ಕಲಬುರಗಿಯ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಮಹಿಳಾ)ಯಲ್ಲಿ ಮಾ.26 ಕ್ಯಾಂಪಸ್ ಸಂದರ್ಶನ

Written By Mallika

Lorem ipsum dolor sit amet consectetur pulvinar ligula augue quis venenatis. 

Advertisements

ಕಲಬುರಗಿಯ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಮಹಿಳಾ) ಯಲ್ಲಿ ಕ್ಯಾಂಪಸ್ ಸಂದರ್ಶನ ನಡೆಯಲಿದೆ.

ಐಟಿಐ ಟ್ರೇಡ್ ನಲ್ಲಿ ಪಾಸಾದ ಅಭ್ಯರ್ಥಿಗಳಿಗೆ ಬಳ್ಳಾರಿಯ ತೋರಣಗಲ್ಲು ಎಂ.ಎಸ್.ಜೆ.ಎಸ್.ಡಬ್ಲ್ಯೂ ಸ್ಟೀಲ್ ಲಿಮಿಟೆಡ್ ಕಾರ್ಖಾನೆಯಲ್ಲಿ ಒಂದು ವರ್ಷದ ಅವಧಿಗೆ ಅಪ್ರೆಂಟಿಸ್ ತರಬೇತಿಗೆ ಆಯ್ಕೆ ಮಾಡಲಾಗುತ್ತದೆ.

ಅಭ್ಯರ್ಥಿಗಳು ತಮ್ಮ ಜೊತೆ ಎಸ್ ಎಸ್ ಎಲ್ ಸಿ ಮಾರ್ಕ್ಸ್ ಕಾರ್ಡ್, ಐಟಿಐ ಅಂಕಪಟ್ಟಿ, ಭಾವಚಿತ್ರ ಹಾಗೂ ಇತರ ದಾಖಲೆಗಳೊಂದಿಗೆ ಕ್ಯಾಂಪಸ್ ಸಂದರ್ಶನಕ್ಕೆ ಹಾಜರಾಗಬಹುದು.

ಅಭ್ಯರ್ಥಿಗಳಿಗೆ ತಿಂಗಳಿಗೆ ರೂ.9,900/- ಗಳ ಶಿಷ್ಯ ವೇತನ,ಕ್ಯಾಂಟೀನ್ ಹಾಗೂ ವಸತಿ ವ್ಯವಸ್ಥೆ ನೀಡಲಾಗುತ್ತದೆ.

ಆಯ್ಕೆ: ಐಟಿಐ ವೃತ್ತಿಯ ಫಿಟ್ಟರ್, ಎಲೆಕ್ಟ್ರಿಶಿಯನ್, ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ (ಇಎಂ), ವೆಲ್ಡರ್, ಟರ್ನರ್, ವೈರ್ ಮ್ಯಾನ್, ಡಿಸೈಲ್ ಮೆಕ್ಯಾನಿಕ್, ಮೆಶಿನಿಸ್ಟ್, ಪಿಎಲ್.ಸಿ, ಅಟೋಮೇಶನ್ ಟ್ರೇಡ್ ನಲ್ಲಿ ಪಾಸಾದ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

18 ರಿಂದ 23 ವರ್ಷದೊಳಗಿನ ಅಭ್ಯರ್ಥಿಗಳು ಪಾಲ್ಗೊಳ್ಳಬಹುದು.

ಮಾರ್ಚ್ 26 ರಂದು, ಬೆಳಗ್ಗೆ 10.30 ಕ್ಕೆ ಕಲಬುರಗಿ ಸರ್ಕಾರಿ (ಮಹಿಳಾ) ಕೈಗಾರಿಕಾ ತರಬೇತಿ ಸಂಸ್ಥೆ ಯಲ್ಲಿ ಕ್ಯಾಂಪಸ್ ಸಂದರ್ಶನ ವಿದೆ.

Leave a Comment