PNB Jobs: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನಿಂದ 1025 ಎಸ್‌ಒ ಹುದ್ದೆಗಳಿಗೆ ಅರ್ಜಿ ಆಹ್ವಾನ, ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ, ಸಂಪೂರ್ಣ ಮಾಹಿತಿ ಇಲ್ಲಿದೆ

Written By sarkari

Lorem ipsum dolor sit amet consectetur pulvinar ligula augue quis venenatis. 

Advertisements

PNB Job: ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಹುದ್ದೆ ಮಾಡಲು ಇಚ್ಛಿಸುವವರಿಗೆ ಸಿಹಿ ಸುದ್ದಿ. ಹೌದು, ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ದೇಶದಾದ್ಯಂತ ತನ್ನ ವಿವಿಧ ಬ್ರ್ಯಾಂಚ್‌ಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಸ್ಪೆಷಲಿಸ್ಟ್‌ ಆಫೀಸರ್‌ ಹುದ್ದೆಗಳನ್ನು ಕ್ರೆಡಿಟ್/ಮ್ಯಾನೆಜರ್‌ ಫಾರೆಕ್ಸ್‌, ಮ್ಯಾನೇಜರ್‌ ಸೈಬರ್‌ ಸೆಕ್ಯೂರಿಟಿ ಮತ್ತು ಇತರ ವಿಭಾಗಗಳಲ್ಲಿ ಭರ್ತಿ ಮಾಡಲು ಬ್ಯಾಂಕ್‌ ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ. ಪಿಎನ್‌ಬಿ ಯಲ್ಲಿ ಒಟ್ಟು 1025 ಹುದ್ದೆಗಳಿದ್ದು, ಫೆ.25, 2024 ರ ಒಳಗೆ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ.

ಹುದ್ದೆಯ ಕುರಿತ ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದ್ದು, ಆಸಕ್ತ ಅಭ್ಯರ್ಥಿಗಳು ವಿವರಗಳನ್ನು ಓದಿ ಅರ್ಜಿ ಸಲ್ಲಿಸಬಹುದು.

ಪ್ರಮುಖ ದಿನಾಂಕಗಳು
ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 07-02-2024 ರಂದು ಪ್ರಾರಂಭವಾಗಲಿದ್ದು, ಆನ್‌ಲೈನ್‌ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ ಫೆಬ್ರವರಿ, 02, 2024 ಆಗಿರುತ್ತದೆ. ಹಾಗೆನೇ ಅಧಿಸೂಚನೆಯಲ್ಲಿ ನೀಡಿರುವ ಪ್ರಕಾರ ಆನ್‌ಲೈನ್‌ ಪರೀಕ್ಷೆಯ ಸಂಭಾವ್ಯ ದಿನಾಂಕವನ್ನು ಮಾರ್ಚ್‌/ಎಪ್ರಿಲ್‌, 2024 ರಲ್ಲಿ ನಡೆಯುವುದಾಗಿ ಹೇಳಲಾಗಿದೆ.

ಹುದ್ದೆ ಹೆಸರು: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನಲ್ಲಿ ಸ್ಪೆಷಲಿಸ್ಟ್‌ ಆಫೀಸರ್‌ (ವಿವಿಧ ವಿಭಾಗ) ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 1025 ಹುದ್ದೆಗಳಿದ್ದು, ಅಭ್ಯರ್ಥಿಗಳು ತಮ್ಮ ಸವಿವರಗಳನ್ನು ಭರ್ತಿ ಮಾಡಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿಬಹುದು.

ಹುದ್ದೆಗಳ ವಿವರ: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನಲ್ಲಿ ಆಫೀಸರ್‌ ಕ್ರೆಡಿಟ್‌: 1000, ಮ್ಯಾನೇಜರ್‌ ಫಾರೆಕ್ಸ್‌ : 15, ಮ್ಯಾನೇಜರ್‌ ಸೈಬರ್‌ ಸೆಕ್ಯೂರಿಟಿ: 5, ಸೀನಿಯರ್‌ ಮ್ಯಾನೇಜರ್‌ ಸೈಬರ್‌ ಸೆಕ್ಯೂರಿಟಿ: 5 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ವಿದ್ಯಾರ್ಹತೆ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪದವಿ/ ಸ್ನಾತಕೋತ್ತರ ಪದವಿ/ಸಿಎ/ಸಿಎಂಎ/ ಐಡಿಡಬ್ಲ್ಯೂಎ ಪಾಸ್‌ ಮಾಡಿರುವವರು ಅರ್ಜಿ ಸಲ್ಲಿಸಬಹುದು.

ಹುದ್ದೆವಾರು ವೇತನ ಈ ರೀತಿ ಇದೆ;
ಆಫೀಸರ್‌ ಕ್ರೆಡಿಟ್‌ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನ ಶ್ರೇಣಿ ರೂ.36,000-ರೂ.63,840 ಇರಲಿದೆ. ಮ್ಯಾನೇಜರ್‌ ಫಾರೆಕ್ಸ್‌ ಹುದ್ದೆಗೆ ರೂ.48170-69810, ಮ್ಯಾನೇಜರ್‌ ಸೈಬರ್‌ ಸೆಕ್ಯೂರಿಟಿ ಹುದ್ದೆಗೆ ರೂ.48,170-ರೂ.69,810 ಮಾಸಿಕ ವೇತನ ಇರಲಿದ್ದು, ಸೀನಿಯರ್‌ ಮ್ಯಾನೇಜರ್‌ ಸೈಬರ್‌ ಸೆಕ್ಯೂರಿಟಿ ಹುದ್ದೆಗೆ ರೂ.63,840-ರೂ.78,230 ಇರಲಿದೆ.

ವಯೋಮಿತಿ: ಆಫೀಸರ್‌ ಕ್ರೆಡಿಟ್‌ ಹುದ್ದೆಗಳಿಗೆ 21-28 ವರ್ಷ, ಮ್ಯಾನೇಜರ್‌ ಫಾರೆಕ್ಸ್‌ ಮತ್ತು ಮ್ಯಾನೇಜರ್‌ ಸೈಬರ್‌ ಸೆಕ್ಯುರಿಟಿ ಹುದ್ದೆಗಳಿಗೆ 25-35 ವರ್ಷ, ಸೀನಿಯರ್‌ ಮ್ಯಾನೇಜರ್‌ ಸೈಬರ್‌ ಸೆಕ್ಯೂರಿಟಿ ಹುದ್ದೆಗಳಿಗೆ 27-38 ವರ್ಷ ನಿಗದಿಪಡಿಸಲಾಗಿದೆ. ವರ್ಗಾವಾರು ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯಲಾಗಿದ್ದು, ಅಭ್ಯರ್ಥಿಗಳು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ತಿಳಿದುಕೊಳ್ಳಬಹುದು.

ಅರ್ಜಿ ಶುಲ್ಕ: ರೂ.1180 ರೂ ಅರ್ಜಿ ಶುಲ್ಕವನ್ನು ಸಾಮಾನ್ಯ ಅರ್ಹತೆ, ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳು ಪಾವತಿ ಮಾಡಬೇಕು. ಎಸ್‌ಸಿ/ಎಸ್‌ಟಿ/ಪಿಡಬ್ಲ್ಯೂಡಿ ಅಭ್ಯರ್ಥಿಗಳು ರೂ.59 ಅರ್ಜಿ ಶುಲ್ಕವನ್ನು ಪಾವತಿ ಮಾಡಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಆನ್‌ಲೈನ್‌ ಮೂಲಕ ಮಾತ್ರ ಪಾವತಿ ಮಾಡಲು ಮಾತ್ರ ಅವಕಾಶವಿದೆ.

ಆಯ್ಕೆ ವಿಧಾನ: ಈ ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಕಂಪ್ಯೂಟರ್‌ ಆಧಾರಿತ ಪರೀಕ್ಷೆ ಹಾಗೂ ಸಂದರ್ಶನ ದ ಮೂಲಕ ಆಯ್ಕೆ ಮಾಡಲಾಗುವುದು. ಅನಂತರ ಮೂಲ ದಾಖಲೆಗಳ ಪರಿಶೀಲನೆ ಮಾಡುವ ಮೂಲಕ ಅಂತಿಮವಾಗಿ ಆಯ್ಕೆ ಪಟ್ಟಿಯನ್ನು ಪ್ರಕಟ ಮಾಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್‌ ಕ್ಲಿಕ್‌ ಮಾಡಿ