Blog

  • NBCC (ನ್ಯಾಷನಲ್ ಬಿಲ್ಡಿಂಗ್ ಕನ್ಸ್ಟಕ್ಷನ್ಸ್ ಕಾರ್ಪೋರೇಷನ್) ಸಂಸ್ಥೆಯಲ್ಲಿ ಹುದ್ದೆಗೆ ಅರ್ಜಿ ಆಹ್ವಾನ

    ನ್ಯಾಷನಲ್ ಬಿಲ್ಡಿಂಗ್ಸ್ ಕನ್ಟ್ರಕ್ಷನ್ಸ್ ಕಾರ್ಪೋರೇಷನ್ (NBCC) ತನ್ನಲ್ಲಿರುವ ಖಾಲಿ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತರು ಈ ಕೆಳಗೆ ನೀಡಲಾಗಿರುವ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ವಿವರಗಳು ಈ ಕೆಳಗಿನಂತಿವೆ :

    ಹುದ್ದೆ : ಮಾರ್ಕೆಟಿಂಗ್ ಎಕ್ಸಿಕ್ಯುಟಿವ್

    ವೇತನ : ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ.42,500/- ವೇತನವನ್ನು ತಿಂಗಳಿಗೆ ನೀಡಲಾಗುವುದು

    ಹುದ್ದೆಯ ಒಟ್ಟು ಸಂಖ್ಯೆ : 20

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 1, ಮಾರ್ಚ್ 2021.

    ವಯೋಮಿತಿ : ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ ಆಗಿರಬೇಕು.

    ವಿದ್ಯಾಭ್ಯಾಸ : ಅಂಗೀಕೃತ ವಿಶ್ವವಿದ್ಯಾಲಯಯದಿಂದ ಮಾನ್ಯತೆ ಪಡೆದ ಎಂ.ಬಿ.ಎ, ಡಿಪ್ಲೋಮಾ, ಪೋಸ್ಟ್ ಗ್ರಾಜ್ಯುಯೇಟ್ ವಿದ್ಯಾರ್ಹತೆ ಯನ್ನು ಹೊಂದಿರಬೇಕು.

    ಅರ್ಜಿ ಶುಲ್ಕ : ಪ.ಜಾತಿ/ಪ‌.ಪಂಗಡ , ಅಂಗವಿಕಲ ಅಭ್ಯರ್ಥಿಗಳು ಯಾವುದೇ ಶುಲ್ಕವನ್ನು ನೀಡುವಂತಿಲ್ಲ. ಉಳಿದ ಅಭ್ಯರ್ಥಿಗಳು ರೂ.500/- ಅರ್ಜಿ ಶುಲ್ಕ ಪಾವತಿಸಬೇಕಾಗುತ್ತದೆ.

    ಆಯ್ಕೆ ಪ್ರಕ್ರಿಯೆ : ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

    ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆನ್ ಲೈನ್ ನಲ್ಲಿ ಕಂಪನಿಯ ಅಧಿಕೃತ ವೆಬ್‌ಸೈಟ್‌ https://nbccindia.com/ ಗೆ ಭೇಟಿ ನೀಡಿ , ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು, ಅರ್ಜಿಯನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಕಚೇರಿಗೆ ಕಳುಹಿಸಬೇಕು.

    ಕಚೇರಿ ವಿಳಾಸ:
    General Manager(HRM)
    NBCC(I)ltd,
    NBCC Bhavan,2nd floor,
    Corporate Office,
    Near Lodhi Hotel,
    Lodhi Road,
    New Delhi-110003

  • BHEL ನಲ್ಲಿ 124 ಹುದ್ದೆಗಳಿಗೆ ಅರ್ಜಿ ಆಹ್ವಾನ : ಈ ಕೂಡಲೇ ಅರ್ಜಿ ಸಲ್ಲಿಸಿ

    BHEL ನಲ್ಲಿ 124 ಹುದ್ದೆಗಳಿಗೆ ಅರ್ಜಿ ಆಹ್ವಾನ : ಈ ಕೂಡಲೇ ಅರ್ಜಿ ಸಲ್ಲಿಸಿ

    ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (BHEL) ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು.

    ಹುದ್ದೆ : ಫಿಟ್ಟರ್ ಮತ್ತು ವೆಲ್ಡರ್

    ಹುದ್ದೆಯ ಸಂಖ್ಯೆ :
    ಫಿಟ್ಟರ್ : 89
    ವೆಲ್ಡರ್ : 35

    ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ : 28, ಫೆಬ್ರವರಿ, 2021.

    ವಿದ್ಯಾರ್ಹತೆ

    10 ಮತ್ತು 8 ನೇ ತರಗತಿ ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

    ವೇತನ: ಫಿಟ್ಟರ್ ಮತ್ತು ವೆಲ್ಡರ್ ಹುದ್ದೆಗಳಿಗೆ ತಿಂಗಳಿಗೆ ರೂ‌.8050/- ವೇತನ ನಿಗದಿಪಡಿಸಲಾಗಿದೆ.

    ಅರ್ಜಿ ಶುಲ್ಕ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಶುಲ್ಕವನ್ನು ಪಾವತಿಸುವಂತಿಲ್ಲ.

    ಹೆಚ್ಚಿನ ಮಾಹಿತಿಗಾಗಿ https://bhel.com/ ಗೆ ಭೇಟಿ ನೀಡಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಬಹುದು.

  • ಭೂಮಾಪಕರ ನೇಮಕಾತಿಯ ಕೀ ಉತ್ತರಗಳು ಪ್ರಕಟ

    ಪರವನಿಗಾಗಿ ಭೂಮಾಪಕರ ನೇಮಕಾತಿಗೆ ಸಂಬಂಧಿಸಿದಂತೆ ಲಿಖಿತ ಪರೀಕ್ಷೆಯನ್ನು 2021, ಫೆಬ್ರವರಿ 01 ಮತ್ತು 02 ರಂದು ನಡೆಸಲಾಗಿತ್ತು. ಲಿಖಿತ ಪರೀಕ್ಷೆ ಬರೆದ ಅಭ್ಯರ್ಥಿಗಳ ಕೀ ಉತ್ತರಗಳನ್ನು ಇಲಾಖೆ ತನ್ನ ಜಾಲತಾಣದಲ್ಲಿ ಪ್ರಕಟಿಸಿದೆ.


    ಹೆಚ್ಚಿನ ಮಾಹಿತಿಗಾಗಿ ಈ ಲಿಂಕನ್ನು ಕ್ಲಿಕ್ ಮಾಡಿ

    ಸೂಚನೆಗಳಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

  • ಕೆ ಎ ಎಸ್ (KAS) ಮುಖ್ಯ ಪರೀಕ್ಷೆಯ ಅಭ್ಯರ್ಥಿಗಳ ಪ್ರವೇಶ ಪತ್ರ ಪ್ರಕಟ

    ಕರ್ನಾಟಕ ಲೋಕಸೇವಾ ಆಯೋಗವು ತನ್ನ ಅಧಿಕೃತ ವೆಬ್‌ಸೈಟ್‌ ನಲ್ಲಿ 2017-18 ರ ಸಾಲಿನ ಗ್ರೂಪ್ ಎ ಮತ್ತು ಗ್ರೂಪ್ ಬಿ ವೃಂದದ ಗೆಜೆಟೆಡ್ ಪ್ರೊಬೆಷನರ್ ಹುದ್ದೆಗಳ ಮುಖ್ಯ ಪರೀಕ್ಷೆಗಳ ವೇಳಾ ಪಟ್ಟಿಯನ್ನು ಪ್ರಕಟಿಸಿದೆ.
    ಅಭ್ಯರ್ಥಿಗಳು ತಮ್ಮ username password ಬಳಸಿ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಬಹುದು.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

  • ರಾಷ್ಟ್ರೀಯ ನಿಧಿಯಡಿ ಆರ್ಥಿಕ ನೆರವು: ಕೂಡಲೇ ಅರ್ಜಿ ಸಲ್ಲಿಸಿ

    ರಾಷ್ಟ್ರೀಯ ನಿಧಿಯಡಿ ಆರ್ಥಿಕ ನೆರವು: ಕೂಡಲೇ ಅರ್ಜಿ ಸಲ್ಲಿಸಿ

    ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯ ವಿಕಲಚೇತನರ ಸಬಲೀಕರಣ ಇಲಾಖೆ (ದಿವ್ಯಾಂಗಜನ)

    ವಿಕಲಚೇತನರಿಗಾಗಿ ರಾಷ್ಟ್ರೀಯ ನಿಧಿಯಡಿ ಆರ್ಥಿಕ ನೆರವಿಗಾಗಿ ಅರ್ಜಿಗಳ ಆಹ್ವಾನ

    ವಿಕಲಚೇತನ ಸಬಲೀಕರಣ ಇಲಾಖೆ (ದಿವ್ಯಾಂಗಜನ) ಭಾರತ ಸರಕಾರ 28 ನೇ ಆಗಸ್ಟ್, 2018 ಜಾರಿಯಲ್ಲಿರುವಂತೆ ದಿವ್ಯಾಂಗಜನರ ಸಬಲೀಕರಣಕ್ಕಾಗಿ ವಿಕಲಚೇತನರಿಗೆ ರಾಷ್ಟ್ರೀಯ ನಿಧಿಯಡಿ ಯೋಜನೆ ಅನುಷ್ಠಾನಗೊಳಿಸುತ್ತದೆ. ಇಲಾಖೆಯು ಕೆಳಕಂಡ ಕ್ಷೇತ್ರಗಳಲ್ಲಿ ದಿವ್ಯಾಂಗಜನತೆಗೆ ಆರ್ಥಿಕ ನೆರವು ಒದಗಿಸಲು ಅರ್ಜಿಗಳನ್ನು ಕರೆದಿದೆ.

    1. ವಿಕಲಚೇತನರು ತಯಾರಿಸಿದ ಪೇಂಟಿಂಗ್, ಕರಕುಶಲ ವಸ್ತುಗಳು ಇತ್ಯಾದಿ ಸೇರಿ ಉತ್ಪನ್ನಗಳನ್ನು ಪ್ರದರ್ಶಿಸಲು ಪ್ರದರ್ಶನ/ಕಾರ್ಯಾಗಾರಗಳ ಆಯೋಜನೆಗೆ ನೆರವು ನೀಡುವುದು.
    2. ರಾಷ್ಟ್ರೀಯ/ಅಂತರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ರಾಜ್ಯ ಮಟ್ಟದಲ್ಲಿ ಕ್ರೀಡೆ ಅಥವಾ ಲಲಿತಕಲೆ/ಸಂಗೀತ/ನೃತ್ಯದಲ್ಲಿ ನಿಪುಣರಾದ ಮಾನದಂಡ ವಿಕಲಚೇತ‌ತಲನರಿಗೆ ನೆರವು ನೀಡುವುದು ಮತ್ತು
    3. ಕೇಸಿನಿಂದ ಕೇಸು ಆಧಾರದಲ್ಲಿ ರಾಜ್ಯ ಮೌಲ್ಯಮಾಪನಾ ಮಂಡಳಿಯಿಂದ ಶಿಫಾರಸು ಮಾಡಿದ ವ್ಯಕ್ತಿಗಳಿಗೆ ಹೆಚ್ಚಿನ ಬೆಂಬಲದೊಂದಿಗೆ ನೆರವು ನೀಡುವುದು.

    ಯೋಜ‌ನೆಯ ಹೆಚ್ಚಿನ ವಿವರಗಳು, ಅರ್ಜಿ ಸಲ್ಲಿಕೆ ಬಗೆ ಕುರಿತು ಇಲಾಖೆಯ ವೆಬ್‌ಸೈಟ್‌ http://disabilityaffairs.gov.in ಗೆ ಭೇಟಿ ನೀಡಿ. ಯೋಜನೆಯಲ್ಲಿ ಹಾಗೂ ಇಮೇಲ್ : [email protected] ರಲ್ಲಿ ನಮೂದಿಸಿದ ಅಧಿಕಾರಿಯ ಹೆಸರು ಮತ್ತು ವಿಳಾಸಕ್ಕೆ ನಿಗದಿತ ನಮೂನೆಯಲ್ಲಿ ನಿಮ್ಮ ಅರ್ಜಿಯ ಹಾರ್ಡ್ ಕಾಪಿಯನ್ನು ಕಳುಹಿಸಿ. ಇಡೀ ವರ್ಷ ಅರ್ಜಿ ಸಲ್ಲಿಸಬಹುದು.

    ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 011-24369054

  • ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ 545 ಹುದ್ದೆಗಳಿಗೆ ಅರ್ಜಿ ಆಹ್ವಾನ

    ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ (ಸಿವಿಲ್) 545 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ವಿವರಗಳನ್ನು ಓದಿ ಅರ್ಜಿ ಸಲ್ಲಿಸಬಹುದು.

    ಹುದ್ದೆ : ಪೊಲೀಸ್ ಸಬ್ ಇನ್ಸ್ ಪೆಕ್ಟರ್ಸ್ (ಸಿವಿಲ್)

    ಹುದ್ದೆಯ ಸಂಖ್ಯೆ : 545

    ವಿದ್ಯಾಭ್ಯಾಸ : ಯಾವುದೇ ಪದವೀಧರರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
    ಆನ್ ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಅವಕಾಶವಿದೆ.

    ಪುರುಷರು 168 ಸೆಂ.ಮೀ. ಎತ್ತರ ಹಾಗೂ ಎದೆಯ ಸುತ್ತಳತೆ 81-86 ಸೆಂ.ಮೀ. ಇರಬೇಕು.

    ಮಹಿಳೆಯರ ಎತ್ತರ 157 ಸೆಂ.ಮೀ ಇರಬೇಕು. ಹಾಗೂ 45 ಕೆ.ಜಿ.ತೂಕ ಇರಬೇಕು.

    ಅರ್ಜಿ ಶುಲ್ಕ : ರೂ. 500 ಪರೀಕ್ಷಾ ಶುಲ್ಕ ಪಾವತಿಸಬೇಕು.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಫೆಬ್ರವರಿ 22, 2021.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ