Tag: central government jobs 2024

  • NLC India Ltd Jobs: ಎನ್‌ಎಲ್‌ಸಿ ಇಂಡಿಯಾ ಲಿಮಿಟೆಡ್‌ನಲ್ಲಿ 239 ಕೆಲಸ ಖಾಲಿ ಇದೆ; ಐಟಿಐ, ಡಿಪ್ಲೋಮಾ ಪಾಸಾದವರಿಗೆ ಆದ್ಯತೆ

    NLC India Ltd Jobs: ಎನ್‌ಎಲ್‌ಸಿ ಇಂಡಿಯಾ ಲಿಮಿಟೆಡ್‌ನಲ್ಲಿ 239 ಕೆಲಸ ಖಾಲಿ ಇದೆ; ಐಟಿಐ, ಡಿಪ್ಲೋಮಾ ಪಾಸಾದವರಿಗೆ ಆದ್ಯತೆ

    NLC India Ltd Recruitment 2024: ನೈವೇಲಿ ಲಿಗ್ನೈಟ್‌ ಕಾರ್ಪೋರೇಷನ್‌ ಇಂಡಿಯಾ ಲಿಮಿಟೆಡ್‌ನಲ್ಲಿ ಇಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಒಟ್ಟು 239 ಹುದ್ದೆಗಳು ಖಾಲಿ ಇದೆ. ಇಂಡಸ್ಟ್ರಿಯಲ್‌ ಟ್ರೈನಿ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಹುದ್ದೆಯ ಕುರಿತ ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

    ಪ್ರಮುಖ ದಿನಾಂಕಗಳು;
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15-06-2024 ರ ಸಂಜೆ 5 ಗಂಟೆ ತನಕ

    ಹುದ್ದೆಗಳ ವಿವರ ಇಲ್ಲಿದೆ;
    ಇಂಡಸ್ಟ್ರಿಯಲ್‌ ಟ್ರೈನಿ/ಎಸ್‌ಎಂಇ ಅಂಡ್‌ ಟೆಕ್ನಿಕಲ್‌ -100 ಹುದ್ದೆಗಳು
    ಇಂಡಸ್ಟ್ರಿಯಲ್‌ ಟ್ರೈನಿ (ಮೈನ್ಸ್‌ ಅಂಡ್‌ ಮೈನ್ಸ್‌ ಸಪೋರ್ಟ್‌ ಸರ್ವೀಸ್‌)- 139 ಹುದ್ದೆಗಳು

    ವಿದ್ಯಾರ್ಹತೆ: ಇಂಡಸ್ಟ್ರಿಯಲ್‌ ಟ್ರೈನಿ/ಎಸ್‌ಎಂಇ ಅಂಡ್‌ ಟೆಕ್ನಿಕಲ್‌ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಡಿಪ್ಲೋಮಾ ತೇರ್ಗಡೆ ಹೊಂದಿರಬೇಕು.
    ಇಂಡಸ್ಟ್ರಿಯಲ್‌ ಟ್ರೈನಿ (ಮೈನ್ಸ್‌ ಅಂಡ್‌ ಮೈನ್ಸ್‌ ಸಪೋರ್ಟ್‌ ಸರ್ವೀಸ್‌) ಈ ಹುದ್ದೆಗೆ ಅರ್ಜಿ ಸಲ್ಲಿಸಲು ಎಸ್‌ಎಸ್‌ಎಲ್‌ಸಿ ಜೊತೆಗೆ ಐಟಿಐ ನಲ್ಲಿ ವಿವಿಧ ಟ್ರೇಡ್‌ನಲ್ಲಿ ತೇರ್ಗಡೆ ಹೊಂದಿರಬೇಕು.

    ವಯೋಮಿತಿ: ಮೇಲ್ಕಂಡ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿಯು 37ವರ್ಷ ಮೀರಿರಬಾರದು. ಒಬಿಸಿ-40 ವರ್ಷ, ಎಸ್‌/ಎಸ್‌ಟಿ ಅಭ್ಯರ್ಥಿಗಳಿಗೆ 42 ವರ್ಷವರೆಗೆ ಗರಿಷ್ಠ ವಯೋಮಿತಿ ನಿಗದಿ ಪಡಿಸಲಾಗಿದೆ.

    ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ತಮ್ಮ ಆಧಾರ್‌ಕಾರ್ಡ್‌, ವಿದ್ಯಾರ್ಹತೆ ದಾಖಲೆ, ಪಾಸ್‌ಪೋರ್ಟ್‌ ಅಳತೆಯ ಭಾವಚಿತ್ರ, ಇತರೆ ದಾಖಲೆಗಳು ಅಗತ್ಯ. ಈ ಹುದ್ದೆಯ ತರಬೇತಿ ಅವಧಿ 3 ವರ್ಷದ್ದಾಗಿರುತ್ತದೆ.

    ಸ್ಟೈಫೆಂಡ್‌ ವಿವರ ಈ ರೀತಿ ಇದೆ;
    ಇಂಡಸ್ಟ್ರಿಯಲ್‌ ಟ್ರೈನಿ/ಎಸ್‌ಎಂಇ ಅಂಡ್‌ ಟೆಕ್ನಿಕಲ್‌ ಹುದ್ದೆಗೆ ರೂ.18000-ಮೊದಲ ವರ್ಷ, ರೂ.20000 ಎರಡನೇ ವರ್ಷ, ರೂ.22000 ಮೂರನೇ ವರ್ಷ
    ಇಂಡಸ್ಟ್ರಿಯಲ್‌ ಟ್ರೈನಿ (ಮೈನ್ಸ್‌ ಅಂಡ್‌ ಮೈನ್ಸ್‌ ಸಪೋರ್ಟ್‌ ಸರ್ವೀಸ್‌) ಈ ಹುದ್ದೆಗೆ ರೂ.14,000 ಮೊದಲ ವರ್ಷ, ರೂ.16000 ಎರಡನೇ ವರ್ಷ, ರೂ.18000 ಮೂರನೇ ವರ್ಷ

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್‌ ಕ್ಲಿಕ್‌ ಮಾಡಿ

  • Indian Army Jobs: ಇಂಡಿಯನ್‌ ಆರ್ಮಿಯಲ್ಲಿ ವಿವಿಧ ಹುದ್ದೆಗಳ ಭರ್ತಿ

    Indian Army Jobs: ಇಂಡಿಯನ್‌ ಆರ್ಮಿಯಲ್ಲಿ ವಿವಿಧ ಹುದ್ದೆಗಳ ಭರ್ತಿ

    Indian Army Recruitment 2024: ಭಾರತೀಯ ಸೇನೆಯಲ್ಲಿ ಉದ್ಯೋಗ ಖಾಲಿ ಇದ್ದು, ಸೇನೆ ಸೇರಲು ಇಚ್ಛಿಸುವವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಭಾರತೀಯ ಸೇನೆಗೆ ಸೇರಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ವಿವಿಧ 10+2 ತಾಂತ್ರಿಕ ಪ್ರವೇಶ -52 ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಅಖಿಲ ಭಾರತ ಸರ್ಕಾರದಲ್ಲಿ ವೃತ್ತಿಜೀವನವನ್ನು ಪ್ರಾರಂಭಿಸಲು ಇಚ್ಛೆ ಇರುವವರು ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸಬಹುದು. ಆಸಕ್ತ ಅಭ್ಯರ್ಥಿಗಳು 13-ಜೂನ್-2024 ರಂದು ಅಥವಾ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅಧಿಸೂಚನೆಯಲ್ಲಿ ಹೇಳಲಾಗಿದೆ.

    ಪ್ರಮುಖ ದಿನಾಂಕಗಳು;
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 13-05-2024
    ಆನ್‌ಲೈನ್‌ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 13-06-2024

    ಹುದ್ದೆಯ ವಿವರ ಇಲ್ಲಿದೆ;
    ಸಂಸ್ಥೆಯ ಹೆಸರು: ಭಾರತೀಯ ಸೇನೆಯಲ್ಲಿ 10+2 ಟೆಕ್ನಿಕಲ್ ಎಂಟ್ರಿ ಸ್ಕೀಮ್ – 52 ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಹುದ್ದೆಗಳ ಸಂಖ್ಯೆಯನ್ನು ನಿರ್ದಿಷ್ಟಪಡಿಸಿಲ್ಲ. ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ವೇತನವು ಭಾರತೀಯ ಸೇನೆಯ ನಿಯಮಗಳ ಪ್ರಕಾರ ದೊರಕಲಿದೆ.

    ವಿದ್ಯಾರ್ಹತೆ: ಭಾರತೀಯ ಸೇನೆಯ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ವಿಶ್ವವಿದ್ಯಾಲಯಗಳಿಂದ 12 ನೇ ತರಗತಿಯನ್ನು ತೇರ್ಗಡೆ ಹೊಂದಿರಬೇಕು.

    ವಯೋಮಿತಿ: ಅಭ್ಯರ್ಥಿಗಳು ಭಾರತೀಯ ಸೇನಾ ನಿಯಮಗಳ ಪ್ರಕಾರ ವಯಸ್ಸಿನ ಮಿತಿಯನ್ನು ಹೊಂದಿರಬೇಕು. ಭಾರತೀಯ ಸೇನೆಗೆ ಸೇರುವ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

    ಅರ್ಜಿ ಶುಲ್ಕ: ಭಾರತೀಯ ಸೇನಾ ಹುದ್ದೆಗೆ ಅರ್ಜಿಗಳ ಹುದ್ದೆಗೆ ಯಾವುದೇ ಅರ್ಜಿ ಶುಲ್ಕವಿಲ್ಲ.

    ಆಯ್ಕೆ ಪ್ರಕ್ರಿಯೆ: ಭಾರತೀಯ ಸೇನಾ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

  • CLW Jobs: ಸಿಎಲ್‌ಡಬ್ಲ್ಯೂನಿಂದ ನೇಮಕ ಅಧಿಸೂಚನೆ; 592 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

    CLW Jobs: ಸಿಎಲ್‌ಡಬ್ಲ್ಯೂನಿಂದ ನೇಮಕ ಅಧಿಸೂಚನೆ; 592 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

    Chittaranjan Locomotive Works Act Recruitment 2024: ರೈಲ್ವೆ ಸಚಿವಾಲಯದ ಚಿತ್ತರಂಜನ್‌ ಲೋಕೋಮೊಟಿವ್‌ ವರ್ಕ್ಸ್‌ ನಲ್ಲಿ ಇರುವ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಒಟ್ಟು 592 ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಫಿಟ್ಟರ್/ಟರ್ನರ್‌, ಮಷನಿಸ್ಟ್‌, ವೆಲ್ಡರ್‌, ಇತರೆ ಟ್ರೇಡ್‌ ಹುದ್ದೆಗಳಿದ್ದು, ಹುದ್ದೆಯ ಕುರಿತ ಹೆಚ್ಚಿನ ಮಾಹಿತಿ ಇಲ್ಲಿ ನೀಡಲಾಗಿದೆ. ಈ ಹುದ್ದೆಗಳಿಗೆ ಆನ್‌ಲೈನ್‌ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಅರ್ಜಿ ಸಲ್ಲಿಸಲು 18-04-2024 ಕೊನೆಯ ದಿನವಾಗಿದ್ದು, ಬೇಗನೇ ಅರ್ಜಿ ಸಲ್ಲಿಸಿ.

    ಪ್ರಮುಖ ದಿನಾಂಕಗಳು
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 27-03-2024
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 18-04-2024 (ರಾತ್ರಿ 11.59 ಗಂಟೆವರೆಗೆ)

    ಹುದ್ದೆಯ ಕುರಿತ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ;
    ಹುದ್ದೆಯ ಹೆಸರು ಮತ್ತು ಸಂಖ್ಯೆ;
    ಟ್ರೇಡ್‌ವಾರು ಹುದ್ದೆಗಳ ವಿವರ
    ಫಿಟ್ಟರ್ – 200 ಹುದ್ದೆಗಳು
    ಟರ್ನರ್ – 20 ಹುದ್ದೆಗಳು
    ಮಷಿನಿಸ್ಟ್‌ – 56 ಹುದ್ದೆಗಳು
    ವೆಲ್ಡರ್ – 88 ಹುದ್ದೆಗಳು
    ಇಲೆಕ್ಟ್ರೀಷಿಯನ್ – 112 ಹುದ್ದೆಗಳು
    ಎಸಿ ಮೆಕ್ಯಾನಿಕ್ – 04 ಹುದ್ದೆಗಳು
    ಪೇಂಟರ್ – 12 ಹುದ್ದೆಗಳು

    ವಿದ್ಯಾರ್ಹತೆ
    ಮೇಲ್ಕಂಡ ಹುದ್ದೆಗಳಿಗೆ ಅಭ್ಯರ್ಥಿಗಳು ಟ್ರೇಡ್‌ಗಳಲ್ಲಿ ಐಟಿಐ ಪಾಸ್‌ ಮಾಡಿರಬೇಕು. ಎನ್‌ಸಿವಿಟಿ ಅಥವಾ ಎಸ್‌ಸಿವಿಟಿ ಪ್ರಮಾಣ ಪತ್ರವನ್ನು ಪಡೆದಿರಬೇಕು. ಈ ಎಲ್ಲಾ ಪ್ರಮಾಣ ಪತ್ರವನ್ನು ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಲಗತ್ತಿಸಬೇಕು.

    ವಯೋಮಿತಿ: ಅಭ್ಯರ್ಥಿಗಳ ಕನಿಷ್ಠ ವಯೋಮಿತಿಯು 15 ವರ್ಷ ಆಗಿರಬೇಕು. ಗರಿಷ್ಠ 24 ವರ್ಷ ಮೀರಿರಬಾರದು. ವರ್ಗಾವಾರ ವಯೋಮಿತಿಯ ಸಡಿಲಿಕೆಯ ನಿಯಮವನ್ನು ನೀಡಲಾಗಿದೆ.

    ಅರ್ಜಿ ಸಲ್ಲಿಸುವ ರೀತಿ ಹೇಗೆ?
    ಮೊದಲಿಗೆ ಅಭ್ಯರ್ಥಿಗಳು ಆನ್‌ಲೈನ್‌ ಪೋರ್ಟಲ್‌ ನ ಈ ಲಿಂಕ್‌ಗೆ ಭೇಟಿ ನೀಡಬೇಕು. ನಂತರ ರಿಜಿಸ್ಟ್ರೇಷನ್‌ ಪಡೆದು, ಕೆಳಲಾದ ಎಲ್ಲಾ ವಿವರಗಳನ್ನು ನೀಡಿ ಭರ್ತಿ ಮಾಡಿ, ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಸಮಯದಲ್ಲಿ ಅಭ್ಯರ್ಥಿಗಳು ತಮ್ಮ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಐಟಿಐ ಅಂಕಪಟ್ಟಿ, ಆಧಾರ್‌ ಕಾರ್ಡ್‌, ಮೀಸಲಾತಿ ಪ್ರಮಾಣ ಪತ್ರಗಳು, ಇ-ಮೇಲ್‌ ವಿಳಾಸ, ಮೊಬೈಲ್‌ ನಂಬರ್‌ ಇತರೆ ಮಾಹಿತಿಯನ್ನು ಹೊಂದಿರಬೇಕು.