Blog

  • Canara Bank: ಕೆನರಾ ಬ್ಯಾಂಕ್‌ನಲ್ಲಿ ಉದ್ಯೋಗ; ಆಸಕ್ತರು ಈ ಕೂಡಲೇ ಅಪ್ಲೈ ಮಾಡಿ

    Canara Bank: ಕೆನರಾ ಬ್ಯಾಂಕ್‌ನಲ್ಲಿ ಉದ್ಯೋಗ; ಆಸಕ್ತರು ಈ ಕೂಡಲೇ ಅಪ್ಲೈ ಮಾಡಿ

    Canara Bank Recruitment 2024: ಕೆನರಾ ಬ್ಯಾಂಕ್‌ನಲ್ಲಿ ಕೆಲಸ ಮಾಡಲು ಇಚ್ಛೆ ಪಡುವ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ. ಕೆನರಾ ಬ್ಯಾಂಕ್‌ ಖಾಲಿ ಇರುವ ಒಂದು ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಿದ್ದು, ಆಸಕ್ತರು ಈ ಕೆಳಗೆ ನೀಡಲಾದ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಸೆಕ್ರೆಟರಿ-ಅಕೌಂಟ್ಸ್‌ ಮತ್ತು ಅಡ್ಮಿನಿಸ್ಟೇಷನ್‌ ಹುದ್ದೆ ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಿದೆ. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳು ಕೆನರಾ ಬ್ಯಾಂಕಿನ ಖಾತೆಗಳು ಮತ್ತು ಆಡಳಿತ ಪ್ರಕ್ರಿಯೆಯನ್ನು ನಿರ್ವಹಿಸಬೇಕು. ಅರ್ಜಿ ಸಲ್ಲಿಕೆಗೆ ಜೂನ್‌ 3, 2024 ಕೊನೆಯ ದಿನಾಂಕವಾಗಿದ್ದು, 12 ತಿಂಗಳ ಪ್ರೊಬೆಷನರಿ ಅವಧಿ ಇರಲಿದ್ದು, ಈ ಕೂಡಲೇ ಅರ್ಜಿ ಸಲ್ಲಿಸಿ.

    ಪ್ರಮುಖ ದಿನಾಂಕಗಳು;
    ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: 03-06-2024

    ಹುದ್ದೆಯ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ;
    ಸಂಸ್ಥೆ ಹೆಸರು: ಕೆನರಾ ಬ್ಯಾಂಕ್‌ ತನ್ನಲ್ಲಿ ಖಾಲಿ ಇರುವ ಸೆಕ್ರೆಟರಿ-ಅಕೌಂಟ್ಸ್‌ ಮತ್ತು ಅಡ್ಮಿನಿಸ್ಟ್ರೇಷನ್‌ (Secretary- Accounts and Administration) ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಿದೆ.

    ವಯೋಮಿತಿ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿಯು ಕನಿಷ್ಠ 28 ವರ್ಷ. ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳು, ಇತರ ವರ್ಗಗಳಿಗೆ 25 ಗರಿಷ್ಠ ವಯೋಮಿತಿಯನ್ನು ನಿಗದಿ ಮಾಡಲಾಗಿದೆ.

    ವಿದ್ಯಾಭ್ಯಾಸ: ಬಿಕಾಂ ಪದವಿಯನ್ನು ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಜೊತೆಗೆ ಕಂಪ್ಯೂಟರ್‌ ಜ್ಞಾನದ ಅಗತ್ಯವಿರಬೇಕು.

    ಅನುಭವ: ಲೆಕ್ಕಪರಿಶೋಧಕ ಸಾಫ್ಟ್‌ವೇರ್‌ ಜ್ಞಾನದೊಂದಿಗೆ ಖಾತೆಗಳು ಮತ್ತು ಸಾಮಾನ್ಯ ಆಡಳಿತವನ್ನು ನಿರ್ವಹಿಸುವಲ್ಲಿ ಎರಡು ವರ್ಷಗಳ ಅನುಭವ ಇರಬೇಕು.

    ವೇತನ: ಮೇಲೆ ತಿಳಿಸಿದ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.30000 ವೇತನ ಇರಲಿದೆ.

    ಅರ್ಜಿ ಶುಲ್ಕ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ರೂ.300 ಅರ್ಜಿ ಶುಲ್ಕವಿರಲಿದೆ. ಇತರೆ ಅಭ್ಯರ್ಥಿಗಳಿಗೆ ರೂ.500 ಅರ್ಜಿ ಶುಲ್ಕ ಪಾವತಿ ಮಾಡಬೇಕು.

    ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್‌ ಮಾಡಿ ಶೈಕ್ಷಣಿಕ ಅರ್ಹತೆ ಮತ್ತು ಅನುಭವದ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. ನೇರ ಸಂದರ್ಶದನ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್‌ ಕ್ಲಿಕ್‌ ಮಾಡಿ

  • NIT Surathkal Jobs: ಮಂಗಳೂರು-ಸುರತ್ಕಲ್‌ನಲ್ಲಿ ಕೆಲಸ ಇದೆ; ಮಾಸಿಕ ರೂ.35 ಸಾವಿರ ಸಂಬಳ,ಅರ್ಜಿ ಸಲ್ಲಿಕೆಗೆ ಜೂ.2,2024 ಕೊನೆಯ ದಿನಾಂಕ

    NIT Surathkal Jobs: ಮಂಗಳೂರು-ಸುರತ್ಕಲ್‌ನಲ್ಲಿ ಕೆಲಸ ಇದೆ; ಮಾಸಿಕ ರೂ.35 ಸಾವಿರ ಸಂಬಳ,ಅರ್ಜಿ ಸಲ್ಲಿಕೆಗೆ ಜೂ.2,2024 ಕೊನೆಯ ದಿನಾಂಕ

    NIT Karnataka Recruitment 2024: ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕವು ಇಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಒಟ್ಟು 01 ಹುದ್ದೆ ಖಾಲಿ ಇದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಪ್ರಾಜೆಕ್ಟ್ ಅಸೋಸಿಯೇಟ್ ಪೋಸ್ಟ್‌ಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಸುರತ್ಕಲ್ – ಕರ್ನಾಟಕ ಸರ್ಕಾರದಲ್ಲಿ ಉದ್ಯೋಗ ಮಾಡಲು ಬಯಸುವವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಪ್ರಾಜೆಕ್ಟ್‌ ಅಸೋಸಿಯೇಟ್‌ ಹುದ್ದೆಗೆ ಅರ್ಜಿ ಸಲ್ಲಿಸಲು 02-Jun-2024 ಕೊನೆಯ ದಿನಾಂಕವಾಗಿದ್ದು, ಅಭ್ಯರ್ಥಿಗಳು ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

    ಪ್ರಮುಖ ದಿನಾಂಕಗಳು
    ಅಧಿಸೂಚನೆ ಬಿಡುಗಡೆಗೊಂಡ ದಿನಾಂಕ; 22-05-2024
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ; 02-06-2024

    ಹುದ್ದೆಯ ಕುರಿತ ಮಾಹಿತಿ ಇಲ್ಲಿದೆ;
    ಸಂಸ್ಥೆಯ ಹೆಸರು: ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ (NIT ಕರ್ನಾಟಕ) ಇಲ್ಲಿ ಖಾಲಿ ಇರುವ ಪ್ರಾಜೆಕ್ಟ್‌ ಅಸೋಸಿಯೇಟ್‌ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.35,000 ವೇತನ ದೊರಕಲಿದೆ. ಈ ಹುದ್ದೆಗೆ ಸುರತ್ಕಲ್-ಕರ್ನಾಟಕದಲ್ಲಿ ಪೋಸ್ಟಿಂಗ್‌ ನಡೆಯಲಿದೆ.

    ವಿದ್ಯಾರ್ಹತೆ: NIT ಕರ್ನಾಟಕ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ ಮೆಕ್ಯಾನಿಕಲ್ / ಕೆಮಿಕಲ್ ಎಂಜಿನಿಯರಿಂಗ್‌ನಲ್ಲಿ M.E ಅಥವಾ M.Tech ಮಾಡಿರುವವರು ಅರ್ಜಿ ಸಲ್ಲಿಸಬಹುದು.

    ವಯೋಮಿತಿ: ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು NIT ಕರ್ನಾಟಕ ನಿಯಮಗಳ ಪ್ರಕಾರ ವಯಸ್ಸಿನ ಮಿತಿಯನ್ನು ಹೊಂದಿರಬೇಕು
    ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ ನಾರ್ಮ್ಸ್ ಪ್ರಕಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

    ಆಯ್ಕೆ ಪ್ರಕ್ರಿಯೆ: ಅರ್ಹತೆ, ಅನುಭವ, ಪರೀಕ್ಷಾ ಕಾರ್ಯಕ್ಷಮತೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಪ್ರಾಜೆಕ್ಟ್‌ ಅಸೋಸಿಯೇಟ್‌ ಹುದ್ದೆಗೆ ಆಯ್ಕೆ ಮಾಡಲಾಗುವುದು.

    ಅರ್ಜಿ ಸಲ್ಲಿಸುವುದು ಹೇಗೆ?
    ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆಫ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ಈ ಕೆಳಗೆ ನೀಡಿದ ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದು.
    ವಿಳಾಸ ವಿವರ ಇಲ್ಲಿದೆ;
    Dr. Vasudeva Madav, CSR Project Coordinator and Assistant Professor, Department of Mechanical Engineering, National Institute of Technology Karnataka, Surathkal or Email to [email protected] ಇಲ್ಲಿಗೆ 02-ಜೂನ್-2024 ರಂದು ಅಥವಾ ಮೊದಲು ತಲುಪಿಸಬೇಕು.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

  • NLC India Ltd Jobs: ಎನ್‌ಎಲ್‌ಸಿ ಇಂಡಿಯಾ ಲಿಮಿಟೆಡ್‌ನಲ್ಲಿ 239 ಕೆಲಸ ಖಾಲಿ ಇದೆ; ಐಟಿಐ, ಡಿಪ್ಲೋಮಾ ಪಾಸಾದವರಿಗೆ ಆದ್ಯತೆ

    NLC India Ltd Jobs: ಎನ್‌ಎಲ್‌ಸಿ ಇಂಡಿಯಾ ಲಿಮಿಟೆಡ್‌ನಲ್ಲಿ 239 ಕೆಲಸ ಖಾಲಿ ಇದೆ; ಐಟಿಐ, ಡಿಪ್ಲೋಮಾ ಪಾಸಾದವರಿಗೆ ಆದ್ಯತೆ

    NLC India Ltd Recruitment 2024: ನೈವೇಲಿ ಲಿಗ್ನೈಟ್‌ ಕಾರ್ಪೋರೇಷನ್‌ ಇಂಡಿಯಾ ಲಿಮಿಟೆಡ್‌ನಲ್ಲಿ ಇಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಒಟ್ಟು 239 ಹುದ್ದೆಗಳು ಖಾಲಿ ಇದೆ. ಇಂಡಸ್ಟ್ರಿಯಲ್‌ ಟ್ರೈನಿ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಹುದ್ದೆಯ ಕುರಿತ ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

    ಪ್ರಮುಖ ದಿನಾಂಕಗಳು;
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15-06-2024 ರ ಸಂಜೆ 5 ಗಂಟೆ ತನಕ

    ಹುದ್ದೆಗಳ ವಿವರ ಇಲ್ಲಿದೆ;
    ಇಂಡಸ್ಟ್ರಿಯಲ್‌ ಟ್ರೈನಿ/ಎಸ್‌ಎಂಇ ಅಂಡ್‌ ಟೆಕ್ನಿಕಲ್‌ -100 ಹುದ್ದೆಗಳು
    ಇಂಡಸ್ಟ್ರಿಯಲ್‌ ಟ್ರೈನಿ (ಮೈನ್ಸ್‌ ಅಂಡ್‌ ಮೈನ್ಸ್‌ ಸಪೋರ್ಟ್‌ ಸರ್ವೀಸ್‌)- 139 ಹುದ್ದೆಗಳು

    ವಿದ್ಯಾರ್ಹತೆ: ಇಂಡಸ್ಟ್ರಿಯಲ್‌ ಟ್ರೈನಿ/ಎಸ್‌ಎಂಇ ಅಂಡ್‌ ಟೆಕ್ನಿಕಲ್‌ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಡಿಪ್ಲೋಮಾ ತೇರ್ಗಡೆ ಹೊಂದಿರಬೇಕು.
    ಇಂಡಸ್ಟ್ರಿಯಲ್‌ ಟ್ರೈನಿ (ಮೈನ್ಸ್‌ ಅಂಡ್‌ ಮೈನ್ಸ್‌ ಸಪೋರ್ಟ್‌ ಸರ್ವೀಸ್‌) ಈ ಹುದ್ದೆಗೆ ಅರ್ಜಿ ಸಲ್ಲಿಸಲು ಎಸ್‌ಎಸ್‌ಎಲ್‌ಸಿ ಜೊತೆಗೆ ಐಟಿಐ ನಲ್ಲಿ ವಿವಿಧ ಟ್ರೇಡ್‌ನಲ್ಲಿ ತೇರ್ಗಡೆ ಹೊಂದಿರಬೇಕು.

    ವಯೋಮಿತಿ: ಮೇಲ್ಕಂಡ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿಯು 37ವರ್ಷ ಮೀರಿರಬಾರದು. ಒಬಿಸಿ-40 ವರ್ಷ, ಎಸ್‌/ಎಸ್‌ಟಿ ಅಭ್ಯರ್ಥಿಗಳಿಗೆ 42 ವರ್ಷವರೆಗೆ ಗರಿಷ್ಠ ವಯೋಮಿತಿ ನಿಗದಿ ಪಡಿಸಲಾಗಿದೆ.

    ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ತಮ್ಮ ಆಧಾರ್‌ಕಾರ್ಡ್‌, ವಿದ್ಯಾರ್ಹತೆ ದಾಖಲೆ, ಪಾಸ್‌ಪೋರ್ಟ್‌ ಅಳತೆಯ ಭಾವಚಿತ್ರ, ಇತರೆ ದಾಖಲೆಗಳು ಅಗತ್ಯ. ಈ ಹುದ್ದೆಯ ತರಬೇತಿ ಅವಧಿ 3 ವರ್ಷದ್ದಾಗಿರುತ್ತದೆ.

    ಸ್ಟೈಫೆಂಡ್‌ ವಿವರ ಈ ರೀತಿ ಇದೆ;
    ಇಂಡಸ್ಟ್ರಿಯಲ್‌ ಟ್ರೈನಿ/ಎಸ್‌ಎಂಇ ಅಂಡ್‌ ಟೆಕ್ನಿಕಲ್‌ ಹುದ್ದೆಗೆ ರೂ.18000-ಮೊದಲ ವರ್ಷ, ರೂ.20000 ಎರಡನೇ ವರ್ಷ, ರೂ.22000 ಮೂರನೇ ವರ್ಷ
    ಇಂಡಸ್ಟ್ರಿಯಲ್‌ ಟ್ರೈನಿ (ಮೈನ್ಸ್‌ ಅಂಡ್‌ ಮೈನ್ಸ್‌ ಸಪೋರ್ಟ್‌ ಸರ್ವೀಸ್‌) ಈ ಹುದ್ದೆಗೆ ರೂ.14,000 ಮೊದಲ ವರ್ಷ, ರೂ.16000 ಎರಡನೇ ವರ್ಷ, ರೂ.18000 ಮೂರನೇ ವರ್ಷ

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್‌ ಕ್ಲಿಕ್‌ ಮಾಡಿ

  • Banking Jobs: ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌ನಲ್ಲಿ ಹುದ್ದೆಗಳು ಖಾಲಿ ಇದೆ; ಮಾಸಿಕ ರೂ.40ಸಾವಿರ ಸಂಬಳ

    Banking Jobs: ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌ನಲ್ಲಿ ಹುದ್ದೆಗಳು ಖಾಲಿ ಇದೆ; ಮಾಸಿಕ ರೂ.40ಸಾವಿರ ಸಂಬಳ

    IOB Recruitment 2024: ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌ ಇಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಸರ್ಕಾರಿ ವ್ಯವಹಾರ ಫೆಸಿಲಿಟೇಟರ್ ಪೋಸ್ಟ್‌ಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಅರ್ಜಿಗಳನ್ನು ಆಹ್ವಾನಿಸಿದೆ. ಅಖಿಲ ಭಾರತ ಸರ್ಕಾರದಲ್ಲಿ ಕೆಲಸ ಮಾಡಲು ಇಚ್ಛಿಸುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. 10-Jun-2024 ರಂದು ಅಥವಾ ಮೊದಲು ಆಫ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

    ಪ್ರಮುಖ ದಿನಾಂಕಗಳು;
    ಅಧಿಸೂಚನೆ ಬಿಡುಗಡೆಗೊಂಡ ದಿನಾಂಕ; 21-05-2024
    ಆಫ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10-06-2024

    ಹುದ್ದೆಯ ಕುರಿತ ಹೆಚ್ಚಿನ ವಿವರಗಳು ಇಲ್ಲಿದೆ;
    ಬ್ಯಾಂಕ್ ಹೆಸರು: ಇಂಡಿಯನ್ ಓವರ್ಸೀಸ್ ಬ್ಯಾಂಕ್ (IOB) ಭಾರತದಾದ್ಯಂತ ತನ್ನ ಸಂಸ್ಥೆಯಲ್ಲಿ ಖಾಲಿ ಇರುವ ಸರ್ಕಾರಿ ವ್ಯವಹಾರ ಫೆಸಿಲಿಟೇಟರ್‌ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಿದ್ದು, ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.40000 ವೇತನ ದೊರಕಲಿದೆ.

    ವಿದ್ಯಾರ್ಹತೆ: IOB ನಿಯಮಗಳ ಪ್ರಕಾರ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದೆ.

    ವಯೋಮಿತಿ: ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 65 ವರ್ಷ ಮೀರಿರಬಾರದು. ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

    ಆಯ್ಕೆ ಪ್ರಕ್ರಿಯೆ: IOB ನಿಯಮಗಳ ಪ್ರಕಾರ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

    ಅರ್ಜಿ ಸಲ್ಲಿಸುವುದು ಹೇಗೆ?
    ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿದಾರರು ತಮ್ಮ ಭರ್ತಿ ಮಾಡಿದ ದಾಖಲೆಗಳನ್ನು Regional Offices, Indian Overseas Bank ಗೆ 10-Jun-2024 ಅಥವಾ ಮೊದಲು ಕಳುಹಿಸಬೇಕು.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

  • TCS Jobs: ಟಿಸಿಎಸ್‌ನಿಂದ ಸಾವಿರಾರು ಹುದ್ದೆಗಳಿಗೆ ಅರ್ಜಿ ಆಹ್ವಾನ

    TCS Jobs: ಟಿಸಿಎಸ್‌ನಿಂದ ಸಾವಿರಾರು ಹುದ್ದೆಗಳಿಗೆ ಅರ್ಜಿ ಆಹ್ವಾನ

    Tata Consultancy Services: ಟಿಸಿಎಸ್‌-ಟಾಟಾ ಕನ್ಸಲ್ಟೆನ್ಸಿ ಸರ್ವಿಸೆಸ್‌ ನಲ್ಲಿ ಹಲವು ಹುದ್ದೆಗಳು ಖಾಲಿ ಇದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ. ಸಾವಿರಾರು ಹುದ್ದೆಗಳಿಗೆ ಟಿಸಿಎಸ್‌ ಕಂಪನಿ ಅರ್ಜಿ ಆಹ್ವಾನಿಸುತ್ತಿದೆ. ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ, ಈ ಸುವರ್ಣಾವಕಾಶವನ್ನು ಮಿಸ್‌ ಮಾಡಿಕೊಳ್ಳಬೇಡಿ. ಟೆಕ್ನಿಕಲ್‌ ಫೀಲ್ಡ್‌, ಬ್ಯುಸಿನೆಸ್‌ ಫೀಲ್ಡ್‌ ನಲ್ಲಿ ಉದ್ಯೋಗ ಬಯಸುವವರು ಈ ಹುದ್ದೆಗೆ ಆನ್‌ಲೈನ್‌ ಮೂಲಕ ಈ ಕೂಡಲೇ ಅರ್ಜಿ ಸಲ್ಲಿಸಿ.

    ಪ್ರಮುಖ ದಿನಾಂಕಗಳು
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮೇ-31, ಜೂನ್‌-29,ಜುಲೈ 30 (ಒಂದೊಂದು ಹುದ್ದೆಯ ಅರ್ಜಿಗೆ ಕೊನೆಯ ದಿನಾಂಕ)

    ಹುದ್ದೆಯ ಕುರಿತು ಹೆಚ್ಚಿನ ವಿವರ ಇಲ್ಲಿದೆ;
    ಹುದ್ದೆ ಹೆಸರು; ಟಾಟಾ ಕನ್ಸಲ್ಟೆನ್ಸಿ ಸರ್ವಿಸೆಸ್‌ ಲಿಮಿಟೆಡ್‌ ಐಟಿ ಇನ್‌ಪ್ರಾಸ್ಟ್ರಕ್ಚರ್‌ ಸರ್ವಿಸ್‌, ಟೆಕ್ನಾಲಜಿ, ಬ್ಯುಸಿನೆಲಸ್‌ ಪ್ರೊಸೆಸ್‌ ಸರ್ವಿಸ್‌ ಸೇರಿ ವಿವಿಧ ವಿಭಾಗಗಳಲ್ಲಿ ಅಗತ್ಯ ಇರುವ ಹುದ್ದೆಗೆ ಅರ್ಜಿ ಆಹ್ವಾನಿಸಿದೆ.

    ಯಾವೆಲ್ಲ ಹುದ್ದೆಗಳು ಖಾಲಿ ಇದೆ?
    ವೈರ್‌ಲೈನ್‌ – ವೈರ್‌ಲೆಸ್ ನೆಟ್‌ವರ್ಕ್‌ ಸೆಕ್ಯೂರಿಟಿ
    ಆಪರೇಷನ್ ಎನೇಬಲ್ಮೆಂಟ್ -ಹ್ಯೂಮನ್ ರಿಸೋರ್ಸ್
    ಇಪಿ ಡ್ರೈವ್
    ಆಪರೇಷನ್‌ ಸ್ಪೆಷಲಿಸ್ಟ್‌
    ಎಂಎಫ್‌ಜಿ ಇಯು ಡ್ರೈವ್
    ಎನ್‌ಜಿಎಂ ಎಪಿಎಸಿ ಬಿಎಫ್‌ಎಸ್‌
    ಕಸ್ಟಮರ್ ಸರ್ವೀಸ್
    ಆಕ್ಟಿವ್ ಡೈರೆಕ್ಟರಿ ಡೈರೆಕ್ಟರಿ
    ಎಸ್‌ಸಿಸಿಎಂ
    ವಿಂಡೋಸ್ ಅಡ್ಮಿನ್
    ಜಾವ ಡೆವಲಪರ್
    ಪಬ್ಲಿಕ್ ಕ್ಲೌಡ್ ಎಡಬ್ಲ್ಯೂಎಸ್ ಅಡ್ಮಿನ್
    ಬ್ಯಾಕಪ್ ಅಡ್ಮಿನ್
    ಸ್ಟೋರೇಜ್ ಅಡ್ಮಿನ್
    DevOps Admin
    ಮಿಡಲ್‌ವೇರ್ ಅಡ್ಮಿನ್
    ಓಪೆನ್‌ಶಿಫ್ಟ್‌ ಅಡ್ಮಿನ್
    ನೆಟ್‌ವರ್ಕ್ ಅಡ್ಮಿನ್
    ಡಾಟಾಬೇಸ್ ಅಡ್ಮಿನ್
    ಇಎಲ್‌ಕೆ ಅಡ್ಮಿನ್
    ಸೆಕ್ಯೂರಿಟಿ ಎಸ್‌ಎಂಇ
    ಟೀಮ್‌ಸೆಂಟರ್
    ಲಿನಕ್ಸ್‌ ಅಡ್ಮಿನ್
    ಮೆಕ್ಯಾನಿಕಲ್ ಡಿಸೈನ್
    ಸರ್ವೀಸ್‌ನೌ ಡೆವಲಪರ್
    ಓಪೆನ್‌ಸ್ಟಾಕ್‌ ಅಡ್ಮಿನ್
    ನೆಟ್‌ವರ್ಕ್‌ ಟೆಸ್ಕಿಂಗ್ ಅಂಡ್ ಆಟೋಮೇಷನ್
    ಪ್ರೋಗ್ರೆಸ್ ಡಾಟಾಬೇಸ್ ಅಡ್ಮಿನಿಸ್ಟ್ರೇಟರ್
    ಜಾವ ಫುಲ್‌ಸ್ಟಾಕ್ ಡೆವಲಪರ್

    ಮೇಲೆ ತಿಳಿಸಿದ ಹುದ್ದೆಗಳಿಗೆ ಚೆನ್ನೈ, ಹೈದರಾಬಾದ್‌, ಎನ್‌ಸಿಆರ್‌, ಬೆಂಗಳೂರು, ಪುಣೆ, ಅಹಮದಾಬಾದ್‌, ಮುಂಬೈ ಹಾಗೂ ಇತರೆ ಹಲವು ನಗರಗಳಲ್ಲಿ ನೇಮಕ ಮಾಡಲಾಗುವುದು.

    ವಿದ್ಯಾರ್ಹತೆ: ಡಿಪ್ಲೊಮ, ಇಂಜಿನಿಯರಿಂಗ್ ಪದವಿ, ಬಿ.ಟೆಕ್, ಎಂ.ಟೆಕ್, ಎಂಇ, ಎಂಬಿಎ ಪಾಸ್‌ ಮಾಡಿದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

    ಅನುಭವ: ಒಂದು ವರ್ಷದಿಂದ 11 ವರ್ಷದವರೆಗೆ ಈ ಮೇಲೆ ತಿಳಿಸಿದ ವಿವಿಧ ವಿಭಾಗಗಳಲ್ಲಿ ಕರ್ತವ್ಯ ಅನುಭವ ಇರುವವರು ಅರ್ಜಿ ಸಲ್ಲಿಸಬಹುದು. ಹುದ್ದೆವಾರು ಕಾರ್ಯಾನುಭವವನ್ನು ಟಿಸಿಎಸ್‌ ಕರಿಯರ್‌ ಪೇಜ್‌ನಲ್ಲಿ ಅಭ್ಯರ್ಥಿಗಳು ಚೆಕ್‌ ಮಾಡಿಕೊಳ್ಳಬಹುದು.

    ಅರ್ಜಿ ಸಲ್ಲಿಸುವುದು ಹೇಗೆ?
    ಅಭ್ಯರ್ಥಿಗಳು ಈ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ ಹುದ್ದೆಯ ಅರ್ಜಿ ಸಲ್ಲಿಕೆಯ ಕುರಿತ ವಿವರಗಳನ್ನು ತಿಳಿದುಕೊಳ್ಳಬಹುದು. ಯಾವ್ಯಾವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ ಎಂಬುವುದನ್ನು ಇಲ್ಲಿ ನೀಡಲಾದ ಲಿಂಕ್‌ ಮೂಲಕ ತಿಳಿದುಕೊಳ್ಳಬಹುದು. ಜುಲೈ 31, 2024 ರವರೆಗೆ ಅರ್ಜಿ ಸಲ್ಲಿಸಲು ಹಲವು ಹುದ್ದೆಗಳಿಗೆ ಅವಕಾಶವಿದೆ.

  • NIT Karnataka Jobs 2024: ಪ್ರಾಜೆಕ್ಟ್‌ ಅಸೋಸಿಯೇಟ್‌ ಹುದ್ದೆಗೆ ಅರ್ಜಿ ಆಹ್ವಾನ; ಅರ್ಹತೆ, ವೇತನ ವಿವರ ಇಲ್ಲಿದೆ

    NIT Karnataka Jobs 2024: ಪ್ರಾಜೆಕ್ಟ್‌ ಅಸೋಸಿಯೇಟ್‌ ಹುದ್ದೆಗೆ ಅರ್ಜಿ ಆಹ್ವಾನ; ಅರ್ಹತೆ, ವೇತನ ವಿವರ ಇಲ್ಲಿದೆ

    NIT Karnatka Recruitment 2024: ಕರ್ನಾಟಕದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (NIT) ಇಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಪ್ರಾಜೆಕ್ಟ್ ಅಸೋಸಿಯೇಟ್ ಹುದ್ದೆ ಭರ್ತಿ ಮಾಡಲಾಗುತ್ತಿದ್ದು, ಹುದ್ದೆ ಸಂಖ್ಯೆಯನ್ನು ಇನ್ನೂ ನಿರ್ದಿಷ್ಟ ಪಡಿಸಿಲ್ಲ. ಸುರತ್ಕಲ್ – ಕರ್ನಾಟಕ ಸರ್ಕಾರದಲ್ಲಿ ಈ ಹುದ್ದೆಗೆ ಪೋಸ್ಟಿಂಗ್‌ ನಡೆಯಲಿದ್ದು, ಅಭ್ಯರ್ಥಿಗಳು 20-Jun-2024 ರಂದು ಅಥವಾ ಮೊದಲು ಇಮೇಲ್ ಮೂಲಕ ಅರ್ಜಿ ಸಲ್ಲಿಸಬಹುದು.

    ಪ್ರಮುಖ ದಿನಾಂಕಗಳು:
    ಅಧಿಸೂಚನೆಯನ್ನು ಬಿಡುಗಡೆ ಮಾಡಿದ ದಿನಾಂಕ: 20-05-2024
    ಇ-ಮೇಲ್ ಕಳುಹಿಸಲು ಕೊನೆಯ ದಿನಾಂಕ: 20-ಜೂನ್-2024

    ಹುದ್ದೆಯ ವಿವರ ಇಲ್ಲಿದೆ;
    ಸಂಸ್ಥೆಯ ಹೆಸರು: ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ (NIT ಕರ್ನಾಟಕ) ಇಲ್ಲಿ ಪ್ರಾಜೆಕ್ಟ್‌ ಅಸೋಸಿಯೇಟ್‌ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.25,000 ವೇತನ ನಿಗದಿಪಡಿಸಲಾಗಿದೆ.

    ವಿದ್ಯಾರ್ಹತೆ: ಪ್ರಾಜೆಕ್ಟ್‌ ಅಸೋಸಿಯೇಟ್‌ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯಗಳಿಂದ ಕಂಪ್ಯೂಟರ್ ಸೈನ್ಸ್/ಮಾಹಿತಿ ವಿಜ್ಞಾನದಲ್ಲಿ B.E ಅಥವಾ B.Tech ತೇರ್ಗಡೆ ಹೊಂದಿರಬೇಕು.

    ವಯೋಮಿತಿ: ಪ್ರಾಜೆಕ್ಟ್‌ ಅಸೋಸಿಯೇಟ್‌ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು NIT ಕರ್ನಾಟಕ ನಿಯಮಗಳ ಪ್ರಕಾರ ವಯಸ್ಸಿನ ಮಿತಿಯನ್ನು ಹೊಂದಿರಬೇಕು ಎಂದು ಅಧಿಸೂಚನೆಯಲ್ಲಿ ಸೂಚಿಸಲಾಗಿದೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ ನಾರ್ಮ್ಸ್ ಪ್ರಕಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

    ಆಯ್ಕೆ ಪ್ರಕ್ರಿಯೆ: ಮೇಲ್ಕಂಡ ಹುದ್ದೆಗೆ ಅಭ್ಯರ್ಥಿಗಳನ್ನು ವಿದ್ಯಾರ್ಹತೆ, ಅನುಭವ, ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

    ಅರ್ಜಿ ಸಲ್ಲಿಸುವುದು ಹೇಗೆ?
    ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ನಿಗದಿತ ನಮೂನೆಯಲ್ಲಿ ಇ-ಮೇಲ್ ಐಡಿ, [email protected] ಗೆ 20-Jun-2024 ಅಥವಾ ಮೊದಲು ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ಕಳುಹಿಸಬೇಕು.

    ಅಧಿಕೃತ ವೆಬ್‌ಸೈಟ್: nitk.ac.in
    ನೋಟಿಫಿಕೇಶನ್‌ಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ