BEL ನಲ್ಲಿ ಅಪ್ರೆಂಟಿಸ್ ಶಿಪ್ : ಐಟಿಐ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

Written By Mallika

Lorem ipsum dolor sit amet consectetur pulvinar ligula augue quis venenatis. 

Advertisements

ಭಾರತೀಯ ರಕ್ಷಣಾ ಸಚಿವಾಲಯದ ಅಧೀನದಲ್ಲಿರುವ ಮತ್ತು ಭಾರತದ ಪ್ರಥಮ ವೃತ್ತಿಪರ ಎಲೆಕ್ಟ್ರಾನಿಕ್ಸ್ ಸಾರ್ವಜನಿಕ ವಲಯದ ನವರತ್ನ ಕಂಪನಿ ಆಗಿರುವ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, ಬೆಂಗಳೂರು, ಕಾರ್ಖಾನೆಯಲ್ಲಿ ಶಿಶಿಕ್ಷು ಕಾಯಿದೆ 1961 ರ ಅಡಿಯಲ್ಲಿ 2021-22 ನೇ ಸಾಲಿನ ಅವಧಿಗೆ ಅಪ್ರೆಂಟಿಶಿಪ್ ತರಬೇತುದಾರರನ್ನು ನೇಮಕ ಮಾಡಿಕೊಳ್ಳಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30-06-2021

ಹುದ್ದೆಗಳ ವಿವರ : ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್, ಫಿಟ್ಟರ್, ಇಲೆಕ್ಟ್ರೀಷಿಯನ್, ಮೆಶಿನಿಸ್ಟ್, ಟರ್ನರ್, ಡ್ರಾಫ್ಟ್ ಮೆನ್ ಮೆಕ್ಯಾನಿಕ್, ಎಲೆಕ್ಟ್ರೋ ಪ್ಲಾಟರ್, ಮೆಕ್ಯಾನಿಕ್ ಶೈತ್ಯೀಕರಣ ಮತ್ತು ಹವಾನಿಯಂತ್ರಣ ( ಎಮ್ ಆರ್ & ಎಸಿ), ಕಂಪ್ಯೂಟರ್ ಅಪರೇಟರ್ ಪ್ರೊಗ್ರಾಮಿಂಗ್ ಅಸಿಸ್ಟೆಂಟ್ ( ಕೋಪಾ), ವೆಲ್ಡರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಂಬಂಧಿತ ವಿಷಯದಲ್ಲಿ 01-01-2018 ರಂದು ಅಥವಾ ನಂತರ ಐಟಿಐ ಪಾಸಾಗಿರಬೇಕು.

ಅಭ್ಯರ್ಥಿಗಳು ಎನ್ ಸಿವಿಟಿ / ಎಸ್ ಸಿವಿಟಿ ಮಂಡಳಿಗಳು ನೀಡಿದ ಐಟಿಐ ಪ್ರಮಾಣ ಪತ್ರಗಳನ್ನು ಹೊಂದಿರಬೇಕು.

ವಯಸ್ಸಿನ ಮಿತಿ : 21 ವರ್ಷಗಳು. ಎಸ್ ಸಿ/ ಎಸ್ ಟಿ ವರ್ಗಕ್ಕೆ 5 ವರ್ಷ, ಒಬಿಸಿ ವರ್ಗಕ್ಕೆ 3 ವರ್ಷಗಳ ವಯಸ್ಸಿನ ಮಿತಿಯಲ್ಲಿ ವಿನಾಯಿತಿ ನೀಡಲಾಗುವುದು. ಮತ್ತು ಕನಿಷ್ಠ 40% ಅಂಗವೈಕಲ್ಯ ಹೊಂದಿರುವ ಅಭ್ಯರ್ಥಿಗಳಿಗೆ 10 ವರ್ಷಗಳ ವಿನಾಯಿತಿ ನೀಡಲಾಗುವುದು.

ಬೇರೆ ಯಾವುದೇ ಸಂಸ್ಥೆಯಲ್ಲಿ ಈಗಾಗಲೇ ಅಪ್ರೆಂಟಿಸ್ ಶಿಪ್ ತರಬೇತಿ ಪಡೆಯುತ್ತಿರುವವರು ತರಬೇತಿಗಾಗಿ ನೋಂದಾಯಿಸಿಕೊಂಡ ಅಭ್ಯರ್ಥಿಗಳು ಅರ್ಹರಲ್ಲ.

ಕರ್ನಾಟಕ ರಾಜ್ಯದ ಅಭ್ಯರ್ಥಿಗಳು ಮಾತ್ರ ಅರ್ಜಿಯನ್ನು ಸಲ್ಲಿಸಲು ಅರ್ಹರು.

ಆಯ್ಕೆ ಪ್ರಕ್ರಿಯೆ : ಎಸ್ ಎಸ್ ಎಲ್ ಸಿ/ 10 ನೇ ತರಗತಿ ಮತ್ತು ಐಟಿಐ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

ಅಂತಿಮ ಆಯ್ಕೆಯ ಫಲಿತಾಂಶವನ್ನು ಬಿಇಎಲ್ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು ಅಥವಾ ಪ್ರಮಾಣ ಪತ್ರಗಳ‌ ಪರಿಶೀಲನೆಯ ದಿನಾಂಕದಂದು ತತಕ್ಷಣ ಆಯ್ಕೆಯ ಪತ್ರವನ್ನು ‌ನೀಡಲಾಗುವುದು. ಅಥವಾ ಎಸ್ ಎಂಎಸ್ / ಇ- ಮೇಲ್ ಮೂಲಕ ತಿಳಿಸಲಾಗುವುದು.

ಆಸಕ್ತ ಅಭ್ಯರ್ಥಿಗಳು ಕೆಳಗೆ ತಿಳಿಸಲಾದ ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದು. ಜೊತೆಗೆ 10/ನೇ / ಎಸ್ ಎಸ್ ಎಲ್ ಸಿ ಮಾರ್ಕ್ಸ್ ಕಾರ್ಡ್, ಐಟಿಐ ಮಾರ್ಕ್ಸ್ ಕಾರ್ಡ್, ಜಾತಿ‌ಪ್ರಮಾಣ ಪತ್ರ( ಅನ್ವಯಿಸಿದ್ದರೆ ) ಮತ್ತು ಆಧಾರ್ ಕಾರ್ಡ್ ಗಳನ್ನು ಲಗತ್ತಿಸಬೇಕು.

ವಿಳಾಸ : Deputy Manager ( HR/CLD), centre for learning and development, Bharat Electronics Limited, Jalahalli post, Bengaluru-560013

ಹೆಚ್ಚಿನ ವಿವರಗಳು ಹಾಗೂ ಸ್ಪಷ್ಟೀಕರಣಗಳಿಗಾಗಿ ದಯವಿಟ್ಟು ಸಂಪರ್ಕಿಸಿ , ಇ – ಮೇಲ್: [email protected] ಅಥವಾ 080-22195323

ಹೆಚ್ಚಿನ ವಿವರಗಳಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

Leave a Comment