SSC Job: ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌ನಲ್ಲಿ ಸಹಾಯಕ, ಕ್ಲರ್ಕ್‌ ನೇಮಕಾತಿ

Written By sarkari

Lorem ipsum dolor sit amet consectetur pulvinar ligula augue quis venenatis. 

Advertisements

SSC Recruitment 2024: ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌ (Staff Selection Commission) ನಲ್ಲಿ ಖಾಲಿ ಇರುವ ಸಹಾಯಕ, ಕ್ಲರ್ಕ್‌ ಪೋಸ್ಟ್‌ಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಕೇಂದ್ರ ಸರಕಾರದ ಉದ್ಯೋಗ ಬಯಸುವವರಿಗೆ ಇದೊಂದು ಮಹತ್ವದ ಮಾಹಿತಿ. ಈ ಹುದ್ದೆಗೆ ಅರ್ಜಿ ಸಲ್ಲಿಸಲು 21 ಫೆಬ್ರವರಿ, 2024 ಕೊನೆಯ ದಿನಾಂಕವಾಗಿದ್ದು ಆನ್‌ಲೈನ್‌ ಮತ್ತು ಆಫ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ಹುದ್ದೆಯ ಕುರಿತ ಹೆಚ್ಚಿನ ಮಾಹಿತಿ ssc.nic.in ಗೆ ಬೇಟಿ ನೀಡಬೇಕು. ಹುದ್ದೆಯ ಕುರಿತ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದ್ದು, ಇವುಗಳನ್ನು ಓದಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 02-02-2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 21-02-2024
ಅರ್ಜಿಗಳ ಹಾರ್ಡ್‌ ಪ್ರತಿಯನ್ನು ಕಳುಹಿಸಲು ನೀಡಿರುವ ಕೊನೆಯ ದಿನಾಂಕ;
ಭಾರತದಲ್ಲಿ ನೆಲೆಸಿರುವ ವಿದ್ಯಾರ್ಥಿಗಳಿಗೆ: 07-03-2024
ವಿದೇಶದಲ್ಲಿ ನೆಲೆಸಿರುವ ಅಭ್ಯರ್ಥಿಗಳಿಗೆ: 14-03-2024
ಕಂಪ್ಯೂಟರ್‌ ಆಧಾರಿತ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ;
ಜೂನಿಯರ್‌ ಸೆಕ್ರೆಟರಿಯೇಟ್‌ ಅಸಿಸ್ಟೆಂಟ್‌/ಲೋವರ್‌ ಡಿವಿಷನ್‌ ಕ್ಲರ್ಕ್‌: 10-05-2024
ಸೀನಿಯರ್‌ ಸೆಕ್ರೆಟರಿಯೇಟ್‌/ ಅಪರ್‌ ಡಿವಿಷನ್‌ ಕ್ಲರ್ಕ್‌: 13-05-2024

ಹುದ್ದೆಯ ವಿವರಗಳು ಈ ಕೆಳಗಿನಂತಿದೆ;
ಜೂನಿಯರ್‌ ಸೆಕ್ರೆಟರಿಯೇಟ್‌ ಅಸಿಸ್ಟೆಂಟ್‌/ಲೋವರ್‌ ಡಿವಿಷನ್‌ ಕ್ಲರ್ಕ್‌-52 ಹುದ್ದೆಗಳು
ಹಿರಿಯ ಸೆಕ್ರೆಟರಿಯೇಟ್‌ ಸಹಾಯಕ/ಮೇಲಿನ ವಿಭಾಗದ ಕರ್ಕ್‌-69 ಹುದ್ದೆಗಳು

ವೇತನ:
ಎಸ್‌ಎಸ್‌ಸಿ ನೇಮಕಾತಿ ಅಧಿಸೂಚನೆ ಪ್ರಕರಾರ ಜೂನಿಯರ್‌ ಸೆಕ್ರೆಟರಿಯೇಟ್‌ ಅಸಿಸ್ಟೆಂಟ್‌/ಲೋವರ್‌ ಡಿವಿಷನ್‌ ಕ್ಲರ್ಕ್‌ ಹುದ್ದೆಗೆ ಆಯ್ಕೆಯಾದವರಿಗೆ ಮಾಸಿಕ ರೂ.19,900-63,200/- ವೇತನವಿರುತ್ತದೆ.
ಹಿರಿಯ ಸೆಕ್ರೆಟರಿಯೇಟ್‌ ಸಹಾಯಕ/ಮೇಲಿನ ವಿಭಾಗದ ಕರ್ಕ್‌ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.25,500-81,100 ರೂ. ವೇತನವಿರುತ್ತದೆ.

ವಯೋಮಿತಿ:
ಜೂನಿಯರ್‌ ಸೆಕ್ರೆಟರಿಯೇಟ್‌ ಅಸಿಸ್ಟೆಂಟ್‌/ಲೋವರ್‌ ಡಿವಿಷನ್‌ ಕ್ಲರ್ಕ್‌ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 45 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.
ಹಿರಿಯ ಸೆಕ್ರೆಟರಿಯೇಟ್‌ ಸಹಾಯಕ/ಮೇಲಿನ ವಿಭಾಗದ ಕರ್ಕ್‌ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 50 ವರ್ಷ ಆಗಿರಬೇಕು.
ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ 3 ವರ್ಷಗಳು, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 08 ವರ್ಷಗಳು ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

ಆಯ್ಕೆ ಪ್ರಕ್ರಿಯೆ: ಎಸ್‌ಎಸ್‌ಸಿ ನೇಮಕಾತಿ ಅಧಿಸೂಚನೆಯ ಪ್ರಕಾರ ಈ ಹುದ್ದೆಗೆ ಅರ್ಜಿ ಸಲ್ಲಿಸಿದವರನ್ನು ಕಂಪ್ಯೂಟರ್‌ ಆಧಾರಿ ಪರೀಕ್ಷೆ ಮತ್ತು ಲಿಖಿತ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಸುವ ರೀತಿ ಈ ಕೆಳಗಿನಂತಿದೆ;
ಅಭ್ಯರ್ಥಿಗಳು 2-2-2024 ರಿಂದ 21-02-2024 ರವರೆಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಆಫ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸ್ವಯಂ ದೃಢೀಕರಿಸಿದ ದಾಖಲೊಂದಿಗೆ ಪ್ರಾದೇಶಿಕ ನಿರ್ದೇಶಕರು, ಸಿಬ್ಬಂದಿ ಆಯ್ಕೆ ಆಯೋಗ (ಉತ್ತರ ಪ್ರದೇಶ) ಬ್ಲಾಕ್‌ ನಂ.112, C.G.O. ಕಾಂಪ್ಲೆಕ್ಸ್‌, ಲೋಧಿ ರಸ್ತೆ, ನವದೆಹಲಿ -110003 ಗೆ ಕಳುಹಿಸಬೇಕು.