Blog

  • ಮಂಗಳೂರು ವಿಶ್ವವಿದ್ಯಾನಿಲಯ : ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ

    ಮಂಗಳೂರು ವಿಶ್ವವಿದ್ಯಾನಿಲಯ : ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ

    ಮಂಗಳೂರು ವಿಶ್ವವಿದ್ಯಾನಿಲಯ ಆವರಣ, ಮಂಗಳಗಂಗೋತ್ರಿ, ಸ್ನಾತಕೋತ್ತರ ಕೇಂದ್ರ, ಚಿಕ್ಕ ಅಳುವಾರದಲ್ಲಿ ಯೋಗ ವಿಜ್ಞಾನ ಮತ್ತು ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರಿನಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದು.

    ಹುದ್ದೆ: ಇಂಗ್ಲೀಷ್ ವಿಷಯದಲ್ಲಿ 2020-21 ನೇ ಶೈಕ್ಷಣಿಕ ಅತಿಥಿ ಉಪನ್ಯಾಸಕರ ಅವಶ್ಯಕತೆ ಇದ್ದು ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

    ವಿದ್ಯಾರ್ಹತೆ : ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಠ 55% ( ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಕನಿಷ್ಠ 50%) ಅಂಕಗಳನ್ನು ಹೊಂದಿರುವ ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

    ಅರ್ಜಿ ಸಲ್ಲಿಕೆ ಹೇಗೆ? ಅರ್ಜಿಯನ್ನು ವಿಶ್ವವಿದ್ಯಾನಿಲಯದ ವೆಬ್‌ಸೈಟ್‌ ನಿಂದ ಪಡೆದು, ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿದ ಅರ್ಜಿಯನ್ನು ದಾಖಲೆಗಳ ( SSLC ಮಾರ್ಕ್ಸ್ ಕಾರ್ಡ್, ಪಿಜಿ ಮಾರ್ಕ್ಸ್‌ ಕಾರ್ಡ್, ಕಾಸ್ಟ್ ಸರ್ಟಿಫಿಕೇಟ್, ಸರ್ವಿಸ್ ಸರ್ಟಿಫಿಕೇಟ್, ಯುಜಿಸಿ ಎನ್.ಇ.ಟಿ/ ಎಸ್.ಎಲ್.ಇ.ಟಿ ಉತ್ತೀರ್ಣತೆ/ ಎಂಫಿಲ್ / ಪಿ.ಹೆಚ್.ಡಿ ಪದವಿ ಪ್ರಮಾಣ ಪತ್ರ ಜೆರಾಕ್ಸ್ ಪ್ರತಿಗಳೊಂದಿಗೆ ಹಾಜರಿರತಕ್ಕದ್ದು.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 31-05-2021 ರಂದು ಸಂಜೆ 5.30 ರ ಒಳಗಾಗಿ ಕುಲಸಚಿವರ ಕಚೇರಿಯ [email protected] ಗೆ ಇ- ಮೇಲ್ ಮೂಲಕ ಸಲ್ಲಿಸಬಹುದು

    ಆದ್ಯತೆ : ಯುಜಿಸಿ ಎನ್.ಇ.ಟಿ/ಎಸ್.ಎಲ್.ಇ.ಟಿ ಉತ್ತೀರ್ಣತೆ/ ಎಂಫಿಲ್/ ಪಿಹೆಚ್‌ಡಿ ಪದವಿ ಪಡೆದವರಿಗೆ ಆದ್ಯತೆ ನೀಡಲಾಗುವುದು.

    ಅಭ್ಯರ್ಥಿಗಳು ತಮ್ಮ ಇ- ಮೇಲ್ ವಿಳಾಸ ಮತ್ತು ದೂರವಾಣಿ / ಮೊಬೈಲ್ ಸಂಖ್ಯೆಯನ್ನು ಅರ್ಜಿಯಲ್ಲಿ ಕಡ್ಡಾಯವಾಗಿ ನಮೂದಿಸತಕ್ಕದ್ದು.

    ಸಂದರ್ಶನದ ದಿನಾಂಕವನ್ನು ವಿಶ್ವವಿದ್ಯಾನಿಲಯದ ವೆಬ್‌ಸೈಟ್‌ www.mangaloreuniversity.ac.in ನಲ್ಲಿ ಪ್ರಕಟಿಸಲಾಗುವುದು.

  • IAF : 334 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

    IAF : 334 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

    ಭಾರತೀಯ ವಾಯುಪಡೆಯು (ಐಎಎಫ್) 334 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ‌ ಸಲ್ಲಿಸಲು ಜೂನ್,30,2021 ಕೊನೆಯ ದಿನಾಂಕವಾಗಿದೆ. ಹೆಚ್ಚಿನ ವಿವರಗಳನ್ನು ಈ ಕೆಳಗೆ ನೀಡಲಾಗಿದೆ.

    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ‌: 01-06-2021
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30-06-2021

    ಹುದ್ದೆಗಳ ವಿವರ :ಎಎಫ್ ಸಿಎಟಿ – 306, ಮೀಟಿಯಾರಲಜಿ ಎಂಟ್ರಿ‌-28

    ಅರ್ಜಿ ಶುಲ್ಕ : ಅಭ್ಯರ್ಥಿಗಳು ರೂ. 250/- ಅರ್ಜಿ ಶುಲ್ಕವನ್ನು ಪಾವತಿಸಬೇಕು.ಆನ್ಲೈನ್ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಬೇಕು.

    ವಯೋಮಿತಿ: ಫ್ಲೈಯಿಂಗ್ ಬ್ರಾಂಚ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 20 ಹಾಗೂ ಗರಿಷ್ಠ 24 ವಯೋಮಿತಿ ಹೊಂದಿರಬೇಕು.

    ಗ್ರೌಂಡ್ ಡ್ಯೂಟಿ ( ಟೆಕ್ನಿಕಲ್ ಆಂಡ್ ನಾನ್ ಟೆಕ್ನಿಕಲ್ ಹುದ್ದೆ ) ಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 20 ಹಾಗೂ ಗರಿಷ್ಠ 26 ವಯೋಮಿತಿ ಹೊಂದಿರಬೇಕು.

    ವೇತನ‌: ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.56,100/- ರಿಂದ ರೂ. 1,77500/- ವೇತನವಿರುತ್ತದೆ.

    ವಿದ್ಯಾರ್ಹತೆ : ಅಭ್ಯರ್ಥಿಗಳು ಅಂಗೀಕೃತ ಯುನಿವರ್ಸಿಟಿಯಿಂದ 12th,ಡಿಗ್ರಿಯನ್ನು ಪಡೆದಿರಬೇಕು.

    ಆಯ್ಕೆ ಪ್ರಕ್ರಿಯೆ : ಫಿಸಿಕಲ್ ಸ್ಟ್ಯಾಂಡರ್ಡ್ಸ್, ಟೆಸ್ಟ್/ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

    ಆನ್ಲೈನ್ ಅಪ್ಲೈ ಗಾಗಿ ಇಲ್ಲಿ ಕ್ಲಿಕ್ ಮಾಡಿ

  • SDUAHER : 41 ಹುದ್ದೆಗೆ ಅರ್ಜಿ ಆಹ್ವಾನ

    SDUAHER : 41 ಹುದ್ದೆಗೆ ಅರ್ಜಿ ಆಹ್ವಾನ

    ಶ್ರೀ ದೇವರಾಜ ಅರಸ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಆಂಡ್ ರಿಸರ್ಚ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದು. ವಿವರಗಳು ಈ ಕೆಳಗಿನಂತಿವೆ:

    ಹುದ್ದೆಗಳ ಸಂಖ್ಯೆ – 41
    ಹುದ್ದೆ ಸ್ಥಳ – ಕರ್ನಾಟಕ – ಕೋಲಾರ
    ಹುದ್ದೆ : ಸ್ಟಾಫ್ ನರ್ಸ್, ಟೆಕ್ನಿಶಿಯನ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಹುದ್ದೆಗಳ ವಿವರ : ಸ್ಟಾಫ್ ನರ್ಸ್ – 35
    ಲೇಡಿ ಎಕ್ಸ್ ರೇ ಟೆಕ್ನಿಶಿಯನ್ – 01
    ಸಿಎಸ್ ಎಸ್ ಡಿ ಟೆಕ್ನಿಶಿಯನ್ – 05

    ಸ್ಟಾಫ್ ನರ್ಸ್ : ಎಂ.ಎಸ್ಸಿ/ಪಿಬಿ.ಎಸ್ಸಿ/ಬಿ.ಎಸ್ಸಿ/ಜಿಎನ್ ಎಂ ವಿದ್ಯಾರ್ಹತೆಯನ್ನು ಹೊಂದಿರಬೇಕು.

    ಲೇಡಿ ಎಕ್ಸ್ ರೇ ಟೆಕ್ನಿಶಿಯನ್ ಹುದ್ದೆಗೆ ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಗಳು ಬಿ.ಎಸ್ಸಿ/ ಡಿಪ್ಲೋಮಾ ಇನ್ ರಿಲೇಟೆಡ್ ಫೀಲ್ಡ್ ವಿದ್ಯಾರ್ಹತೆಯನ್ನು ಹೊಂದಿರಬೇಕು.

    ಸಿಎಸ್ ಎಸ್ ಡಿ ಟೆಕ್ನಿಶಿಯನ್ ಹುದ್ದೆಗೆ ಡಿಪ್ಲೋಮಾ ಇನ್ ರಿಲೇಟೆಡ್ ಫೀಲ್ಡ್ ವಿದ್ಯಾರ್ಹತೆಯನ್ನು ಅಭ್ಯರ್ಥಿಗಳು ಹೊಂದಿರಬೇಕು.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15-06-2021

    ಅಭ್ಯರ್ಥಿಗಳು ತಮ್ಮ ಎಲ್ಲಾ ದಾಖಲೆಗಳ ಪ್ರತಿಗಳನ್ನು ಇ- ಮೇಲ್ ಮಾಡಬೇಕು.
    ಇ-ಮೇಲ್: [email protected] ಗೆ ಸಲ್ಲಿಸಬೇಕು.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

  • ದ.ಕ, ಮಂಗಳೂರು ನ್ಯಾಯಾಲಯ : ಸ್ಟೆನೋಗ್ರಾಫರ್ ಹುದ್ದೆಗೆ ಆಯ್ಕೆ ಪಟ್ಟಿ ಪ್ರಕಟ

    ದ.ಕ, ಮಂಗಳೂರು ನ್ಯಾಯಾಲಯ : ಸ್ಟೆನೋಗ್ರಾಫರ್ ಹುದ್ದೆಗೆ ಆಯ್ಕೆ ಪಟ್ಟಿ ಪ್ರಕಟ

    ಮಂಗಳೂರು ಮತ್ತು ದಕ್ಷಿಣ ಕನ್ನಡ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸ್ಟೆನೋಗ್ರಾಫರ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಆಯ್ಕೆ ಪಟ್ಟಿಯನ್ನು ಇದೀಗ ಪ್ರಕಟಿಸಿದೆ.

    ನೇಮಕಾತಿ ಪ್ರಕ್ರಿಯೆಯ ವಿವಿಧ ಹಂತಗಳನ್ನು ಮುಗಿಸಿ ಪ್ರಸ್ತುತ ಆಯ್ಕೆಪಟ್ಟಿಯನ್ನು ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ನೀಡಿ ಸೆಲೆಕ್ಷನ್ ಲಿಸ್ಟ್ ಅನ್ನು ಚೆಕ್ ಮಾಡಬಹುದು.

    ಅಭ್ಯರ್ಥಿಗಳು ಆಯ್ಕೆ ಪಟ್ಟಿಯಲ್ಲಿ ತಮ್ಮ ಅಪ್ಲಿಕೇಶನ್ ನಂಬರ್, ಹೆಸರು, ಲಿಖಿತ ಪರೀಕ್ಷೆಗಳ ಗಳಿಸಿದ ಅಂಕ ಮತ್ತು ಇತರೆ ಮಾಹಿತಿಗಳನ್ನು ನೀಡಲಾಗಿದೆ.

    ಅಫೀಶಿಯಲ್ ವೆಬ್‌ಸೈಟ್‌ https://districts.ecourts.gov.in/dakshinakannada

  • AI Airport : ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

    AI Airport : ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

    ಎಐ ಏರ್ ಪೋರ್ಟ್ ಸರ್ವೀಸಸ್‌ ಲಿಮಿಟೆಡ್‌ ( ಹಿಂದೆ ಏರ್ ಇಂಡಿಯಾ ಟ್ರಾನ್ಸ್ ಪೋರ್ಟ್ ಸರ್ವೀಸಸ್‌ ಲಿಮಿಟೆಡ್‌) ಎಂಬುದಾಗಿತ್ತು. ಕೆಳಕಂಡ ಹುದ್ದೆಗಳಿಗಾಗಿ ನಿಗದಿತ ಅರ್ಹತಾ ಅಗತ್ಯತೆಗಳನ್ನು ಹೊಂದಿರುವ ಭಾರತೀಯ ರಾಷ್ಟ್ರೀಯರಿಂದ (ಪುರುಷ ಮತ್ತು ಮಹಿಳೆ) ಅರ್ಜಿ ಗಳನ್ನು ಆಹ್ವಾನಿಸಿದೆ. ಹುದ್ದೆಗಳು ನಿಶ್ಚಿತ ಗುತ್ತಿಗೆ ಅವಧಿಯದ್ದಾಗಿದ್ದು, ಉದ್ಯೊಗಿಯ ಉತ್ತಮ ಸಾಮರ್ಥ್ಯ ಮತ್ತು ಸೇವೆಗಳನ್ನು ಮತ್ತು ಎಐ ಏರ್ ಪೋರ್ಟ್ ಸರ್ವಿಸಸ್ ಲಿಮಿಟೆಡ್ ( ಹಿಂದೆ ಏರ್ ಇಂಡಿಯಾ ಟ್ರಾನ್ಸ್ ಪೋರ್ಟ್ ಸರ್ವಿಸಸ್ ಲಿಮಿಟೆಡ್ ) ನ ಅವಶ್ಯಕತೆಯನ್ನು ಅನುಸರಿಸಿ ಅವಧಿಯ ಮುಂದುವರಿಕೆ ಬದ್ಧವಾಗಿರುತ್ತದೆ ಮತ್ತು ಖಾಲಿಯಿರುವ ಕೆಳಕಂಡಂತೆ ತಿಳಿಸಿದ ಹುದ್ದೆಗಳು ಭರ್ತಿ ಮಾಡುವುದಕ್ಕೆ ಮತ್ತು ಮುಂದೆ ಭರ್ತಿ ಮಾಡಬಹುದಾದ ಹುದ್ದೆಗಳಿಗೆ ಕಾಯುವ ಪಟ್ಟಿ ಸಿದ್ಧಪಡಿಸುವುದಕ್ಕಾಗಿ ಇರುತ್ತವೆ.

    ಹುದ್ದೆ : ವ್ಯವಸ್ಥಾಪಕ – ಹಣಕಾಸು – 04
    ಲೆಕ್ಕಪತ್ರ – ಅಧಿಕಾರಿ – 07
    ಸಹಾಯಕ – ಲೆಕ್ಕಪತ್ರ – 04

    ಅರ್ಜಿ ನಮೂನೆ ಮತ್ತು ಇತರೆ ವಿವರಗಳಿಗಾಗಿ ವೆಬ್‌ಸೈಟ್‌ www.airindia.in(career) ನಲ್ಲಿ ಜಾಹೀರಾತುಗಳನ್ನು ನೋಡುವುದು.

  • ಸಹಶಿಕ್ಷಕ ಹುದ್ದೆಗೆ ಅರ್ಜಿ ಆಹ್ವಾನ

    ಸಹಶಿಕ್ಷಕ ಹುದ್ದೆಗೆ ಅರ್ಜಿ ಆಹ್ವಾನ

    ಶ್ರೀ ಶರಣ ಬಸವೇಶ್ವರ ವಿದ್ಯಾವರ್ಧಕ ಸಂಘ ( ರಿ) ಬಗಲೂರ ವಿಜಯಪುರ ಇಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ವಿವರಗಳನ್ನು ಓದಿ ಅರ್ಜಿಯನ್ನು ಸಲ್ಲಿಸಬಹುದು.

    ಹುದ್ದೆ : ಸಹಶಿಕ್ಷಕ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ‌.

    ಹುದ್ದೆಗಳ ಸಂಖ್ಯೆ – 01

    ವಿದ್ಯಾರ್ಹತೆ : ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿ.ಎ.ಬಿಎಡ್ ವಿದ್ಯಾರ್ಹತೆಯನ್ನು ಹೊಂದಿರಬೇಕು.

    ವೇತನ : ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.33,450/- ರಿಂದ ರೂ.62,600/- ಗಳವರೆಗೆ ವೇತನವಿರುತ್ತದೆ.

    ಅರ್ಹ ಅಭ್ಯರ್ಥಿಗಳು ತಮ್ಮ ಸಂಪೂರ್ಣ ವಿವರ ಸ್ವಂತ ಕೈ ಬರಹದ ಅರ್ಜಿಯೊಂದಿಗೆ ತಮ್ಮ ಶೈಕ್ಷಣಿಕ ವಿದ್ಯಾರ್ಹತೆ ಜನ್ಮದಾಖಲೆ ಮತ್ತು ಇತರ ಸಂಬಂಧಿಸಿದ ಪ್ರಮಾಣ ಪತ್ರಗಳ ದೃಢೀಕರಿಸಿದ ನಕಲುಗಳೊಂದಿಗೆ ಅಭ್ಯರ್ಥಿಗಳು ರೂ.500/- ನ್ಯಾಷನಲ್ ಬ್ಯಾಂಕ್ ಡಿಡಿಯನ್ನು ಅಧ್ಯಕ್ಷರು ಶ್ರೀ ಶರಣ ಬಸವೇಶ್ವರ ವಿದ್ಯಾವರ್ಧಕ ಸಂಘ (ರಿ) ಬಗಲೂರ ಇವರ ಹೆಸರಿಗೆ ಪಡೆದು ಅರ್ಜಿಯ ಜೊತೆಗೆ ಲಗತ್ತಿಸಿ ಈ ಪ್ರಕಟಣೆ ಪ್ರಕಟಗೊಂಡ 21 ದಿನದೊಳಗೆ ಅರ್ಜಿಯನ್ನು ಸಲ್ಲಿಸಬೇಕು. ಮತ್ತು ಅರ್ಜಿಯ ಪ್ರತಿಯನ್ನು ಅಗತ್ಯ ದಾಖಲೆಗಳ ಸಹಿತವಾಗಿ ಮಾನ್ಯ ಉಪನಿರ್ದೇಶಕರು ಸಾ.ಶಿ. ಇಲಾಖೆ ವಿಜಯಪುರ ಇವರಿಗೆ ನಿಗದಿತ ಸಮಯದೊಳಗಾಗಿ ಸಲ್ಲಿಸಬೇಕು.

    ಅರ್ಜಿ ಸಲ್ಲಿಸುವ ವಿಳಾಸ : ಅಧ್ಯಕ್ಷರು, ಶ್ರೀ ಶರಣ ಬಸವೇಶ್ವರ ವಿದ್ಯಾವರ್ಧಕ ಸಂಘ (ರಿ) ಬಗಲೂರ ತಾ.ಸಿಂದಗಿ. ಜಿ: ವಿಜಯಪುರ.