Blog

  • ಯುಪಿಎಸ್ಸಿ ಜಂಟಿ ಕಾರ್ಯದರ್ಶಿ ಮತ್ತು ನಿರ್ದೇಶಕ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ)‌ ಜಂಟಿ ಕಾರ್ಯದರ್ಶಿ ಹಾಗೂ ನಿರ್ದೇಶಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು. ವಿವರಗಳು ಈ ಕೆಳಗಿನಂತಿವೆ :

    ಹುದ್ದೆಯ ಹೆಸರು
    ಜಂಟಿ ಕಾರ್ಯದರ್ಶಿ
    ನಿರ್ದೇಶಕ

    ಹುದ್ದೆಯ ಸಂಖ್ಯೆ -30

    ವೇತನ

    ಜಂಟಿ ಕಾರ್ಯದರ್ಶಿ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗರ 2,21,000ರೂ. ನಿರ್ದೇಶಕ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ.1,82,000.

    ಆಯ್ಕೆ ಪ್ರಕ್ರಿಯೆಯು ನೇರ ಸಂದರ್ಶನದ ಮೂಲಕ ನಡೆಯುತ್ತದೆ.

    ವಿದ್ಯಾರ್ಹತೆ
    ಸ್ನಾತಕೋತ್ತರ ಪದವಿ/ಸಿಎ/ಐಸಿಡಬ್ಲ್ಯೂಎ/ಬಿ.ಇ/ಬಿ.ಟೆಕ್, ಬಿ.ಎಸ್ಸಿ, ಪಿಜಿ ಡಿಪ್ಲೋಮಾ ಮತ್ತು ಎಲ್‌ಎಲ್‌ಬಿ
    ಮಾನ್ಯತೆ ಪಡೆದ ಬೋರ್ಡ್/ಸಂಸ್ಥೆ/ವಿಶ್ವವಿದ್ಯಾಲಯದಿಂದ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

    ವಯೋಮಿತಿ : ಜಂಟಿಕಾರ್ಯದರ್ಶಿ ಹುದ್ದೆಗೆ ಕನಿಷ್ಠ 40 ಹಾಗ ಗರಿಷ್ಠ 55 ವಯಸ್ಸಾಗಿರಬೇಕು.
    ನಿರ್ದೇಶಕ ಹುದ್ದೆಗೆ‌ ಕನಿಷ್ಟ 35 ಹಾಗೂ 45 ವಯಸ್ಸಾಗಿರಬೇಕು.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಮಾರ್ಚ್ 22, 2021(11.59ಗಂಟೆಯ ಒಳಗೆ)

    ಅರ್ಜಿ ಸಲ್ಲಿಸುವುದು ಹೇಗೆ ?
    ಅಭ್ಯರ್ಥಿಗಳು ಯುಪಿಎಸ್ಸಿ ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ನೀಡಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದು.

    ಅಧಿಕೃತ ವೆಬ್‌ಸೈಟ್‌ ಗಾಗಿ ಈ ಲಿಂಕನ್ನು ಕ್ಲಿಕ್ ಮಾಡಿ. https://www.upsconline.nic.in/

    ನೇಮಕಾತಿ ಬಗೆಗಿನ ಅಧಿಸೂಚನೆಯ ನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

  • ಕೇಂದ್ರ ಸಿಬ್ಬಂದಿ ನೇಮಕಾತಿ ಸಂಸ್ಥೆ ವತಿಯಿಂದ ಮಲ್ಟಿ ಟಾಸ್ಕಿಂಗ್ ಹುದ್ದೆಗೆ ಅರ್ಜಿ ಆಹ್ವಾನ : ಕೂಡಲೇ ಅರ್ಜಿ ಸಲ್ಲಿಸಿ

    ಕೇಂದ್ರ ಸಿಬ್ಬಂದಿ ನೇಮಕಾತಿ ಸಂಸ್ಥೆಯು 2020 ಮಲ್ಟಿ ಟಾಸ್ಕಿಂಗ್ ಹುದ್ದೆಗೆ ಅರ್ಜಿಯನ್ನು ಆಹ್ವಾನಿದ್ದು, ಆಸಕ್ತ ಅಭ್ಯರ್ಥಿಗಳು ನಿಗದಿ ಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಲು ತನ್ನ ಅಧಿಕೃತ ಮಾಹಿತಿಯಲ್ಲಿ ತಿಳಿಸಿದೆ.

    ಆನ್ ಲೈನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 21-03-2021 (11.30ಗಂಟೆ)

    ಆಫ್ ಲೈನ್ ಚಲನ್ ಪಡೆಯಲು ಕೊನೆಯ ದಿನಾಂಕ 25 ಮಾರ್ಚ್, 2021 ಸಮಯ 11.30 ರ ಒಳಗೆ

    ಚಲನ್ ಮೂಲಕ ಶುಲ್ಕ ಪಾವತಿಸಲು ಕೊನೆಯ ದಿನಾಂಕ 29, ಮಾರ್ಚ್ 2021

    ವಿದ್ಯಾರ್ಹತೆ
    ಅಭ್ಯರ್ಥಿಗಳು ಎಸ್ ಎಸ್ ಎಲ್ ಸಿ ಪಾಸಾಗಿರಬೇಕು.

    ಅರ್ಜಿ ಶುಲ್ಕ
    ಎಲ್ಲಾ ವರ್ಗದವರಿಗೂ ರೂ.100 ಶುಲ್ಕವಿರುತ್ತದೆ.

    ಪರಿಶಿಷ್ಟ ಜಾತಿಗೆ ಸೇರಿದ ಅಭ್ಯರ್ಥಿಗಳು sc/st/pwd/esm ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿರುವುದಿಲ್ಲ.

    ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.

    ವಯೋಮಿತಿ
    ಅಭ್ಯರ್ಥಿಗೆ ಕನಿಷ್ಠ 18 ಹಾಗೂ ಗರಿಷ್ಠ 25 ವಯಸ್ಸು ಮೀರಿರಬಾರದು.

    ವಿವಿಧ ಮೀಸಲಾತಿಯಲ್ಲಿ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಿದೆ.

    ಆಯ್ಕೆ ಮಾಡುವ ರೀತಿ

    ಈ ಹುದ್ದೆಗಳಿಗೆ ಅಭ್ಯರ್ಥಿಯನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆ ( ಪೇಪರ್ -1) ವಿವರಣಾತ್ಮಕ ಪರೀಕ್ಷೆ (ಪೇಪರ್-2) ನಡೆಸಲಾಗುವುದು ಹಾಗೂ ಆಯ್ಕೆ ಪ್ರಕ್ರಿಯೆ ನಡೆಯುವುದು.

    ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕನ್ನು ಕ್ಲಿಕ್ ಮಾಡಿ

    ಆನ್ ಲೈನ್ ಅಪ್ಲೈಗಾಗಿ

  • ಪಿಯುಸಿ ಪದವಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನ

    ಕರ್ನಾಟಕ ಸಮಾಜ ಕಲ್ಯಾಣ ವತಿಯಿಂದ SC/ST ಪಂಗಡಕ್ಕೆ ಸೇರಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ತಮ್ನ ವಿದ್ಯಾಭ್ಯಾಸಕ್ಕೆ ಆರ್ಥಿ ತೊಂದರೆ ಆಗಬಾರದೆಂದು ರಾಜ್ಯದ ಅನೇಕ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ದ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕಾಗಿ ಆರ್ಥಿಕ ಸಹಾಯವನ್ನು ನೀಡುತ್ತಲಿದೆ‌.

    ಪ್ರತಿ ವರ್ಷದಂತೆ ಈ‌ ಬಾರಿಯು ಕೂಡಾ ಪಿಯುಸಿ, ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ 35,000ರೂ. ವರೆಗೂ ಪ್ರೋತ್ಸಾಹಧನ ಕ್ಕಾಗಿ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ.

    ಅರ್ಜಿ‌ಸಲ್ಲಿಸಲು ಕೊನೆಯ ದಿನಾಂಕ 15, ಫೆಬ್ರವರಿ 2021

    ವಿಶೇಷ ಸೂಚನೆ : 2020 ರಲ್ಲಿ ಪ್ರಥಮ ಶ್ರೇಣಿಯಲ್ಲಿ ಹಾಗೂ ಮೊದಲ ಪ್ರಯತ್ನದಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಮಾತ್ರ ಪ್ರೋತ್ಸಾಹ ಧನಕ್ಕೆ ಅರ್ಜಿ ಸಲ್ಲಿಸಬಹುದು.

    ಪ್ರೋತ್ಸಾಹಧನಗಳು ಅಧ್ಯಯನಕ್ಕಾಗಿ ಈ ಕೆಳಗಿನಂತಿವೆ:
    ಪಿಯುಸಿ ಮತ್ತು ಡಿಪ್ಲೋಮಾ 20,000ರೂ.
    ಯಾವುದೇ ಪದವಿ 25,000 ರೂ.
    ಸ್ನಾತಕೋತ್ತರ ಪದವಿ 30,000ರೂ.
    ಇಂಜಿನಿಯರಿಂಗ್, ಅಗ್ರಿಕಲ್ಚರ್,ನರ್ಸಿಂಗ್ – 35,000ರೂ.

    ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ನ್ನು ಕ್ಲಿಕ್ ಮಾಡಿ

    ಅಪ್ಲೈ ಓನ್ ಲೈನ್ ಲಿಂಕ್

  • KSET: ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕ ಅರ್ಹತಾ ಪರೀಕ್ಷೆ( ಕೆ- ಸೆಟ್)

    KSET: ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕ ಅರ್ಹತಾ ಪರೀಕ್ಷೆ( ಕೆ- ಸೆಟ್)

    ಮೈಸೂರು ವಿಶ್ವವಿದ್ಯಾಲಯವು ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ ಕೆ-ಸೆಟ್ 2021 ಪರೀಕ್ಷೆಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಓನ್ ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದು.

    ಅಧಿಸೂಚನೆಯ ದಿನಾಂಕ 06 ನೇ ಫೆಬ್ರವರಿ 2021

    ಅರ್ಜಿ ಸಲ್ಲಿಸಲು ಪ್ರಾರಂಭವಾದ ದಿನಾಂಕ 08, ಫೆಬ್ರವರಿ 2021

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 07, ಮಾರ್ಚ್ 2021

    ಅರ್ಜಿ ಶುಲ್ಕ
    ಸಾಮಾನ್ಯ ವರ್ಗ ರೂ.1150, ಪ್ರವರ್ಗ 2ಎ, 2 ಬಿ, 3ಎ , 3 ಬಿ ಅಭ್ಯರ್ಥಿಗಳಿಗೆ ರೂ. 950, ಪ್ರವರ್ಗ-1, ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡ , ಪಿಡ್ಬ್ಯುಡಿ ರೂ.650 ಶುಲ್ಕ ವಿಧಿಸಲಾಗಿದೆ.

    ವಯೋಮಿತಿ
    ಗರಿಷ್ಠ ವಯೋಮಿತಿ ಇಲ್ಲ

    ಅರ್ಜಿ ಶುಲ್ಕ ದಂಡದೊಂದಿಗೆ ರೂ.250 ಸಲ್ಲಿಸಲು ಕೊನೆಯ ದಿನಾಂಕ 13, ಮಾರ್ಚ್ 2021

    15, ಮಾರ್ಚ್ 2021 ಭರ್ತಿ ಮಾಡಿದ ಅರ್ಜಿಗಳನ್ನು ನೊಡೆಲ್ ಕೇದ್ರಕ್ಕೆ ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ.

    ಪರೀಕ್ಷಾ ದಿನಾಂಕ: 11 ಎಪ್ರಿಲ್ 2021

    ಹುದ್ದೆಯ ಸ್ಥಳ : ಕರ್ನಾಟಕ

    ವಿದ್ಯಾರ್ಹತೆ

    ಯುಜಿಸಿಯಿಂದ ಮಾನ್ಯತೆ ಪಡೆದಿರುವ ವಿಶ್ವವಿದ್ಯಾನಿಲಯದಿಂದ ಉನ್ನತ ಶಿಕ್ಷಣ ಸಂಸ್ಥೆಯಿಂದ ಸ್ನಾತಕೋತ್ತರ ಪದವಿ ಅಥವಾ ಸಮಾನವಾದ ಪರೀಕ್ಷೆಗಳಲ್ಲಿ ಅಭ್ಯರ್ಥಿಗಳು ಉತ್ತೀರ್ಣರಾಗಿರಬೇಕು.

    ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಮೂಲಕ ತಿಳಿದುಕೊಳ್ಳಬಹುದು.

    ಆನ್ ಲೈನ್ KSET ಅಪ್ಲೈ ಮಾಡಲು ಈ ಲಿಂಕನ್ನು ಕ್ಲಿಕ್ ಮಾಡಿ

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕನ್ನು ಕ್ಲಿಕ್ ಮಾಡಿ

  • ECIL ನಲ್ಲಿ 650 ಟೆಕ್ನಿಕಲ್ ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನ : ಕೂಡಲೇ ಅರ್ಜಿ ಸಲ್ಲಿಸಿ

    ಇಲೆಕ್ಟ್ರಾನಿಕ್ಸ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್ (ECIL)ತಮ್ಮ ಅಧಿಕೃತ ವೆಬ್ ಸೈಟ್ ನಲ್ಲಿ ಟೆಕ್ನಿಕಲ್ ಆಫೀಸರ್ ಹುದ್ದೆಗೆ (ಕಾಂಟ್ರಾಕ್ಟ್ ಆಧಾರದ ಮೇಲೆ)ಅರ್ಜಿಗಳನ್ನು ಆಹ್ವಾನಿಸಿದೆ‌. ಆಸಕ್ತ ಅಭ್ಯರ್ಥಿಗಳು ದಿನಾಂಕ 15-02-2021ರ ಒಳಗಾಗಿ ಅರ್ಜಿಗಳನ್ನು ಆನ್ ಲೈನ್ ಮುಖಾಂತರ ಸಲ್ಲಿಸಬಹುದು.

    ಹುದ್ದೆಯ ಹೆಸರು :ಟೆಕ್ನಿಕಲ್ ಆಫೀಸರ್

    ಹುದ್ದೆಯ ಸಂಖ್ಯೆ : 650

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15-02-2021

    ವಿದ್ಯಾರ್ಹತೆ
    ಅಭ್ಯರ್ಥಿಗಳು ಇಂಜಿನಿಯರ್ ಕೋರ್ಸ್ ನ್ನು ಫಸ್ಟ್ ಕ್ಲಾಸ್ ನಲ್ಲಿ ತೇರ್ಗಡೆಯಾಗಿರಬೇಕು.
    (ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಶನ್ಸ್/ಎಲೆಕ್ಟ್ರಿಕಲ್ ಎಲೆಕ್ಟ್ರಾನಿಕ್ಸ್/ಎಲೆಕ್ಟ್ರಾನಿಕ್ ಆಂಡ್ ಇನ್ಸ್ಟ್ರುಮೆಂಟೇಶನ್ಸ್/ಮೆಕ್ಯಾನಿಕಲ್/ಕಂಪ್ಯೂಟರ್ ಸೈನ್ಸ್/ಇನ್ ಫೊರ್ಮೇಶನ್ ಟೆಕ್ನಾಲಜಿ)

    ವಯೋಮಿತಿ
    ಅಭ್ಯರ್ಥಿಗಳಿಗೆ 30ವರ್ಷ ಮೇಲ್ಪಟ್ಟಿರಬಾರದು.
    ವಯಸ್ಸಿನ ಸಡಿಲಿಕೆ ಕಂಪನಿ ರೂಲ್ಸ್ ಮೇಲೆ ಅವಲಂಬಿತವಾಗಿದೆ.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಕೆಳಗಿನ ಲಿಂಕನ್ನು ಕ್ಲಿಕ್ ಮಾಡಿ:
    ಆನ್ ಲೈನ್ ಮುಖಾಂತರ ಅಪ್ಲೈ ಮಾಡಲು ಈ ಲಿಂಕನ್ನು ಕ್ಲಿಕ್ ಮಾಡಿ

    ಅಧಿಕೃತ ವೆಬ್‌ಸೈಟ್‌ಗಾಗಿ ಈ ಲಿಂಕನ್ನು ಕ್ಲಿಕ್ ಮಾಡಿ

  • ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಹುದ್ದೆಗೆ ಅರ್ಜಿ ಆಹ್ವಾನ: ಕೂಡಲೇ ಅರ್ಜಿ ಸಲ್ಲಿಸಿ

    ಭಾರತೀಯ ವಿಜ್ಞಾನ ಸಂಸ್ಥೆ ಬೆಂಗಳೂರು ಡೆಪ್ಯೂಟೇಷನ್ ಅಡಿಯಲ್ಲಿ ಡೆಪ್ಯೂಟಿ ಪ್ರಾಜೆಕ್ಟ್ ಇಂಜಿನಿಯರ್ (ಸಿವಿಲ್) ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

    ಆಸಕ್ತರು ಅರ್ಜಿಗಳನ್ನು ದಿನಾಂಕ 08, ಮಾರ್ಚ್ 2021 ರ ಒಳಗೆ ಸಲ್ಲಿಸಲು ಅವಕಾಶವಿದೆ.
    ಆಸಕ್ತರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ‌

    ಹುದ್ದೆಯ ಹೆಸರು : ಡೆಪ್ಯೂಟಿ ಪ್ರಾಜೆಕ್ಟ್ ಇಂಜಿನಿಯರ್ (ಸಿವಿಲ್)

    ಹುದ್ದೆ ಸಂಖ್ಯೆ : 01

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 08-03-2021

    ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕನ್ನು ಕ್ಲಿಕ್ ಮಾಡಿ
    https://iisc.ac.in/positions-open/