Blog

  • ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತ : ಖಾಲಿ ಇರುವ ಹುದ್ದೆಗೆ ನೇರ ಸಂದರ್ಶನ

    ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತ : ಖಾಲಿ ಇರುವ ಹುದ್ದೆಗೆ ನೇರ ಸಂದರ್ಶನ

    ಕರ್ನಾಟಕ ರಾಜ್ಯದ ರಾಯಚೂರು ಜಿಲ್ಲೆಯ ಹಟ್ಟಿ ಚಿನ್ನದ ಗಣಿ ಹಟ್ಟಿಯಲ್ಲಿರುವ 120 ಹಾಸಿಗೆಗಳ ಆಸ್ಪತ್ರೆಗೆ ಗುತ್ತಿಗೆ ಆಧಾರದ ಮೇಲೆ ಈ ಕೆಳಕಂಡಂತೆ ತಜ್ಞ ವೈದ್ಯರು ಬೇಕಾಗಿದ್ದಾರೆ.

    ಅರ್ಜಿ ಆರಂಭಿಕ ದಿನಾಂಕ – 23-05-2021

    ಹುದ್ದೆ : ಸ್ತ್ರೀ ರೋಗ ತಜ್ಞರು – 1 ಹುದ್ದೆ. ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಒಬಿಜಿಯಲ್ಲಿ ಎಂ.ಎಸ್/ ಡಿಎನ್ ಬಿ /ಡಿಪ್ಲೋಮಾ ಮಾಡಿರಬೇಕು.

    ಇ.ಎನ್.ಟಿ. ಸರ್ಜನ್ – 1 ಹುದ್ದೆ : ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಇ.ಎನ್‌ಟಿಯಲ್ಲಿ ಎಂಎಸ್/ಡಿಪ್ಲೋಮಾ ಮಾಡಿರಬೇಕು.

    ಜಾಹೀರಾತು ಪ್ರಕಟಗೊಂಡ ದಿನಾಂಕದಿಂದ ಪ್ರತಿದಿನ ಬೆಳಿಗ್ಗೆ ‌9.00 ಗಂಟೆಯಿಂದ ಸಂಜೆ 5.00 ಗಂಟೆಯವರೆಗೆ ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತ, ಹಟ್ಟಿ – 584115 ನಲ್ಲಿರುವ ‌ಆಡಳಿತ‌ ಕಚೇರಿಯಲ್ಲಿ ನೇರ ಸಂದರ್ಶನ ಕೈಗೊಳ್ಳಲಾಗುವುದು. ಅಭ್ಯರ್ಥಿಗಳು ಸಂದರ್ಶನದ ಸಮಯದಲ್ಲಿ ತಮ್ಮ ಪೂರ್ಣ ‌ವಿವರಗಳನ್ನೊಳಗೊಂಡ ಅರ್ಜಿಯನ್ನು ಮತ್ತು ಶೈಕ್ಷಣಿಕ ‌ವಿದ್ಯಾರ್ಹತೆಯ ದಾಖಲೆ ಪ್ರಮಾಣ, ಅನುಭವ ಪ್ರಮಾಣ ಪತ್ರ, ಜಾತಿ ಇತ್ಯಾದಿಗಳ ಮೂಲ ಮತ್ತು ಪ್ರತಿಗಳೊಂದಿಗೆ ಪಾಸ್ ಪೋರ್ಟ್ ಅಳತೆಯ ಭಾವಚಿತ್ರದ ಜೊತೆಗೆ ಹಾಜರು ಪಡಿಸಬೇಕು. ಜಾಹೀರಾತು ಪ್ರಕಟಗೊಂಡ ದಿನಾಂಕದಿಂದ 06 ತಿಂಗಳವರೆಗೆ ಜಾಹೀರಾತಿಗೆ ಮಾನ್ಯತೆ ಇರಲಿದೆ.

  • ಜಿಲ್ಲಾ ಆಸ್ಪತ್ರೆ ಚಿಕ್ಕಬಳ್ಳಾಪುರ : 45 ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

    ಜಿಲ್ಲಾ ಆಸ್ಪತ್ರೆ ಚಿಕ್ಕಬಳ್ಳಾಪುರ : 45 ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

    ಜಿಲ್ಲಾ ಆಸ್ಪತ್ರೆ ಮತ್ತು ಕೋವಿಡ್-19 ಆಸ್ಪತ್ರೆ ಚಿಕ್ಕಬಳ್ಳಾಪುರದಲ್ಲಿ ರಚಿಸಲಾದ ಐಸಿಯುಗಳು ಮತ್ತು ಆಮ್ಲಜನಕ ಬೆಂಬಲಿತ ಹಾಸಿಗೆಗಳನ್ನು ಕಾರ್ಯಗತಗೊಳಿಸಿ ಕಾರ್ಯನಿರ್ವಹಿಸಲು ಹೆಚ್ಚುವರಿ ಮಾನವ ಸಂಪನ್ಮೂಲವನ್ನು 06 ತಿಂಗಳ ಮಟ್ಟಿಗೆ ಅಥವಾ ಕೋವಿಡ್ ಪರಿಸ್ಥಿತಿ ಸುಧಾರಿಸುವವರೆಗೆ ಯಾವುದು ಮೊದಲೋ ಅಲ್ಲಿಯವರೆಗೆ ನೇಮಕಾತಿಯನ್ನು ಮಾಡಲು ಅರ್ಹ ಅಭ್ಯರ್ಥಿಗಳಿಂದ ನೇರ ಸಂದರ್ಶನಕ್ಕೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತರು ನೇರ ಸಂದರ್ಶನಕ್ಕೆ ಅಗತ್ಯ ಶೈಕ್ಷಣಿಕ ಹಾಗೂ ಅನುಭವದ ಮೂಲ ದಾಖಲಾತಿಗಳು ಮತ್ತು ಎರಡು ನಕಲು ಪ್ರತಿ, ಭಾವಚಿತ್ರಗಳೊಂದಿಗೆ ಹಾಜರಾಗಲು ಪ್ರಕಟಣೆ ಹೊರಡಿಸಲಾಗಿದೆ.

    ಹುದ್ದೆ : ತಜ್ಞ ವೈದ್ಯರು – 06
    ವೈದ್ಯರು – 12
    ಶುಶ್ರೂಷಕರು – 18
    ಐಸಿಯು ಟೆಕ್ನಿಶಿಯನ್ – 1
    ಗ್ರೂಪ್ ಡಿ- 6
    ಮೆಂಟೆನೆನ್ಸ್ ಇಂಜಿನಿಯರ್ – 01
    ಬಯೋ ಮೆಡಿಕಲ್ ಇಂಜಿನಿಯರ್ – 01

    ಒಟ್ಟು ಹುದ್ದೆ -45

    ಸದರಿ ಹುದ್ದೆಯು ಖಾಯಂ ನೌಕರಿ ಆಗಿರುವುದಿಲ್ಲ. ಸಂದರ್ಶನ ಸ್ಥಳ : ಜಿಲ್ಲಾ ಶಸ್ತ್ರಚಿಕಿತ್ಸಕರ ಕೊಠಡಿ, ಜಿಲ್ಲಾ ಆಸ್ಪತ್ರೆ, ಚಿಕ್ಕಬಳ್ಳಾಪುರ.

    ದಿನಾಂಕ : 24-05-2021 ರಿಂದ 28-05-2021 ರವರೆಗೆ ಬೆಳಿಗ್ಗೆ ‌10 ರಿಂದ ಮಧ್ಯಾಹ್ನ 01 ಘಂಟೆಯವರೆಗೆ‌ (ರಜಾ ದಿನ ಹೊರತುಪಡಿಸಿ)

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ದೂರವಾಣಿ ಸಂಖ್ಯೆ 08156-272388 ನ್ನು ಕರ್ತವ್ಯದ ಅವಧಿಯಲ್ಲಿ ಸಂಪರ್ಕಿಸಬಹುದು.

  • ಮಂಡ್ಯ : 183 ಕಿರಿಯ ಆರೋಗ್ಯ ಮಹಿಳಾ ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಮಂಡ್ಯ : 183 ಕಿರಿಯ ಆರೋಗ್ಯ ಮಹಿಳಾ ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಮಂಡ್ಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರ , ಸಾರ್ವಜನಿಕ ಆಸ್ಪತ್ರೆ ಹಾಗೂ ಉಪ ವಿಭಾಗೀಯ ಆಸ್ಪತ್ರೆಗಳಲ್ಲಿ ಕೋವಿಡ್-19 ಕರ್ತವ್ಯ ನಿರ್ವಹಿಸಲು ತಾತ್ಕಾಲಿಕವಾಗಿ ಕಾರ್ಯ ನಿರ್ವಹಿಸಲು ಮಹಿಳಾ ಆರೋಗ್ಯ ಸಹಾಯಕಿ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ.

    ಆಸಕ್ತರು ದಿ.26.05.2021 ರಂದು ಬೆಳಿಗ್ಗೆ 11.00 ಗಂಟೆಯಿಂದ ಸಂಜೆ‌ 4.00 ಗಂಟೆಯ ಒಳಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕೊಠಡಿಯಲ್ಲಿ ನಡೆಯುವ ನೇರ ಸಂದರ್ಶನಕ್ಕೆ ಹಾಜರಾಗುವುದು.

    ಹುದ್ದೆ : ಕಿರಿಯ ಆರೋಗ್ಯ ಮಹಿಳಾ ಸಹಾಯಕಿ

    ಒಟ್ಟು ಹುದ್ದೆ ಸಂಖ್ಯೆ : 183

    ಮಾಸಿಕ ವೇತನ : ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.15,000/- ವೇತನವಿರುತ್ತದೆ.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ದೂರವಾಣಿ ಸಂಖ್ಯೆ – 08232-224027 ರಲ್ಲಿ ಸಂಪರ್ಕಿಸಬಹುದು.

  • ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಮಂಡ್ಯ : 63 ವಿವಿಧ ಹುದ್ದೆ

    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಮಂಡ್ಯ : 63 ವಿವಿಧ ಹುದ್ದೆ

    ಕೋವಿಡ್ -19 ಕರ್ತವ್ಯ ನಿರ್ವಹಿಸಲು ಗುತ್ತಿಗೆ ಆಧಾರದ ಶುಶ್ರೂಷಕರು, ಫಾರ್ಮಸಿಸ್ಟ್ ಹಾಗೂ ಕಿರಿಯ ಪ್ರಯೋಗ ಶಾಲಾ ತಂತ್ರಜ್ಞರ ಖಾಲಿ ಹುದ್ದೆಗಳಿಗೆ ನೇಮಿಸುವ ಬಗ್ಗೆ ನೇರ ಸಂದರ್ಶನಕ್ಕಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಆಸಕ್ತರು ದಿನಾಂಕ 26-05-2021 ರಂದು ಬೆಳಿಗ್ಗೆ 10-00 ಗಂಟೆಯಿಂದ ಸಂಜೆ 4.00 ಗಂಟೆಯ ಒಳಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕೊಠಡಿಯಲ್ಲಿ ನಡೆಯುವ ನೇರ ಸಂದರ್ಶನಕ್ಕೆ ಹಾಜರಾಗುವುದು.

    ಹುದ್ದೆ : ಶುಶ್ರೂಷಾಧಿಕಾರಿ -02
    ಫಾರ್ಮಸಿ ಅಧಿಕಾರಿ – 48
    ಕಿ.ಪ್ರ.ಶಾಲಾ ತಂತ್ರಜ್ಞರು – 13

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ದೂರವಾಣಿ ಸಂಖ್ಯೆ : 08232-224027 ರಲ್ಲಿ ಸಂಪರ್ಕಿಸಬಹುದು.

  • KSP 3533 ಸಿವಿಲ್ ಪೊಲೀಸ್ ಹುದ್ದೆ : ಇಲ್ಲಿದೆ ಸಂಪೂರ್ಣ ವಿವರ

    KSP 3533 ಸಿವಿಲ್ ಪೊಲೀಸ್ ಹುದ್ದೆ : ಇಲ್ಲಿದೆ ಸಂಪೂರ್ಣ ವಿವರ

    ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಕಾನ್ಸ್‌ಟೇಬಲ್ ನಾಗರಿಕ ( ಪುರುಷ ಮತ್ತು ಮಹಿಳಾ೦ (ಮಿಕ್ಕುಳಿದ) ಮತ್ತು ಕಲ್ಯಾಣ ಕರ್ನಾಟಕ ಪ್ರದೇಶದ ಸ್ಥಳೀಯ ಹುದ್ದೆಗಳನ್ನು ಒಳಗೊಂಡಂತೆ ಖಾಲಿ ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಜಿಯನ್ನು ಆಹ್ವಾನಿಸಿದೆ.

    ಅರ್ಜಿಗಳನ್ನು ಇಲಾಖೆಯ ಅಧಿಕೃತ ವೆಬ್‌ಸೈಟ್ ಆನ್‌ಲೈನ್ ಮುಖಾಂತರ ಮಾತ್ರ ಸಲ್ಲಿಸತಕ್ಕದ್ದು. ಅರ್ಜಿಗಳನ್ನು ಖುದ್ದಾಗಿ ಅಥವಾ ಅಂಚೆ ಮೂಲಕಪ್ರತ್ಯೇಕವಾಗಿ ಸಲ್ಲಿಸಲು ಅವಕಾಶವಿಲ್ಲ.

    ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ 25-೦5-2೦21 ಬೆಳಗ್ಗೆ 1೦.೦೦ ಗಂಟೆಯಿಂದ
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 25-೦6-2021 ಸಂಜೆ 6.೦೦ ಗಂಟೆಯವರೆಗೆ
    ಅಧಿಕೃತ ಬ್ಯಾಂಕ್ ಶಾಖೆಗಳ /ಅಂಚೆ ಕಚೇರಿ ವೇಳೆಯಲ್ಲಿ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ 25-06-2021

    (ಮಿಕ್ಕುಳಿದ ವೃಂದದ ಹುದ್ದೆಗಳು ) ಕಲ್ಯಾಣ ಕರ್ನಾಟಕ ಪ್ರದೇಶದ 2೦% ಮಿಕ್ಕುಳಿದ ವೃಂದದ ಹುದ್ದೆಗಳು ಸೇರಿದಂತೆ:
    ಹುದ್ದೆಗಳ ವಿವರ : ಪೊಲೀಸ್ ಕಾನ್ಸ್‌ಟೇಬಲ್ ( ನಾಗರಿಕ) (ಪುರುಷ) (ಮಿಕ್ಕುಳಿದ ವೃಂದ) -2393
    ಪೊಲೀಸ್ ಕಾನ್ಸ್‌ಟೇಬಲ್ (ನಾಗರಿಕ) (ಮಹಿಳಾ) (ಮಿಕ್ಕುಳಿದ ವೃಂದ) – 799
    ಒಟ್ಟು ಹುದ್ದೆ 3192

    ಕಲ್ಯಾಣ ಕರ್ನಾಟಕ ಪ್ರದೇಶದ 8೦% ಸ್ಥಳೀಯ ವೃಂದದ ಹುದ್ದೆಗಳು:
    ಪೊಲೀಸ್ ಕಾನ್ಸ್‌ಟೇಬಲ್(ನಾಗರಿಕ)(ಪುರುಷ)(ಸ್ಥಳೀಯ) – 266
    ಪೊಲೀಸ್ನಕಾನ್ಸ್‌ಟೇಬಲ್ (ನಾಗರಿಕ) (ಮಹಿಳಾ) (ಸ್ಥಳೀಯ)-75
    ಒಟ್ಟು ಹುದ್ದೆಗಳು 341

    ವಯೋಮಿತಿ : ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಂದರೆ 25-06-2021 ಕ್ಕೆ ಅಭ್ಯರ್ಥಿಗೆ ಕನಿಷ್ಠ 19 ವರ್ಷ ವಯಸ್ಸಾಗಿರಬೇಕು. ಹಾಗೂ ಈ ಕೆಳಕಂಡ ವಯಸ್ಸು ಮೀರಿರಬಾರದು.

    ಸಾಮಾನ್ಯ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ
    ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ 27 ವರ್ಷಗಳು.
    ಇತರೆ ಅಭ್ಯರ್ಥಿಗಳಿಗೆ 25 ವರ್ಷಗಳು.
    ಕರ್ನಾಟಕ ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬುಡಕಟ್ಟು ಅಭ್ಯರ್ಥಿಗಳಿಗೆ 30 ವರ್ಷಗಳು.

    ಪರೀಕ್ಷೆಗಳ ದಿನಾಂಕವನ್ನು ಮುಂದೆ ಜಾಹೀರಾತು ಪಡಿಸಲಾಗುವುದು. ಹಾಗೂ ಪೊಲೀಸ್ ಇಲಾಖೆಯ ಅಧಿಕೃತ ವೆಬ್‌ಸೈಟ್‌ ನಲ್ಲಿ ಪ್ರಕಟಿಸಲಾಗುವುದು. ಆದ್ದರಿಂದ ಅಭ್ಯರ್ಥಿಗಳು ಇಲಾಖೆಯ ವೆಬ್‌ಸೈಟ್‌ನ್ನು ದಿನನಿತ್ಯ ನೋಡಲು ತಿಳಿಸಲಾಗಿದೆ.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

  • SAI : 320 ಕೋಚ್ ಹುದ್ದೆಗಳ ಅರ್ಜಿ ಸಲ್ಲಿಕೆಯ ಅವಧಿ ವಿಸ್ತರಣೆ

    SAI : 320 ಕೋಚ್ ಹುದ್ದೆಗಳ ಅರ್ಜಿ ಸಲ್ಲಿಕೆಯ ಅವಧಿ ವಿಸ್ತರಣೆ

    ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಈಗಾಗಲೇ ಆರಂಭವಾಗಿದ್ದು ಈ ಹಿಂದೆ ಅರ್ಜಿ ಸಲ್ಲಿಕೆಯ ಅವಧಿಯನ್ನು ಮೇ 20 ರವರೆಗೆ ನಿಗದಿಪಡಿಸಲಾಗಿತ್ತು. ಆದರೆ ಈಗ ಅರ್ಜಿ ಸಲ್ಲಿಕೆ ಅವಧಿಯನ್ನು ಜೂನ್ 5,2021 ರವರೆಗೆ ವಿಸ್ತರಿಸಿದೆ. ಇತರೆ ವಿವರಗಳು ಈ ಕೆಳಗಿನಂತಿವೆ:

    ಕೋಚ್ : 100 ಹುದ್ದೆಗಳು
    ಅಸಿಸ್ಟೆಂಟ್ ಹುದ್ದೆ : 220 ಹುದ್ದೆ

    ಒಟ್ಟು ಹುದ್ದೆಗಳ ಸಂಖ್ಯೆ : 320 ಹುದ್ದೆ

    ಸ್ಪೋರ್ಟ್ಸ್ ಮತ್ತು ಡಿಪ್ಲೋಮಾ ಗೆ ಸಂಬಂಧ ಪಟ್ಟ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

    ಕೋಚ್ ಹುದ್ದೆಗೆ ಗರಿಷ್ಠ 45 ವರ್ಷ ಹಾಗೂ ಅಸಿಸ್ಟೆಂಟ್ ಕೋಚ್ ಹುದ್ದೆಗೆ ಗರಿಷ್ಠ 40 ವರ್ಷ ವಯೋಮಿತಿ ಹೊಂದಿರಬೇಕು.

    ಕೋಚ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 1,05,000/- ರೂ ನಿಂದ ರೂ. 1,50,000/- ವೇತನವಿರುತ್ತದೆ.

    ಅಸಿಸ್ಟೆಂಟ್ ಕೋಚ್ ಹುದ್ದೆಗೆ ಮಾಸಿಕ ರೂ.41,420/- ನಿಂದ ರೂ.1,12,400/- ವೇತನವಿರುತ್ತದೆ.

    ಆಸಕ್ತ ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ ಗೆ ಭೇಟಿ‌‌ ನೀಡಿ ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ‌ ಜೂನ್ 05, 2021ರೊಳಗೆ ಸಲ್ಲಿಸಬೇಕು.

    ಅಧಿಕೃತ ವೆಬ್‌ಸೈಟ್‌ ಗಾಗಿ ಈ ಲಿಂಕ್ ಕ್ಲಿಕ್ ಮಾಡಿ

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ