Tag: mangalore jobs

  • Karnataka Organic Foundation Jobs: ಮಂಗಳೂರಿನಲ್ಲಿದೆ ಕಾರ್ಯನಿರ್ವಹಣಾ ಅಧಿಕಾರಿ ಹುದ್ದೆ; ಜೂನ್‌ 03, 2024 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ

    Karnataka Organic Foundation Jobs: ಮಂಗಳೂರಿನಲ್ಲಿದೆ ಕಾರ್ಯನಿರ್ವಹಣಾ ಅಧಿಕಾರಿ ಹುದ್ದೆ; ಜೂನ್‌ 03, 2024 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ

    Karnataka Organic Foundation Jobs: ಗ್ರಾಮೀಣ ಪ್ರದೇಶ ಮಹಿಳಾ ಉದ್ಯಮ ತರಬೇತಿ ಅಭಿವೃದ್ಧಿ ಯೋಜನೆ ಹಾಗೂ ಕರ್ನಾಟಕ ಸಾವಯವ ಕೃಷಿ ಯೋಜನೆ (ರಿ) ಅಡಿಯಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಬೆಳ್ತಂಗಡಿ ತಾಲೂಕಿನ ಕೆಲವು ಜಿಲ್ಲಾ ಪಂಚಾಯತ್‌ ಕ್ಷೇತ್ರಗಳ ಉಸ್ತುವಾರಿ ನೋಡಿಕೊಳ್ಳಲು ಮಹಿಳೆಯರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಹುದ್ದೆಯ ಕುರಿತ ಹೆಚ್ಚಿನ ವಿವರಗಳನ್ನು ಈ ಕೆಳಗೆ ನೀಡಲಾಗಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಈ ಹುದ್ದೆಗೆ ವಿವಾಹಿತ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಮಾತ್ರ ಅವಕಾಶವಿದೆ.

    ಹುದ್ದೆಯ ಕುರಿತ ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ;
    ಉಜಿರೆ ಜಿಲ್ಲಾ ಪಂಚಾಯತ್- ಉಜಿರೆ, ಮುಂಡಾಜೆ, ಚಾರ್ಮಾಡಿ, ನೆರಿಯಾ, ಕಾರ್ಯತಡ್ಕ
    ಲಾಯಿಲ ಜಿಲ್ಲಾ ಪಂಚಾಯತ್ – ಲಾಯಿಲ, ಇಂದಬೆಟ್ಟು, ನಾವುರ, ಬಂಗಾಡಿ, ಮಿತ್ತಬಾಗಿಲು, ಮಲವಂತಿಗೆ, ಕಡಿರುದ್ಯಾವರ
    ನಾರಾವಿ ಜಿಲ್ಲಾ ಪಂಚಾಯತ್- ನಾರಾವಿ, ಮರೋಡಿ, ಕಾಶಿಪಟ್ನ, ಅಂಡಿಂಜೆ, ವೇಣೂರು, ಸಾವ್ಯ, ಕೊಕ್ರಾಡಿ, ಕುತ್ತೂರು
    ಧರ್ಮಸ್ಥಳ ಜಿಲ್ಲಾ ಪಂಚಾಯತ್ – ಕೊಕ್ಕಡ, ನಿಡ್ಲೆ, ಶಿಶಿಲ, ಶಿಬಾಜೆ, ಅರಸಿನಮಕ್ಕಿ, ಪಟ್ರಮೆ ಬೆಳಾಲು, ಧರ್ಮಸ್ಥಳ
    ಕಣಿಯೂರು ಪದ್ಮುಂಜಾ- ಪದ್ಮುಂಜಾ, ಬಂದಾರು, ತಣ್ಣಿರುಪಂತ, ಬಾರ್ಯ, ಕರಾಯ, ಮೊಗ್ರು
    ಜಿಲ್ಲಾ ಪಂಚಾಯತ್- ಇಳಂತಿಲ, ಬಳ್ಳಮಂಜ, ಮಚ್ಚಿನ,ಕಳಿಯ, ಗೇರುಕಟ್ಟೆ, ಕೊಯ್ಯರು
    ಅಳದಂಗಡಿ ಜಿಲ್ಲಾ ಪಂಚಾಯತ್ – ಅಳದಂಗಡಿ, ಶಿರ್ಲಾಲು, ಪಡಂಗಡಿ, ಪೆರ್ಮಡ, ಸವಣಾಲು, ಬಳಂಜ

    ಮೇಲೆ ತಿಳಿಸಿ ಜಿಲ್ಲಾ ಪಂಚಾಯತ್‌ ವ್ಯಾಪ್ತಿಯ 3 ಗ್ರಾಮ ಪಂಚಾಯತ್‌ ಪ್ರದೇಶಗಳಿಗೆ 1 ಕಾರ್ಯನಿರ್ವಹಣಾ ಅಧಿಕಾರಿಗಳ ನೇರ ನೇಮಕಾತಿ ನಡೆಯಲಿದೆ.

    ವಿದ್ಯಾರ್ಹತೆ: ಎಸ್‌.ಎಸ್‌.ಎಲ್‌.ಸಿ., ಪಿಯುಸಿ (ಪದವಿ ಅವಶ್ಯಕತೆ ಇಲ್ಲ) ಆದವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.

    ವೇತನ: ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.18000-21000 ರೂ. ವರೆಗೆ ವೇತನ ಸಿಗಲಿದೆ.

    ಹುದ್ದೆ ಸಂಖ್ಯೆ: 15 ಹುದ್ದೆಗಳ ನೇಮಕಾತಿ ನಡೆಯಲಿದೆ.

    ಅರ್ಜಿ ಸಲ್ಲಿಸುವುದು ಹೇಗೆ?
    ಆಸಕ್ತ ಅಭ್ಯರ್ಥಿಗಳು ತಮ್ಮ ಬಯೋಡೇಟಾವನ್ನು 8792763784 ಈ ವಾಟ್ಸಾಪ್‌ ನಂಬರ್‌ಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಲಾದ ಕೊನೆಯ ದಿನಾಂಕ 03-06-2024 ರೊಳಗೆ ಭರ್ತಿ ಮಾಡಿ ಕಳುಹಿಸಿಬೇಕು.

    ನೇರ ಸಂದರ್ಶನ ಸ್ಥಳ: ಆಯ್ಕೆಯಾದ ಅಭ್ಯರ್ಥಿಗಳಿಗೆ ಬೆಳ್ತಂಗಡಿ ಅಥವಾ ಉಜಿರೆಯಲ್ಲಿ ನೇರ ಸಂದರ್ಶನವಿರಲಿದೆ.

    ಮಹತ್ವದ ಮಾಹಿತಿ: ದ್ವಿಚಕ್ರ ವಾಹನ ಚಾಲನೆ ಗೊತ್ತಿರುವ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸಂಜೀವಿನಿ ಎಲ್‌.ಸಿ.ಆರ್.ಪಿ/ಎಂ.ಬಿ.ಕೆ ಸ್ವ-ಸಹಾಯ ಸಂಘ ಸೇವಾ ಪ್ರತಿನಿಧಿ ಸೇವಾ ದೀಕ್ಷಿತೆ, ಪ್ರೇರಕಿ ಇಲ್ಲಿ ಕೆಲಸ ಮಾಡಿ ಅನುಭವ ಇರುವ ಮಹಿಳೆಯರಿಗೆ ಆದ್ಯತೆ ಇದೆ.

  • NMPA Recruitment: ಮಂಗಳೂರಿನಲ್ಲಿ ಕೇಂದ್ರ ಸರಕಾರಿ ಉದ್ಯೋಗ; ಮಾಸಿಕ ರೂ. 75,000 – 2,18,750/- ವೇತನ

    NMPA Recruitment: ಮಂಗಳೂರಿನಲ್ಲಿ ಕೇಂದ್ರ ಸರಕಾರಿ ಉದ್ಯೋಗ; ಮಾಸಿಕ ರೂ. 75,000 – 2,18,750/- ವೇತನ

    NMPA Recruitment 2024: ನವ ಮಂಗಳೂರು ಬಂದರು ಪ್ರಾಧಿಕಾರ (ಎನ್‌ಎಂಪಿಎ) ಇಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಎನ್‌ಎಂಪಿಎ ತನ್ನ ಅಧಿಕೃತ ಅಧಿಸೂಚನೆಯ ಮೂಲಕ ಪೈಲಟ್ ಪೋಸ್ಟ್‌ಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಮಂಗಳೂರು – ಕರ್ನಾಟಕ ಸರ್ಕಾರದಲ್ಲಿ ವೃತ್ತಿಯನ್ನು ಹುಡುಕುತ್ತಿರುವವರಿಗೆ ಇದೊಂದು ಸುವರ್ಣಾವಕಾಶ. ಆಸಕ್ತ ಅಭ್ಯರ್ಥಿಗಳು 31-ಮೇ-2024 ರಂದು ನಡೆಯುವ ನೇರ ಸಂದರ್ಶನಕ್ಕೆ ಹಾಜರಾಗಬೇಕು.

    ಪ್ರಮುಖ ದಿನಾಂಕಗಳು;
    ಅಧಿಸೂಚನೆಯನ್ನು ಬಿಡುಗಡೆ ಮಾಡಿದ ದಿನಾಂಕ: 27-05-2024
    ನೇರ ಸಂದರ್ಶನದ ದಿನಾಂಕ; 31-05-2024

    ಹುದ್ದೆಯ ಕುರಿತು ಹೆಚ್ಚಿನ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ;
    ಸಂಸ್ಥೆಯ ಹೆಸರು: ನವ ಮಂಗಳೂರು ಬಂದರು ಪ್ರಾಧಿಕಾರ (NMPA) ದಲ್ಲಿ ಖಾಲಿ ಇರುವ ಪೈಲಟ್‌ ಹುದ್ದೆಗೆ ಅರ್ಜಿ ಅಹ್ವಾನಿಸಲಾಗಿದ್ದು, ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗೆ ಮಾಸಿಕ ರೂ. 75,000 – 2,18,750/- ದೊರಕಲಿದೆ.

    ವಿದ್ಯಾರ್ಹತೆ: NMPA ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ ಸ್ನಾತಕೋತ್ತರ ಪದವಿ ತೇರ್ಗಡೆ ಹೊಂದಿರಬೇಕು.

    ವಯೋಮಿತಿ: ಪೈಲಟ್‌ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಗರಿಷ್ಠ ವಯಸ್ಸು 55 ವರ್ಷ ಮೀರಿರಬಾರದು. ನವ ಮಂಗಳೂರು ಬಂದರು ಪ್ರಾಧಿಕಾರದ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಅನ್ವಯವಾಗಲಿದೆ.

    ಅರ್ಜಿ ಸಲ್ಲಿಸುವುದು ಹೇಗೆ?
    ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಕೆಳಗೆ ತಿಳಿಸಿದ ವಿಳಾಸಕ್ಕೆ ತಮ್ಮ ಅಗತ್ಯ ದಾಖಲೆಗಳೊಂದಿಗೆ ನೇರ ಸಂದರ್ಶನಕ್ಕೆ ಹಾಜರಾಗಬೇಕು.
    ವಿಳಾಸ ಇಲ್ಲಿದೆ;
    Chairperson, New Mangalore Port Authority at Panambur, Mangalore, Karnataka – 575010 ದಿ. 31-May-2024 ರಂದು ನೇರ ಸಂದರ್ಶನವಿರಲಿದೆ.

  • Jobs: ಮಂಗಳೂರು ಯುನಿವರ್ಸಿಟಿಯಲ್ಲಿ ಉದ್ಯೋಗ; ವೇತನ ರೂ.31ಸಾವಿರ; ಎ.25 ಕ್ಕೆ ನೇರ ಸಂದರ್ಶನ

    Jobs: ಮಂಗಳೂರು ಯುನಿವರ್ಸಿಟಿಯಲ್ಲಿ ಉದ್ಯೋಗ; ವೇತನ ರೂ.31ಸಾವಿರ; ಎ.25 ಕ್ಕೆ ನೇರ ಸಂದರ್ಶನ

    Mangalore University Recruitment 2024: ಮಂಗಳೂರು ವಿಶ್ವವಿದ್ಯಾನಿಲಯವು ತನ್ನಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಿದೆ. ಒಟ್ಟು 01 ಹುದ್ದೆ ಖಾಲಿ ಇದ್ದು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಜೂನಿಯರ್ ರಿಸರ್ಚ್ ಫೆಲೋ (ಜೆಆರ್‌ಎಫ್) ಪೋಸ್ಟ್‌ಗಳನ್ನು ಭರ್ತಿ ಮಾಡಲಾಗುವುದು ಎಂದು ತನ್ನ ಅಧಿಸೂಚನೆಯಲ್ಲಿ ಸಂಸ್ಥೆ ತಿಳಿಸಿದೆ. ಹಾಗಾಗಿ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಮಂಗಳೂರು – ಕರ್ನಾಟಕ ಸರ್ಕಾರದಲ್ಲಿ ಕೆಲಸ ಮಾಡಲು ಇಚ್ಛಿಸುವವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಆಸಕ್ತ ಅಭ್ಯರ್ಥಿಗಳು 25-Apr-2024 ರಂದು ಅಥವಾ ಮೊದಲು ಆಫ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

    ಪ್ರಮುಖ ದಿನಾಂಕಗಳು;
    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 20-04-2024
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 25-04-2024

    ಹುದ್ದೆಯ ವಿವರ ಇಲ್ಲಿದೆ;
    ಹುದ್ದೆ ವಿವಿರ: ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಜೂನಿಯರ್‌ ರಿಸರ್ಚ್‌ ಫೆಲೋ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಒಟ್ಟು 01 ಹುದ್ದೆ ಖಾಲಿ ಇದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.31,000 ವೇತನ ಸಿಗಲಿದೆ.

    ವಿದ್ಯಾರ್ಹತೆ: ಮಂಗಳೂರು ವಿಶ್ವವಿದ್ಯಾನಿಲಯದ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ವಿಶ್ವವಿದ್ಯಾಲಯಗಳಿಂದ ಭೌತಶಾಸ್ತ್ರ / ವೈದ್ಯಕೀಯ ಭೌತಶಾಸ್ತ್ರದಲ್ಲಿ M.Sc ತೇರ್ಗಡೆ ಹೊಂದಿರಬೇಕು..

    ವಯೋಮಿತಿ: ಮಂಗಳೂರು ವಿಶ್ವವಿದ್ಯಾನಿಲಯದ ನಿಯಮಗಳ ಪ್ರಕಾರ ಅಭ್ಯರ್ಥಿಗಳು ವಯೋಮಿತಿ ಹೊಂದಬೇಕು. ಹಾಗೆನೇ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆಯನ್ನು ಮಂಗಳೂರು ವಿಶ್ವವಿದ್ಯಾಲಯದ ನಿಯಮಗಳ ಪ್ರಕಾರ ನೀಡಲಾಗುವುದು.

    ಆಯ್ಕೆ ಪ್ರಕ್ರಿಯೆ: ಮೇಲ್ಕಂಡ ಹುದ್ದೆಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

    ಅರ್ಜಿ ಸಲ್ಲಿಸುವುದು ಹೇಗೆ?
    ಆಫ್‌ಲೈನ್‌ ಮೂಲಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ಈ ಕೆಳಗಿನ ವಿಳಾಸಕ್ಕೆ ಸಲ್ಲಿಸಬೇಕು.
    ವಿಳಾಸ ಇಲ್ಲಿದೆ.
    Prof. Karunakara N,
    Coordinator & Principal Investigator,
    BRNS Research Project,
    Center for Advanced Research in Environmental Radioactivity (CARER),
    Mangalore University,
    Mangalagangotri – 574199 ಇಲ್ಲಿಗೆ ಸಲ್ಲಿಸಬೇಕು. ಅಥವಾ [email protected] ಇಮೇಲ್‌ ಮಾಡಬೇಕು. ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 25-Apr-2024 ಅಥವಾ ಮೊದಲು ಅರ್ಜಿ ಸಲ್ಲಿಸಬೇಕು.

    ಹೆಚ್ಚಿನ ಮಾಹಿತಿಗಾಗಿ ಈ ನೋಟಿಫಿಕೇಶನ್‌ ಲಿಂಕ್‌ ಕ್ಲಿಕ್‌ ಮಾಡಿ

  • Bank Jobs: ಮಂಗಳೂರು ಬ್ಯಾಂಕ್‌ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ

    Bank Jobs: ಮಂಗಳೂರು ಬ್ಯಾಂಕ್‌ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ

    The Mangalore Catholic Co-operative Bank Ltd; ಮಂಗಳೂರು ಕಥೋಲಿಕ್‌ ಕೋಪಾರೇಟಿವ್‌ ಬ್ಯಾಂಕ್‌, ನಿ, ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಈ ಕೆಳಗೆ ನೀಡಲಾದ ಹುದ್ದೆಯ ವಿವರಗಳನ್ನು ಓದಿ ಅರ್ಜಿ ಸಲ್ಲಿಸಬಹುದು. ಒಟ್ಟು ವಿವಿಧ 50 ಹುದ್ದೆಗಳ ನೇಮಕಾತಿ ನಡೆಯಲಿದ್ದು, ಅಭ್ಯರ್ಥಿಗಳನ್ನು ನೇರ ನೇಮಕಾತಿ ಮೂಲಕ ಆಯ್ಕೆ ಮಾಡಲಾಗುವುದು. ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳು ಮಂಗಳೂರಿನಲ್ಲಿ ಕಾರ್ಯ ನಿರ್ವಹಿಸಬೇಕು.

    ಪ್ರಮುಖ ದಿನಾಂಕಗಳು;
    ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ: 12.03.2024
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 26.03.2024 (ಸಂಜೆ 5 ಗಂಟೆಯೊಳಗೆ)

    ಹುದ್ದೆಗಳ ವಿವರ ಇಲ್ಲಿದೆ;
    ಹಿರಿಯ ಪ್ರಬಂಧಕರು-2 ಹುದ್ದೆ
    ಶಾಖಾ ಪರಿವೀಕ್ಷಕರು-1 ಹುದ್ದೆ
    ವಸೂಲಾತಿ ಅಧಿಕಾರಿ – 1 ಹುದ್ದೆ
    ಶಾಖಾ ವ್ಯವಸ್ಥಾಪಕರು – 2 ಹುದ್ದೆ
    ಸುಪರ್‌ವೈಸರ್‌ – 1 ಹುದ್ದೆ
    ಮುಖ್ಯ ಅಕೌಂಟೆಂಟ್‌ – 1 ಹುದ್ದೆ
    ಅಕೌಂಟೆಂಟ್‌ – 5 ಹುದ್ದೆ
    ಡೇಟಾಬೇಸ್‌ ಅಡ್ಮಿನಿಸ್ಟ್ರೇಟರ್‌ ಡಿಬಿಎ – 2 ಹುದ್ದೆ
    ಕಿರಿಯ ಅಧಿಕಾರಿ – 10 ಹುದ್ದೆ
    ಹಿರಿಯ ಸಹಾಯಕ – 8 ಹುದ್ದೆ
    ಕಿರಿಯ ಸಹಾಯಕ – 13 ಹುದ್ದೆ
    ಅಟೆಂಡರ್/ಡ್ರೈವರ್‌ – 5 ಹುದ್ದೆ
    ಒಟ್ಟು ಹುದ್ದೆಗಳು 50

    ವೇತನ:
    ಹಿರಿಯ ಪ್ರಬಂಧಕರು ಹುದ್ದೆಗೆ ರೂ.30400-ರೂ.51300
    ಶಾಖಾ ಪರಿವೀಕ್ಷಕರು- ರೂ.30400-ರೂ.51300
    ವಸೂಲಾತಿ ಅಧಿಕಾರಿ – ರೂ.30400-ರೂ.51300
    ಶಾಖಾ ವ್ಯವಸ್ಥಾಪಕರು – ರೂ.28100-ರೂ.50100
    ಸುಪರ್‌ವೈಸರ್‌ – ರೂ..28100-ರೂ.50100
    ಮುಖ್ಯ ಅಕೌಂಟೆಂಟ್‌ – ರೂ.28100-ರೂ.50100
    ಅಕೌಂಟೆಂಟ್‌ – ರೂ.26000-ರೂ.47700
    ಡೇಟಾಬೇಸ್‌ ಅಡ್ಮಿನಿಸ್ಟ್ರೇಟರ್‌ ಡಿಬಿಎ -ರೂ.26000-ರೂ.47700
    ಕಿರಿಯ ಅಧಿಕಾರಿ – ರೂ.24000- ರೂ.45300
    ಹಿರಿಯ ಸಹಾಯಕ – ರೂ.21600-ರೂ.40050
    ಕಿರಿಯ ಸಹಾಯಕ – ರೂ.20000-ರೂ.36300
    ಅಟೆಂಡರ್/ಡ್ರೈವರ್‌ – ರೂ.16000-ರೂ.29600 ಮಾಸಿಕ ವೇತನ ನಿಗದಿಪಡಿಸಲಾಗಿದೆ.

    ವಿದ್ಯಾರ್ಹತೆ: ಹಿರಿಯ ಪ್ರಬಂಧಕರು ಹುದ್ದೆಗೆ ಪದವಿ ಹೊಂದಿರಬೇಕು, ಕಂಪ್ಯೂಟರ್‌ ಅಪರೇಶನ್‌ ಮತ್ತು ಅಪ್ಲಿಕೇಶನ್‌ ಜ್ಞಾನ ಹೊಂದಿರಬೇಕು.
    ಶಾಖಾ ಪರಿವೀಕ್ಷಕರು ಹುದ್ದೆಗೆ ಪದವಿ ಹೊಂದಿರಬೇಕು, ಕಂಪ್ಯೂಟರ್‌ ಅಪರೇಶನ್‌ ಮತ್ತು ಅಪ್ಲಿಕೇಶನ್‌ ಜ್ಞಾನ ಹೊಂದಿರಬೇಕು.
    ವಸೂಲಾತಿ ಅಧಿಕಾರಿ – ಪದವಿ ಹೊಂದಿರಬೇಕು, ಕಂಪ್ಯೂಟರ್‌ ಅಪರೇಶನ್‌ ಮತ್ತು ಅಪ್ಲಿಕೇಶನ್‌ ಜ್ಞಾನ ಹೊಂದಿರಬೇಕು.
    ಶಾಖಾ ವ್ಯವಸ್ಥಾಪಕರು – ಪದವಿ ಹೊಂದಿರಬೇಕು, ಕಂಪ್ಯೂಟರ್‌ ಅಪರೇಶನ್‌ ಮತ್ತು ಅಪ್ಲಿಕೇಶನ್‌ ಜ್ಞಾನ ಹೊಂದಿರಬೇಕು.
    ಸುಪರ್‌ವೈಸರ್‌ – ಪದವಿ ಹೊಂದಿರಬೇಕು, ಕಂಪ್ಯೂಟರ್‌ ಅಪರೇಶನ್‌ ಮತ್ತು ಅಪ್ಲಿಕೇಶನ್‌ ಜ್ಞಾನ ಹೊಂದಿರಬೇಕು.
    ಮುಖ್ಯ ಅಕೌಂಟೆಂಟ್‌ – ಪದವಿ ಹೊಂದಿರಬೇಕು, ಕಂಪ್ಯೂಟರ್‌ ಅಪರೇಶನ್‌ ಮತ್ತು ಅಪ್ಲಿಕೇಶನ್‌ ಜ್ಞಾನ ಹೊಂದಿರಬೇಕು.
    ಅಕೌಂಟೆಂಟ್‌ – ವಾಣಿಜ್ಯ/ಸಹಕಾರ/ಮ್ಯಾನೇಜ್‌ಮೆಂಟ್‌ ವಿಷಯಗಳಲ್ಲಿ ಪದವಿ ಹೊಂದಿರಬೇಕು. Tally ಕೋರ್ಸ್‌ನಲ್ಲಿ ತೇರ್ಗಡೆಯಾಗಿರಬೇಕು. ಜೊತೆಗೆ ಕಂಪ್ಯೂಟರ್‌ ಅಪ್ಲೀಕೇಶನ್‌ ಮತ್ತು ಅಪರೇಷನ್‌ ಜ್ಞಾನ ಹೊಂದಿರಬೇಕು.
    ಡೇಟಾಬೇಸ್‌ ಅಡ್ಮಿನಿಸ್ಟ್ರೇಟರ್‌ ಡಿಬಿಎ – ಗಣಕ ವಿಜ್ಞಾನದಲ್ಲಿ ಬಿ.ಇ. ಪದವಿ ಅಥವಾ ಕಂಪ್ಯೂಟರ್‌ ಅಪ್ಲಿಕೇಶನ್‌ನಲ್ಲಿ ಸ್ನಾತಕೋತ್ತರ ಪದವಿ ಹೊಂದಿರಬೇಕು.
    ಕಿರಿಯ ಅಧಿಕಾರಿ – ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಹೊಂದಿರಬೇಕು.
    ಹಿರಿಯ ಸಹಾಯಕ – ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಹೊಂದಿರಬೇಕು.
    ಕಿರಿಯ ಸಹಾಯಕ – ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಹೊಂದಿರಬೇಕು.
    ಅಟೆಂಡರ್/ಡ್ರೈವರ್‌ – ಎಸ್‌.ಎಸ್‌.ಎಲ್‌.ಸಿ ತೇರ್ಗಡೆ ಹೊಂದಿರಬೇಕು ಮತ್ತು ಕನ್ನಡವನ್ನು ಒಂದು ಭಾಷೆಯಾಗಿ ಓದಿರಬೇಕು.

    ವಯೋಮಿತಿ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯೋಮಿತಿಯು 18ವರ್ಷ ಹಾಗೂ ಗರಿಷ್ಠ ಮಿತಿಯನ್ನು ಈ ಕೆಳಕಂಡತೆ ನೀಡಲಾಗಿದೆ.
    ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡ ಅಥವಾ ವರ್ಗ -1 ಕ್ಕೆ ಸೇರಿದ ಅಭ್ಯರ್ಥಿಗಳಿಗೆ 40 ವರ್ಷ, ಹಿಂದುಳಿದ ಜಾತಿ ಅಥವಾ ಪಂಗಡಕ್ಕೆ (2ಎ,2ಬಿ,3ಎ,3ಬಿ) ಸೇರಿದ ಅಭ್ಯರ್ಥಿಗಳಿಗೆ 38 ವರ್ಷ, ಉಳಿದ ಅಭ್ಯರ್ಥಿಗಳಿಗೆ (ಸಾಮಾನ್ಯ ವರ್ಗ)-35ವರ್ಷ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ.

    ಅರ್ಜಿ ಶುಲ್ಕ: ಮೇಲ್ಕಂಡ ಹುದ್ದೆಗಳಲ್ಲಿ ಎಲ್ಲಾ ಹುದ್ದೆಗಳಿಗೆ ರೂ.1000 ಅರ್ಜಿ ಶುಲ್ಕ ವಿಧಿಸಲಾಗಿದೆ. ಆದರೆ ಅಟೆಂಡರ್/ಡ್ರೈವರ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮತ್ತು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡ ಅಥವಾ ವರ್ಗ -1 ಅಭ್ಯರ್ಥಿಗಳಿಗೆ ರೂ.500 ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ʼThe Mangalore Catholic Co-operative Bank Ltd” ಇವರ ಹೆಸರಿಗೆ ಡಿಡಿ ಮುಖಾಂತರ ಪಾವತಿ ಮಾಡಬೇಕು

    ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

    ಅರ್ಜಿ ಸಲ್ಲಿಸುವ ವಿಧಾನ
    ಅರ್ಜಿ ನಮೂನೆಯನ್ನು ಅಭ್ಯರ್ಥಿಗಳು ಬ್ಯಾಂಕಿನ ವೆಬ್‌ಸೈಟ್‌ನಿಂದ www.mccbank.in ಮೂಲಕ ಡೌನ್‌ಲೋಡ್‌ ಮಾಡಿ ಭರ್ತಿ ಮಾಡಬೇಕು.

    ಹೆಚ್ಚಿನ ವಿವರಗಳಿಗೆ ಬ್ಯಾಂಕ್‌ ಫೋನ್‌ ನಂಬರ್‌ 0824-2445746

    ಹುದ್ದೆಯ ನೋಟಿಫಿಕೇಶನ್‌ಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

  • MRPL Recruitment 2024: ಮಂಗಳೂರು ರಿಫೈನರಿ ಪೆಟ್ರೋಕೆಮಿಕಲ್ಸ್‌ ಲಿಮಿಟೆಡ್‌ನಲ್ಲಿ ಹುದ್ದೆ; 50 ಸಾವಿರದಿಂದ 1 ಲಕ್ಷದ 60 ಸಾವಿರದವರಗೆ ವೇತನ!

    MRPL Recruitment 2024: ಮಂಗಳೂರು ರಿಫೈನರಿ ಪೆಟ್ರೋಕೆಮಿಕಲ್ಸ್‌ ಲಿಮಿಟೆಡ್‌ನಲ್ಲಿ ಹುದ್ದೆ; 50 ಸಾವಿರದಿಂದ 1 ಲಕ್ಷದ 60 ಸಾವಿರದವರಗೆ ವೇತನ!

    MRPL Recruitment 2024: ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ಜನವರಿ 2024 ರ MRPL ರ ಅಧಿಸೂಚನೆಯ ಮೂಲಕ ಸಹಾಯಕ ಕಾರ್ಯನಿರ್ವಾಹಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಮಂಗಳೂರು – ಕರ್ನಾಟಕ ಭಾಗದಲ್ಲಿ ಕೆಲಸ ಮಾಡಲು ಇಚ್ಛಿಸುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ತಮ್ಮದಾಗಿಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಫೆ.24 ರೊಳಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

    ಹುದ್ದೆಯ ಕುರಿತಾದ ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ. ಆಸಕ್ತರು ಈ ಕೆಳಗಿನ ವಿವರಗಳನ್ನು ಓದಿ ಅರ್ಜಿ ಸಲ್ಲಿಸಬಹುದು.

    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ 25-01-2024
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 24-02-2024

    ಹುದ್ದೆ: ಸಹಾಯಕ ಕಾರ್ಯನಿರ್ವಾಹಕ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು ಒಟ್ಟು 11 ಹುದ್ದೆಗಳಿದೆ.

    ವಿದ್ಯಾರ್ಹತೆ: ಎಂಆರ್‌ಪಿಎಲ್‌ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಮಾರ್ಕೆಟಿಂಗ್/ಆಪರೇಷನ್ ಮ್ಯಾನೇಜ್‌ಮೆಂಟ್/ಸಪ್ಲೈ ಚೈನ್/ಬಿಸಿನೆಸ್ ಮ್ಯಾನೇಜ್‌ಮೆಂಟ್/ಅನಾಲಿಟಿಕ್ಸ್/ಇಂಟರ್‌ನ್ಯಾಶನಲ್ ಟ್ರೇಡ್‌ನಲ್ಲಿ ಎರಡು ವರ್ಷಗಳ ಎಂಬಿಎ ಅಥವಾ ಮಾರ್ಕೆಟಿಂಗ್/ಇಂಟರ್‌ನ್ಯಾಶನಲ್ ಟ್ರೇಡ್/ಸಪ್ಲೈ ಚೈನ್‌ನಲ್ಲಿ ಎರಡು ವರ್ಷದ ಸ್ನಾತಕೋತ್ತರ ಡಿಪ್ಲೊಮಾದೊಂದಿಗೆ ಪದವಿ ಪಡೆದಿರಬೇಕು.

    ವೇತನ: ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್‌ ಲಿಮಿಟೆಡ್‌ ಅಧಿಸೂಚನೆಯ ಪ್ರಕಾರ ಸಹಾಯಕ ಕಾರ್ಯನಿರ್ವಾಹಕ ಹುದ್ದೆಗಳಿಗೆ 50,000 ರಿಂದ 1,60,000 ರೂ. ವೇತನ ನೀಡಲಾಗುತ್ತದೆ.

    ಅರ್ಜಿ ಶುಲ್ಕ: ಸಾಮಾನ್ಯ, OBC, EWS ವರ್ಗದ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಶುಲ್ಕ ರೂ.118 (ರೂ. 100 ಅರ್ಜಿ ಶುಲ್ಕ ಮತ್ತು ರೂ. 18 ಜಿಎಸ್‌ಟಿ) ಪಾವತಿಸಬೇಕಾಗುತ್ತದೆ. ಯಾವುದೇ ಹೆಚ್ಚುವರಿ ಶುಲ್ಕಗಳನ್ನು (ಬ್ಯಾಂಕ್ ಸೇವಾ ಶುಲ್ಕಗಳು ಇತ್ಯಾದಿ) ಅರ್ಜಿದಾರರು ಭರಿಸಬೇಕಾಗುತ್ತದೆ
    SC/ST/PwBD/ ಮಾಜಿ ಸೈನಿಕ ವರ್ಗಗಳಿಗೆ ಅರ್ಜಿ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.

    ವಯೋಮಿತಿ: ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 27 ವರ್ಷ ಮೀರಿರಬಾರದು.
    OBC (NCL) ಅಭ್ಯರ್ಥಿಗಳಿಗೆ 03 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.
    ಯುಆರ್/ಇಡಬ್ಲ್ಯೂಎಸ್/ಒಬಿಸಿ(ಎನ್‌ಸಿಎಲ್) ಅಭ್ಯರ್ಥಿಗಳಿಗೆ ಮೇಲೆ ನಿರ್ದಿಷ್ಟಪಡಿಸಿದ ಗರಿಷ್ಠ ವಯಸ್ಸಿನ ಮಿತಿಯ ಜೊತೆಗೆ, 10 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ.
    ಮಾಜಿ ಸೈನಿಕರಿಗೆ ವಯೋಮಿತಿಯಲ್ಲಿ ಸಡಿಲಿಕೆಯು ಭಾರತ ಸರ್ಕಾರದ ನಿಯಮಗಳ ಪ್ರಕಾರ ಇರುತ್ತದೆ.

    ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

  • ಮಂಗಳೂರು ವಿಶ್ವವಿದ್ಯಾನಿಲಯ : ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ

    ಮಂಗಳೂರು ವಿಶ್ವವಿದ್ಯಾನಿಲಯ : ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ

    ಮಂಗಳೂರು ವಿಶ್ವವಿದ್ಯಾನಿಲಯ ಆವರಣ, ಮಂಗಳಗಂಗೋತ್ರಿ, ಸ್ನಾತಕೋತ್ತರ ಕೇಂದ್ರ, ಚಿಕ್ಕ ಅಳುವಾರದಲ್ಲಿ ಯೋಗ ವಿಜ್ಞಾನ ಮತ್ತು ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರಿನಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದು.

    ಹುದ್ದೆ: ಇಂಗ್ಲೀಷ್ ವಿಷಯದಲ್ಲಿ 2020-21 ನೇ ಶೈಕ್ಷಣಿಕ ಅತಿಥಿ ಉಪನ್ಯಾಸಕರ ಅವಶ್ಯಕತೆ ಇದ್ದು ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

    ವಿದ್ಯಾರ್ಹತೆ : ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಠ 55% ( ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಕನಿಷ್ಠ 50%) ಅಂಕಗಳನ್ನು ಹೊಂದಿರುವ ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

    ಅರ್ಜಿ ಸಲ್ಲಿಕೆ ಹೇಗೆ? ಅರ್ಜಿಯನ್ನು ವಿಶ್ವವಿದ್ಯಾನಿಲಯದ ವೆಬ್‌ಸೈಟ್‌ ನಿಂದ ಪಡೆದು, ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿದ ಅರ್ಜಿಯನ್ನು ದಾಖಲೆಗಳ ( SSLC ಮಾರ್ಕ್ಸ್ ಕಾರ್ಡ್, ಪಿಜಿ ಮಾರ್ಕ್ಸ್‌ ಕಾರ್ಡ್, ಕಾಸ್ಟ್ ಸರ್ಟಿಫಿಕೇಟ್, ಸರ್ವಿಸ್ ಸರ್ಟಿಫಿಕೇಟ್, ಯುಜಿಸಿ ಎನ್.ಇ.ಟಿ/ ಎಸ್.ಎಲ್.ಇ.ಟಿ ಉತ್ತೀರ್ಣತೆ/ ಎಂಫಿಲ್ / ಪಿ.ಹೆಚ್.ಡಿ ಪದವಿ ಪ್ರಮಾಣ ಪತ್ರ ಜೆರಾಕ್ಸ್ ಪ್ರತಿಗಳೊಂದಿಗೆ ಹಾಜರಿರತಕ್ಕದ್ದು.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 31-05-2021 ರಂದು ಸಂಜೆ 5.30 ರ ಒಳಗಾಗಿ ಕುಲಸಚಿವರ ಕಚೇರಿಯ [email protected] ಗೆ ಇ- ಮೇಲ್ ಮೂಲಕ ಸಲ್ಲಿಸಬಹುದು

    ಆದ್ಯತೆ : ಯುಜಿಸಿ ಎನ್.ಇ.ಟಿ/ಎಸ್.ಎಲ್.ಇ.ಟಿ ಉತ್ತೀರ್ಣತೆ/ ಎಂಫಿಲ್/ ಪಿಹೆಚ್‌ಡಿ ಪದವಿ ಪಡೆದವರಿಗೆ ಆದ್ಯತೆ ನೀಡಲಾಗುವುದು.

    ಅಭ್ಯರ್ಥಿಗಳು ತಮ್ಮ ಇ- ಮೇಲ್ ವಿಳಾಸ ಮತ್ತು ದೂರವಾಣಿ / ಮೊಬೈಲ್ ಸಂಖ್ಯೆಯನ್ನು ಅರ್ಜಿಯಲ್ಲಿ ಕಡ್ಡಾಯವಾಗಿ ನಮೂದಿಸತಕ್ಕದ್ದು.

    ಸಂದರ್ಶನದ ದಿನಾಂಕವನ್ನು ವಿಶ್ವವಿದ್ಯಾನಿಲಯದ ವೆಬ್‌ಸೈಟ್‌ www.mangaloreuniversity.ac.in ನಲ್ಲಿ ಪ್ರಕಟಿಸಲಾಗುವುದು.