Tag: bel recruitment

  • BEL Recruitment 2024: ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ನಲ್ಲಿ ನೇಮಕಾತಿ; ಟ್ರೈನಿ ಇಂಜಿನಿಯರ್‌, ಪ್ರಾಜೆಕ್ಟ್‌ ಇಂಜಿನಿಯರ್‌ ಪೋಸ್ಟ್‌ಗಳಿಗೆ ಅರ್ಜಿ ಸಲ್ಲಿಸಿ

    BEL Recruitment 2024: ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ನಲ್ಲಿ ನೇಮಕಾತಿ; ಟ್ರೈನಿ ಇಂಜಿನಿಯರ್‌, ಪ್ರಾಜೆಕ್ಟ್‌ ಇಂಜಿನಿಯರ್‌ ಪೋಸ್ಟ್‌ಗಳಿಗೆ ಅರ್ಜಿ ಸಲ್ಲಿಸಿ

    BEL Recruitment 2024: ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ (BEL) ಹಲವು ಹುದ್ದೆಯ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟ ಮಾಡಿದೆ. ತಾತ್ಕಾಲಿಕ ಆಧಾರದ ಮೇಲೆ ಟ್ರೈನಿ ಇಂಜಿನಿಯರ್-I ಮತ್ತು ಪ್ರಾಜೆಕ್ಟ್ ಇಂಜಿನಿಯರ್-I ಹುದ್ದೆಯ ನೇಮಕಾತಿಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ. ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಮತ್ತು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಅಧಿಸೂಚನೆಯನ್ನು ಓದಿ ಅರ್ಜಿ ಸಲ್ಲಿಸಬಹುದು.

    ಪ್ರಮುಖ ದಿನಾಂಕಗಳು;
    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ; 31-01-2024
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 14-02-2024

    ಹುದ್ದೆಗಳ ವಿವರ ಈ ಕೆಳಗೆ ನೀಡಲಾಗಿದೆ;
    ಟ್ರೈನಿ ಇಂಜಿನಿಯರ್-I ಮತ್ತು ಪ್ರಾಜೆಕ್ಟ್ ಇಂಜಿನಿಯರ್-I ಹುದ್ದೆಗಳಿಗೆ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ

    ಒಟ್ಟು ಹುದ್ದೆ:
    ಟ್ರೈನಿ ಇಂಜಿನಿಯರ್-I; 33 ಹುದ್ದೆಗಳು
    ಪ್ರಾಜೆಕ್ಟ್‌ ಇಂಜಿನಿಯರ್‌-I; 22 ಹುದ್ದೆಗಳು

    ಟ್ರೈನಿ ಇಂಜಿನಿಯರ್‌ ವಿಭಾಗದಲ್ಲಿ ಎಲೆಕ್ಟ್ರಾನಿಕ್ಸ್-26, ಮೆಕ್ಯಾನಿಕಲ್-03, ಕಂಪ್ಯೂಟರ್‌ ಸೈನ್ಸ್‌ -04 ಹುದ್ದೆಗಳಿದೆ
    ಪ್ರಾಜೆಕ್ಟ್‌ ಇಂಜಿನಿಯರ್‌ ವಿಭಾಗದಲ್ಲಿ ಎಲೆಕ್ಟ್ರಾನಿಕ್ಸ್‌-16, ಕಂಪ್ಯೂಟರ್‌ ಸೈನ್ಸ್‌ -06 ಹುದ್ದೆಗಳಿದೆ.

    ವಯೋಮಿತಿ: ಟ್ರೈನಿ ಇಂಜಿನಿಯರ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಗರಿಷ್ಠ 28 ವರ್ಷ ವಯಸ್ಸು ಮೀರಿರಬಾರದು. ಪ್ರಾಜೆಕ್ಟ್‌ ಇಂಜಿನಿಯರ್‌ ಹುದ್ದೆಗಳಿಗೆ ಗರಿಷ್ಠ 32 ವರ್ಷ ನಿಗದಿಪಡಿಸಲಾಗಿದೆ. OBC ಅಭ್ಯರ್ಥಿಗಳಿಗೆ 03 ವರ್ಷಗಳು, SC/ST ಅಭ್ಯರ್ಥಿಗಳಿಗೆ 05 ವರ್ಷಗಳು, PwBD ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

    ಅರ್ಜಿ ಶುಲ್ಕ: GEN/ OBC/ EWS ವರ್ಗಕ್ಕೆ ಸೇರಿದ ಅಭ್ಯರ್ಥಿಗಳು ಟ್ರೇನಿ ಇಂಜಿನಿಯರ್ ಹುದ್ದೆಗೆ ಅರ್ಜಿ ಶುಲ್ಕವಾಗಿ ರೂ. 150+ 18% GST
    GEN/ OBC/ EWS ವರ್ಗಕ್ಕೆ ಸೇರಿದ ಅಭ್ಯರ್ಥಿಗಳು ಪ್ರಾಜೆಕ್ಟ್ ಇಂಜಿನಿಯರ್‌ ಹುದ್ದೆಗೆ ರೂ. 400+ 18% GST ಅರ್ಜಿ ಶುಲ್ಕ ಪಾವತಿ ಮಾಡಬೇಕಾಗುತ್ತದೆ. SC/ST/PwBD ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿ ಮಾಡುವಂತಿಲ್ಲ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

    ಪಾವತಿ ವಿಧಾನ: SBI ಕಲೆಕ್ಟ್ ಮೂಲಕ ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿ ಮಾಡಲು ಸೂಚಿಸಲಾಗಿದೆ.

    ಶಿಕ್ಷಣ ಅರ್ಹತೆ; ಟ್ರೈನಿ ಇಂಜಿನಿಯರ್‌ಗಳು-I-ಎಲೆಕ್ಟ್ರಾನಿಕ್ಸ್/ ಮೆಕ್ಯಾನಿಕಲ್ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿಭಾಗದಲ್ಲಿ BE B. Tech B.Sc ಇಂಜಿನಿಯರಿಂಗ್ ಪದವಿ, ಅಎಲೆಕ್ಟ್ರಾನಿಕ್ಸ್/ಮೆಕ್ಯಾನಿಕಲ್ ಕಂಪ್ಯೂಟರ್ ಸೈನ್ಸ್‌ನ ಸಂಬಂಧಿತ ವಿಭಾಗಗಳಲ್ಲಿ ವಿಶ್ವವಿದ್ಯಾಲಯ/ಸಂಸ್ಥೆಯಿಂದ ತೇರ್ಗಡೆ ಹೊಂದಿರಬೇಕು.
    ಪ್ರಾಜೆಕ್ಟ್ ಎಂಜಿನಿಯರ್‌ ಗಳು-I- ಎಲೆಕ್ಟ್ರಾನಿಕ್ಸ್ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ವಿಭಾಗದಲ್ಲಿ BE B. Tech B.Sc ಇಂಜಿನಿಯರಿಂಗ್ ಪದವಿ ಎಲೆಕ್ಟ್ರಾನಿಕ್ಸ್ ಕಂಪ್ಯೂಟರ್ ಸೈನ್ಸ್‌ನ ಸಂಬಂಧಿತ ವಿಭಾಗಗಳಲ್ಲಿ ವಿಶ್ವವಿದ್ಯಾಲಯ/ಸಂಸ್ಥೆಯಿಂದ ತೇರ್ಗಡೆ ಹೊಂದಿರಬೇಕು.

    ಆಯ್ಕೆ ವಿಧಾನ: ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ, ನಂತರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಲಿಖಿತ ಪರೀಕ್ಷೆ/ಸಂದರ್ಶನದ ಸ್ಥಳವು ಬೆಂಗಳೂರಿನಲ್ಲಿ ಇರುತ್ತದೆ.

    ಅಭ್ಯರ್ಥಿಗಳು ಅರ್ಜಿಯನ್ನು ಪೋಸ್ಟ್‌ ಮೂಲಕ ಕಳುಹಿಸಬೇಕು. ಅರ್ಜಿಯು 14.02.2024 ರಂದು ಸಂಜೆ 5.00 ಗಂಟೆಯೊಳಗೆ ವಿಳಾಸವನ್ನು ತಲುಪಬೇಕು. ಇ-ಮೇಲ್ ಮೂಲಕ ಕಳುಹಿಸುವಂತಿಲ್ಲ. ಅಂತಿಮ ದಿನಾಂಕದ ನಂತರ ಸ್ವೀಕರಿಸಿದ ಯಾವುದೇ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಅಪೂರ್ಣ ಅರ್ಜಿಗಳನ್ನು ತಿರಸ್ಕರಿಲಾಗುವುದು. ಯಾವುದೇ ಕಾರಣಕ್ಕೂ ಅಂಚೆ ಸಾಗಣೆಯಲ್ಲಿನ ಯಾವುದೇ ವಿಳಂಬ ಅಥವಾ ನಷ್ಟಕ್ಕೆ BEL ಜವಾಬ್ದಾರನಾಗಿರುವುದಿಲ್ಲ.

    ಅಂಚೆ ಮೂಲಕ ಅರ್ಜಿ ಕಳುಹಿಸಬೇಕಾದ ವಿಳಾಸ;
    Manager (HR).
    Product Development & Innovation Centre (PDIC),
    Bharat Electronics Limited,
    Prof. UR Rao Road, Near Nagaland Circle,
    Jalahalli Post, Bengaluru 560 013, India.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್‌ ಕ್ಲಿಕ್ ಮಾಡಿ

  • BEL Recruitment 2024: ಬಿಇಎಲ್‌ ಕಂಪನಿಯಲ್ಲಿ ಉದ್ಯೋಗ! ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆ.20!!

    BEL Recruitment 2024: ಬಿಇಎಲ್‌ ಕಂಪನಿಯಲ್ಲಿ ಉದ್ಯೋಗ! ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆ.20!!

    BEL Jobs 2024: ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ನಲ್ಲಿ (BEL)ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಒಟ್ಟು 01 ಹುದ್ದೆ ಇದ್ದು, ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಹುದ್ದೆ, ವೇತನ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿಶುಲ್ಕ ಮಾಹಿತಿಯನ್ನು ತಿಳಿದುಕೊಳ್ಳುವುದು ಮುಖ್ಯ. ಫೆಬ್ರವರಿ 20, 2024 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು, ಹುದ್ದೆಯ ಕುರಿತ ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

    ಪ್ರಮುಖ ದಿನಾಂಕಗಳು
    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 31-01-2024
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20-02-2024

    ಹುದ್ದೆ: ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ನಲ್ಲಿ ಸಹಾಯಕ ಕಂಪನಿ ಕಾರ್ಯದರ್ಶಿ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
    ಹುದ್ದೆ ಸಂಖ್ಯೆ: 01 ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ವೇತನ ಶ್ರೇಣಿ: ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ ಅಧಿಸೂಚನೆ ಪ್ರಕಾರ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 50,000 ರಿಂದ 1,60,000ರೂ. ವರೆಗೆ ಮಾಸಿಕ ವೇತನ ನಿಗದಿಪಡಿಸಲಾಗಿದೆ.

    ವಿದ್ಯಾರ್ಹತೆ: ಅಧಿಸೂಚನೆಯ ಪ್ರಕಾರ, ಇನ್‌ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿಸ್ ಆಫ್ ಇಂಡಿಯಾ ಸದಸ್ಯತ್ವ ಹೊಂದಿರಬೇಕು.
    ಅಭ್ಯರ್ಥಿಯು ಇನ್‌ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿಸ್ ಆಫ್ ಇಂಡಿಯಾದ ಸದಸ್ಯರಾಗಿರಬೇಕು ಮತ್ತು ಕಾರ್ಪೊರೇಟ್ ಸೆಕ್ರೆಟರಿ ಕೆಲಸಗಳನ್ನು ನಿರ್ವಹಿಸುವಲ್ಲಿ ಕನಿಷ್ಠ 4 ವರ್ಷಗಳ ನಂತರದ ಅರ್ಹತೆಯ ಅನುಭವವನ್ನು ಹೊಂದಿರಬೇಕು. ಕಾರ್ಪೊರೇಟ್ ಕಾರ್ಯದರ್ಶಿ ಕಾರ್ಯಗಳನ್ನು ನಿರ್ವಹಿಸಲು ಉತ್ತಮ ಸಂವಹನ ಕೌಶಲ್ಯಗಳು/ವಿಶ್ಲೇಷಣಾತ್ಮಕ ಸಾಮರ್ಥ್ಯವನ್ನು ಹೊಂದಿರಬೇಕು.

    ಅರ್ಜಿ ಶುಲ್ಕ: PwBD ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿರುವುದಿಲ್ಲ. ಇತರೆ ಎಲ್ಲಾ ಅಭ್ಯರ್ಥಿಗಳು Rs.708 ನ್ನು ಅರ್ಜಿ ಶುಲ್ಕದ ರೂಪದಲ್ಲಿ ಪಾವತಿ ಮಾಡಬೇಕು. ಅರ್ಜಿ ಶುಲ್ಕವನ್ನು ಎಸ್‌ಬಿಐ ಕಲೆಕ್ಟ್ (SBI Collect) ಮೂಲಕ (ಆನ್‌ಲೈನ್ ಮೋಡ್ ಮೂಲಕ ಅಥವಾ ಎಸ್‌ಬಿಐ ಶಾಖೆಯ ಮೂಲಕ) ಪಾವತಿ ಮಾಡಬೇಕು.

    ಆಯ್ಕೆ ವಿಧಾನ: ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಸಂದರ್ಶನದ ನಂತರ ಅರ್ಹತಾ ಮಾನದಂಡಗಳನ್ನ ಪೂರೈಸುವ ಲಿಖಿತ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ.

    ಅರ್ಜಿ ಸಲ್ಲಿಸುವುದು ಹೇಗೆ? ಅರ್ಹತಾ ಮಾನದಂಡಗಳನ್ನು ಪೂರೈಸುವ ಮತ್ತು ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಪೋಸ್ಟ್, ಕೊರಿಯರ್ ಮೂಲಕ (ಆಫ್‌ಲೈನ್‌) ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು.

    ವಿಳಾಸ; Deputy Manager (Hr/CO), Bharat Electronics Limited, Corporate Office, Outer Ring Road, Nagavara, Bangalore- 560045 ಈ ವಿಳಾಸಕ್ಕೆ ದಿನಾಂಕ 20.02.2024 ರಂದು ಅಥವಾ ಮೊದಲು ತಲುಪುವಂತೆ ಕಳುಹಿಸಬೇಕು. ಕೊನೆಯ ದಿನಾಂಕದ ನಂತರ ಬಂದ ಅರ್ಜಿಗಳನ್ನು ಯಾವುದೇ ಕಾರಣಗಳನ್ನು ನೀಡದೆ ಸಂಕ್ಷಿಪ್ತವಾಗಿ ತಿರಸ್ಕರಿಸಲಾಗುತ್ತದೆ.

    ಅಧಿಸೂಚನೆಯ ಲಿಂಕ್‌ನ್ನು ಇಲ್ಲಿ ನೀಡಲಾಗಿದ್ದು, ಈ ಲಿಂಕ್‌ ಕ್ಲಿಕ್‌ ಮಾಡುವ ಮೂಲಕ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.

  • ಭಾರತ್ ಎಲೆಕ್ಟ್ರಾನಿಕ್ಸ್ ನಲ್ಲಿ 511 ಹುದ್ದೆಗಳಿಗೆ ಅರ್ಜಿ ಆಹ್ವಾನ, ಅರ್ಜಿ ಸಲ್ಲಿಸಲು ಆಗಸ್ಟ್ 15 ಕೊನೇ ದಿನಾಂಕ

    ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಒಂದು ನವರತ್ನ ಕಂಪನಿ‌ ಮತ್ತು ರಕ್ಷಣಾ ಮಂತ್ರಾಲಯದ ಅಧೀನ ಭಾರತದ ಪ್ರಮುಖ ವೃತ್ತಿಪರ ಎಲೆಕ್ಟ್ರಾನಿಕ್ಸ್ ಕಂಪನಿಗೆ ಬೆಂಗಳೂರು ಸಂಕೀರ್ಣದಲ್ಲಿ ಗುತ್ತಿಗೆಯ ಆಧಾರದ ಮೇಲೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

    ಹುದ್ದೆ : ಶಿಕ್ಷಣಾರ್ಥಿ ಇಂಜಿನಿಯರ್- 1 –
    ಯೋಜನೆ ಇಂಜಿನಿಯರ್ – 1

    ವಿದ್ಯಾರ್ಹತೆ : ಎಲೆಕ್ಟ್ರಾನಿಕ್ಸ್/ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ / ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯೂನಿಕೇಶನ್ / ಟೆಲಿಕಮ್ಯುನಿಕೇಶನ್/ ಕಮ್ಯೂನಿಕೇಶನ್/ ಮೆಕ್ಯಾನಿಕಲ್/ ಎಲೆಕ್ಟ್ರಿಕಲ್/ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ನ ಇಂಜಿನಿಯರಿಂಗ್ ವಿಷಯದಲ್ಲಿ ಮಾನ್ಯತೆ ಪಡೆದ ಸಂಸ್ಥೆ / ವಿಶ್ವವಿದ್ಯಾಲಯದಿಂದ ಪೂರ್ಣಕಾಲಿಕ ಬಿ.ಇ/ಬಿ.ಟೆಕ್ ಇಂಜಿನಿಯರಿಂಗ್ ಪಡೆದಿರಬೇಕು.

    ಹುದ್ದೆಗಳ ಸಂಖ್ಯೆ : ಶಿಕ್ಷಣಾರ್ಥಿ ಇಂಜಿನಿಯರ್ -1 – 308 ಹುದ್ದೆಗಳು. ವೇತನ : 1 ನೇ ವರ್ಷ – ರೂ.25,000/-
    2 ನೇ ವರ್ಷ – ರೂ.28,000/-
    3 ನೇ ವರ್ಷ – ರೂ. 31,000/-
    ಯೋಜನೆ ಇಂಜಿನಿಯರ್ -1 – 203 ಹುದ್ದೆಗಳು. 1 ನೇ ವರ್ಷ ರೂ.35,000/-, 2 ನೇ ವರ್ಷ : ರೂ.40,000/-, 3 ನೇ ವರ್ಷ : ರೂ.45,000/-, 4 ನೇ ವರ್ಷ : ರೂ.50,000/-

    ಹುದ್ದೆ ಸ್ಥಳ : ಬೆಂಗಳೂರು

    ವಯೋಮಿತಿ : ಶಿಕ್ಷಣಾರ್ಥಿ ಇಂಜಿನಿಯರ್ ಹುದ್ದೆಗೆ ಅಭ್ಯರ್ಥಿಗಳ ವಯೋಮಿತಿಯು ಗರಿಷ್ಠ 25 ವರ್ಷ, ಹಾಗೂ ಯೋಜನೆ ಇಂಜಿನಿಯರ್ ಹುದ್ದೆಗೆ ಗರಿಷ್ಠ 28 ವರ್ಷ ಮೀರಿರಬಾರದು.

    ಅರ್ಜಿ ಶುಲ್ಕ :ಶಿಕ್ಷಣಾರ್ಥಿ ಇಂಜಿನಿಯರ್ ಹುದ್ದೆಗೆ ಜನರಲ್,ಇಡಬ್ಲ್ಯುಎಸ್, ಒಬಿಸಿ ಅಭ್ಯರ್ಥಿಗಳು ರೂ.500/- ಅರ್ಜಿ ಶುಲ್ಕವನ್ನು ಪಾವತಿಸಬೇಕು. ಯೋಜನೆ ಇಂಜಿನಿಯರ್ ಹುದ್ದೆಗೆ ಜನರಲ್, ಇಡಬ್ಲ್ಯುಎಸ್, ಒಬಿಸಿ ಅಭ್ಯರ್ಥಿಗಳು ರೂ.200/- ಅರ್ಜಿ ಶುಲ್ಕವನ್ನು ಪಾವತಿಸಬೇಕು.

    ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15-08-2021

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು www.bel-india.in ಗೆ ಭೇಟಿ ನೀಡಬಹುದು.

  • BEL ನಲ್ಲಿ ಅಪ್ರೆಂಟಿಸ್ ಶಿಪ್ :  ಐಟಿಐ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

    BEL ನಲ್ಲಿ ಅಪ್ರೆಂಟಿಸ್ ಶಿಪ್ : ಐಟಿಐ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

    ಭಾರತೀಯ ರಕ್ಷಣಾ ಸಚಿವಾಲಯದ ಅಧೀನದಲ್ಲಿರುವ ಮತ್ತು ಭಾರತದ ಪ್ರಥಮ ವೃತ್ತಿಪರ ಎಲೆಕ್ಟ್ರಾನಿಕ್ಸ್ ಸಾರ್ವಜನಿಕ ವಲಯದ ನವರತ್ನ ಕಂಪನಿ ಆಗಿರುವ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, ಬೆಂಗಳೂರು, ಕಾರ್ಖಾನೆಯಲ್ಲಿ ಶಿಶಿಕ್ಷು ಕಾಯಿದೆ 1961 ರ ಅಡಿಯಲ್ಲಿ 2021-22 ನೇ ಸಾಲಿನ ಅವಧಿಗೆ ಅಪ್ರೆಂಟಿಶಿಪ್ ತರಬೇತುದಾರರನ್ನು ನೇಮಕ ಮಾಡಿಕೊಳ್ಳಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30-06-2021

    ಹುದ್ದೆಗಳ ವಿವರ : ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್, ಫಿಟ್ಟರ್, ಇಲೆಕ್ಟ್ರೀಷಿಯನ್, ಮೆಶಿನಿಸ್ಟ್, ಟರ್ನರ್, ಡ್ರಾಫ್ಟ್ ಮೆನ್ ಮೆಕ್ಯಾನಿಕ್, ಎಲೆಕ್ಟ್ರೋ ಪ್ಲಾಟರ್, ಮೆಕ್ಯಾನಿಕ್ ಶೈತ್ಯೀಕರಣ ಮತ್ತು ಹವಾನಿಯಂತ್ರಣ ( ಎಮ್ ಆರ್ & ಎಸಿ), ಕಂಪ್ಯೂಟರ್ ಅಪರೇಟರ್ ಪ್ರೊಗ್ರಾಮಿಂಗ್ ಅಸಿಸ್ಟೆಂಟ್ ( ಕೋಪಾ), ವೆಲ್ಡರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಂಬಂಧಿತ ವಿಷಯದಲ್ಲಿ 01-01-2018 ರಂದು ಅಥವಾ ನಂತರ ಐಟಿಐ ಪಾಸಾಗಿರಬೇಕು.

    ಅಭ್ಯರ್ಥಿಗಳು ಎನ್ ಸಿವಿಟಿ / ಎಸ್ ಸಿವಿಟಿ ಮಂಡಳಿಗಳು ನೀಡಿದ ಐಟಿಐ ಪ್ರಮಾಣ ಪತ್ರಗಳನ್ನು ಹೊಂದಿರಬೇಕು.

    ವಯಸ್ಸಿನ ಮಿತಿ : 21 ವರ್ಷಗಳು. ಎಸ್ ಸಿ/ ಎಸ್ ಟಿ ವರ್ಗಕ್ಕೆ 5 ವರ್ಷ, ಒಬಿಸಿ ವರ್ಗಕ್ಕೆ 3 ವರ್ಷಗಳ ವಯಸ್ಸಿನ ಮಿತಿಯಲ್ಲಿ ವಿನಾಯಿತಿ ನೀಡಲಾಗುವುದು. ಮತ್ತು ಕನಿಷ್ಠ 40% ಅಂಗವೈಕಲ್ಯ ಹೊಂದಿರುವ ಅಭ್ಯರ್ಥಿಗಳಿಗೆ 10 ವರ್ಷಗಳ ವಿನಾಯಿತಿ ನೀಡಲಾಗುವುದು.

    ಬೇರೆ ಯಾವುದೇ ಸಂಸ್ಥೆಯಲ್ಲಿ ಈಗಾಗಲೇ ಅಪ್ರೆಂಟಿಸ್ ಶಿಪ್ ತರಬೇತಿ ಪಡೆಯುತ್ತಿರುವವರು ತರಬೇತಿಗಾಗಿ ನೋಂದಾಯಿಸಿಕೊಂಡ ಅಭ್ಯರ್ಥಿಗಳು ಅರ್ಹರಲ್ಲ.

    ಕರ್ನಾಟಕ ರಾಜ್ಯದ ಅಭ್ಯರ್ಥಿಗಳು ಮಾತ್ರ ಅರ್ಜಿಯನ್ನು ಸಲ್ಲಿಸಲು ಅರ್ಹರು.

    ಆಯ್ಕೆ ಪ್ರಕ್ರಿಯೆ : ಎಸ್ ಎಸ್ ಎಲ್ ಸಿ/ 10 ನೇ ತರಗತಿ ಮತ್ತು ಐಟಿಐ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

    ಅಂತಿಮ ಆಯ್ಕೆಯ ಫಲಿತಾಂಶವನ್ನು ಬಿಇಎಲ್ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು ಅಥವಾ ಪ್ರಮಾಣ ಪತ್ರಗಳ‌ ಪರಿಶೀಲನೆಯ ದಿನಾಂಕದಂದು ತತಕ್ಷಣ ಆಯ್ಕೆಯ ಪತ್ರವನ್ನು ‌ನೀಡಲಾಗುವುದು. ಅಥವಾ ಎಸ್ ಎಂಎಸ್ / ಇ- ಮೇಲ್ ಮೂಲಕ ತಿಳಿಸಲಾಗುವುದು.

    ಆಸಕ್ತ ಅಭ್ಯರ್ಥಿಗಳು ಕೆಳಗೆ ತಿಳಿಸಲಾದ ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದು. ಜೊತೆಗೆ 10/ನೇ / ಎಸ್ ಎಸ್ ಎಲ್ ಸಿ ಮಾರ್ಕ್ಸ್ ಕಾರ್ಡ್, ಐಟಿಐ ಮಾರ್ಕ್ಸ್ ಕಾರ್ಡ್, ಜಾತಿ‌ಪ್ರಮಾಣ ಪತ್ರ( ಅನ್ವಯಿಸಿದ್ದರೆ ) ಮತ್ತು ಆಧಾರ್ ಕಾರ್ಡ್ ಗಳನ್ನು ಲಗತ್ತಿಸಬೇಕು.

    ವಿಳಾಸ : Deputy Manager ( HR/CLD), centre for learning and development, Bharat Electronics Limited, Jalahalli post, Bengaluru-560013

    ಹೆಚ್ಚಿನ ವಿವರಗಳು ಹಾಗೂ ಸ್ಪಷ್ಟೀಕರಣಗಳಿಗಾಗಿ ದಯವಿಟ್ಟು ಸಂಪರ್ಕಿಸಿ , ಇ – ಮೇಲ್: [email protected] ಅಥವಾ 080-22195323

    ಹೆಚ್ಚಿನ ವಿವರಗಳಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

  • BEL : 268 ಉದ್ಯೋಗವಕಾಶ

    BEL : 268 ಉದ್ಯೋಗವಕಾಶ

    ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್‌) ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಈಗಾಗಲೇ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಮೇ 5, 2021 ದಿನಾಂಕವಾಗಿದೆ. ಹೆಚ್ಚಿನ ವಿವರಗಳು ಈ ಕೆಳಗಿನಂತಿವೆ :

    ಹುದ್ದೆ : ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

    ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: ಎಪ್ರಿಲ್ 21 , 2021
    ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :ಮೇ 05, 2021

    ಒಟ್ಟು ಹುದ್ದೆ : 268

    ವೇತನ : ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 35,000/- ರೂ.50,000/- ವರೆಗೆ ವೇತನವಿರುತ್ತದೆ.

    ಹುದ್ದೆ ಸ್ಥಳ : ಭಾರತದೆಲ್ಲೆಡೆ

    ವಿದ್ಯಾರ್ಹತೆ : ಅಭ್ಯರ್ಥಿಗಳು ಅಂಗೀಕೃತ ಬೋರ್ಡ್ ಅಥವ ಯುನಿವರ್ಸಿಟಿಯಿಂದ ಬಿಇ/ಬಿ.ಟೆಕ್ ತೇರ್ಗಡೆ ಹೊಂದಿರಬೆಕು.

    ವಯೋಮಿತಿ : ಅಭ್ಯರ್ಥಿಗಳ ವಯೋಮಿತಿಯು ಗರಿಷ್ಠ 32 ವರ್ಷ ಮೀರಿರಬಾರದು. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ., ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ. ಪಿಡ್ಬ್ಲುಡಿ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

    ಅರ್ಜಿ ಶುಲ್ಕ : ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಬೇಕು. ಜನರಲ್/ಒಬಿಸಿ ಅಭ್ಯರ್ಥಿಗಳಿಗೆ ರೂ.500/-, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪಿಡಬ್ಲ್ಯುಡಿ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ

  • ಬಿಇಎಲ್ ನಲ್ಲಿ (BEL)ಉದ್ಯೋಗವಕಾಶ : ಕೂಡಲೇ ಅರ್ಜಿ ಸಲ್ಲಿಸಿ

    ಬಿಇಎಲ್ ನಲ್ಲಿ (BEL)ಉದ್ಯೋಗವಕಾಶ : ಕೂಡಲೇ ಅರ್ಜಿ ಸಲ್ಲಿಸಿ

    ಬಿಇಎಲ್ (BEL) ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ. ಹೆಚ್ಚಿನ ವಿವರಗಳು ಈ ಕೆಳಗಿನಂತಿವೆ :

    ಹುದ್ದೆ :ಮೆಂಬರ್ (ರಿಸರ್ಚ್ ಸ್ಟಾಫ್ E111 ಗ್ರೇಡ್)

    ಹುದ್ದೆಯ ಸಂಖ್ಯೆ : 10

    ವಿದ್ಯಾಭ್ಯಾಸ : ಬಿ.ಇ, ಬಿ.ಟೆಕ್(ಕಂಪ್ಯೂಟರ್ ಸೈನ್ಸ್) ನ್ನು ಎಐಸಿಟಿಐ ನಿಂದ ಮಾನ್ಯತೆ ಪಡೆದ ಕಾಲೇಜ್ ಅಥವಾ ಸಂಸ್ಥೆಯಿಂದ ಪಡೆದುಕೊಂಡಿರಬೇಕು.

    ವಯೋಮಿತಿ : ಗರಿಷ್ಠ ವಯೋಮಿತಿ ೩೨ ವರ್ಷ ಆಗಿರಬೇಕು (31.01.2021)
    ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ.

    ಇತರೆ ಅನುಭವ : ಅಭ್ಯರ್ಥಿಗಳು ೪ ವರ್ಷ ಸಿ++,ಜಾವ.ಪೈತೊನ್,ಅಲ್ಗೊರಿತಂ ಡೆವೆಲಪ್ ಮೆಂಟ್, ಎಸ್ ಡಬ್ಲ್ಯು ಡೊಕ್ಯುಮೆಂಟೇಶನ್, ಎಸ್ ಡಬ್ಲ್ಯು ಟೆಸ್ಟಿಂಗ್ ಬಿಗ್ ಡಾಟ ಅನಾಲಿಟಿಕ್ಸ್ ತಿಳಿದಿರಬೇಕು.

    ವೇತನ : ಮೆಂಬರ್ ( ರಿಸರ್ಚ್ ಸ್ಟಾಫ್ ) (E-111 ಗ್ರೇಡ್ ) ಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ. 50,000/- ರಿಂದ 1,60,000 ದವರೆಗೆ ಇರುತ್ತದೆ.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 09 ಮಾರ್ಚ್ 2021

    ಅರ್ಜಿ ಶುಲ್ಕ : ಜನರಲ್ / ಒಬಿಸಿ ಅಭ್ಯರ್ಥಿಗಳು ರೂ.750/- ನ್ನು ಅರ್ಜಿ ಶುಲ್ಕವಾಗಿ ಪಾವತಿಸಬೇಕಾಗುತ್ತದೆ.
    ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

    ಅರ್ಜಿ ಶುಲ್ಕ ಪಾವತಿಗಾಗಿ ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕು.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ. www.bel-india.in

    ನೋಟಿಫಿಕೇಶನ್ ಗಾಗಿ ಈ ಲಿಂಕ್ ಕ್ಲಿಕ್ ಮಾಡಿ