Blog

  • DCC Bank Recruitment 2024: ಮಂಡ್ಯ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನಲ್ಲಿ ಜಾಬ್ಸ್‌, ಕಿರಿಯ ಸಹಾಯಕ, ವಾಹನ ಚಾಲಕ, ಅಟೆಂಡರ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ

    DCC Bank Recruitment 2024: ಮಂಡ್ಯ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನಲ್ಲಿ ಜಾಬ್ಸ್‌, ಕಿರಿಯ ಸಹಾಯಕ, ವಾಹನ ಚಾಲಕ, ಅಟೆಂಡರ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಡಿಸಿಸಿ ಬ್ಯಾಂಕ್‌ನಲ್ಲಿ ಉದ್ಯೋಗ ಪಡೆಯಲು ಬಯಸುವುವರಿಗೆ ಸಿಹಿ ಸುದ್ದಿ. ಮಂಡ್ಯ ಡಿಸಿಸಿ ಬ್ಯಾಂಕ್‌ನಲ್ಲಿ ಉದ್ಯೋಗಾವಕಾಶವಿದೆ. ಕಿರಿಯ ಸಹಾಯಕ, ವಾಹನ ಚಾಲಕ, ಅಟೆಂಡರ್‌ ಹುದ್ದೆಗಳಿಗೆ ಮಂಡ್ಯ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ? ಅರ್ಜಿ ಸಲ್ಲಿಸಲು ವಯೋಮಿತಿ ಏನು? ಅರ್ಜಿ ಶುಲ್ಕ ಎಷ್ಟು? ಅರ್ಜಿ ಸಲ್ಲಿಸಲು ಕೊನೆಯ ದಿನ ಯಾವಾಗ? ಯಾವ ಹುದ್ದೆಗೆ ಏನು ವಿದ್ಯಾರ್ಹತೆ ಬಯಸಲಾಗಿದೆ? ಇತ್ಯಾದಿ ವಿವರಗಳನ್ನು ಸರಕಾರಿಜಾಬ್ಸ್‌.ಕಾಂ ಇಲ್ಲಿ ನೀಡಿದೆ.

    ಪ್ರಮುಖ ದಿನಾಂಕಗಳು ಮತ್ತು ಮಾಹಿತಿ

    ಲಭ್ಯ ಇರುವ ಹುದ್ದೆಗಳ ಸಂಖ್ಯೆ: 94
    ಮಂಡ್ಯ ಡಿಸಿಸಿ ಬ್ಯಾಂಕ್‌ಗೆ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: ಜನವರಿ 18, 2024
    ಮಂಡ್ಯ ಡಿಸಿಸಿ ಬ್ಯಾಂಕ್‌ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಫೆಬ್ರವರಿ 16, 2024
    ಅರ್ಜಿ ಸಲ್ಲಿಸುವುದು ಹೇಗೆ?: ಆನ್‌ಲೈನ್‌ ಮೂಲಕ
    ಅರ್ಜಿ ಸಲ್ಲಿಸಲು ವೆಬ್‌ಸೈಟ್‌: www.mandyadccbank.com
    ಸಹಾಯವಾಣಿ ಸಂಖ್ಯೆ: 91085328218
    ಮಂಡ್ಯ ಡಿಸಿಸಿ ಬ್ಯಾಂಕ್‌ ವಿಳಾಸ: HEAD OFFICE BRANCH Post Box No: 14. Market Road, Mandya, Mandya

    ವಿದ್ಯಾರ್ಹತೆ ಮತ್ತು ಇತರೆ ಅರ್ಹತೆಗಳು

    ಮಾಹಿತಿ ತಂತ್ರಜ್ಞಾನ ಮುಖ್ಯ ವ್ಯವಸ್ಥಾಪಕರು ಗ್ರೇಡ್‌ 1 ಹುದ್ದೆಗಳ ಸಂಖ್ಯೆ 1. ವಿದ್ಯಾರ್ಹತೆ: ಅಂಗೀಕೃತ ವಿಶ್ವ ವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್ನಲ್ಲಿ ಎಂ.ಟೆಕ್ ಸ್ನಾತಕೊತ್ತರ ಪದವಿಯಲ್ಲಿ ತೇರ್ಗಡೆಯಾಗಿರಬೇಕು. ಕನ್ನಡವನ್ನು ಓದುವ ಸಾಮರ್ಥ್ಯದ ಜೊತೆಗೆ ಕನ್ನಡದ ಜ್ಞಾನ, ಬರೆಯುವಿಕೆ, ಕನ್ನಡವನ್ನು ಸ್ವಚ್ಛವಾಗಿ ಮಾತನಾಡಬೇಕು ಮತ್ತು ಅರ್ಥ ಮಾಡಿಕೊಳ್ಳಬೇಕು ಎಂದು ಅಧಿಸೂಚನೆ ತಿಳಿಸಿದೆ.

    ಡಿಸಿಸಿ ಬ್ಯಾಂಕ್‌ ಮಂಡ್ಯದಲ್ಲಿ ಅತ್ಯಧಿಕ ಸಂಖೆಯ ಕಿರಿಯ ಸಹಾಯಕರ ಹುದ್ದೆಗಳಿವೆ. ಒಟ್ಟು ಕಿರಿಯ ಸಹಾಯಕರ 70 ಹುದ್ದೆಗಳಿಗೆ ಪಿಯುಸಿ ಓದಿರುವವರು ಅರ್ಜಿ ಸಲ್ಲಿಸಬಹುದು. ಕನ್ನಡದಲ್ಲಿ ಓದಲು, ಬರೆಯಲು ತಿಳಿದಿರಬೇಕು, ಕಂಪ್ಯೂಟರ್‌ ಜ್ಞಾನ ಇರಬೇಕು.

    ವಾಹನ ಚಾಲಕ 2 ಹುದ್ದೆಗಳಿವೆ. ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆ ಬಯಸಲಾಗಿದೆ. ಕನ್ನಡ ತಿಳಿದಿರಬೇಕು. ಡ್ರೈವಿಂಗ್‌ ಲೈಸನ್ಸ್‌ ಹೊಂದಿರಬೇಕು.

    21 ಅಟೆಂಡರ್‌ ಹುದ್ದೆಗಳಿವೆ. ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆ ಬಯಸಲಾಗಿದೆ. ಕನ್ನಡ ತಿಳಿದಿರಬೇಕು.

    ಮಂಡ್ಯ ಡಿಸಿಸಿ ಬ್ಯಾಂಕ್‌ ನೇಮಕ: ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ
    ಆಸಕ್ತ ಅರ್ಹ ಅಭ್ಯರ್ಥಿಗಳು www.mandyadccbank.com ವೆಬ್‌ಸೈಟ್‌ನಲ್ಲಿ ಡಿಸಿಸಿ ಬ್ಯಾಂಕ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಮೊದಲು ಅಧಿಸೂಚನೆ ಓದಿಕೊಳ್ಳಲು ಮರೆಯಬೇಡಿ.

  • ಕರ್ನಾಟಕ ಯುವ ನಿಧಿ ಯೋಜನೆ ಬಗ್ಗೆ ನಿಮಗೆಷ್ಟು ಗೊತ್ತು? ಸೇವಾ ಸಿಂಧು ಮೂಲಕ ಅರ್ಜಿ ಸಲ್ಲಿಕೆ ಹೇಗೆ, ಇಲ್ಲಿದೆ ವಿವರ

    ಕರ್ನಾಟಕ ಯುವ ನಿಧಿ ಯೋಜನೆ ಬಗ್ಗೆ ನಿಮಗೆಷ್ಟು ಗೊತ್ತು? ಸೇವಾ ಸಿಂಧು ಮೂಲಕ ಅರ್ಜಿ ಸಲ್ಲಿಕೆ ಹೇಗೆ, ಇಲ್ಲಿದೆ ವಿವರ

    ಕರ್ನಾಟಕ ಸರಕಾರವು ಕಾಂಗ್ರೆಸ್‌ ಚುನಾವಣಾ ಗ್ಯಾರಂಟಿಗಳಲ್ಲಿ ಯುವ ನಿಧಿ ಯೋಜನೆಯನ್ನು ಘೋಷಿಸಿತ್ತು. ಇದೀಗ ರಾಜ್ಯ ಸರಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ. ಅರ್ಹ ನಿರುದ್ಯೋಗಿ ಯುವಕರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಯುವ ನಿಧಿ ಯೋಜನೆ ಎಂದರೇನು? ಕರ್ನಾಟಕ ಯುವ ನಿಧಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? ಯುವ ನಿಧಿ ಯೋಜನಗೆ ಅರ್ಜಿ ಸಲ್ಲಿಸಲು ಅರ್ಹತೆಗಳೇನು? ಇತ್ಯಾದಿ ವಿವರ ತಿಳಿದುಕೊಳ್ಳೋಣ.

    ಕರ್ನಾಟಕ ಯುವ ನಿಧಿ ಯೋಜನೆ

    ಪದವಿ ಅಥವಾ ಡಿಪ್ಲೊಮಾ ಕೋರ್ಸ್‌ನಲ್ಲಿ ಉತ್ತೀರ್ಣರಾದ ನಿರುದ್ಯೋಗಿ ಯುವಕರಿಗೆ ಹಣಕಾಸಿನ ನೆರವು ನೀಡುವ ಯೋಜನೆ ಇದಾಗಿದೆ. ಯುವ ನಿಧಿ ಯೋಜನೆಯಡಿ , ನಿರುದ್ಯೋಗಿ ಪದವೀಧರರು ಎರಡು ವರ್ಷಗಳವರೆಗೆ ತಿಂಗಳಿಗೆ ರೂ.3,000 ಪಡೆಯುತ್ತಾರೆ. ಡಿಪ್ಲೊಮಾ ಹೊಂದಿರುವವರು ಎರಡು ವರ್ಷಗಳವರೆಗೆ ತಿಂಗಳಿಗೆ 1,500 ರೂಪಾಯಿ ಪಡೆಯುತ್ತಾರೆ. ಅರ್ಹ ಫಲಾನುಭವಿಗಳಿಗೆ ನೇರವಾಗಿ ಅವರ ಬ್ಯಾಂಕ್‌ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತದೆ. ಯೋಜನೆಯು ನಿರುದ್ಯೋಗಿ ಯುವಕರಿಗೆ ಹಣಕಾಸಿನ ನೆರವು ನೀಡುತ್ತದೆ, ಅವರ ಮೂಲಭೂತ ಅಗತ್ಯಗಳಾದ ಆಹಾರ, ಬಟ್ಟೆ ಮತ್ತು ವಸತಿಗಳನ್ನು ಪೂರೈಸಲು ಸಹಾಯ ಮಾಡುತ್ತದೆ. ಶಿಕ್ಷಣ ಮುಗಿದು ಉದ್ಯೋಗ ಹುಡುಕುವ ಹಂತದಲ್ಲಿ ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ.

    ಯುವ ನಿಧಿ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು?

    ಆಯಾ ಶೈಕ್ಷಣಿಕ ವರ್ಷದಲ್ಲಿ ಪದವಿ ಅಥವಾ ಡಿಪ್ಲೋಮಾ ಉತ್ತೀರ್ಣರಾಗಿರಬೇಕು. ಕರ್ನಾಟಕದ ನಿವಾಸಿಗಳು ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಪದವಿ ಅಥವಾ ಡಿಪ್ಲೊಮಾ ಪಾಸ್‌ ಆದ ಬಳಿಕ ಆರು ತಿಂಗಳವರೆಗೆ ಕೆಲಸ ಹೊಂದಿರಬಾರದು. ಎಸ್‌ಎಸ್‌ಎಲ್‌ಸಿ, ಪಿಯುಸಿ, ಡಿಪ್ಲೊಮಾ ಅಥವಾ ಪದವಿ ಅಂಕಪಟ್ಟಿ ಹೊಂದಿರಬೇಕು. ಆಧಾರ್‌ ಸಂಖ್ಯೆ ಬ್ಯಾಂಕ್‌ ಖಾತೆಗೆ ಜೋಡಣೆಯಾಗಿರಬೇಕು. ಈಗಾಗಲೇ ಉದ್ಯೋಗ ಪಡೆದವರು, ಸ್ವಂತ ಉದ್ಯೋಗ ಮಾಡುತ್ತಿರುವವರು ಅರ್ಜಿ ಸಲ್ಲಿಸಲು ಅರ್ಹರಲ್ಲ. ಉನ್ನತ ಶಿಕ್ಷಣ ಪಡೆಯುವವರೂ ಅರ್ಜಿ ಸಲ್ಲಿಸುವಂತೆ ಇಲ್ಲ. ಅಪ್ರೆಂಟಿಸ್‌ ತರಬೇತಿಯಲ್ಲಿರುವವರು ಅರ್ಜಿ ಸಲ್ಲಿಸುವಂತೆ ಇಲ್ಲ.

    ಯುವ ನಿಧಿ ಸ್ಕೀಮ್‌ಗೆ ಅರ್ಜಿ ಸಲ್ಲಿಸುವುದು ಹೇಗೆ?

    ಕರ್ನಾಟಕ ಸರಕಾರದ ಸೇವಾ ಸಿಂಧು ವೆಬ್‌ಸೈಟ್‌ನಲ್ಲಿ ಯುವ ನಿಧಿ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಬೇಕಾಗಿರುವ ಪ್ರಮುಖ ದಾಖಲೆಗಳು ಇಂತಿವೆ. ಆಧಾರ್‌ ಕಾರ್ಡ್‌ ಇರಬೇಕು. ನಿವಾಸ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಶೈಕ್ಷಣಿಕ ಅರ್ಹತೆಯ ದಾಖಲೆ ಇರಬೇಕು. ಇದರೊಂದಿಗೆ ಬ್ಯಾಂಕ್‌ ಖಾತೆ ಮಾಹಿತಿ ನೀಡಬೇಕು. ಆಧಾರ್‌ ಸಂಖ್ಯೆಗೆ ಬ್ಯಾಂಕ್‌ ಖಾತೆ ಸಂಖ್ಯೆ ಲಿಂಕ್‌ ಆಗಿರಬೇಕು. ಸೇವಾ ಸಿಂಧು ವೆಬ್‌ ಸೈಟ್‌ ವಿಳಾಸ: sevasindhugs.karnataka.gov.in

  • Agniveer Vayu Jobs: ಭಾರತೀಯ ವಾಯುಪಡೆಯಲ್ಲಿ ಅಗ್ನಿವೀರ್‌ ವಾಯು ಉದ್ಯೋಗಾವಕಾಶ, ಅರ್ಜಿ ಸಲ್ಲಿಸಲು ಫೆಬ್ರವರಿ 7 ಕೊನೆಯ ದಿನಾಂಕ

    Agniveer Vayu Jobs: ಭಾರತೀಯ ವಾಯುಪಡೆಯಲ್ಲಿ ಅಗ್ನಿವೀರ್‌ ವಾಯು ಉದ್ಯೋಗಾವಕಾಶ, ಅರ್ಜಿ ಸಲ್ಲಿಸಲು ಫೆಬ್ರವರಿ 7 ಕೊನೆಯ ದಿನಾಂಕ

    air force agniveer apply online: ಭಾರತೀಯ ವಾಯುಪಡೆಯು Agniveer Vayu ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸುವುದು ಹೇಗೆ? ವಯೋಮಿತಿ ಏನು? ಅರ್ಹತೆಗಳೇನಿರಬೇಕು? ವಿದ್ಯಾಭ್ಯಾಸ ಅಥವಾ ಶೈಕ್ಷಣಿಕ ಅರ್ಹತೆ ಏನು? ಅರ್ಜಿ ಸಲ್ಲಿಸುವ ಪ್ರಕ್ರಿಯೆ, ಅಗ್ನಿವೀರ್‌ ನೇಮಕದ ಅಧಿಸೂಚನೆ ಸೇರಿದಂತೆ ಹೆಚ್ಚಿನ ವಿವರ ಇಲ್ಲಿ ನೀಡಲಾಗಿದೆ.

    ಅರ್ಜಿ ಶುಲ್ಕ ಎಷ್ಟು?

    ಪರೀಕ್ಷಾ ಶುಲ್ಕ: 550 ರೂಪಾಯಿ ಮತ್ತು ಜಿಎಸ್‌ಟಿ. ಆನ್‌ಲೈನ್‌ ಪಾವತಿ ವಿಧಾನದ ಮೂಲಕ ಶುಲ್ಕ ಪಾವತಿಸಬಹುದು.

    ಪ್ರಮುಖ ದಿನಾಂಕಗಳು

    ಅರ್ಜಿ ಸಲ್ಲಿಸಲು ಮತ್ತು ಶುಲ್ಕ ಪಾವತಿಸಲು ಆರಂಭಿಕ ದಿನಾಂಕ: 17-01-2024
    ಅರ್ಜಿ ಸಲ್ಲಿಸಲು ಮತ್ತು ಶುಲ್ಕ ಪಾವತಿಸಲು ಕೊನೆಯ ದಿನಾಂಕ: 06-02-2024
    ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್‌ ಮೂಲಕ
    ವಯೋಮಿತಿ: 02-01-2004 ಮತ್ತು 02-07-2007 ಇಸವಿ ನಡುವೆ ಜನಿಸಿರಬೇಕು. ಈ ಎರಡು ದಿನಾಂಕಗಳನ್ನು ಒಳಗೊಂಡಂತೆ.
    ವಿದ್ಯಾರ್ಹತೆ ಏನು: 10+2 ಮತ್ತು ಡಿಪ್ಲೊಮಾ (ಸಂಬಂಧಪಟ್ಟ ಎಂಜಿನಿಯರಿಂಗ್‌ ವಿಷಯಗಳಲ್ಲಿ)
    ಎತ್ತರ ಎಷ್ಟಿರಬೇಕು?: ಪುರುಷರು- 152.5 ಮತ್ತು ಮಹಿಳೆಯರು: 152

    ನಿಮಗಿದು ಗೊತ್ತೆ?: ಸೈನಿಕರಾಗಬಯಸುವ ಯುವಕರ ಅರ್ಹತೆಯ ಮಾನದಂಡವನ್ನು ವಿಸ್ತರಿಸುವ ಉದ್ದೇಶದಿಂದ ಭಾರತೀಯ ಸೇನೆಯು ಅಗ್ನಿಪಥ್‌ ಯೋಜನೆಯ ನೇಮಕಾತಿ ನಿಯಮಗಳನ್ನು ಬದಲಾಯಿಸಿದೆ. ಇದರಿಂದಾಗಿ ಐಟಿಐ ಮತ್ತು ಪಾಲಿಟೆಕ್ನಿಕ್‌ನಲ್ಲಿ ಪದವಿ ಹೊಂದಿರುವವರ ನೇಮಕಾತಿಯೂ ಸಾಧ್ಯವಾಗಲಿದೆ.

    ಅಗ್ನಿವೀರ್‌ ನೇಮಕ ಎಂದರೇನು?

    ಕೇಂದ್ರ ಸರಕಾರವು 2022ರಲ್ಲಿ ಭಾರತೀಯ ಸೇನೆಗೆ ಸೈನಿಕರನ್ನು ನೇಮಕ ಮಾಡುವ ಅಗ್ನಿವೀರ್‌ ಯೋಜನೆಯನ್ನು ಪ್ರಾರಂಭಿಸಿತು. ಯೋಜನೆಯಡಿಯಲ್ಲಿ ಭೂ, ವಾಯು, ನೌಕೆ ಮೂರು ಸೇನಾ ಪಡೆಗಳಿಗೂ ನಾಲ್ಕು ವರ್ಷಗಳ ಅವಧಿಗೆ ನಿಯೋಜಿತ ಅಧಿಕಾರಿಗಳ ಶ್ರೇಣಿಗಿಂತ ಕೆಳಗಿರುವ ಸೈನಿಕರನ್ನು ನೇಮಿಸಿಕೊಳ್ಳಲಾಗುತ್ತದೆ. ಈ ಕಾರ್ಯಕ್ರಮದಡಿ ನೇಮಕಗೊಂಡ ಶೇ.25ರಷ್ಟು ಸೈನಿಕರನ್ನು ನಾಲ್ಕು ವರ್ಷಗಳ ನಂತರ ಕಾಯಂ ಮಾಡಿಕೊಳ್ಳಲಾಗುವುದು ಎಂದು ಸೇನೆ ತಿಳಿಸಿತ್ತು.

  • NLC Recruitment 2024: Apply for 632 Apprentice Posts, Salary, Education, Application Process Details

    Navratna” Public Sector Enterprise, Under the Ministry of Coal NLC India Limited invites application from eligible candidates with Graduation / Diploma courses and passed during 2019/2020/2021/2022 & 2023 for one year Apprenticeship Training under the Apprentices (Amendment) Act. Who are interested in the vacancy details Read full Details here.

    Job Name: NLC Apprentice
    No of Posts: 6

    Graduate Apprentices Salary: 15028/-
    Technician (Diploma) Apprentices Salary: 12524

    Graduate Apprentices Posts Details


    Mechanical Engineering 75
    Engineering 78
    Civil Engineering 27
    Instrumentation Engineering 15
    Chemical Engineering 9
    Mining Engineering 44
    Computer Science Engineering 47
    Electronics & Communication Engineering 5
    Pharmacy 14
    Graduate Apprentices Total Posts: 314

    Technician (Diploma) Apprentices Details
    Mechanical Engineering 95 12524/
    Electrical Engineering 94
    Civil Engineering 49
    Instrumentation Engineering 9
    Mining Engineering 25
    Computer Science Engineering 38
    Electronics & Communication Engineering 8
    Technician (Diploma) Apprentices Total Posts Total 318

    Educational Qualifications
    Graduate Apprentices

    • A Degree in Engineering or Technology (Full time) granted by a Statutory University in relevant discipline.
    • A Degree in Engineering or Technology (Full time) granted by an Institution empowered to grant such degree by an Act of Parliament in relevant discipline.
    • Graduate examination of Professional bodies (Full time) recognized by the State Government or Central Government as equivalent to above.
    • For Pharmacy: Bachelor of Pharmacy(B.Pharm) • Technician (Diploma) Apprentices:- • A Diploma in Engineering or technology (Full time) granted by a State Council or Board of Technical Education established by a State Government in relevant discipline.
    • A Diploma in Engineering or Technology (Full time) granted by a University in relevant discipline. • A Diploma in Engineering and Technology (Full time) granted by an Institution recognized by the State Government or Central Government as equivalent to above.

    How to Apply?: Online and Offline
    Apply online www.nlcindia.in Website.
    The Registration forms duly signed should be submitted by post to “The General Manager, Learning and Development Centre, N.L.C India Limited. Neyveli – 607 803”

  • Postal Department Recruitment 2022 ಅಂಚೆ ಇಲಾಖೆಯಲ್ಲಿ ಭರ್ಜರಿ ನೇಮಕ, 38,926 ಹುದ್ದೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ

    Postal Department Recruitment 2022 ಅಂಚೆ ಇಲಾಖೆಯಲ್ಲಿ ಭರ್ಜರಿ ನೇಮಕ, 38,926 ಹುದ್ದೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ

    Postal Department Recruitment 2022

    ಭಾರತೀಯ ಅಂಚೆ ಇಲಾಖೆಯು ಬಹಳಷ್ಟು ದಿನಗಳ ಬಳಿಕ ಭರ್ಜರಿ ನೇಮಕಕ್ಕೆ ಚಾಲನೆ ನೀಡಿದೆ. ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಒಟ್ಟು 38926 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಹುದ್ದೆಗಳ ವಿವರ, ಅರ್ಜಿ ಸಲ್ಲಿಸುವ ವಿಧಾನ, ವಿದ್ಯಾರ್ಹತೆ ಸೇರಿದಂತೆ ಅಂಚೆ ಇಲಾಖೆಯ ನೇಮಕದ ಕುರಿತು ಸಂಪೂರ್ಣ ವಿವರ ಇಲ್ಲಿದೆ.


    ಹುದ್ದೆಯ ಹೆಸರು: ಗ್ರಾಮೀಣ ಡಾಕ್ ಸೇವಕ್
    ಅರ್ಜಿ ಸಲ್ಲಿಸಲು ಆರಂಭ: ಮೇ 2, 2022
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜೂನ್ 6, 2022
    ಅರ್ಜಿ ಶುಲ್ಕ: 100 ರೂ, ಮಹಿಳಾ, ಎಸ್ ಸಿ ಮತ್ತು ಎಸ್ ಟಿ ಅಭ್ಯರ್ಥಿಗಳು ಯಾವುದೇ ಶುಲ್ಕ ಪಾವತಿಸಬೇಕಿಲ್ಲ
    ವಯೋಮಿತಿ: ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಮತ್ತು ಗರಿಷ್ಠ 40 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.
    ಕರ್ನಾಟಕದಲ್ಲಿರುವ ಒಟ್ಟು ಹುದ್ದೆ: 2410

    ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿಗೆ ವೆಬ್

    ಆನ್ ಲೈನ್ ರಿಜಿಸ್ಟ್ರೇಷನ್ https://indiapostgdsonline.in/gdsonlinec3p5/Registration_A.aspx

    https://indiapostgdsonline.gov.in/

    https://indiapostgdsonline.in/gdsonlinec3p5/reference.aspx

    ಗಮನಿಸಿ: ದೇಶದ ಬೃಹತ್ ನೇಮಕಾತಿಯಾಗಿರುವ ಕಾರಣ ಲಕ್ಷ ಲಕ್ಷ ಅಭ್ಯರ್ಥಿಗಳು ಭೇಟಿ ನೀಡುವ ಕಾರಣ ಆನ್ ಲೈನ್ ಲಿಂಕ್ ಸರ್ವರ್ ತೊಂದರೆಗಳು ಇರಬಹುದು. ಆಗಾಗ ಈ ಲಿಂಕ್ ಗಳಿಗೆ ಭೇಟಿ ನೀಡಿ ವೆಬ್ ಸೈಟ್ ಸರಿಯಾಗಿ ಕಾರ್ಯ ನಿರ್ವಹಿಸುವಾಗ ಹೆಸರು ನೋಂದಾಯಿಸಿ