Blog

  • ಬಾಗಲಕೋಟೆ ಸೆಂಟ್ರಲ್ ಲೈಬ್ರರಿಯಲ್ಲಿ ಉದ್ಯೋಗ

    ಬಾಗಲಕೋಟೆ ಸೆಂಟ್ರಲ್ ಲೈಬ್ರರಿಯಲ್ಲಿ ಉದ್ಯೋಗ

    ಬಾಗಲಕೋಟೆ ಜಿಲ್ಲಾ ಕೇಂದ್ರ ಗ್ರಂಥಾಲಯ ಕಚೇರಿಯ ಸಮುದಾಯ ಮಕ್ಕಳ ಕೇಂದ್ರ ಗ್ರಂಥಾಲಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

    ಹುದ್ದೆ : ಮಹಿಳಾ ಆಯಾ ಕೆಲಸಗಾರರನ್ನು ಗೌರವ ಸಂಭಾವನೆ ಮೇರೆಗೆ ಭರ್ತಿ ಮಾಡಲು ನೇಮಕಾತಿಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ವಿದ್ಯಾರ್ಹತೆ : ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಏಳನೇ ತರಗತಿ ತೇರ್ಗಡೆ ಹೊಂದಿರಬೇಕು. ಹುದ್ದೆಗೆ ಸ್ಥಳೀಯರಿಗೆ ಮೊದಲನೆ ಆದ್ಯತೆ ನೀಡಲಾಗುವುದು.

    ಆಯ್ಕೆ ಪ್ರಕ್ರಿಯೆ : ವಿದ್ಯಾರ್ಹತೆ ಹಾಗೂ ಮೌಖಿಕ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು.

    ಈ ಹುದ್ದೆಯು ತಾತ್ಕಾಲಿಕವಾಗಿದ್ದು, ಮಾಸಿಕ ಮೂರು ಸಾವಿರ ಗೌರವ ಸಂಭಾವನೆ ನೀಡಲಾಗುತ್ತದೆ.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಎಪ್ರಿಲ್ 30, 2021 ರೊಳಗಾಗಿ ಮುಖ್ಯ ಗ್ರಂಥಾಲಯಾಧಿಕಾರಿಗಳ ಕಚೇರಿ, ಜಿಲ್ಲಾ ಗ್ರಂಥಾಲಯ, ನವನಗರ, ಬಾಗಲಕೋಟೆ ಇವರಿಗೆ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ.

    ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಬಾಗಲಕೋಟೆ ಜಿಲ್ಲಾ ಕೇಂದ್ರ ಗ್ರಂಥಾಲಯ ಕಚೇರಿಗೆ ಭೇಟಿ ನೀಡಿ ಸಂಪರ್ಕಿಸಬಹುದು.

  • FDA ನೇಮಕ ಅಧಿಸೂಚನೆ ಪಾಲಿಸಲು ಕೆಎಟಿ ಸೂಚನೆ

    FDA ನೇಮಕ ಅಧಿಸೂಚನೆ ಪಾಲಿಸಲು ಕೆಎಟಿ ಸೂಚನೆ

    ರಾಜ್ಯದಾದ್ಯಂತ ವಿವಿಧ ಇಲಾಖೆಗಳ ಕಚೇರಿಗಳಲ್ಲಿ ಖಾಲಿ ಇರುವ FDA,SDA ಹುದ್ದೆಗಳಿಗೆ ಪರೀಕ್ಷೆ ಬರೆದಿರುವ ಅಭ್ಯರ್ಥಿಗಳು 2018 ನೇ ಸಾಲಿನಿಂದಲೂ ನೇಮಕ ಆದೇಶಕ್ಕೆ ಕಾಯುತ್ತಿದ್ದಾರೆ. ನೇಮಕ ಪ್ರಕ್ರಿಯೆಗೆ ಹೊರಡಿಸಿ ನೋಟಿಫಿಕೇಶನ್ ಪ್ರಕಾರ ಕೌನ್ಸಲಿಂಗ್ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಕರ್ನಾಟಕ ಆಡಳಿತ ನ್ಯಾಯಮಂಡಳಿ (KAT) ತಿಳಿಸಿದೆ.

    ದಿನಾಂಕ 01-09-2017 ರಂದು ಕರ್ನಾಟಕ ಲೋಕಸೇವಾ ಆಯೋಗವು 961 ಪ್ರಥಮ ದರ್ಜೆ ಸಹಾಯಕ ಹುದ್ದೆಗಳ 851 ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳ ಭರ್ತಿಗೆ ಅಧಿಸೂಚನೆಯನ್ನು ಹೊರಡಿಸಿತ್ತು. 2018 ಲಿಖಿತ ಪರೀಕ್ಷೆ ನಡೆಸಿತ್ತು. ಆಯ್ಕೆಯಾದ ಅಭ್ಯರ್ಥಿಗಳ ಹೆಸರನ್ನು ಎರಡು ಹುದ್ದೆಗಳ ಪಟ್ಟಿಯಲ್ಲಿ ಇದ್ದಲ್ಲಿ ಆ ಅಭ್ಯರ್ಥಿಗಳನ್ನು ಕೌನ್ಸಲಿಂಗ್ ಮೂಲಕ ಒಂದು ಹುದ್ದೆಗೆ ನೇಮಿಸಿ ಆದೇಶ ನೀಡಲಾಗುವುದು ಎಂದು ನೋಟಿಫಿಕೇಶನ್‌ನಲ್ಲಿ ತಿಳಿಸಲಾಗಿತ್ತು.

    ಎಫ್‌ಡಿಎ ಪಟ್ಟಿಯಲ್ಲಿ ಇದ್ದ ಅಭ್ಯರ್ಥಿಗಳನ್ನು ಎಸ್‌ಡಿಎ ಪಟ್ಟಿಯಿಂದ ಕೌನ್ಸಲಿಂಗ್ ನಡೆಸದೆ ಕೈ ಬಿಟ್ಟಿದ್ದರಿಂದ ಅಭ್ಯರ್ಥಿ ಬಯಸದೇ ಇರುವ ಇಲಾಖೆ ನಿಯೋಜನೆ ಮಾಡಿದರೆ ಅನ್ಯಾಯವಾಗಲಿದೆ ಎಂದು ಈ ಹಿಂದೆ ಅಭ್ಯರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಆದ್ದರಿಂದ 2017 ರಲ್ಲಿ ಕೌನ್ಸಲಿಂಗ್ ನಡೆಸುವ ನಿರ್ಧಾರವನ್ನು ಕರ್ನಾಟಕ ಲೋಕಸೇವಾ ಆಯೋಗ ಕೈಗೊಂಡಿತ್ತು.

    ಇದಾದ ನಂತರ ಆಯೋಗದ ಕಾರ್ಯದರ್ಶಿ ಬದಲಾದ ಕಾರಣ ಕೌನ್ಸಲಿಂಗ್ ನಡೆಸುವುದು ಕೆಸಿಎಸ್‌ ( ಕರ್ನಾಟಕ ಸಿವಿಲ್ ಸೇವೆ) ನಿಯಮಗಳಿಗೆ ವಿರುದ್ಧ ಎಂದು ಹೊಸ ಕಾರ್ಯದರ್ಶಿ ತಡೆ ಹಿಡಿದಿದ್ದು , ಅತಂತ್ರಗೊಂಡಿದ್ದ ಅಭ್ಯರ್ಥಿಗಳು ಕರ್ನಾಟಕ ಆಡಳಿತ ನ್ಯಾಯಮಂಡಳಿಯ ಮೊರೆ ಹೋಗಿದ್ದರು. ಈ ಮನವಿಯನ್ನು ವಿಚಾರಣೆ ನಡೆಸಿದ ಕೆಎಟಿ, ‘ನೇಮಕಾತಿ ಅಧಿಸೂಚನೆ ಪ್ರಕಾರವೇ ಕೆಪಿಎಸ್‌ಸಿ ನೇಮಕಾತಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕು. ಕೌನ್ಸಲಿಂಗ್ ನಡೆಸುವುದು ಕರ್ನಾಟಕ ನಾಗರಿಕ ಸೇವೆಗಳ ನಿಯಮಗಳಿಗೆ ವಿರುದ್ಧ ಆಗುವುದಿಲ್ಲ’ ಎಂದು ಹೇಳಿದೆ.

  • FSSAI : ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ

    FSSAI : ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಎಫ್‌ಎಸ್‌ಎಸ್‌ಎಐ (ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ) ನೇರ ನೇಮಕಾತಿ ಆಧಾರದ ಮೇಲೆ ಕೆಳಕಂಡ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ವರ್ಗಾವಾರು ಖಾಲಿ ಹುದ್ದೆಗಳ ಸಂಖ್ಯೆ ಹಾಗೂ ಗರಿಷ್ಠ ವಯೋಮಿತಿಗಾಗಿ ವಿವರವಾದ ಜಾಹೀರಾನ್ನು ನೋಡಬಹುದು.

    ಹುದ್ದೆಗಳ ವಿವರ:

    ಪ್ರಧಾನ ವ್ಯವಸ್ಥಾಪಕ – 01
    ಜಂಟಿ ನಿರ್ದೇಶಕ – (ತಾಂತ್ರಿಕ) – 08
    ಜಂಟಿ ನಿರ್ದೇಶಕ ( ಆಡಳಿತ ಮತ್ತು ಹಣಕಾಸು ) -04
    ಹಿರಿಯ ವ್ಯವಸ್ಥಾಪಕ – ಪತ್ರಿಕೋದ್ಯಮ/ಸಮೂಹ ಸಂವಹನ ಅಥವಾ ಸಾರ್ವಜನಿಕ ಸಂಪರ್ಕ-01
    ಹಿರಿಯ ವ್ಯವಸ್ಥಾಪಕ (ಐಟಿ) – ಮಾಹಿತಿ ತಂತ್ರಜ್ಞಾನ- 01
    ಉಪನಿರ್ದೇಶಕ – ತಾಂತ್ರಿಕ – 11
    ಆಡಳಿತ ಮತ್ತು ಹಣಕಾಸು – 06
    ವ್ಯವಸ್ಥಾಪಕ -(ಪತ್ರಿಕೋದ್ಯಮ/ಸಮೂಹ/ಸಂವಹನ ಅಥವಾ ಸಾರ್ವಜನಿಕ ಸಂಪರ್ಕ- 03
    ,ಮಾರ್ಕೆಟಿಂಗ್ – 02, ಸಾಮಾಜಿಕ ಕಾರ್ಯ ಅಥವಾ ಮನಃಶಾಸ್ತ್ರ ಅಥವಾ ಕಾರ್ಮಿಕ ಮತ್ತು ಸಮಾಜ ಕಲ್ಯಾಣ – 01

    ಅರ್ಜಿ ಮತ್ತು ಇತರೆ ವಿವರಗಳು www.fssai.gov.in ರಡಿ jobs @FSSAI ( Carers) Sectionರಲ್ಲಿ ಲಭ್ಯ.

    ಮೇಲೆ ನೀಡಲಾದ ಖಾಲಿ ಹುದ್ದೆಗಳು ಸೂಚಿತವಾಗಿದ್ದು ಇದರಲ್ಲಿ ಅಥಾ ಕಡಿಮೆಯಾಗಬಹುದು. ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಕಡೇ ದಿನಾಂಕ 15 ನೇ ಮೇ 2021. ಆನ್‌ಲೈನ್ ಅಪ್ಲಿಕೇಶನ್‌ಗಾಗಿ ಪೋರ್ಟಲ್ 16 ನೇ ಎಪ್ರಿಲ್ 2021ರಿಂದ 15ನೇ ಮೇ 2021 ರವರೆಗೆ ಲಭ್ಯ.

  • ಬೆಂಗಳೂರು ಸಿಆರ್ ಪಿಎಫ್ ಕಾಂಪೋಸಿಟ್ ಆಸ್ಪತ್ರೆಯಲ್ಲಿ ವಿವಿಧ ಹುದ್ದೆ

    ಬೆಂಗಳೂರು ಸಿಆರ್ ಪಿಎಫ್ ಕಾಂಪೋಸಿಟ್ ಆಸ್ಪತ್ರೆಯಲ್ಲಿ ವಿವಿಧ ಹುದ್ದೆ

    ಬೆಂಗಳೂರಿನ ಸಿಆರ್ ಪಿಎಫ್ ನ ಕಾಂಪೋಸಿಟ್ ಆಸ್ಪತ್ರೆಯಲ್ಲಿ ವಿಶೇಷ ವೈದ್ಯಕೀಯ ಅಧಿಕಾರಿಗಳನ್ನು ಗುತ್ತಿಗೆ ಆಧಾರದ ಮೇಲೆ‌ ಕೆಳಕಂಡ ವಿವರಗಳು ದಿನಾಂಕಗಳನ್ವಯ ನೇಮಕಾತಿ ಮಾಡಿಕೊಳ್ಳಲು ಅರ್ಹ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ನೇರ ಸಂದರ್ಶನ ಏರ್ಪಡಿಸಲಾಗಿದೆ.

    ಸಂದರ್ಶನ ವೇಳೆ ಮತ್ತು ದಿನಾಂಕ : 22-04-2021 (9.00 ಗಂಟೆಗೆ)
    ಸ್ಥಳ ಸಂದರ್ಶನ ಕೇಂದ್ರ : ಬೆಂಗಳೂರಿನ ಸಿಆರ್ ಪಿಎಫ್ ನ ಕಾಂಪೊಸಿಟ್ ಆಸ್ಪತ್ರೆ, ಜಿಸಿ
    ವಯೋಮಿತಿ : ನೇರ ಸಂದರ್ಶನದ ದಿನಾಂಕದ ವೇಳೆಗೆ 70 ವರ್ಷ ಮೀರಿರಬಾರದು.

    ವೇತನ : ರೂ.85,000/- ವಿ.ವೈ.ಅಧಿಕಾರಿಗಳಿಗೆ

    ಹುದ್ದೆಗಳ ವಿವರ : ರೇಡಿಯಾಲಜಿ-01, ಸರ್ಜನ್ -01

    ವಿದ್ಯಾರ್ಹತೆ: ಸ್ನಾತಕೋತ್ತರ ಪದವಿ / ಸಂಬಂಧಿತ ವಿಷಯದಲ್ಲಿ ಡಿಪ್ಲೊಮಾ.
    ಸ್ನಾತಕೋತ್ತರ ಪದವಿ ನಂತರ ಒಂದೂವರೆ ವರ್ಷದ ಅನುಭವ.
    ಪಿಜಿ ಡಿಪ್ಲೋಮಾದ ನಂತರ ಎರಡೂವರೆ ವರ್ಷದ ಅನುಭವ.

    1. ನೇಮಕಾತಿಯು ಕೇವಲ ಗುತ್ತಿಗೆ ಆಧಾರದಲ್ಲಿ ಪ್ರಾರಂಭಿಜ ಗುತ್ತಿಗೆ ಅವಧಿ ಮೂರು ವರ್ಷಗಳಾಗಿದ್ದು, ನಂತರ ಗರಿಷ್ಠ 70 ವರ್ಷ ವಯಸ್ಸಿನವರೆಗೆ ವರ್ಷದಿಂದ ವರ್ಷಕ್ಕೆ ಹೆಚ್ಚುವರಿ 02 ವರ್ಷಗಳಿಗೆ ವಿಸ್ತರಿಸಬಹುದು.
    2. ಅವಧಿ ಪೂರ್ಣಗೊಂಡ ನಂತರ ಗುತ್ತಿಗೆಯು ವಿಫಲವಾಗುತ್ತದೆ. ಆದಾಗ್ಯೂ ಯಾವುದೇ ಕಾರಣ ನೀಡದೆ ಯಾವುದೇ ಸಮಯದಲ್ಲಿ (ಎರಡೂ ಬದಿಯಲ್ಲಿ) ಒಂದು ತಿಂಗಳ ನೋಟಿಸ್ ಅಥವಾ ಒಂದು ತಿಂಗಳ ನೋಟಿಸ್ ಪಾವತಿಸಿ ಅಥವಾ ಒಂದು ತಿಂಗಳ ವೇತನ ಪಾವತಿಸಿ ಅಥವಾ ಸಕ್ಷಮ ಪ್ರಾಧಿಕಾರದ ತೃಪ್ತಿಯಡಿ ಮೂರು ತಿಂಗಳು ಪೂರ್ಣಗೊಳಿಸಲು ವಿಫಲರಾದಲ್ಲಿ ನೇಮಕಾತಿಯನ್ನು ವಜಾಗೊಳಿಸಲಾಗುವುದು.
    3. ಪಿಎಫ್, ಪಿಂಚಣಿ, ಗ್ರಾಚುಟಿ, ಮೆಡಿಕಲ್ ಅಟೆಂಡೆನ್ಸ್ ಟ್ರೀಟ್ ಮೆಂಟ್, ಹಿರಿತನ, ಪ್ರಮೋಷನ್ ಇತ್ಯಾದಿ ಸವಲತ್ತುಗಳು ಅಥವಾ ನಿಯಮ ಆಧಾರದ ಮೇಲೆ ಸರ್ಕಾರಿ ಸೇವಾ ನೇಮಕಾತಿ ಗೆ ಲಭ್ಯವಿರುವ ಯಾವುದೇ ಸವಲತ್ತುಗಳನ್ನು ನಿಯುಕ್ತ ವ್ಯಕ್ತಿ ಪಡೆಯುವುದಿಲ್ಲ. ನಿಯುಕ್ತ ವ್ಯಕ್ತಿಯು ಸಿಆರ್ ಫಿಎಫ್ ನಡಿ ಯಾವುದೇ ಹುದ್ದೆಗೆ ಖಾಯಂ ನೇಮಕಾತಿಗೆ ಯಾವುದೇ ಕ್ಲೇಮು/ ಹಕ್ಕನ್ನು ಹೊಂದಿರುವುದಿಲ್ಲ.
    4. ನಿಯುಕ್ತ ವ್ಯಕ್ತಿಯ ಕೆಲಸದ ಅವಧಿಯು ಸಿಆರ್ ಪಿಎಫ್ ಆಸ್ಪತ್ರೆಗಳು/ ಸ್ಥಾಪನೆ ಅಥವಾ ಸಕ್ಷಮ ಪ್ರಾಧಿಕಾರದಿಂದ ಸ್ಥಿರಗೊಳಿಸಲಾದ ಅನ್ವಯ ಇರುತ್ತದೆ.
    5. ನೇಮಕಾತಿ ಯು ದೇಶದ ಯಾವುದೇ ಭಾಗದಲ್ಲಿ ಸೇವೆ ಮಾಡಲು ಬಾಧ್ಯವಾಗಿರುತ್ತದೆ.
      ನಿಯುಕ್ತ ವ್ಯಕ್ತಿಯು ಆತ/ಆಕೆಗೆ ನೀಡಲಾದ ಕೆಲಸವನ್ನು ನಿಭಾಯಿಸಬೇಕು. ಸಕ್ಷಮ ಪ್ರಾಧಿಕಾರವು ಅಗತ್ಯವಿದ್ದಲ್ಲಿ ಯಾವುದೇ ಕೆಲಸ ನೀಡುವ ಹಕ್ಕನ್ನು ಕಾಯ್ದಿರಿಸಿಕೊಂಡಿದೆ. ಇಂತಹ ಪರಿಸ್ಥಿತಿಯಲ್ಲಿ ಹೆಚ್ಚುವರಿ/ಅಧಿಕ ಭತ್ಯೆಗಳನ್ನು ನೀಡಲಾಗುವುದಿಲ್ಲ.
    6. ನಿಯುಕ್ತ ವ್ಯಕ್ತಿಯ ಲೀವ್ ಎಂಟೈಟಲ್ ಮೆಂಟನ್ನು ಆಗಿಂದಾಗ್ಗೆ ತಿದ್ದುಪಡಿಯಾದ ಡಿಒಪಿ ಮತ್ತು ಟಿ ಓ ಎಂ ನಂ. 12016/3/84- ಸ್ಥಾಪನೆ (ಎಲ್) ದಿನಾಂಕ 12 ನೇ ಎಪ್ರಿಲ್ 1985, ಓ.ಎಂ.ನಂ. 12016/1/90-ಸ್ಥಾಪನೆ (ಎಲ್) ದಿನಾಂಕ 05 ಜುಲೈ 1990 ಮತ್ತು ಓ.ಎಂ.ನಂ.12016/2/99-ಸ್ಥಾಪನೆ (ಎಲ್) ದಿನಾಂಕ 12 ಜುಲೈ 1999ರನ್ವಯ ನಿರ್ವಹಿಸಲಾಗುವುದು.
    7. ನೇರ ಸಂದರ್ಶನದ ವೇಳೆ ಯಾವುದೇ ಟಿಎ/ಡಿಎ ಮತ್ತು ಬೋರ್ಡಿಂಗ್ /ಲಾಡ್ಜಿಂಗ್ ನ ನೀಡಲಾಗುವುದಿಲ್ಲ.
    8. ಗುತ್ತಿಗೆ/ಹೈಯರಿಂಗ್ ಆಧಾರದ ಮೇಲೆ ಸಿಆರ್ ಪಿಎಫ್ ನಲ್ಲಿ ನಿಯೋಜಿತ ಅವಧಿಯಲ್ಲಿ ಯಾವುದೇ ಟಿಎ/ಡಿಎ ಪಾವತಿಸುವುದಿಲ್ಲ.
      ಗುತ್ತಿಗೆ ಅವಧಿಯಲ್ಲಿ ಆತ/ಆಕೆಯ ಆಡಳಿತ ಪ್ರಾಧಿಕಾರದ ಆದೇಶಗಳನ್ನು ಶಿಸ್ತುಬದ್ಧವಾಗಿ ಲಿಖಿತ ಅಥವಾ ಮೌಖಿಕವಾಗಿ ಪಾಲಿಸಬೇಕು.
    9. ಆಸಕ್ತ ಅಭ್ಯರ್ಥಿಗಳು ಜಿಡಿಎಂಗಳು ಮತ್ತಯ ವಿಶೇಷ ಎಂಒ ಗಳ ಗುತ್ತಿಗೆ ನೇಮಕಾತಿಗಾಗಿ ಪೂರ್ಣ ಷರತ್ತು ಮತ್ತು ನಿಬಂಧನೆಗಳ ಪೂರ್ಣ ವಿವರಗಳಿಗಾಗಿ ನಮ್ಮ ವೆಬ್‌ಸೈಟ್‌ www.crpf.gov.in ಗೆ ಭೇಟಿ ನೀಡಿ.
    10. ನೇರ ಸಂದರ್ಶನ ಹಾಜರಾತಿಗೆ ಅಭ್ಯರ್ಥಿಗಳು ತಮ್ಮ ಮೂಲ ಮತ್ತು ಸಂಬಂಧಿತ ದಾಖಲೆಗಳಾದ ಡಿಗ್ರಿ ವಯಸ್ಸು ಪುರಾವೆ ಮತ್ತು ಹಳೆ ಅನುಭವ ಪ್ರಮಾಣ ಪತ್ರ ಇತ್ಯಾದಿ ನಕಲು ಪ್ರತಿಗಳನ್ನು ಅಭ್ಯರ್ಥಿಯು ಹೆಸರು ಮತ್ತು ಹುದ್ದೆಯ ವಿವರಗಳನ್ನು ಬಿಳಿ ಹಾಳೆಯ ಮೇಲೆ ಸೂಪರ್ ಸ್ಕ್ರಿಪ್ಟ್ ಮಾಡಿ ಹಾಗೂ ಐದು ಇತ್ತೀಚಿನ ಭಾವಚಿತ್ರವನ್ನು ತರಬೇಕು. ಸಂದರ್ಶನವು ವೈದ್ಯಕೀಯ ತಪಾಸಣೆಯಿಂದ ಪ್ರಾರಂಭವಾಗುವುದು.
  • KSET ಪರೀಕ್ಷಾ ದಿನಾಂಕ ನಿಗದಿ: ಅಧಿಕೃತ ಪ್ರಕಟಣೆ ಬಿಡುಗಡೆ

    KSET ಪರೀಕ್ಷಾ ದಿನಾಂಕ ನಿಗದಿ: ಅಧಿಕೃತ ಪ್ರಕಟಣೆ ಬಿಡುಗಡೆ

    ಮೈಸೂರು ವಿಶ್ವವಿದ್ಯಾನಿಲಯವು ಕರ್ನಾಟಕ ರಾಜ್ಯ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆಎಸ್.ಇ.ಟಿ) ಯನ್ನು ದಿನಾಂಕ : 11 ನೇ ಎಪ್ರಿಲ್ 2021 ರಂದು ನಡೆಸಲು ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಆದರೆ ಕಾರಣಾಂತರಗಳಿಂದ ಪರೀಕ್ಷೆಯನ್ನು ಮುಂದೂಡಲಾಗಿತ್ತು.

    ಆದ್ದರಿಂದ ಸದರಿ ಕೆಸೆಟ್ 2021 ಪರೀಕ್ಷೆಯನ್ನು 25-04-2021 (ಭಾನುವಾರ) ನಡೆಸಲು ತೀರ್ಮಾನಿಸಲಾಗಿದೆ.

    ಕೆಸೆಟ್ 2021 ರ ಪರೀಕ್ಷೆಯನ್ನು ನಡೆಸಲು ಪತ್ರದ ಮುಖಾಂತರ ಈಗಾಗಲೇ ಕರ್ನಾಟಕ ಸರಕಾರದ ಗಮನಕ್ಕೆ ತರಲಾಗಿದೆ. ಈ ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲು ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳು, ಪೊಲೀಸ್ ಆಯುಕ್ತರು, ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಸಾರಿಗೆ ಅಧಿಕಾರಿಗಳ ಗಮನಕ್ಕೆ ತಂದಿದೆ.

  • HMT : ಬೆಂಗಳೂರು : ಕಂಪನಿ ಟ್ರೈನೀಸ್ ಹುದ್ದೆಗೆ ಅರ್ಜಿ ಆಹ್ವಾನ

    HMT : ಬೆಂಗಳೂರು : ಕಂಪನಿ ಟ್ರೈನೀಸ್ ಹುದ್ದೆಗೆ ಅರ್ಜಿ ಆಹ್ವಾನ

    ಹೆಚ್ ಎಂಟಿ ಮೆಷಿನ್ ಟೂಲ್ಸ್ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ‌. ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

    ಹುದ್ದೆ : ಕಂಪನಿ ಟ್ರೈನೀಸ್ (ವರ್ಕ್ ಮೆನ್ )

    ಹುದ್ದೆ ಸ್ಥಳ : ಜಾಲಹಳ್ಳಿ – ಕರ್ನಾಟಕ

    ಅರ್ಜಿ ಶುಲ್ಕ : ಅರ್ಜಿ ಶುಲ್ಕವನ್ನು ಡಿಮಾಂಡ್ ಡ್ರಾಫ್ಟ್ ಮೂಲಕ ಪಾವತಿಸಬೇಕು.

    ಜನರಲ್ , ಇಡ್ಬ್ಯುಎಸ್/ ಒಬಿಸಿ ಅಭ್ಯರ್ಥಿಗಳಿಗೆ ರೂ.500/-, ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ರೂ.250/- ಅರ್ಜಿ ಶುಲ್ಕವನ್ನು ಪಾವತಿಸಬೇಕು.

    ಹುದ್ದೆ ಸಂಖ್ಯೆ : 12

    ಹುದ್ದೆ ವಿವರ : ಮೆಶಿನಿಸ್ಟ್, ಫಿಟ್ಟರ್, ಗ್ರೈಂಡರ್, ಎಲೆಕ್ಟ್ರಿಶಿಯನ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ

    ವಿದ್ಯಾರ್ಹತೆ : ಈ ಹುದ್ದೆಗಳಿಗೆ ಅಭ್ಯರ್ಥಿಗಳು NCVT/ITI+NAC ನ್ನು ಯಾವುದೇ ಅಂಗೀಕೃತ ಬೋರ್ಡ್/ಇನ್ಸ್ಟಿಟ್ಯೂಟ್ ನಿಂದ ಪಡೆದಿರಬೇಕು.

    ವಯೋಮಿತಿ : ಅಭ್ಯರ್ಥಿಗಳ ವಯೋಮಿತಿಯು 33 ವರ್ಷ ಮೀರಿರಬಾರದು.

    ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

    ನೋಟಿಫಿಕೇಶನ್ ಗಾಗಿ ಈ ಲಿಂಕ್ ಕ್ಲಿಕ್ ಮಾಡಿ