KSP 3533 ಸಿವಿಲ್ ಪೊಲೀಸ್ ಹುದ್ದೆ : ಇಲ್ಲಿದೆ ಸಂಪೂರ್ಣ ವಿವರ

Written By Mallika

Lorem ipsum dolor sit amet consectetur pulvinar ligula augue quis venenatis. 

Advertisements

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಕಾನ್ಸ್‌ಟೇಬಲ್ ನಾಗರಿಕ ( ಪುರುಷ ಮತ್ತು ಮಹಿಳಾ೦ (ಮಿಕ್ಕುಳಿದ) ಮತ್ತು ಕಲ್ಯಾಣ ಕರ್ನಾಟಕ ಪ್ರದೇಶದ ಸ್ಥಳೀಯ ಹುದ್ದೆಗಳನ್ನು ಒಳಗೊಂಡಂತೆ ಖಾಲಿ ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಜಿಯನ್ನು ಆಹ್ವಾನಿಸಿದೆ.

ಅರ್ಜಿಗಳನ್ನು ಇಲಾಖೆಯ ಅಧಿಕೃತ ವೆಬ್‌ಸೈಟ್ ಆನ್‌ಲೈನ್ ಮುಖಾಂತರ ಮಾತ್ರ ಸಲ್ಲಿಸತಕ್ಕದ್ದು. ಅರ್ಜಿಗಳನ್ನು ಖುದ್ದಾಗಿ ಅಥವಾ ಅಂಚೆ ಮೂಲಕಪ್ರತ್ಯೇಕವಾಗಿ ಸಲ್ಲಿಸಲು ಅವಕಾಶವಿಲ್ಲ.

ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ 25-೦5-2೦21 ಬೆಳಗ್ಗೆ 1೦.೦೦ ಗಂಟೆಯಿಂದ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 25-೦6-2021 ಸಂಜೆ 6.೦೦ ಗಂಟೆಯವರೆಗೆ
ಅಧಿಕೃತ ಬ್ಯಾಂಕ್ ಶಾಖೆಗಳ /ಅಂಚೆ ಕಚೇರಿ ವೇಳೆಯಲ್ಲಿ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ 25-06-2021

(ಮಿಕ್ಕುಳಿದ ವೃಂದದ ಹುದ್ದೆಗಳು ) ಕಲ್ಯಾಣ ಕರ್ನಾಟಕ ಪ್ರದೇಶದ 2೦% ಮಿಕ್ಕುಳಿದ ವೃಂದದ ಹುದ್ದೆಗಳು ಸೇರಿದಂತೆ:
ಹುದ್ದೆಗಳ ವಿವರ : ಪೊಲೀಸ್ ಕಾನ್ಸ್‌ಟೇಬಲ್ ( ನಾಗರಿಕ) (ಪುರುಷ) (ಮಿಕ್ಕುಳಿದ ವೃಂದ) -2393
ಪೊಲೀಸ್ ಕಾನ್ಸ್‌ಟೇಬಲ್ (ನಾಗರಿಕ) (ಮಹಿಳಾ) (ಮಿಕ್ಕುಳಿದ ವೃಂದ) – 799
ಒಟ್ಟು ಹುದ್ದೆ 3192

ಕಲ್ಯಾಣ ಕರ್ನಾಟಕ ಪ್ರದೇಶದ 8೦% ಸ್ಥಳೀಯ ವೃಂದದ ಹುದ್ದೆಗಳು:
ಪೊಲೀಸ್ ಕಾನ್ಸ್‌ಟೇಬಲ್(ನಾಗರಿಕ)(ಪುರುಷ)(ಸ್ಥಳೀಯ) – 266
ಪೊಲೀಸ್ನಕಾನ್ಸ್‌ಟೇಬಲ್ (ನಾಗರಿಕ) (ಮಹಿಳಾ) (ಸ್ಥಳೀಯ)-75
ಒಟ್ಟು ಹುದ್ದೆಗಳು 341

ವಯೋಮಿತಿ : ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಂದರೆ 25-06-2021 ಕ್ಕೆ ಅಭ್ಯರ್ಥಿಗೆ ಕನಿಷ್ಠ 19 ವರ್ಷ ವಯಸ್ಸಾಗಿರಬೇಕು. ಹಾಗೂ ಈ ಕೆಳಕಂಡ ವಯಸ್ಸು ಮೀರಿರಬಾರದು.

ಸಾಮಾನ್ಯ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ 27 ವರ್ಷಗಳು.
ಇತರೆ ಅಭ್ಯರ್ಥಿಗಳಿಗೆ 25 ವರ್ಷಗಳು.
ಕರ್ನಾಟಕ ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬುಡಕಟ್ಟು ಅಭ್ಯರ್ಥಿಗಳಿಗೆ 30 ವರ್ಷಗಳು.

ಪರೀಕ್ಷೆಗಳ ದಿನಾಂಕವನ್ನು ಮುಂದೆ ಜಾಹೀರಾತು ಪಡಿಸಲಾಗುವುದು. ಹಾಗೂ ಪೊಲೀಸ್ ಇಲಾಖೆಯ ಅಧಿಕೃತ ವೆಬ್‌ಸೈಟ್‌ ನಲ್ಲಿ ಪ್ರಕಟಿಸಲಾಗುವುದು. ಆದ್ದರಿಂದ ಅಭ್ಯರ್ಥಿಗಳು ಇಲಾಖೆಯ ವೆಬ್‌ಸೈಟ್‌ನ್ನು ದಿನನಿತ್ಯ ನೋಡಲು ತಿಳಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

Leave a Comment