Tag: Ksp job

  • KSP : 84 ಹುದ್ದೆಗಳು

    KSP : 84 ಹುದ್ದೆಗಳು

    ವೈಜ್ಞಾನಿಕ ಅಧಿಕಾರಿಗಳ ಆಯ್ಕೆ ಸಮಿತಿಯ ಅಧ್ಯಕ್ಷರು ಮತ್ತು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರು ರವರು, ಕರ್ನಾಟಕ ರಾಜ್ಯ ನ್ಯಾಯ ವಿಜ್ಞಾನ ಪ್ರಯೋಗಾಲಯ ಮಡಿವಾಳ, ಬೆಂಗಳೂರು ಮತ್ತು ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯಗಳಲ್ಲಿ ಖಾಲಿ ಇರುವ ಮಿಕ್ಕುಳಿದ ವೃಂದದ ವೈಜ್ಞಾನಿಕ ಅಧಿಕಾರಿ ಹುದ್ದೆಗಳಿಗೆ ನೇಮಕ‌ ಮಾಡಲು ಕರ್ನಾಟಕ ರಾಜ್ಯ ಅಧಿಕೃತ ಪ್ರಕಟಣೆ ಹೊರಡಿಸಿದೆ.

    ಅರ್ಜಿ ಸಲ್ಲಿಸಲು ಆರಂಭಿಕ‌ ದಿನಾಂಕ : 07-06-2021 ಬೆಳಿಗ್ಗೆ ‌10.00 ಗಂಟೆಗೆ
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 07-07-2021 ಸಂಜೆ 06.00 ಗಂಟೆಗೆ

    ಹುದ್ದೆಗಳ ವಿವರ : ಜೀವ ಶಾಸ್ತ್ರ ವಿಭಾಗ – 12
    ರಸಾಯನ ಶಾಸ್ತ್ರ ವಿಭಾಗ – 8
    ನಾರ್ ಕೋಟಿಕ್ಸ್ ವಿಭಾಗ – 2
    ಭೌತಶಾಸ್ತ್ರ ವಿಭಾಗ -5
    ಡಿ.ಎನ್.ಎ ವಿಭಾಗ -2
    ಪ್ರಶ್ನಿತ ದಸ್ತಾವೇಜು ವಿಭಾಗ ;10
    ಅಗ್ನಿ ಅಸ್ತ್ರ ವಿಭಾಗ – 6
    ಫೊರೊನ್ಸಿಕ್ ಮನೋ ವಿಜ್ಞಾನ – 1
    ಕಂಪ್ಯೂಟರ್ ಫೊರೆನ್ಸಿಕ್ ವಿಭಾಗ – 5
    ಮೊಬೈಲ್ ಫೊರೆನ್ಸಿಕ್ ವಿಭಾಗ -5
    ಆಡಿಯೋ ವಿಡಿಯೋ ವಿಭಾಗ- 5
    ವಿಷ ವಿಜ್ಞಾನ ವಿಭಾಗ -21
    ಫೊಟೋಗ್ರಪಿ‌ ವಿಭಾಗ -2

    ವಯೋಮಿತಿ : ಅಭ್ಯರ್ಥಿಗಳಿಗೆ ಕನಿಷ್ಠ 21 ವರ್ಷ ವಯಸ್ಸಾಗಿರಬೇಕು. ಹಾಗೂ ಈ ಕೆಳಕಂಡಂತೆ ಗರಿಷ್ಠ ವಯೋಮಿತಿಯನ್ನು ಮೀರಿರಬಾರದು.

    ಸಾಮಾನ್ಯ ವರ್ಷ 35, 2ಎ, 2 ಬಿ, 3 ಎ, 3 ಬಿ ಅಭ್ಯರ್ಥಿಗಳಿಗೆ 38 ವರ್ಷ, ಪ.ಜಾತಿ/ ಪ.ಪಂಗಡ/ ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷ ವಯೋಮಿತಿ ಹೊಂದಿರಬೇಕು.

    ಅರ್ಜಿ ಶುಲ್ಕ : ಸಾಮಾನ್ಯ ವರ್ಗ, ಪ್ರವರ್ಗ 2 ಎ, 2 ಬಿ, 3 ಎ,‌ 3 ಬಿ ಅಭ್ಯರ್ಥಿಗಳಿಗೆ ರೂ. 250/- ( ಪ್ರತಿ ವಿಭಾಗಕ್ಕೆ)
    ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ , ಪ್ರವರ್ಗ 1 ಕ್ಕೆ ಸೇರಿದ ಅಭ್ಯರ್ಥಿಗಳಿಗೆ ರೂ.100/- ( ಪ್ರತಿ ವಿಭಾಗಕ್ಕೆ)

    ಅರ್ಜಿಗಳನ್ನು ಇಲಾಖೆಯ ಅಧಿಕೃತ ವೆಬ್‌ಸೈಟ್‌ https://recruitment.ksp.gov.in ಆನ್ಲೈನ್ ಮುಖಾಂತರ ಮಾತ್ರ ಸಲ್ಲಿಸಬೇಕು.

    ಅರ್ಜಿಗಳನ್ನು ಖುದ್ದಾಗಿ ಅಥವಾ ಅಂಚೆ ಮೂಲಕ ಸಲ್ಲಿಸಲು ಅವಕಾಶವಿರುವುದಿಲ್ಲ.

    ನೋಟಿಫಿಕೇಶನ್

  • KSP 3533 ಸಿವಿಲ್ ಪೊಲೀಸ್ ಹುದ್ದೆ : ಇಲ್ಲಿದೆ ಸಂಪೂರ್ಣ ವಿವರ

    KSP 3533 ಸಿವಿಲ್ ಪೊಲೀಸ್ ಹುದ್ದೆ : ಇಲ್ಲಿದೆ ಸಂಪೂರ್ಣ ವಿವರ

    ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಕಾನ್ಸ್‌ಟೇಬಲ್ ನಾಗರಿಕ ( ಪುರುಷ ಮತ್ತು ಮಹಿಳಾ೦ (ಮಿಕ್ಕುಳಿದ) ಮತ್ತು ಕಲ್ಯಾಣ ಕರ್ನಾಟಕ ಪ್ರದೇಶದ ಸ್ಥಳೀಯ ಹುದ್ದೆಗಳನ್ನು ಒಳಗೊಂಡಂತೆ ಖಾಲಿ ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಜಿಯನ್ನು ಆಹ್ವಾನಿಸಿದೆ.

    ಅರ್ಜಿಗಳನ್ನು ಇಲಾಖೆಯ ಅಧಿಕೃತ ವೆಬ್‌ಸೈಟ್ ಆನ್‌ಲೈನ್ ಮುಖಾಂತರ ಮಾತ್ರ ಸಲ್ಲಿಸತಕ್ಕದ್ದು. ಅರ್ಜಿಗಳನ್ನು ಖುದ್ದಾಗಿ ಅಥವಾ ಅಂಚೆ ಮೂಲಕಪ್ರತ್ಯೇಕವಾಗಿ ಸಲ್ಲಿಸಲು ಅವಕಾಶವಿಲ್ಲ.

    ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ 25-೦5-2೦21 ಬೆಳಗ್ಗೆ 1೦.೦೦ ಗಂಟೆಯಿಂದ
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 25-೦6-2021 ಸಂಜೆ 6.೦೦ ಗಂಟೆಯವರೆಗೆ
    ಅಧಿಕೃತ ಬ್ಯಾಂಕ್ ಶಾಖೆಗಳ /ಅಂಚೆ ಕಚೇರಿ ವೇಳೆಯಲ್ಲಿ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ 25-06-2021

    (ಮಿಕ್ಕುಳಿದ ವೃಂದದ ಹುದ್ದೆಗಳು ) ಕಲ್ಯಾಣ ಕರ್ನಾಟಕ ಪ್ರದೇಶದ 2೦% ಮಿಕ್ಕುಳಿದ ವೃಂದದ ಹುದ್ದೆಗಳು ಸೇರಿದಂತೆ:
    ಹುದ್ದೆಗಳ ವಿವರ : ಪೊಲೀಸ್ ಕಾನ್ಸ್‌ಟೇಬಲ್ ( ನಾಗರಿಕ) (ಪುರುಷ) (ಮಿಕ್ಕುಳಿದ ವೃಂದ) -2393
    ಪೊಲೀಸ್ ಕಾನ್ಸ್‌ಟೇಬಲ್ (ನಾಗರಿಕ) (ಮಹಿಳಾ) (ಮಿಕ್ಕುಳಿದ ವೃಂದ) – 799
    ಒಟ್ಟು ಹುದ್ದೆ 3192

    ಕಲ್ಯಾಣ ಕರ್ನಾಟಕ ಪ್ರದೇಶದ 8೦% ಸ್ಥಳೀಯ ವೃಂದದ ಹುದ್ದೆಗಳು:
    ಪೊಲೀಸ್ ಕಾನ್ಸ್‌ಟೇಬಲ್(ನಾಗರಿಕ)(ಪುರುಷ)(ಸ್ಥಳೀಯ) – 266
    ಪೊಲೀಸ್ನಕಾನ್ಸ್‌ಟೇಬಲ್ (ನಾಗರಿಕ) (ಮಹಿಳಾ) (ಸ್ಥಳೀಯ)-75
    ಒಟ್ಟು ಹುದ್ದೆಗಳು 341

    ವಯೋಮಿತಿ : ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಂದರೆ 25-06-2021 ಕ್ಕೆ ಅಭ್ಯರ್ಥಿಗೆ ಕನಿಷ್ಠ 19 ವರ್ಷ ವಯಸ್ಸಾಗಿರಬೇಕು. ಹಾಗೂ ಈ ಕೆಳಕಂಡ ವಯಸ್ಸು ಮೀರಿರಬಾರದು.

    ಸಾಮಾನ್ಯ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ
    ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ 27 ವರ್ಷಗಳು.
    ಇತರೆ ಅಭ್ಯರ್ಥಿಗಳಿಗೆ 25 ವರ್ಷಗಳು.
    ಕರ್ನಾಟಕ ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬುಡಕಟ್ಟು ಅಭ್ಯರ್ಥಿಗಳಿಗೆ 30 ವರ್ಷಗಳು.

    ಪರೀಕ್ಷೆಗಳ ದಿನಾಂಕವನ್ನು ಮುಂದೆ ಜಾಹೀರಾತು ಪಡಿಸಲಾಗುವುದು. ಹಾಗೂ ಪೊಲೀಸ್ ಇಲಾಖೆಯ ಅಧಿಕೃತ ವೆಬ್‌ಸೈಟ್‌ ನಲ್ಲಿ ಪ್ರಕಟಿಸಲಾಗುವುದು. ಆದ್ದರಿಂದ ಅಭ್ಯರ್ಥಿಗಳು ಇಲಾಖೆಯ ವೆಬ್‌ಸೈಟ್‌ನ್ನು ದಿನನಿತ್ಯ ನೋಡಲು ತಿಳಿಸಲಾಗಿದೆ.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

  • 402 ಪಿಎಸ್ಐ ಅರ್ಜಿಗೆ ದಿನಾಂಕ ವಿಸ್ತರಣೆ

    402 ಪಿಎಸ್ಐ ಅರ್ಜಿಗೆ ದಿನಾಂಕ ವಿಸ್ತರಣೆ

    ರಾಜ್ಯ ಪೊಲೀಸ್ ಇಲಾಖೆಯು ಎಪ್ರಿಲ್‌ನಲ್ಲಿ 402 ಸಿವಿಲ್ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್ ಕಳುಹಿಸಿತ್ತು. ಈ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಇದೀಗ ಎರಡನೇ ಬಾರಿ ಆನ್ಲೈನ್ ಅರ್ಜಿ ಸಲ್ಲಿಸುವ ದಿನಾಂಕವನ್ನು ನಿಗದಿಪಡಿಸಲಾಗಿದೆ.

    ಮೇ 31,2021 ರವರೆಗೆ ಅರ್ಜಿ ಸಲ್ಲಿಸುವ ಅವಕಾಶವನ್ನು ನೀಡಲಾಗಿದೆ. ಈ ಹಿಂದೆ ಮೇ 03 ರಿಂದ 20, 2021 ರವರೆಗೆ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಲಾಗಿತ್ತು.

    ಮೇ 05,2021 ನ್ನು ವಯೋಮಿತಿಗೆ ಕೊನೆಯ ದಿನಾಂಕವೆಂದು ಪರಿಗಣಿಸಲಾಗಿದೆ. ಆದರೆ ಜಾತಿ ಮತ್ತು ಆದಾಯ ಮೀಸಲಾತಿ ಹಾಗೂ ಇತರೆ ದಾಖಲೆಗಳಿಗೆ ಮೇ, 20, 2021 ನ್ನು ಕೊನೆಯ ದಿನಾಂಕವೆಂದು ಪರಿಗಣಿಸಲಾಗುತ್ತದೆ.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

  • ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹುದ್ದೆಗಳ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

    ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹುದ್ದೆಗಳ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

    ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 402 ಪೊಲೀಸ್ ಸಬ್ ಇನ್ಸ್ ಪೆಕ್ಟರ್ (ಸಿವಿಲ್) (ಪುರುಷ /ಮಹಿಳಾ) ಹಾಗೂ ಸೇವೆಯಲ್ಲಿರುವವರು ಒಳಗೊಂಡಂತೆ ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾ‌ನಿಸಲಾಗಿದ್ದು, ಅರ್ಜಿ ಸಲ್ಲಿಕೆಯ ಅವಧಿಯನ್ನು ವಿಸ್ತರಿಸಲಾಗಿದೆ.

    ಅರ್ಜಿ ಸಲ್ಲಿಕೆಯ ಅವಧಿಯು ಮೇ 20, 2021 ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

  • ಸಿವಿಲ್ ಪಿಎಸ್‌ಐ  ನೇಮಕಕ್ಕೆ ಅರ್ಜಿ ಆಹ್ವಾನ : 402 ಹುದ್ದೆಗಳು : ಈ ಕೂಡಲೇ ಅರ್ಜಿ ಸಲ್ಲಿಸಿ

    ಸಿವಿಲ್ ಪಿಎಸ್‌ಐ ನೇಮಕಕ್ಕೆ ಅರ್ಜಿ ಆಹ್ವಾನ : 402 ಹುದ್ದೆಗಳು : ಈ ಕೂಡಲೇ ಅರ್ಜಿ ಸಲ್ಲಿಸಿ

    ಕರ್ನಾಟಕ ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್ (ಸಿವಿಲ್‌) (ಪುರುಷ ಮತ್ತು ಮಹಿಳಾ) ಹಾಗೂ ಸೇವೆಯಲ್ಲಿರುವವರು ಒಳಗೊಂಡಂತೆ ಹುದ್ದೆಗಳ ನೇರ ನೇಮಕಾತಿಗಾಗಿ ಕರ್ನಾಟಕ ರಾಜ್ಯ ಪೊಲೀಸ್ ಲಿಪಿಕ ನೌಕರರ ಸೇವೆಗಳು ಸೇರಿದಂತೆ ( ನೇಮಕಾತಿ) ನಿಯಮ 2004 ಮತ್ತು ಅದರ (ತಿದ್ದುಪಡಿ) ನಿಯಮ, 2009, ಕರ್ನಾಟಕ ರಾಜ್ಯ ಪೊಲೀಸ್ ಲಿಪಿಕ ಸೇವೆಗಳನ್ನು ಒಳಗೊಂಡ ( ನೇಮಕಾತಿ)(ತಿದ್ದುಪಡಿ ) ನಿಯಮಗಳು 2014, 2016 ಮತ್ತು 2020 ಕರ್ನಾಟಕ ಸಾರ್ವಜನಿಕ ಉದ್ಯೋಗ (ಕಲ್ಯಾಣ- ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿ) ಆದೇಶ, 2013, ಕರ್ನಾಟಕ ಸಾರ್ವಜನಿಕ ಉದ್ಯೋಗ ( ಕಲ್ಯಾಣ – ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿ) (ಅರ್ಹತಾ ಪ್ರಮಾಣ ಪತ್ರಗಳ ನೀಡಿಕೆ) ನಿಯಮಗಳು, 2013 ಹಾಗೂ ಕರ್ನಾಟಕ ಸರಕಾರದ ಸುತ್ತೋಲೆ ಪ್ರಕಾರ ಕಾಲ ಕಾಲಕ್ಕೆ ಆಗುವ ತಿದ್ದುಪಡಿಗಳ ಅನುಸಾರ ಈ ಅಧಿಸೂಚನೆಯನ್ನು ಪ್ರಕಟಿಸುತ್ತಾ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

    ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 01-04-2021 ಬೆಳಿಗ್ಗೆ 10.00 ಗಂಟೆಗೆ
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 03-05-2021 ಸಂಜೆ 06.00 ಗಂಟೆಗೆ

    ಶುಲ್ಕವನ್ನು ಅಧಿಕೃತ ಬ್ಯಾಂಕ್ ಅಥವಾ ಅಂಚೆ ಕಚೇರಿಗಳ ವೇಳೆಯಲ್ಲಿ ಪಾವತಿಸಲು ಕೊನೆಯ ದಿನಾಂಕ : 05-05-2021

    ಅರ್ಜಿಗಳನ್ನು ಇಲಾಖೆಯ ಅಧಿಕೃತ ವೆಬ್‌ಸೈಟ್ https://recruitment.ksp.gov.in ನಲ್ಲಿ ಆನ್‌ ಲೈನ್ ( ಎಲೆಕ್ಟ್ರಾನಿಕ್ ಮಾರ್ಗ) ಮುಖಾಂತರ ಮಾತ್ರ ಸಲ್ಲಿಸತಕ್ಕದ್ದು. ಅರ್ಜಿಗಳನ್ನು ಖುದ್ದಾಗಿ ಅಥವಾ ಅಂಚೆ ಮೂಲಕ ಪ್ರತ್ಯೇಕವಾಗಿ ಸಲ್ಲಿಸಲು ಅವಕಾಶವಿರುವುದಿಲ್ಲ.

    ಅರ್ಜಿ ಶುಲ್ಕ : ಸಾಮಾನ್ಯ ವರ್ಗ, ಪ್ರವರ್ಗ 2 (ಎ), 2(ಬಿ), 3 (ಎ), 3 (ಬಿ) ಗೆ ಸೇರಿದ ಅಭ್ಯರ್ಥಿಗಳಿಗೆ ರೂ. 5೦೦/-, ಪರಿಶಿಷ್ಟ ಜಾತಿ , ಪರಿಶಿಷ್ಟ ಪಂಗಡ, ಪ್ರವರ್ಗ-1 ಕ್ಕೆ ಸೇರಿದ ಅಭ್ಯರ್ಥಿಗಳಿಗೆ ರೂ. 250/- ಶುಲ್ಕವನ್ನು ಪಾವತಿಸಬೇಕಾಗುತ್ತದೆ.

    ವಯೋಮಿತಿ : ಅರ್ಜಿಯನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಂದರೆ 03-05-2021 ಕ್ಕೆ ಅಭ್ಯರ್ಥಿಗೆ ಕನಿಷ್ಠ 21 ವರ್ಷ ವಯಸ್ಸಾಗಿರಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ 32 ವರ್ಷಗಳು, ಇತರೆ ಅಭ್ಯರ್ಥಿಗಳಿಗೆ 30 ವರ್ಷಗಳು.

    ಸೇವಾನಿರತ ಅಭ್ಯರ್ಥಿಗಳಿಗೆ : ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ 40 ವರ್ಷಗಳು. ಇತರೆ ಅಭ್ಯರ್ಥಿಗಳಿಗೆ 30 ವರ್ಷಗಳು.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್‌ ಮಾಡಿ

  • KSP DV ಪ್ರವೇಶ ಪತ್ರ ಪ್ರಕಟ

    KSP DV ಪ್ರವೇಶ ಪತ್ರ ಪ್ರಕಟ

    ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಹುದ್ದೆಗಳ ದಾಖಲೆ ಪರಿಶೀಲನೆಯ ಪ್ರವೇಶ ಪತ್ರ ಪ್ರಕಟಿಸಿದೆ.

    ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ನೀಡಿ, ನಂತರ srpc reserve police constable recruitment 2021 ಗೆ ಲಿಂಕ್ ಮೇಲೆ ಕ್ಲಿಕ್ ಮಾಡಿ, ನಂತರ my application ಗೆ ಕ್ಲಿಕ್ ಮಾಡಿ, ಆನಂತರ ಅಭ್ಯರ್ಥಿಗಳು ಅರ್ಜಿ ಸಂಖ್ಯೆ ಜನ್ಮ ದಿನಾಂಕ ನಮೂದಿಸಿ. ಪ್ರವೇಶ ಪತ್ರ ಪ್ರಕಟವಾಗುತ್ತದೆ.

    ಅಧಿಕೃತ ವೆಬ್‌ಸೈಟ್‌ ಲಿಂಕ್