Agniveer Vayu Jobs: ಭಾರತೀಯ ವಾಯುಪಡೆಯಲ್ಲಿ ಅಗ್ನಿವೀರ್‌ ವಾಯು ಉದ್ಯೋಗಾವಕಾಶ, ಅರ್ಜಿ ಸಲ್ಲಿಸಲು ಫೆಬ್ರವರಿ 7 ಕೊನೆಯ ದಿನಾಂಕ

Written By sarkari

Lorem ipsum dolor sit amet consectetur pulvinar ligula augue quis venenatis. 

Advertisements

air force agniveer apply online: ಭಾರತೀಯ ವಾಯುಪಡೆಯು Agniveer Vayu ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸುವುದು ಹೇಗೆ? ವಯೋಮಿತಿ ಏನು? ಅರ್ಹತೆಗಳೇನಿರಬೇಕು? ವಿದ್ಯಾಭ್ಯಾಸ ಅಥವಾ ಶೈಕ್ಷಣಿಕ ಅರ್ಹತೆ ಏನು? ಅರ್ಜಿ ಸಲ್ಲಿಸುವ ಪ್ರಕ್ರಿಯೆ, ಅಗ್ನಿವೀರ್‌ ನೇಮಕದ ಅಧಿಸೂಚನೆ ಸೇರಿದಂತೆ ಹೆಚ್ಚಿನ ವಿವರ ಇಲ್ಲಿ ನೀಡಲಾಗಿದೆ.

ಅರ್ಜಿ ಶುಲ್ಕ ಎಷ್ಟು?

ಪರೀಕ್ಷಾ ಶುಲ್ಕ: 550 ರೂಪಾಯಿ ಮತ್ತು ಜಿಎಸ್‌ಟಿ. ಆನ್‌ಲೈನ್‌ ಪಾವತಿ ವಿಧಾನದ ಮೂಲಕ ಶುಲ್ಕ ಪಾವತಿಸಬಹುದು.

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸಲು ಮತ್ತು ಶುಲ್ಕ ಪಾವತಿಸಲು ಆರಂಭಿಕ ದಿನಾಂಕ: 17-01-2024
ಅರ್ಜಿ ಸಲ್ಲಿಸಲು ಮತ್ತು ಶುಲ್ಕ ಪಾವತಿಸಲು ಕೊನೆಯ ದಿನಾಂಕ: 06-02-2024
ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್‌ ಮೂಲಕ
ವಯೋಮಿತಿ: 02-01-2004 ಮತ್ತು 02-07-2007 ಇಸವಿ ನಡುವೆ ಜನಿಸಿರಬೇಕು. ಈ ಎರಡು ದಿನಾಂಕಗಳನ್ನು ಒಳಗೊಂಡಂತೆ.
ವಿದ್ಯಾರ್ಹತೆ ಏನು: 10+2 ಮತ್ತು ಡಿಪ್ಲೊಮಾ (ಸಂಬಂಧಪಟ್ಟ ಎಂಜಿನಿಯರಿಂಗ್‌ ವಿಷಯಗಳಲ್ಲಿ)
ಎತ್ತರ ಎಷ್ಟಿರಬೇಕು?: ಪುರುಷರು- 152.5 ಮತ್ತು ಮಹಿಳೆಯರು: 152

ನಿಮಗಿದು ಗೊತ್ತೆ?: ಸೈನಿಕರಾಗಬಯಸುವ ಯುವಕರ ಅರ್ಹತೆಯ ಮಾನದಂಡವನ್ನು ವಿಸ್ತರಿಸುವ ಉದ್ದೇಶದಿಂದ ಭಾರತೀಯ ಸೇನೆಯು ಅಗ್ನಿಪಥ್‌ ಯೋಜನೆಯ ನೇಮಕಾತಿ ನಿಯಮಗಳನ್ನು ಬದಲಾಯಿಸಿದೆ. ಇದರಿಂದಾಗಿ ಐಟಿಐ ಮತ್ತು ಪಾಲಿಟೆಕ್ನಿಕ್‌ನಲ್ಲಿ ಪದವಿ ಹೊಂದಿರುವವರ ನೇಮಕಾತಿಯೂ ಸಾಧ್ಯವಾಗಲಿದೆ.

ಅಗ್ನಿವೀರ್‌ ನೇಮಕ ಎಂದರೇನು?

ಕೇಂದ್ರ ಸರಕಾರವು 2022ರಲ್ಲಿ ಭಾರತೀಯ ಸೇನೆಗೆ ಸೈನಿಕರನ್ನು ನೇಮಕ ಮಾಡುವ ಅಗ್ನಿವೀರ್‌ ಯೋಜನೆಯನ್ನು ಪ್ರಾರಂಭಿಸಿತು. ಯೋಜನೆಯಡಿಯಲ್ಲಿ ಭೂ, ವಾಯು, ನೌಕೆ ಮೂರು ಸೇನಾ ಪಡೆಗಳಿಗೂ ನಾಲ್ಕು ವರ್ಷಗಳ ಅವಧಿಗೆ ನಿಯೋಜಿತ ಅಧಿಕಾರಿಗಳ ಶ್ರೇಣಿಗಿಂತ ಕೆಳಗಿರುವ ಸೈನಿಕರನ್ನು ನೇಮಿಸಿಕೊಳ್ಳಲಾಗುತ್ತದೆ. ಈ ಕಾರ್ಯಕ್ರಮದಡಿ ನೇಮಕಗೊಂಡ ಶೇ.25ರಷ್ಟು ಸೈನಿಕರನ್ನು ನಾಲ್ಕು ವರ್ಷಗಳ ನಂತರ ಕಾಯಂ ಮಾಡಿಕೊಳ್ಳಲಾಗುವುದು ಎಂದು ಸೇನೆ ತಿಳಿಸಿತ್ತು.

Leave a Comment