Southern Railway Recruitment 2024: ರೈಲ್ವೆ ಇಲಾಖೆಯ ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್. ದಕ್ಷಿಣ ರೈಲ್ವೆಯಲ್ಲಿ ವಿವಿಧ 2860 ಹುದ್ದೆಗಳಿಗೆ ಅರ್ಜಿ ಆಹ್ವಾನ ನೀಡಿದೆ. ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ನೀಡಿರುವ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು.
ಪ್ರಮುಖ ದಿನಾಂಕಗಳು;
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 29.01.2024 10:00 ಗಂಟೆಯಿಂದ
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28.02.2024 ರಿಂದ 17:00 ಗಂಟೆಗಳವರೆಗೆ
ದಕ್ಷಿಣ ರೈಲ್ವೇಯ ಅಪ್ರೆಂಟಿಸ್ ಹುದ್ದೆಗಳಿಗೆ ಕೆಳಗಿನ ಸ್ಥಳಗಳು/ಪ್ರದೇಶಗಳಲ್ಲಿ ವಾಸಿಸುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ;
ತಮಿಳುನಾಡು, ಕೇಂದ್ರಾಡಳಿತ ಪ್ರದೇಶ ಪುದುಚೇರಿ, ಕೇರಳ, ಅಂಡಮಾನ್ ಮತ್ತು ನಿಕೋಬಾರ್ ಮತ್ತು ಲಕ್ಷದ್ವೀಪ ದ್ವೀಪಗಳ ಸಂಪೂರ್ಣ ಕೇಂದ್ರಾಡಳಿತ ಪ್ರದೇಶಗಳು, ಆಂಧ್ರಪ್ರದೇಶದ ಎರಡು ಜಿಲ್ಲೆಗಳು ಮಾತ್ರ, ಅವುಗಳೆಂದರೆ, SPSR ನೆಲ್ಲೂರು ಮತ್ತು ಚಿತ್ತೂರು, ಕರ್ನಾಟಕದ ದಕ್ಷಿಣ ಕನ್ನಡ.
ವಯಸ್ಸಿನ ಮಿತಿ:-
ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳ ವಯೋಮಿತಿ ಕನಿಷ್ಠ 15 ವರ್ಷ ಮೀರಿರಬೇಕು ಹಾಗೂ 22/24 ವರ್ಷ ಮೀರಿರಬಾರದು.
OBC ಅಭ್ಯರ್ಥಿಗಳಿಗೆ 3 ವರ್ಷಗಳು, SC/ST ಅಭ್ಯರ್ಥಿಗಳಿಗೆ 5 ವರ್ಷಗಳು ಮತ್ತು ಅಂಗವಿಕಲರಿಗೆ (PWBD) 10 ವರ್ಷಗಳು ಗರಿಷ್ಠ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.
ವಿದ್ಯಾಭ್ಯಾಸ: ಅಪ್ರೆಂಟಿಸ್ ಹುದ್ದೆಗಳಿಗೆ 10-12 ನೇ ತರಗತಿಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅರ್ಜಿ ಶುಲ್ಕ:
ಈ ಹುದ್ದೆಗಳಿಗೆ ರೂ. 100/- ಜೊತೆಗೆ ಸೇವಾ ಶುಲ್ಕ (ಮರುಪಾವತಿಸಲಾಗದ) ವನ್ನು ಪ್ರತ್ಯೇಕವಾಗಿ ಪಾವತಿ ಮಾಡಬೇಕು. ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಆನ್‌ಲೈನ್ ಮೋಡ್ ಮೂಲಕ ಪಾವತಿಸಲು ಅವಕಾಶವಿದೆ
SC/ST/PwBD/ಮಹಿಳಾ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ.
ಆಯ್ಕೆ ಪ್ರಕ್ರಿಯೆ:
ಈ ಹುದ್ದೆಗಳಿಗೆ ಮೆಟ್ರಿಕ್ಯುಲೇಷನ್ ಮತ್ತು ಐಟಿಐ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಅಂಕಗಳ ಆಧಾರದ ಮೇಲೆ ಮೆರಿಟ್ ಮಾಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಅಧಿಸೂಚನೆಯನ್ನು ಸಂಪೂರ್ಣವನ್ನು ಓದಬೇಕು.
ವೇತನ: ರೈಲ್ವೆ ಮಂಡಳಿಯ ಸುತ್ತೋಲೆ, ನಿರ್ದೇಶನಗಳ ಪ್ರಕಾರ ಸ್ಟೈಫಂಡ್ ಅನ್ನು ಕೌಶಲ್ಯ ಅಭಿವೃದ್ಧಿ ಸಚಿವಾಲಯದ ನಿರ್ದೇಶನಗಳ ಅಡಿಯಲ್ಲಿ ಪಾವತಿಸಲಾಗುವುದು.
ದಕ್ಷಿಣ ರೈಲ್ವೆ ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಸಲ್ಲಿಸಲು ಆನ್‌ಲೈನ್ ಮೂಲಕವೇ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಸಂಸ್ಥೆಯ ಅಧಿಕೃತ ವೆಬ್‌ಸೈಟ್ sr.indianrailways.gov.in ಗೇ ಭೇಟಿ ನೀಡಿ, ಅಲ್ಲಿ ಕೇಳಿರುವ ಮಾಹಿತಿಗಳನ್ನು ಭರ್ತಿ ಮಾಡಬೇಕು.
ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ