ಎನ್ ಸಿಸಿ ವಿಶೇಷ ಯೋಜನೆಯಡಿ ಭಾರತೀಯ ಸೇನೆಗೆ ಸೇರಲು ಅರ್ಜಿ ಆಹ್ವಾನ, ಪರೀಕ್ಷೆ ಇಲ್ಲದೆ ನೇರ ಸಂದರ್ಶನ

Written By Mallika

Lorem ipsum dolor sit amet consectetur pulvinar ligula augue quis venenatis. 

Advertisements

ಎನ್ ಸಿಸಿಯಲ್ಲಿ ತೊಡಗಿಸಿಕೊಂಡವರಿಗೆ ಭಾರತೀಯ ಸೇನೆಯಲ್ಲಿ ಕೆಲಸಕ್ಕೆ ಸೇರುವ ಅವಕಾಶ ಒದಗಿದೆ.

ಭಾರತೀಯ ಸೇನೆಯು ಎನ್ ಸಿಸಿ ಸ್ಪೆಷಲ್ ಎಂಟ್ರಿ ಸ್ಕೀಮ್ ಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಿದೆ.

ಈ ನೇಮಕಾತಿ ಪ್ರಕ್ರಿಯೆಯಲ್ಲಿ 55 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದ್ದು, ಇದರಲ್ಲಿ 50 ಹುದ್ದೆಗಳನ್ನು ಅವಿವಾಹಿತ ಪುರುಷ ಅಭ್ಯರ್ಥಿಗಳಿಗೆ ಹಾಗೂ 5 ಹುದ್ದೆಗಳಿಗೆ ಎನ್ ಸಿಸಿ ಮಹಿಳಾ ಅಭ್ಯರ್ಥಿಗಳಿಗೆ ಭರ್ತಿ ಮಾಡಿಕೊಳ್ಳಲಾಗುವುದು.

ಪುರುಷ ಉದ್ಯೋಗಿಗಳ ಪೈಕಿ ಸಾಮಾನ್ಯ ವರ್ಗಕ್ಕೆ 45, ಅಪಘಾತಕ್ಕೀಡಾಗಿರುವ ಸೇನಾ ಸಿಬ್ಬಂದಿ ಅಭ್ಯರ್ಥಿಗಳಿಗೆ 5 ಹುದ್ದೆಗಳು ಮೀಸಲಿವೆ. ಮಹಿಳಾ ಉದ್ಯೋಗಿಗಳ ಪೈಕಿ 4 ಸಾಮಾನ್ಯ ವರ್ಗಕ್ಕೆ ಹಾಗೂ 1 ಸೇನಾ ಸಿಬ್ಬಂದಿಗಳಿಗೆ ಮೀಸಲಾಗಿಡಲಾಗಿದೆ.

ವಿದ್ಯಾರ್ಹತೆ : ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಶೇ.50 ಅಂಕದೊಂದಿಗೆ ಪದವಿ ಹೊಂದಿರಬೇಕು. ಇನ್ನು ಅಂತಿಮ ವರ್ಷ ಅಧ್ಯಯನ ಮಾಡುವವರು ಕೂಡಾ ಅರ್ಜಿ ಸಲ್ಲಿಸಬಹುದು. ಕ್ರಮವಾಗಿ ಮೂರು/ನಾಲ್ಕು ವರ್ಷಗಳಲ್ಲಿನ ಕೋರ್ಸ್ ಗಳಲ್ಲಿನ ಮೊದಲ ಎರಡು/ ಮೂರು ವರ್ಷಗಳಲ್ಲಿ ಕನಿಷ್ಠ 50 ರಷ್ಟು ಅಂಕಗಳನ್ನು ಹೊಂದಿರುವವರು ಅರ್ಜಿ ಸಲ್ಲಿಸಬಹುದು.

ಎನ್ ಸಿಸಿ ಅಭ್ಯರ್ಥಿಗಳಿಗಾಗಿಯೇ ಇರುವ ಹುದ್ದೆ ಇದಾಗಿರುವುದರಿಂದ ಅಭ್ಯರ್ಥಿಗಳು ಎನ್ ಸಿಸಿಯಲ್ಲಿ ಸೀನಿಯರ್ ಡಿವಿಷನ್ ವಿಭಾಗದಲ್ಲಿ ಕನಿಷ್ಠ ಎರಡರಿಂದ ಮೂರು ವರ್ಷ ಕಾರ್ಯನಿರ್ವಹಿಸಬೇಕು.

ಅಭ್ಯರ್ಥಿಯ ವಯೋಮಿತಿ 19 ರಿಂದ 25 ವರ್ಷದೊಳಗಿರಬೇಕು. ಜುಲೈ 1,2021 ರೊಳಗೆ ಗರಿಷ್ಠ ‌25 ವಯೋಮಿತಿ ಹೊಂದಿರಬೇಕು.

ಆಯ್ಕೆ ಪ್ರಕ್ರಿಯೆ ಹೇಗೆ? ಎರಡು ಹಂತದ ಆಯ್ಕೆ ವಿಧಾನದ ಮೂಲಕ ಅಭ್ಯರ್ಥಿಗಳ ಆಯ್ಕೆ ಮಾಡಿಕೊಳ್ಳಲಾಗುವುದು. ಅಭ್ಯರ್ಥಿಗಳ ಶಾರ್ಟ್ ಲಿಸ್ಟ್ ಮಾಡಿಕೊಳ್ಳಲಾಗುತ್ತದೆ. ಆನಂತರ ಸರ್ವಿಸ್ ಸೆಲೆಕ್ಷನ್ ಬೋರ್ಡ್ (ಎಸ್ ಎಸ್ ಬಿ) ಸಂದರ್ಶನ ನಡೆಸಿ ನೇಮಕ ಮಾಡಿಕೊಳ್ಳಲಿದೆ.

5 ದಿನಗಳ ಕಾಲ ಎಸ್ ಎಸ್ ಬಿ ಸಂದರ್ಶನ ನಡೆಯಲಿದೆ. ಅಲಹಾಬಾದ್, ಭೋಪಾಲ್, ಬೆಂಗಳೂರು ಹಾಗೂ ಕಪುರ್ತಲದಲ್ಲಿ ಎಸ್ ಎಸ್ ಬಿ ಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಚೆನ್ನೈನ ಒಟಿಒದಲ್ಲಿ ಪೂರ್ವ ಆಯೋಗದ ತರಬೇತಿ ನೀಡಲಾಗುತ್ತದೆ.

ಪರೀಕ್ಷೆ ಬರೆಯೋ ಟೆನ್ಶನ್ ಇಲ್ಲದೆ ನೇರವಾಗಿ ಸಂದರ್ಶನಗಳನ್ನು ಎದುರಿಸಿ ಸೇನೆಗೆ ಸೇರಬಹುದು. ಈ‌ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಿ

ಅರ್ಜಿ ಸಲ್ಲಿಸೋ ಪ್ರಕ್ರಿಯೆಯು ಜೂನ್ 16 ರಿಂದ ಪ್ರಾರಂಭವಾಗಿ ಜುಲೈ 15 ಕ್ಕೆ ಮುಕ್ತಾಯಗೊಳ್ಳಲಿದೆ.

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

Leave a Comment