Blog

  • HSL : ವಿವಿಧ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ

    ಹಿಂದೂಸ್ಥಾನ್ ಶಿಪ್ ಯಾರ್ಡ್ ಲಿಮಿಟೆಡ್ ( ಹೆಚ್ ಎಸ್ ಎಲ್) ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ‌ ಆಹ್ವಾನಿಸಿದೆ. ಹುದ್ದೆಗಳಿಗೆ ಕೇಳಲಾಗಿರುವ ಅರ್ಹತೆಗಳ ಬಗ್ಗೆ ತಿಳಿಯಲು ಮುಂದೆ ಓದಿ

    ಹುದ್ದೆಗಳ ವಿವರ : ಜನರಲ್ ಮ್ಯಾನೇಜರ್ , ಅಡಿಶನಲ್ ಜನರಲ್ ಮ್ಯಾನೇಜರ್, ಡೆಪ್ಯುಟಿ ಜನರಲ್ ಮ್ಯಾನೇಜರ್, ಸೀನಿಯರ್ ಮ್ಯಾನೇಜರ್, ಮ್ಯಾನೇಜರ್, ಡೆಪ್ಯುಟಿ ಮ್ಯಾನೇಜರ್, ಡೆಪ್ಯುಟಿ ಚೀಫ್ ಪ್ರಾಜೆಕ್ಟ್ ಆಫೀಸರ್, ಪ್ರಾಜೆಕ್ಟ್ ಮ್ಯಾನೇಜರ್, ಡೆಪ್ಯುಟಿ ಪ್ರಾಜೆಕ್ಟ್ ಆಫೀಸರ್, ಸೀನಿಯರ್ ಕನ್ಸಲ್ಟೆಂಟ್, ಕನ್ಸಲ್ಟೆಂಟ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 23-06-2021
    ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 20-07-2021 ರಿಂದ 30-08-2021 ರವರೆಗೆ ( ವಿವಿಧ ಹುದ್ದೆಗಳ ಮೇಲೆ ಅವಲಂಬಿಸಿದೆ)

  • BECIL : 103 ಹುದ್ದೆಗಳಿಗೆ ಅರ್ಜಿ ಆಹ್ವಾನ, 8 ನೇ ತರಗತಿ ಪಾಸಾದವರಿಗೆ ಭರ್ಜರಿ ಅವಕಾಶ

    ಬ್ರಾಡ್ ಕಾಸ್ಟ್ ಇಂಜಿನಿಯರಿಂಗ್ ಕನ್ಸಲ್ಟೆಂಟ್ ಇಂಡಿಯಾ ಲಿಮಿಟೆಡ್ (ಬಿಇಸಿಐಎಲ್) ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಈ ಕೆಳಗಿನ ವಿವರಗಳನ್ನು ಓದಿ ಅರ್ಜಿ ಸಲ್ಲಿಸಬಹುದು.

    ಹುದ್ದೆ : 103 ಹ್ಯಾಂಡಿಮನ್ ಮತ್ತು ಸೂಪರ್ ವೈಸರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30-06-2021
    ವಿದ್ಯಾರ್ಹತೆ : 8 ನೇ ತರಗತಿ ತೇರ್ಗಡೆ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
    ವಯೋಮಿತಿ : ಸುಮಾರು 30 ರಿಂದ 45 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು
    ವೇತನ : ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.14,014 /- ರಿಂದ ರೂ.20,384 /- ವೇತನ ನೀಡಲಾಗುತ್ತದೆ.

    ಅರ್ಜಿ ಶುಲ್ಕ : ಅರ್ಜಿದಾರರು ರೂ. 750/- ನ್ನು ಹಾಗೂ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಆರ್ಥಿಕವಾಗಿ ಹಿಂದುಳಿದ / ಅಂಗವಿಕಲ ಅಭ್ಯರ್ಥಿಗಳಿಗೆ ರೂ. 450/- ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.

    ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಕೆಳಗೆ ನೀಡಲಾದ ನೋಟಿಫಿಕೇಶನ್ ನೋಡಿ.

  • KIOCL ಲಿಮಿಟೆಡ್ : ವಿವಿಧ ಹುದ್ದೆ

    ಕೆಐಒಸಿಎಲ್ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

    ಹುದ್ದೆ: ಜೆಜಿಎಂ ( ಕಮರ್ಷಿಯಲ್‌) – 1 ಹುದ್ದೆ
    ಜೆಜಿಎಂ ( ಮೆಟಿರಿಯಲ್) – 1 ಹುದ್ದೆ
    ಡಿಜಿಎಂ ( ಎಲೆಕ್ಟ್ರಿಕಲ್ ) – 1 ಹುದ್ದೆ
    ಮ್ಯಾನೇಜರ್ ( ಕಾರ್ಪೋರೇಟ್ ಕಮಿಷನ್) /E3 – 1 ಹುದ್ದೆ

    ಎಕ್ಸಿಕ್ಯೂಟಿವ್ ಟ್ರೈನಿಸ್
    1.ಎಕ್ಸಿಕ್ಯೂಟಿವ್ ಟ್ರೈನಿ ( ಹೆಚ್ ಆರ್)/ ಇಒ- 3 ಹುದ್ದೆಗಳು

    1. ಎಕ್ಸಿಕ್ಯೂಟಿವ್ ಟ್ರೈನಿ ( ಫೈನಾನ್ಸ್)/ ಇಒ- 4 ಹುದ್ದೆಗಳು
    2. ಎಕ್ಸಿಕ್ಯೂಟಿವ್ ಟ್ರೈನಿ ( ಕಂಪನಿ ಸೆಕ್ರೆಟರಿ) /ಇಒ- 1 ಹುದ್ದೆ

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 25-07-2021

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ

  • KSMCL ನಲ್ಲಿ 16 ವಿವಿಧ ಹುದ್ದೆಗಳು: ನೇರ ಸಂದರ್ಶನಕ್ಕೆ ಆಹ್ವಾನ

    ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೋರೇಷನ್ ಲಿಮಿಟೆಡ್ ( ಕೆ‌.ಎಸ್.ಎಂ.ಸಿ.ಎಲ್) ಕರ್ನಾಟಕ ರಾಜ್ಯಾದ್ಯಂತ ತನ್ನ ಗಣಿ/ಕ್ವಾರಿಗಳಲ್ಲಿ ಕೆಲಸ ನಿರ್ವಹಿಸಲು ಈ ಕೆಳಕಂಡ ಶಾಸನಬದ್ಧ ಹುದ್ದೆಗಳನ್ನು ಸಂಪೂರ್ಣವಾಗಿ ಗುತ್ತಿಗೆ ಆಧಾರದ ಮೇಲೆ‌ ಮಾತ್ರ ನೇಮಕ ಮಾಡಿಕೊಳ್ಳಲಾಗುತ್ತಿದೆ.

    ಹುದ್ದೆಯ ಹೆಸರು : ಗಣಿ ಮುಂದಾಳು – 08 ಹುದ್ದೆಗಳು
    ಗಣಿ ಸಂಗಾತಿ – 04 ಹುದ್ದೆಗಳು
    ಬ್ಲಾಸ್ಟರ್ – 04 ಹುದ್ದೆಗಳು

    ವಯೋಮಿತಿ : ಅಭ್ಯರ್ಥಿಗಳು ಕನಿಷ್ಠ 23 ವರ್ಷ, ಹಾಗೂ ಗರಿಷ್ಠ 45 ವರ್ಷ ಮೀರಿರಬಾರದು.

    ಸಂಚಿತ ಸಂಭಾವನೆ ಪ್ರತಿ ಮಾಹೆ ( ರೂ.ಗಳಲ್ಲಿ)- ಗಣಿ ಮುಂದಾಳು ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ‌ ರೂ.32,000/-, ಗಣಿ ಸಂಗಾತಿ ಹುದ್ದೆಗೆ ರೂ.25,000/-,ಬ್ಲಾಸ್ಟರ್ ಹುದ್ದೆಗೆ ರೂ.20,000/- ಮಾಸಿಕ ವೇತನ ನಿಗದಿಪಡಿಸಲಾಗಿದೆ.

    ಸಂದರ್ಶನದ ದಿನಾಂಕ ಹಾಗೂ ಸ್ಥಳ : ಗಣಿ ಮುಂದಾಳು -( mine foreman) 02-07-2021 ಸಮಯ 11.30 ಬೆಳಿಗ್ಗೆ.

    ಗಣಿ ಸಂಗಾತಿ (mine mate) : ಸಂದರ್ಶನದ ದಿನಾಂಕ ಹಾಗೂ ಸ್ಥಳ : 03-07-2021 ಸಮಯ 11.30 ಬೆಳಿಗ್ಗೆ .

    ಬ್ಲಾಸ್ಟರ್ : ಸಂದರ್ಶನದ ದಿನಾಂಕ ಹಾಗೂ ಸ್ಥಳ : 03-07-2021 ಸಮಯ 3.00 ಮಧ್ಯಾಹ್ನ .

    ವಿಳಾಸ : Deputy General Manager, Iron Ore Division, Vaishnavi Farms, Daulathpur Road, Sandur-583119, Ballari District.

    ಅಂಚೆ ಮೂಲಕ ಅಥವಾ ಮುದ್ದಾಂ ಆಗಿ ಕಳಿಸಿದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.

    ಅರ್ಜಿ ನಮೂನೆ, ನೇಮಕಾತಿ ನಿಯಮಾವಳಿ ಹಾಗೂ ಹೆಚ್ಚಿನ ವಿವರಗಳಿಗಾಗಿ ಸಂಸ್ಥೆಯ ಜಾಲತಾಣ www.ksmc.karnataka.gov.in ನ್ನು ಸಂಪರ್ಕಿಸಬಹುದಾಗಿದೆ.

  • ಶಿವಮೊಗ್ಗ ಸ್ಮಾರ್ಟ್ ಸಿಟಿ : ನೇಮಕಾತಿ ಅಧಿಸೂಚನೆ

    ಶಿವಮೊಗ್ಗ ಸ್ಮಾರ್ಟ್ ಸಿಟಿ ಲಿಮಿಟೆಡ್ ಕಂಪನಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ವಿವರಗಳು ಈ ಕೆಳಗಿನಂತಿವೆ:
    ಹುದ್ದೆ : ಗುತ್ತಿಗೆ ಆಧಾರದ ಮೇರೆಗೆ ಒಂದು ಕಾರ್ಯಪಾಲಕ ಇಂಜಿನಿಯರ್ (ವಿದ್ಯುತ್) ಮತ್ತು ಒಂದು ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಇಚ್ಛಿಸಿದೆ.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 02-07-2021

    ಅರ್ಜಿ ನಮೂನೆ ಹಾಗೂ ಇತರೆ ವಿವರಗಳಿಗಾಗಿ ವೆಬ್‌ಸೈಟ್‌ shivamoggasmartcity.co.in ಅಥವಾ shimogacity.mrc.gov.in ಹಾಗೂ ಶಿವಮೊಗ್ಗ ಸ್ಮಾರ್ಟ್ ಸಿಟಿ ಲಿಮಿಟೆಡ್ ಕಚೇರಿಯ ಸೂಚನಾ ಫಲಕವನ್ನು ನೋಡುವುದು.

  • ಎನ್ ಸಿಸಿ ವಿಶೇಷ ಯೋಜನೆಯಡಿ ಭಾರತೀಯ ಸೇನೆಗೆ ಸೇರಲು ಅರ್ಜಿ ಆಹ್ವಾನ, ಪರೀಕ್ಷೆ ಇಲ್ಲದೆ ನೇರ ಸಂದರ್ಶನ

    ಎನ್ ಸಿಸಿಯಲ್ಲಿ ತೊಡಗಿಸಿಕೊಂಡವರಿಗೆ ಭಾರತೀಯ ಸೇನೆಯಲ್ಲಿ ಕೆಲಸಕ್ಕೆ ಸೇರುವ ಅವಕಾಶ ಒದಗಿದೆ.

    ಭಾರತೀಯ ಸೇನೆಯು ಎನ್ ಸಿಸಿ ಸ್ಪೆಷಲ್ ಎಂಟ್ರಿ ಸ್ಕೀಮ್ ಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಿದೆ.

    ಈ ನೇಮಕಾತಿ ಪ್ರಕ್ರಿಯೆಯಲ್ಲಿ 55 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದ್ದು, ಇದರಲ್ಲಿ 50 ಹುದ್ದೆಗಳನ್ನು ಅವಿವಾಹಿತ ಪುರುಷ ಅಭ್ಯರ್ಥಿಗಳಿಗೆ ಹಾಗೂ 5 ಹುದ್ದೆಗಳಿಗೆ ಎನ್ ಸಿಸಿ ಮಹಿಳಾ ಅಭ್ಯರ್ಥಿಗಳಿಗೆ ಭರ್ತಿ ಮಾಡಿಕೊಳ್ಳಲಾಗುವುದು.

    ಪುರುಷ ಉದ್ಯೋಗಿಗಳ ಪೈಕಿ ಸಾಮಾನ್ಯ ವರ್ಗಕ್ಕೆ 45, ಅಪಘಾತಕ್ಕೀಡಾಗಿರುವ ಸೇನಾ ಸಿಬ್ಬಂದಿ ಅಭ್ಯರ್ಥಿಗಳಿಗೆ 5 ಹುದ್ದೆಗಳು ಮೀಸಲಿವೆ. ಮಹಿಳಾ ಉದ್ಯೋಗಿಗಳ ಪೈಕಿ 4 ಸಾಮಾನ್ಯ ವರ್ಗಕ್ಕೆ ಹಾಗೂ 1 ಸೇನಾ ಸಿಬ್ಬಂದಿಗಳಿಗೆ ಮೀಸಲಾಗಿಡಲಾಗಿದೆ.

    ವಿದ್ಯಾರ್ಹತೆ : ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಶೇ.50 ಅಂಕದೊಂದಿಗೆ ಪದವಿ ಹೊಂದಿರಬೇಕು. ಇನ್ನು ಅಂತಿಮ ವರ್ಷ ಅಧ್ಯಯನ ಮಾಡುವವರು ಕೂಡಾ ಅರ್ಜಿ ಸಲ್ಲಿಸಬಹುದು. ಕ್ರಮವಾಗಿ ಮೂರು/ನಾಲ್ಕು ವರ್ಷಗಳಲ್ಲಿನ ಕೋರ್ಸ್ ಗಳಲ್ಲಿನ ಮೊದಲ ಎರಡು/ ಮೂರು ವರ್ಷಗಳಲ್ಲಿ ಕನಿಷ್ಠ 50 ರಷ್ಟು ಅಂಕಗಳನ್ನು ಹೊಂದಿರುವವರು ಅರ್ಜಿ ಸಲ್ಲಿಸಬಹುದು.

    ಎನ್ ಸಿಸಿ ಅಭ್ಯರ್ಥಿಗಳಿಗಾಗಿಯೇ ಇರುವ ಹುದ್ದೆ ಇದಾಗಿರುವುದರಿಂದ ಅಭ್ಯರ್ಥಿಗಳು ಎನ್ ಸಿಸಿಯಲ್ಲಿ ಸೀನಿಯರ್ ಡಿವಿಷನ್ ವಿಭಾಗದಲ್ಲಿ ಕನಿಷ್ಠ ಎರಡರಿಂದ ಮೂರು ವರ್ಷ ಕಾರ್ಯನಿರ್ವಹಿಸಬೇಕು.

    ಅಭ್ಯರ್ಥಿಯ ವಯೋಮಿತಿ 19 ರಿಂದ 25 ವರ್ಷದೊಳಗಿರಬೇಕು. ಜುಲೈ 1,2021 ರೊಳಗೆ ಗರಿಷ್ಠ ‌25 ವಯೋಮಿತಿ ಹೊಂದಿರಬೇಕು.

    ಆಯ್ಕೆ ಪ್ರಕ್ರಿಯೆ ಹೇಗೆ? ಎರಡು ಹಂತದ ಆಯ್ಕೆ ವಿಧಾನದ ಮೂಲಕ ಅಭ್ಯರ್ಥಿಗಳ ಆಯ್ಕೆ ಮಾಡಿಕೊಳ್ಳಲಾಗುವುದು. ಅಭ್ಯರ್ಥಿಗಳ ಶಾರ್ಟ್ ಲಿಸ್ಟ್ ಮಾಡಿಕೊಳ್ಳಲಾಗುತ್ತದೆ. ಆನಂತರ ಸರ್ವಿಸ್ ಸೆಲೆಕ್ಷನ್ ಬೋರ್ಡ್ (ಎಸ್ ಎಸ್ ಬಿ) ಸಂದರ್ಶನ ನಡೆಸಿ ನೇಮಕ ಮಾಡಿಕೊಳ್ಳಲಿದೆ.

    5 ದಿನಗಳ ಕಾಲ ಎಸ್ ಎಸ್ ಬಿ ಸಂದರ್ಶನ ನಡೆಯಲಿದೆ. ಅಲಹಾಬಾದ್, ಭೋಪಾಲ್, ಬೆಂಗಳೂರು ಹಾಗೂ ಕಪುರ್ತಲದಲ್ಲಿ ಎಸ್ ಎಸ್ ಬಿ ಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಚೆನ್ನೈನ ಒಟಿಒದಲ್ಲಿ ಪೂರ್ವ ಆಯೋಗದ ತರಬೇತಿ ನೀಡಲಾಗುತ್ತದೆ.

    ಪರೀಕ್ಷೆ ಬರೆಯೋ ಟೆನ್ಶನ್ ಇಲ್ಲದೆ ನೇರವಾಗಿ ಸಂದರ್ಶನಗಳನ್ನು ಎದುರಿಸಿ ಸೇನೆಗೆ ಸೇರಬಹುದು. ಈ‌ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಿ

    ಅರ್ಜಿ ಸಲ್ಲಿಸೋ ಪ್ರಕ್ರಿಯೆಯು ಜೂನ್ 16 ರಿಂದ ಪ್ರಾರಂಭವಾಗಿ ಜುಲೈ 15 ಕ್ಕೆ ಮುಕ್ತಾಯಗೊಳ್ಳಲಿದೆ.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ