿವಿಧ ಉದ್ಯೋಗವಕಾಶ

Written By Mallika

Lorem ipsum dolor sit amet consectetur pulvinar ligula augue quis venenatis. 

Advertisements

ಯುಪಿಎಸ್‌ಸಿ ( ಯುನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್) ನಲ್ಲಿ ವಿವಿಧ ಹುದ್ದೆಗಳಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಈಗಾಗಲೇ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು 01 ಎಪ್ರಿಲ್ 2021ಕೊನೆಯ ದಿನಾಂಕವಾಗಿದೆ. ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಶುಲ್ಕ ಇತ್ಯಾದಿ ವಿವರಗಳನ್ನು ಮುಂದೆ ನೀಡಲಾಗಿದೆ.

ಅರ್ಜಿ ಸಲ್ಲಿಸುವುದು ಹೇಗೆ ?
ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ : 13-03-2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 01-04-2021
ಪ್ರಿಂಟಿಂಗ್ ಅಪ್ಲಿಕೇಶನ್ ಸಲ್ಲಿಸಲು ಕೊನೆಯ ದಿನಾಂಕ : 02-04-2021

ಯುಪಿಎಸ್‌ಸಿ ಯಲ್ಲಿ ಮೆಡಿಕಲ್ ಆಫೀಸರ್ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಹುದ್ದೆ ಸ್ಥಳ : ಆಲ್ ಇಂಡಿಯಾ

ಒಟ್ಟು ಹುದ್ದೆಗಳ ಸಂಖ್ಯೆ : 5

ಹುದ್ದೆಗಳ ವಿವರ : ಲೇಡಿ ಮೆಡಿಕಲ್ ಆಫೀಸರ್ -2
ಪ್ರಿನ್ಸಿಪಲ್ ಡಿಸೈನ್ ಆಫೀಸರ್-1
ಶಿಪ್ ಸರ್ವೆ ಅಥವಾ ಕಮ್- ಡೆಪ್ಯುಟಿ ಡೈರೆಕ್ಟರ್ ಜನರಲ್-1
ಅಸಿಸ್ಟೆಂಟ್ ಆರ್ಕಿಟೆಕ್ಟ್ -1

ವಿದ್ಯಾರ್ಹತೆ : ಲೇಡಿ ಮೆಡಿಕಲ್ ಆಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಂಬಿಬಿಎಸ್(ಎಂಡಿ,ಎಂ.ಎಸ್‌) ಹೊಂದಿರಬೇಕು. ಪ್ರಿನ್ಸಿಪಲ್ ಡಿಸೈನ್ ಆಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿ.ಇ,ಬಿ.ಟೆಕ್ ಹೊಂದಿರಬೇಕು. ಶಿಪ್ ಸರ್ವೆ ಅಥವಾ ಕಮ್- ಡೆಪ್ಯುಟಿ ಡೈರೆಕ್ಟರ್ ಜನರಲ್ ಹುದ್ದೆಗೆ ಡಿಗ್ರಿ ಇನ್ ನವಲ್ ಆರ್ಕಿಟೆಕ್ಚರ್ ಪದವಿ ಹೊಂದಿರಬೇಕು.
ಅಸಿಸ್ಟೆಂಟ್ ಆರ್ಕಿಟೆಕ್ಟ್ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಡಿಗ್ರಿ ಇನ್ ಆರ್ಕಿಟೆಕ್ಚರ್ ಅಥವಾ ಡಿಪ್ಲೋಮಾ ಹೊಂದಿರಬೇಕು.

ವೇತನ : ಲೇಡಿ ಮೆಡಿಕಲ್ ಆಫೀಸರ್ ಹಾಗೂ ಪ್ರಿನ್ಸಿಪಲ್ ಡಿಸೈನ್ ಆಫೀಸರ್ ಹುದ್ದೆಗೆ ಯುಪಿಎಸ್‌ಸಿ ನೇಮಕಾತಿ ನಿಯಮಾನುಸಾರವಿರುತ್ತದೆ.
ಶಿಪ್ ಸರ್ವೆ ಅಥವಾ ಕಮ್- ಡೆಪ್ಯುಟಿ ಡೈರೆಕ್ಟರ್ ಜನರಲ್ ಹಾಗೂ ಅಸಿಸ್ಟೆಂಟ್ ಆರ್ಕಿಟೆಕ್ಟ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ. 15,600/-ರಿಂದ ರೂ. 39,100/- ರವರೆಗೆ ತಿಂಗಳ ವೇತನವಿರುತ್ತದೆ.

ವಯೋಮಿತಿ : ಲೇಡಿ ಮೆಡಿಕಲ್ ಆಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಗರಿಷ್ಠ 33 ವಯಸ್ಸು ಮೀರಿರಬಾರದು.
ಪ್ರಿನ್ಸಿಪಲ್ ಡಿಸೈನ್ ಆಫೀಸರ್ ಹಾಗೂ ಶಿಪ್ ಸರ್ವೆ ಅಥವಾ ಕಮ್- ಡೆಪ್ಯುಟಿ ಡೈರೆಕ್ಟರ್ ಜನರಲ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 45 ವಯಸ್ಸನ್ನು ಮೀರಿರಬಾರದು. ಅಸಿಸ್ಟೆಂಟ್ ಆರ್ಕಿಟೆಕ್ಟ್ ಹುದ್ದೆಗೆ 35 ವಯಸ್ಸನ್ನು ಮೀರಿರಬಾರದು.
ಒಬಿಡಿ ಅಭ್ಯರ್ಥಿಗಳಿಗೆ 3 ವರ್ಷ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ಪಿಡ್ಬ್ಯುಡಿ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

ಅರ್ಜಿ ಶುಲ್ಕ : ಜನರಲ್ /ಒಬಿಸಿ/ಇಡಬ್ಲುಎಸ್ ಅಭ್ಯರ್ಥಿಗಳಿಗೆ ರೂ.25/- ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ ಪಿಡ್ಬ್ಲುಬಿಡಿ/ ಮಹಿಳಾ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ.

ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲಿರುವುದರಿಂದ ಸಂಸ್ಥೆಯ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ ಅರ್ಜಿ ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಲಗತ್ತಿಸಿ ದಿನಾಂಕ 01-04-2021 ರೊಳಗೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

Leave a Comment