Tag: Kalburgi

  • ಕಲಬುರಗಿ ಮಹಾನಗರ ಪಾಲಿಕೆ: ಹುದ್ದೆಗಳಿಗೆ ನೇಮಕ

    ಕಲಬುರಗಿ ಮಹಾನಗರ ಪಾಲಿಕೆ: ಹುದ್ದೆಗಳಿಗೆ ನೇಮಕ

    ಕಲಬುರಗಿ ಜಿಲ್ಲೆಯ ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ‌. ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದು. ವಿವರಗಳು ಈ ಕೆಳಗಿನಂತಿವೆ :

    ಹುದ್ದೆ : ಪೌರಕಾರ್ಮಿಕರ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಿದೆ.

    ಕ್ಷೇಮಾಭಿವೃದ್ಧಿ/ಗುತ್ತಿಗೆ/ಹೊರಗುತ್ತಿಗೆ/ದಿನಗೂಲಿ/ಸಮಾನ ಕೆಲಸ ಕ್ಕೆ ಸಮಾನ ವೇತನ/ಇತರೆ ಆಧಾರದ ಮೇಲೆ‌‌ ಕರ್ತವ್ಯ ನಿರತರಿಗೆ ಆದ್ಯತೆ ನೀಡಿ ಪರಿಗಣಿಸಲಾಗುವುದು.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 21-04-2021 ( ಸಾಯಂಕಾಲ 5 ಗಂಟೆಯವರೆಗೆ)

    ಅಭ್ಯರ್ಥಿಗಳು ಅರ್ಜಿಯನ್ನು ಯೋಜನಾ ನಿರ್ದೇಶಕರು ಜಿಲ್ಲಾ ನಗರಾಭಿವೃದ್ಧಿ ಕೋಶ ಕಲಬುರಗಿ, ಜಿಲ್ಲಾಧಿಕಾರಿಗಳ ಕಚೇರಿ ಕಲಬುರಗಿ ಅಥವಾ ಆಯುಕ್ತರು ಮಹಾನಗರ ಪಾಲಿಕೆ ಕಲಬುರಗಿ ಕಚೇರಿಯಿಂದ ಪಡೆದುಕೊಳ್ಳತಕ್ಕದ್ದು. .

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಮಹಾನಗರ ಪಾಲಿಕೆ ಕಲಬುರಗಿ ಕಾರ್ಯಾಲಯದಿಂದ ಅಥವಾ ಯೋಜನಾ ನಿರ್ದೇಶಕರು ಜಿಲ್ಲಾ ನಗರಾಭಿವೃದ್ಧಿ ಕೋಶ, ಜಿಲ್ಲಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ‌.

  • ಕಲಬುರಗಿಯ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಮಹಿಳಾ)ಯಲ್ಲಿ ಮಾ.26 ಕ್ಯಾಂಪಸ್ ಸಂದರ್ಶನ

    ಕಲಬುರಗಿಯ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಮಹಿಳಾ)ಯಲ್ಲಿ ಮಾ.26 ಕ್ಯಾಂಪಸ್ ಸಂದರ್ಶನ

    ಕಲಬುರಗಿಯ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಮಹಿಳಾ) ಯಲ್ಲಿ ಕ್ಯಾಂಪಸ್ ಸಂದರ್ಶನ ನಡೆಯಲಿದೆ.

    ಐಟಿಐ ಟ್ರೇಡ್ ನಲ್ಲಿ ಪಾಸಾದ ಅಭ್ಯರ್ಥಿಗಳಿಗೆ ಬಳ್ಳಾರಿಯ ತೋರಣಗಲ್ಲು ಎಂ.ಎಸ್.ಜೆ.ಎಸ್.ಡಬ್ಲ್ಯೂ ಸ್ಟೀಲ್ ಲಿಮಿಟೆಡ್ ಕಾರ್ಖಾನೆಯಲ್ಲಿ ಒಂದು ವರ್ಷದ ಅವಧಿಗೆ ಅಪ್ರೆಂಟಿಸ್ ತರಬೇತಿಗೆ ಆಯ್ಕೆ ಮಾಡಲಾಗುತ್ತದೆ.

    ಅಭ್ಯರ್ಥಿಗಳು ತಮ್ಮ ಜೊತೆ ಎಸ್ ಎಸ್ ಎಲ್ ಸಿ ಮಾರ್ಕ್ಸ್ ಕಾರ್ಡ್, ಐಟಿಐ ಅಂಕಪಟ್ಟಿ, ಭಾವಚಿತ್ರ ಹಾಗೂ ಇತರ ದಾಖಲೆಗಳೊಂದಿಗೆ ಕ್ಯಾಂಪಸ್ ಸಂದರ್ಶನಕ್ಕೆ ಹಾಜರಾಗಬಹುದು.

    ಅಭ್ಯರ್ಥಿಗಳಿಗೆ ತಿಂಗಳಿಗೆ ರೂ.9,900/- ಗಳ ಶಿಷ್ಯ ವೇತನ,ಕ್ಯಾಂಟೀನ್ ಹಾಗೂ ವಸತಿ ವ್ಯವಸ್ಥೆ ನೀಡಲಾಗುತ್ತದೆ.

    ಆಯ್ಕೆ: ಐಟಿಐ ವೃತ್ತಿಯ ಫಿಟ್ಟರ್, ಎಲೆಕ್ಟ್ರಿಶಿಯನ್, ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ (ಇಎಂ), ವೆಲ್ಡರ್, ಟರ್ನರ್, ವೈರ್ ಮ್ಯಾನ್, ಡಿಸೈಲ್ ಮೆಕ್ಯಾನಿಕ್, ಮೆಶಿನಿಸ್ಟ್, ಪಿಎಲ್.ಸಿ, ಅಟೋಮೇಶನ್ ಟ್ರೇಡ್ ನಲ್ಲಿ ಪಾಸಾದ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

    18 ರಿಂದ 23 ವರ್ಷದೊಳಗಿನ ಅಭ್ಯರ್ಥಿಗಳು ಪಾಲ್ಗೊಳ್ಳಬಹುದು.

    ಮಾರ್ಚ್ 26 ರಂದು, ಬೆಳಗ್ಗೆ 10.30 ಕ್ಕೆ ಕಲಬುರಗಿ ಸರ್ಕಾರಿ (ಮಹಿಳಾ) ಕೈಗಾರಿಕಾ ತರಬೇತಿ ಸಂಸ್ಥೆ ಯಲ್ಲಿ ಕ್ಯಾಂಪಸ್ ಸಂದರ್ಶನ ವಿದೆ.