NLC India Ltd Jobs: ಎನ್‌ಎಲ್‌ಸಿ ಇಂಡಿಯಾ ಲಿಮಿಟೆಡ್‌ನಲ್ಲಿ 239 ಕೆಲಸ ಖಾಲಿ ಇದೆ; ಐಟಿಐ, ಡಿಪ್ಲೋಮಾ ಪಾಸಾದವರಿಗೆ ಆದ್ಯತೆ

ಉದ್ಯೋಗ ವಿವರ- ಕ್ವಿಕ್‌ ಲುಕ್

  • ಎಲ್ಲಿ ಉದ್ಯೋಗ?:
  • ಹುದ್ದೆಯ ಹೆಸರು:
  • ಹುದ್ದೆಗಳ ಸಂಖ್ಯೆ:
  • ಅರ್ಜಿ ಸಲ್ಲಿಸುವುದು ಹೇಗೆ?:
  • ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ:
  • ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ:
  • ವೆಬ್‌ ವಿಳಾಸ:
Advertisements

NLC India Ltd Recruitment 2024: ನೈವೇಲಿ ಲಿಗ್ನೈಟ್‌ ಕಾರ್ಪೋರೇಷನ್‌ ಇಂಡಿಯಾ ಲಿಮಿಟೆಡ್‌ನಲ್ಲಿ ಇಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಒಟ್ಟು 239 ಹುದ್ದೆಗಳು ಖಾಲಿ ಇದೆ. ಇಂಡಸ್ಟ್ರಿಯಲ್‌ ಟ್ರೈನಿ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಹುದ್ದೆಯ ಕುರಿತ ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

ಪ್ರಮುಖ ದಿನಾಂಕಗಳು;
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15-06-2024 ರ ಸಂಜೆ 5 ಗಂಟೆ ತನಕ

ಹುದ್ದೆಗಳ ವಿವರ ಇಲ್ಲಿದೆ;
ಇಂಡಸ್ಟ್ರಿಯಲ್‌ ಟ್ರೈನಿ/ಎಸ್‌ಎಂಇ ಅಂಡ್‌ ಟೆಕ್ನಿಕಲ್‌ -100 ಹುದ್ದೆಗಳು
ಇಂಡಸ್ಟ್ರಿಯಲ್‌ ಟ್ರೈನಿ (ಮೈನ್ಸ್‌ ಅಂಡ್‌ ಮೈನ್ಸ್‌ ಸಪೋರ್ಟ್‌ ಸರ್ವೀಸ್‌)- 139 ಹುದ್ದೆಗಳು

ವಿದ್ಯಾರ್ಹತೆ: ಇಂಡಸ್ಟ್ರಿಯಲ್‌ ಟ್ರೈನಿ/ಎಸ್‌ಎಂಇ ಅಂಡ್‌ ಟೆಕ್ನಿಕಲ್‌ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಡಿಪ್ಲೋಮಾ ತೇರ್ಗಡೆ ಹೊಂದಿರಬೇಕು.
ಇಂಡಸ್ಟ್ರಿಯಲ್‌ ಟ್ರೈನಿ (ಮೈನ್ಸ್‌ ಅಂಡ್‌ ಮೈನ್ಸ್‌ ಸಪೋರ್ಟ್‌ ಸರ್ವೀಸ್‌) ಈ ಹುದ್ದೆಗೆ ಅರ್ಜಿ ಸಲ್ಲಿಸಲು ಎಸ್‌ಎಸ್‌ಎಲ್‌ಸಿ ಜೊತೆಗೆ ಐಟಿಐ ನಲ್ಲಿ ವಿವಿಧ ಟ್ರೇಡ್‌ನಲ್ಲಿ ತೇರ್ಗಡೆ ಹೊಂದಿರಬೇಕು.

ವಯೋಮಿತಿ: ಮೇಲ್ಕಂಡ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿಯು 37ವರ್ಷ ಮೀರಿರಬಾರದು. ಒಬಿಸಿ-40 ವರ್ಷ, ಎಸ್‌/ಎಸ್‌ಟಿ ಅಭ್ಯರ್ಥಿಗಳಿಗೆ 42 ವರ್ಷವರೆಗೆ ಗರಿಷ್ಠ ವಯೋಮಿತಿ ನಿಗದಿ ಪಡಿಸಲಾಗಿದೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ತಮ್ಮ ಆಧಾರ್‌ಕಾರ್ಡ್‌, ವಿದ್ಯಾರ್ಹತೆ ದಾಖಲೆ, ಪಾಸ್‌ಪೋರ್ಟ್‌ ಅಳತೆಯ ಭಾವಚಿತ್ರ, ಇತರೆ ದಾಖಲೆಗಳು ಅಗತ್ಯ. ಈ ಹುದ್ದೆಯ ತರಬೇತಿ ಅವಧಿ 3 ವರ್ಷದ್ದಾಗಿರುತ್ತದೆ.

ಸ್ಟೈಫೆಂಡ್‌ ವಿವರ ಈ ರೀತಿ ಇದೆ;
ಇಂಡಸ್ಟ್ರಿಯಲ್‌ ಟ್ರೈನಿ/ಎಸ್‌ಎಂಇ ಅಂಡ್‌ ಟೆಕ್ನಿಕಲ್‌ ಹುದ್ದೆಗೆ ರೂ.18000-ಮೊದಲ ವರ್ಷ, ರೂ.20000 ಎರಡನೇ ವರ್ಷ, ರೂ.22000 ಮೂರನೇ ವರ್ಷ
ಇಂಡಸ್ಟ್ರಿಯಲ್‌ ಟ್ರೈನಿ (ಮೈನ್ಸ್‌ ಅಂಡ್‌ ಮೈನ್ಸ್‌ ಸಪೋರ್ಟ್‌ ಸರ್ವೀಸ್‌) ಈ ಹುದ್ದೆಗೆ ರೂ.14,000 ಮೊದಲ ವರ್ಷ, ರೂ.16000 ಎರಡನೇ ವರ್ಷ, ರೂ.18000 ಮೂರನೇ ವರ್ಷ

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್‌ ಕ್ಲಿಕ್‌ ಮಾಡಿ