ಮಂಗಳೂರು ವಿಶ್ವವಿದ್ಯಾನಿಲಯ : ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ

Written By Mallika

Lorem ipsum dolor sit amet consectetur pulvinar ligula augue quis venenatis. 

Advertisements

ಮಂಗಳೂರು ವಿಶ್ವವಿದ್ಯಾನಿಲಯ ಆವರಣ, ಮಂಗಳಗಂಗೋತ್ರಿ, ಸ್ನಾತಕೋತ್ತರ ಕೇಂದ್ರ, ಚಿಕ್ಕ ಅಳುವಾರದಲ್ಲಿ ಯೋಗ ವಿಜ್ಞಾನ ಮತ್ತು ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರಿನಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದು.

ಹುದ್ದೆ: ಇಂಗ್ಲೀಷ್ ವಿಷಯದಲ್ಲಿ 2020-21 ನೇ ಶೈಕ್ಷಣಿಕ ಅತಿಥಿ ಉಪನ್ಯಾಸಕರ ಅವಶ್ಯಕತೆ ಇದ್ದು ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ವಿದ್ಯಾರ್ಹತೆ : ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಠ 55% ( ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಕನಿಷ್ಠ 50%) ಅಂಕಗಳನ್ನು ಹೊಂದಿರುವ ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ಅರ್ಜಿ ಸಲ್ಲಿಕೆ ಹೇಗೆ? ಅರ್ಜಿಯನ್ನು ವಿಶ್ವವಿದ್ಯಾನಿಲಯದ ವೆಬ್‌ಸೈಟ್‌ ನಿಂದ ಪಡೆದು, ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿದ ಅರ್ಜಿಯನ್ನು ದಾಖಲೆಗಳ ( SSLC ಮಾರ್ಕ್ಸ್ ಕಾರ್ಡ್, ಪಿಜಿ ಮಾರ್ಕ್ಸ್‌ ಕಾರ್ಡ್, ಕಾಸ್ಟ್ ಸರ್ಟಿಫಿಕೇಟ್, ಸರ್ವಿಸ್ ಸರ್ಟಿಫಿಕೇಟ್, ಯುಜಿಸಿ ಎನ್.ಇ.ಟಿ/ ಎಸ್.ಎಲ್.ಇ.ಟಿ ಉತ್ತೀರ್ಣತೆ/ ಎಂಫಿಲ್ / ಪಿ.ಹೆಚ್.ಡಿ ಪದವಿ ಪ್ರಮಾಣ ಪತ್ರ ಜೆರಾಕ್ಸ್ ಪ್ರತಿಗಳೊಂದಿಗೆ ಹಾಜರಿರತಕ್ಕದ್ದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 31-05-2021 ರಂದು ಸಂಜೆ 5.30 ರ ಒಳಗಾಗಿ ಕುಲಸಚಿವರ ಕಚೇರಿಯ [email protected] ಗೆ ಇ- ಮೇಲ್ ಮೂಲಕ ಸಲ್ಲಿಸಬಹುದು

ಆದ್ಯತೆ : ಯುಜಿಸಿ ಎನ್.ಇ.ಟಿ/ಎಸ್.ಎಲ್.ಇ.ಟಿ ಉತ್ತೀರ್ಣತೆ/ ಎಂಫಿಲ್/ ಪಿಹೆಚ್‌ಡಿ ಪದವಿ ಪಡೆದವರಿಗೆ ಆದ್ಯತೆ ನೀಡಲಾಗುವುದು.

ಅಭ್ಯರ್ಥಿಗಳು ತಮ್ಮ ಇ- ಮೇಲ್ ವಿಳಾಸ ಮತ್ತು ದೂರವಾಣಿ / ಮೊಬೈಲ್ ಸಂಖ್ಯೆಯನ್ನು ಅರ್ಜಿಯಲ್ಲಿ ಕಡ್ಡಾಯವಾಗಿ ನಮೂದಿಸತಕ್ಕದ್ದು.

ಸಂದರ್ಶನದ ದಿನಾಂಕವನ್ನು ವಿಶ್ವವಿದ್ಯಾನಿಲಯದ ವೆಬ್‌ಸೈಟ್‌ www.mangaloreuniversity.ac.in ನಲ್ಲಿ ಪ್ರಕಟಿಸಲಾಗುವುದು.

Leave a Comment