ರಾಷ್ಟ್ರೀಯ ನಿಧಿಯಡಿ ಆರ್ಥಿಕ ನೆರವು: ಕೂಡಲೇ ಅರ್ಜಿ ಸಲ್ಲಿಸಿ

Written By Mallika

Lorem ipsum dolor sit amet consectetur pulvinar ligula augue quis venenatis. 

Advertisements

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯ ವಿಕಲಚೇತನರ ಸಬಲೀಕರಣ ಇಲಾಖೆ (ದಿವ್ಯಾಂಗಜನ)

ವಿಕಲಚೇತನರಿಗಾಗಿ ರಾಷ್ಟ್ರೀಯ ನಿಧಿಯಡಿ ಆರ್ಥಿಕ ನೆರವಿಗಾಗಿ ಅರ್ಜಿಗಳ ಆಹ್ವಾನ

ವಿಕಲಚೇತನ ಸಬಲೀಕರಣ ಇಲಾಖೆ (ದಿವ್ಯಾಂಗಜನ) ಭಾರತ ಸರಕಾರ 28 ನೇ ಆಗಸ್ಟ್, 2018 ಜಾರಿಯಲ್ಲಿರುವಂತೆ ದಿವ್ಯಾಂಗಜನರ ಸಬಲೀಕರಣಕ್ಕಾಗಿ ವಿಕಲಚೇತನರಿಗೆ ರಾಷ್ಟ್ರೀಯ ನಿಧಿಯಡಿ ಯೋಜನೆ ಅನುಷ್ಠಾನಗೊಳಿಸುತ್ತದೆ. ಇಲಾಖೆಯು ಕೆಳಕಂಡ ಕ್ಷೇತ್ರಗಳಲ್ಲಿ ದಿವ್ಯಾಂಗಜನತೆಗೆ ಆರ್ಥಿಕ ನೆರವು ಒದಗಿಸಲು ಅರ್ಜಿಗಳನ್ನು ಕರೆದಿದೆ.

  1. ವಿಕಲಚೇತನರು ತಯಾರಿಸಿದ ಪೇಂಟಿಂಗ್, ಕರಕುಶಲ ವಸ್ತುಗಳು ಇತ್ಯಾದಿ ಸೇರಿ ಉತ್ಪನ್ನಗಳನ್ನು ಪ್ರದರ್ಶಿಸಲು ಪ್ರದರ್ಶನ/ಕಾರ್ಯಾಗಾರಗಳ ಆಯೋಜನೆಗೆ ನೆರವು ನೀಡುವುದು.
  2. ರಾಷ್ಟ್ರೀಯ/ಅಂತರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ರಾಜ್ಯ ಮಟ್ಟದಲ್ಲಿ ಕ್ರೀಡೆ ಅಥವಾ ಲಲಿತಕಲೆ/ಸಂಗೀತ/ನೃತ್ಯದಲ್ಲಿ ನಿಪುಣರಾದ ಮಾನದಂಡ ವಿಕಲಚೇತ‌ತಲನರಿಗೆ ನೆರವು ನೀಡುವುದು ಮತ್ತು
  3. ಕೇಸಿನಿಂದ ಕೇಸು ಆಧಾರದಲ್ಲಿ ರಾಜ್ಯ ಮೌಲ್ಯಮಾಪನಾ ಮಂಡಳಿಯಿಂದ ಶಿಫಾರಸು ಮಾಡಿದ ವ್ಯಕ್ತಿಗಳಿಗೆ ಹೆಚ್ಚಿನ ಬೆಂಬಲದೊಂದಿಗೆ ನೆರವು ನೀಡುವುದು.

ಯೋಜ‌ನೆಯ ಹೆಚ್ಚಿನ ವಿವರಗಳು, ಅರ್ಜಿ ಸಲ್ಲಿಕೆ ಬಗೆ ಕುರಿತು ಇಲಾಖೆಯ ವೆಬ್‌ಸೈಟ್‌ http://disabilityaffairs.gov.in ಗೆ ಭೇಟಿ ನೀಡಿ. ಯೋಜನೆಯಲ್ಲಿ ಹಾಗೂ ಇಮೇಲ್ : [email protected] ರಲ್ಲಿ ನಮೂದಿಸಿದ ಅಧಿಕಾರಿಯ ಹೆಸರು ಮತ್ತು ವಿಳಾಸಕ್ಕೆ ನಿಗದಿತ ನಮೂನೆಯಲ್ಲಿ ನಿಮ್ಮ ಅರ್ಜಿಯ ಹಾರ್ಡ್ ಕಾಪಿಯನ್ನು ಕಳುಹಿಸಿ. ಇಡೀ ವರ್ಷ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 011-24369054

Leave a Comment