NIACL Recruitment 2024: ಎನ್‌ಐಎಸಿಎಲ್‌ನಲ್ಲಿ 300 ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ;

Written By sarkari

Lorem ipsum dolor sit amet consectetur pulvinar ligula augue quis venenatis. 

Advertisements

NIACL Recruitment: ನ್ಯೂ ಇಂಡಿಯಾ ಅಶ್ಯೂರೆನ್ಸ್‌ ಕಂಪನಿ ಲಿಮಿಟೆಡ್‌ (NIACL) ತನ್ನ ಅಧಿಕೃತ ಅಧಿಸೂಚನೆಯ ಮೂಲಕ 300 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಸಹಾಯಕ ಹುದ್ದೆಗಳಿಗೆ (Assistant Post) ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಫೆ.15,2024 ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಭಾರತದಲ್ಲಿ ಉದ್ಯೋಗಾಸಕ್ತಿ ಹೊಂದಿರುವವರು ಈ ಹುದ್ದೆಯ ಸದುಪಯೋಗವನ್ನು ಪಡೆದುಕೊಳ್ಳಬಹುದು. ಹುದ್ದೆಯ ಕುರಿತು ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 01-02-2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15-02-2024
ಶುಲ್ಕ ಪಾವತಿಗೆ ಕೊನೆಯ ದಿನಾಂಕ: 15/02/2024
ಶ್ರೇಣಿ I ಆನ್‌ಲೈನ್ ಪರೀಕ್ಷೆ (ಪೂರ್ವಭಾವಿ ಪರೀಕ್ಷೆ)-02/03/2024 (ಶನಿವಾರ)
ಶ್ರೇಣಿ II ಆನ್‌ಲೈನ್ ಪರೀಕ್ಷೆ (ಮುಖ್ಯ ಪರೀಕ್ಷೆ)-ನಂತರ ತಿಳಿಸಲಾಗುವುದು
ಕರೆ ಪತ್ರಗಳ ಡೌನ್‌ಲೋಡ್-ಪ್ರತಿ ಪರೀಕ್ಷೆಯ ದಿನಾಂಕಕ್ಕೆ 7 ದಿನಗಳ ಮೊದಲು (ತಾತ್ಕಾಲಿಕ) (ಪೂರ್ವಭಾವಿ ಪರೀಕ್ಷೆಗಳು ಮತ್ತು ಮುಖ್ಯ ಪರೀಕ್ಷೆ)

ಹುದ್ದೆಗಳ ವಿವರ ಈ ಕೆಳಗಿನಂತೆ ನೀಡಲಾಗಿದೆ

ಹುದ್ದೆ: NIACL ಅಧಿಸೂಚನೆಯ ಪ್ರಕಾರ ‘ಸಹಾಯಕ'( Assistant Post) ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಹುದ್ದೆ ಸಂಖ್ಯೆ: ಒಟ್ಟು 300 ಹುದ್ದೆಗಳಿದ್ದು ಆಸಕ್ತ ಅಭ್ಯರ್ಥಿಗಳು ಅಧಿಸೂಚನೆಯನ್ನು ಓದಿ, ಅರ್ಹತಾ ಮಾನದಂಡಗಳನ್ನು ಪೂರೈಸುವುದನ್ನು ಖಚಿತಪಡಿಸಿ ಅರ್ಜಿ ಸಲ್ಲಿಸಬಹುದು.

ವೇತನ: ಸಹಾಯಕ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗೆ ಮಾಸಿಕ ರೂ.22,405-62,265 ರೂ. ವೇತನ ನೀಡಲಾಗುತ್ತದೆ.

ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಯು 10,12 ನೇ, ಹಾಗೂ ಪದವಿಯನ್ನು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ ತೇರ್ಗಡೆ ಹೊಂದಿರಬೇಕು.

ವಯೋಮಿತಿ: ಕಂಪನಿಯ ಅಧಿಸೂಚನೆಯ ಪ್ರಕಾರ, ಜನವರಿ,1,2024 ರಂತೆ ಕನಿಷ್ಠ 21 ವರ್ಷ ಮತ್ತು ಗರಿಷ್ಠ 30 ವರ್ಷ ವಯಸ್ಸನ್ನು ಅಭ್ಯರ್ಥಿಗಳು ಮೀರಿರಬಾರದು. ಒಬಿಸಿ (ಎನ್‌ಸಿಎಲ್‌) ಅಭ್ಯರ್ಥಿಗಳಿಗೆ 03 ವರ್ಷ, SC/ST ಅಭ್ಯರ್ಥಿಗಳಿಗೆ 05 ವರ್ಷ, PwBD ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

ಅರ್ಜಿ ಶುಲ್ಕ: ದಿ ನ್ಯೂ ಇಂಡಿಯಾ ಅಶ್ಯೂರೆನ್ಸ್‌ ಕಂಪನಿ ಲಿಮಿಟೆಡ್‌ ನೇಮಕಾತಿ ಅಧಿಸೂಚನೆಯ ಪ್ರಕಾರ, SC/ST/PwBD ಅಭ್ಯರ್ಥಿಗಳಿಗೆ 100 ರೂ, ಹಾಗೂ ಇತರೆ ಎಲ್ಲಾ ಅಭ್ಯರ್ಥಿಗಳು ರೂ.850 ಅರ್ಜಿ ಶುಲ್ಕ ಪಾವತಿಸಲು ಸೂಚನೆಯಲ್ಲಿ ತಿಳಿಸಲಾಗಿದೆ. ಅರ್ಜಿ ಶುಲ್ಕವನ್ನು ಆನ್‌ಲೈನ್‌ ಮೂಲಕ ಪಾವತಿ ಮಾಡಲು ಮಾತ್ರ ಅವಕಾಶವಿದೆ.

ಆಯ್ಕೆ ಪ್ರಕ್ರಿಯೆ: ಸಹಾಯಕ ಹುದ್ದೆಗೆ ಅಭ್ಯರ್ಥಿಗಳನ್ನು ಆನ್‌ಲೈನ್ ಪರೀಕ್ಷೆ, ದಾಖಲೆ ಪರಿಶೀಲನೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್‌ ಕ್ಲಿಕ್‌ ಮಾಡಿ