Blog

  • ಬೆಂಗಳೂರಿನ ಜಿಪಿಒ ಅಂಚೆ ವಿಭಾಗದಲ್ಲಿ ಕೆಲಸ, ನೇರ ಸಂದರ್ಶನ, ಎಸ್ ಎಸ್ ಎಲ್ ಸಿ ಪಾಸಾದವರಿಗೆ ಆದ್ಯತೆ

    ಭಾರತೀಯ ಅಂಚೆ ಇಲಾಖೆ ವತಿಯಿಂದ ಬೆಂಗಳೂರಿನ ಜಿಪಿಒ ಅಂಚೆ ವಿಭಾಗದಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ವಿವರಗಳನ್ನು ಈ ಕೆಳಗೆ ನೀಡಲಾಗಿದೆ.

    ಹುದ್ದೆ : ಅಂಚೆ ಜೀವ ವಿಮೆ ಏಜೆಂಟ್ ಆಗಿ ಕಾರ್ಯನಿರ್ವಹಿಸಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

    ವಯೋಮಿತಿ : 18 ರಿಂದ 60 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

    ವಿದ್ಯಾರ್ಹತೆ : ಎಸ್ ಎಸ್ ಎಲ್ ಸಿ ಪಾಸಾಗಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

    ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ತಮ್ಮ ಆಧಾರ್ ಕಾರ್ಡ್, ಪಾನ್ ಕಾರ್ಡ್, ಎಸ್ ಎಸ್ ಎಲ್ ಸಿ ಅಂಕಪಟ್ಟಿಯ ಮೂಲ ಪ್ರತಿ ಹಾಗೂ 2 ಪಾಸ್ ಪೋರ್ಟ್ ಅಳತೆಯ ಭಾವಚಿತ್ರಗಳೊಂದಿಗೆ ಬೆಂಗಳೂರು ಜಿಪಿಓ ಅಂಚೆ ಕಚೇರಿಯಲ್ಲಿ ಆಗಸ್ಟ್ 5 ರಿಂದ 7 ರವರೆಗೆ ನಡೆಯುವ ಸಂದರ್ಶನದಲ್ಲಿ ಭಾಗಿಯಾಗಬಹುದು.

    ಹೆಚ್ಚಿನ ಮಾಹಿತಿಗಾಗಿ ದೂ.ಸಂ.080 22850002, 9901354022 ಗೆ ಸಂಪರ್ಕಿಸಬಹುದಾಗಿದೆ.

  • ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಹುದ್ದೆ, ನೇರ ಸಂದರ್ಶನ

    ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್ , ಬೆಂಗಳೂರು ಇಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಹುದ್ದೆ : ವೆಟರಿನಯನ್ (Veterinaian)

    ಹುದ್ದೆ ಸಂಖ್ಯೆ : 1 ಹುದ್ದೆ

    ವೇತನ : 52,000/- ರೂ. ನಿಗದಿಪಡಿಸಲಾಗಿದೆ

    ಸಂದರ್ಶನ ದಿನಾಂಕ ಮತ್ತು ಸ್ಥಳ : ಆಸಕ್ತ ಅಭ್ಯರ್ಥಿಗಳು ತಮ್ಮ ಬಯೋಡೇಟಾ ಹಾಗೂ ದಾಖಲೆಗಳೊಂದಿಗೆ ದಿನಾಂಕ 30-07-2021 ರಂದು ಬೆಳಿಗ್ಗೆ 11.30 ಕ್ಕೆ Executive Officer, Bannerghatt Biological Park ಇಲ್ಲಿ ಹಾಜರಿರತಕ್ಕದ್ದು.

    ಅಭ್ಯರ್ಥಿಗಳು ಅರ್ಜಿಯನ್ನು ದಿನಾಂಕ 28-07-2021 ರೊಳಗೆ [email protected] ಗೆ ಸಲ್ಲಿಸಬೇಕು.

  • ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿಯು, ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಹುದ್ದೆ : ಕನ್ಸಲ್ಟೆಂಟ್- ಮೆಟಮಲ್ ಹೆಲ್ತ್ ಆಂಡ್ ಫ್ಯಾಮಿಲಿ ಪ್ಲ್ಯಾನಿಂಗ್ – RCH – 1 ಹುದ್ದೆ
    ಲಾಕ್ವಾಶ್ಯ ಕೋರ್ಡಿನೇಟರ್ -MH : 1 ಹುದ್ದೆ
    ಸಿಎಸ್ ಟಿ ಕೋರ್ಡಿನೇಟರ್ ಎನ್ ವಿಹೆಚ್ ಸಿಪಿ: 1 ಹುದ್ದೆ
    ಕನ್ಸಲ್ಟೆಂಟ್ ಹೆಚ್& ಪಿ- ಎನ್ ಯುಹೆಚ್ ಎಂ : 1 ಹುದ್ದೆ
    ಪ್ರೊಗ್ರಾಮ್ ಅಸಿಸ್ಟೆಂಟ್ – cphc uhc – 1 ಹುದ್ದೆ
    ಪ್ರೋಗ್ರಾಂ ಅಸಿಸ್ಟೆಂಟ್ – ntcp- 1 ಹುದ್ದೆ
    ಕೋರ್ಡಿನೇಟರ್ – ಡೆಮೋಗ್ರಾಫಿ- 1 ಹುದ್ದೆ
    ಕನ್ಸಲ್ಟೆಂಟ್ – ಚೈಲ್ಡ್ ಹೆಲ್ತ್ – 1 ಹುದ್ದೆ

    ಹುದ್ದೆಯು ಒಂದು ವರ್ಷದ ಅವಧಿಗೆ ತಾತ್ಕಾಲಿಕವಾಗಿದ್ದು, ಮತ್ತು ಗುತ್ತಿಗೆ ಆಧಾರದ ಹುದ್ದೆಯಾಗಿರುತ್ತದೆ.

    ಅರ್ಜಿಯನ್ನು ಗೂಗಲ್ ಫಾರಂ ಲಿಂಕ್ ಮೂಲಕ ಸಲ್ಲಿಸಬೇಕು. ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 05-08-2021( ಸಂಜೆ 5.30 ರೊಳಗೆ )

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ

  • ರಾಜ್ಯ ಸರಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ

    ಜುಲೈ 1 ರಿಂದ ಅನ್ವಯವಾಗುವಂತೆ ರಾಜ್ಯ ಸರಕಾರಿ ನೌಕರರಿಗೆ ಶೇ.10.25 ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಲು ಸರಕಾರ ಆದೇಶ ಹೊರಡಿಸಿದೆ.

    ಒಂದೂವರೆ ವರ್ಷದಿಂದ ಕೋವಿಡ್ ಕಾರಣದಿಂದಾಗಿ ಡಿಎ ಹೆಚ್ಚಳ ಮಾಡಿರಲಿಲ್ಲ.
    ಇಲ್ಲಿಯವರೆಗೆ ಮೂಲ ವೇತನದ ಶೇ.11.25 ರಷ್ಟಿದ್ದ ತುಟ್ಟಿಭತ್ಯೆಯನ್ನು ಶೇ.21.50 ಕ್ಕೆ ಹೆಚ್ಚಳ ಮಾಡಲಾಗಿದೆ. ಈ ಕುರಿತು ಆರ್ಥಿಕ ಇಲಾಖೆ ಸೋಮವಾರ ಆದೇಶ ಹೊರಡಿಸಿದೆ.

  • KPSC ಗ್ರೂಪ್ ಎ ಮತ್ತು ಗ್ರೂಪ್ ಬಿ ಪ್ರವೇಶ ಪತ್ರ ರಿಲೀಸ್

    ಕರ್ನಾಟಕ ಲೋಕ ಸೇವಾ ಆಯೋಗದ ಅಧಿಸೂಚನೆ ಸಂಖ್ಯೆ ಪಿಎಸ್ ಸಿ 1 ಆರ್ ಟಿಬಿ- 2/2020 ದಿನಾಂಕ 24-06-2020 ರಲ್ಲಿ ಅಧಿಸೂಚಿಸಿರುವ ಗ್ರೂಪ್ ‘ಸಿ’ ತಾಂತ್ರಿಕ/ ಗ್ರೂಪ್ ‘ಬಿ’ ತಾಂತ್ರಿಕ / ತಾಂತ್ರಿಕೇತರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಆಯೋಗವು ದಿನಾಂಕ 30-07-2021, 31-07-2021 ಮತ್ತು 01-08-2021 ರಂದು ನಡೆಸುವ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ / ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಭ್ಯರ್ಥಿಗಳು ಪ್ರವೇಶ ಪತ್ರಗಳನ್ನು ಆಯೋಗದ ವೆಬ್‌ಸೈಟ್‌ http://kpsc.kar.nic.in ನಲ್ಲಿ ದಿನಾಂಕ 24-07-2021 ರಿಂದ ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

    ಅರ್ಹ ಅಭ್ಯರ್ಥಿಗಳು ಪ್ರವೇಶ ಪತ್ರ ಡೌನ್‌ಲೋಡ್ ಮಾಡಲು ತಾಂತ್ರಿಕ ಸಮಸ್ಯೆ ಎದುರಾದಲ್ಲಿ ಹೆಲ್ಪ್ ಲೈನ್ ಸಂಖ್ಯೆ 18005728707 ಅನ್ನು ಸಂಪರ್ಕಿಸಬಹುದು.

  • RERA : ಪರಿವೀಕ್ಷಣಾ ಸಮಾಲೋಚಕರ ಹುದ್ದೆಗೆ ಅರ್ಜಿ ಆಹ್ವಾನ

    ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದಲ್ಲಿ ಪ್ರವರ್ತಕರು/ ಅಭಿವೃದ್ಧಿದಾರರು ಯೋಜನೆಗಳನ್ನು ನೋಂದಣಿ ಮಾಡಿಸದೇ ನಿವೇಶನ/ ಫ್ಲ್ಯಾಟ್ ಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವುದು ಕಂಡು ಬಂದಿದ್ದು, ಪ್ರಾಧಿಕಾರದಲ್ಲಿ ನೋಂದಾಯಿಸದಿರುವ ಯೋಜನೆಗಳ ಸ್ಥಳ ಪರಿಶೀಲನೆಗಾಗಿ ಪರಿವೀಕ್ಷಣಾ ತಂಡಗಳ ರಚಿಸುವ ಸಲುವಾಗಿ, ಈ ಕೆಳಕಂಡ ನಿವೃತ್ತ ಅಧಿಕಾರಿಗಳನ್ನೊಂಡ ಪರಿವೀಕ್ಷಣಾ ಸಮಾಲೋಚಕರ ಹುದ್ದೆಗೆ ಗುತ್ತಿಗೆ ಆಧಾರದಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿರುತ್ತದೆ.

    ಸಮಿತಿಯ ಸದಸ್ಯರು : 1. ಸಹಾಯಕ ಕಾರ್ಯಪಾಲಕ ಅಭಿಯಂತರರು/ ಸಹಾಯಕ ಅಭಿಯಂತರರು ( ನಿವೃತ್ತ ), 2. ತಹಶಿಲ್ದಾರ್ ( ನಿವೃತ್ತ) 3. ಸಿವಿಲ್ ಪೊಲೀಸ್ ನಿರೀಕ್ಷಕರು ( ನಿವೃತ್ತ)

    ಸಹಾಯಕ ಕಾರ್ಯಪಾಲಕ‌ ಅಭಿಯಂತರರು / ಸಹಾಯಕ ಅಭಿಯಂತರರು ( ನಿವೃತ್ತ) ವಿದ್ಯಾರ್ಹತೆ : ಬಿಇ( ಸಿವಿಲ್), ಅರ್ಹತೆ : ರಾಜ್ಯ ಸರಕಾರದ ಇಲಾಖೆಗಳಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರರು / ಸಹಾಯಕ ಇಂಜಿನಿಯರ್ ಆಗಿ ಕನಿಷ್ಠ 05 ವರ್ಷಗಳ ಅನುಭವ ಹೊಂದಿರಬೇಕು. ವಯಸ್ಸು 62 ವರ್ಷಕ್ಕಿಂತ ಮೀರಿರಬಾರದು.

    ತಹಶಿಲ್ದಾರ್ : ಈ ಹುದ್ದೆಯಲ್ಲಿ ರಾಜ್ಯ ಸರಕಾರದಲ್ಲಿ ಕನಿಷ್ಠ 05 ವರ್ಷಗಳ ಸೇವಾ ಅನುಭವ ಹೊಂದಿರಬೇಕು. ವಯಸ್ಸು 62 ವರ್ಷಕ್ಕಿಂತ ಮೀರಿರಬಾರದು.

    ಸಿವಿಲ್ ಪೊಲೀಸ್ ನಿರೀಕ್ಷಕರು : ರಾಜ್ಯ ಸರಕಾರಲ್ಲಿ ಕನಿಷ್ಠ 05 ವರ್ಷಗಳ ಸೇವಾ ಅನುಭವ ಹೊಂದಿರಬೇಕು. ವಯಸ್ಸು 62 ವರ್ಷಕ್ಕಿಂತ ಮೀರಿರಬಾರದು.

    ಸದರಿ ಗುತ್ತಿಗೆ ನೇಮಕಾತಿಯು ತಾತ್ಕಾಲಿಕವಾಗಿದ್ದು, ಗುತ್ತಿಗೆ ಅವಧಿಯನ್ನು ಮುಂದುವರಿಸುವ ಅಥವಾ ರದ್ದುಪಡಿಸುವ ಅಧಿಕಾರವನ್ನು ಪ್ರಾಧಿಕಾರವು ಹೊಂದಿರುತ್ತದೆ.

    ಗೌರವಧನ ಮತ್ತು ಇತರೆ ಸೌಲಭ್ಯಗಳನ್ನು ಪ್ರತ್ಯೇಕವಾಗಿ ನಿಗದಿಪಡಿಸಲಾಗುವುದು. ಅರ್ಹ ನಿವೃತ್ತ ಅಧಿಕಾರಿಗಳು ಆನ್ಲೈನ್ ಮುಖಾಂತರ ಅಥವಾ ನೋಂದಾಯಿತ ಅಂಚೆ ಮೂಲಕ ದಿನಾಂಕ : 10.08.2021 ರ ಸಂಜೆ 5.00 ಗಂಟೆಯೊಳಗೆ ಮೇಲ್ಕಂಡ ಕಚೇರಿಗೆ ಅರ್ಜಿ ಸಲ್ಲಿಸತಕ್ಕದ್ದು.

    ಇ- ಮೇಲ್ : [email protected]

    ಅರ್ಜಿ ಸಲ್ಲಿಸುವ ನಿವೃತ್ತ ಅಧಿಕಾರಿಗಳು ಲಗತ್ತಿಸಲಾದ ಅರ್ಜಿ ನಮೂನೆಯಲ್ಲಿ ಸಲ್ಲಿಸತಕ್ಕದ್ದು. ದಾಖಲಾತಿಗಳನ್ನು ಸ್ವಯಂ ದೃಢೀಕರಿಸಬೇಕು ಹಾಗೂ ಅಪೂರ್ಣ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಲಕೋಟೆಯ ಮೇಲೆ ” ಗುತ್ತಿಗೆ ಆಧಾರದ ಮೇಲೆ ಪರಿವೀಕ್ಷಣಾ ಸಮಾಲೋಚಕರ ಹುದ್ದೆಗೆ ಅರ್ಜಿ ” ಎಂದು ನಮೂದಿಸುವುದು.