ಬೆಂಗಳೂರು ಸಿಆರ್ ಪಿಎಫ್ ಕಾಂಪೋಸಿಟ್ ಆಸ್ಪತ್ರೆಯಲ್ಲಿ ವಿವಿಧ ಹುದ್ದೆ

Written By Mallika

Lorem ipsum dolor sit amet consectetur pulvinar ligula augue quis venenatis. 

Advertisements

ಬೆಂಗಳೂರಿನ ಸಿಆರ್ ಪಿಎಫ್ ನ ಕಾಂಪೋಸಿಟ್ ಆಸ್ಪತ್ರೆಯಲ್ಲಿ ವಿಶೇಷ ವೈದ್ಯಕೀಯ ಅಧಿಕಾರಿಗಳನ್ನು ಗುತ್ತಿಗೆ ಆಧಾರದ ಮೇಲೆ‌ ಕೆಳಕಂಡ ವಿವರಗಳು ದಿನಾಂಕಗಳನ್ವಯ ನೇಮಕಾತಿ ಮಾಡಿಕೊಳ್ಳಲು ಅರ್ಹ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ನೇರ ಸಂದರ್ಶನ ಏರ್ಪಡಿಸಲಾಗಿದೆ.

ಸಂದರ್ಶನ ವೇಳೆ ಮತ್ತು ದಿನಾಂಕ : 22-04-2021 (9.00 ಗಂಟೆಗೆ)
ಸ್ಥಳ ಸಂದರ್ಶನ ಕೇಂದ್ರ : ಬೆಂಗಳೂರಿನ ಸಿಆರ್ ಪಿಎಫ್ ನ ಕಾಂಪೊಸಿಟ್ ಆಸ್ಪತ್ರೆ, ಜಿಸಿ
ವಯೋಮಿತಿ : ನೇರ ಸಂದರ್ಶನದ ದಿನಾಂಕದ ವೇಳೆಗೆ 70 ವರ್ಷ ಮೀರಿರಬಾರದು.

ವೇತನ : ರೂ.85,000/- ವಿ.ವೈ.ಅಧಿಕಾರಿಗಳಿಗೆ

ಹುದ್ದೆಗಳ ವಿವರ : ರೇಡಿಯಾಲಜಿ-01, ಸರ್ಜನ್ -01

ವಿದ್ಯಾರ್ಹತೆ: ಸ್ನಾತಕೋತ್ತರ ಪದವಿ / ಸಂಬಂಧಿತ ವಿಷಯದಲ್ಲಿ ಡಿಪ್ಲೊಮಾ.
ಸ್ನಾತಕೋತ್ತರ ಪದವಿ ನಂತರ ಒಂದೂವರೆ ವರ್ಷದ ಅನುಭವ.
ಪಿಜಿ ಡಿಪ್ಲೋಮಾದ ನಂತರ ಎರಡೂವರೆ ವರ್ಷದ ಅನುಭವ.

  1. ನೇಮಕಾತಿಯು ಕೇವಲ ಗುತ್ತಿಗೆ ಆಧಾರದಲ್ಲಿ ಪ್ರಾರಂಭಿಜ ಗುತ್ತಿಗೆ ಅವಧಿ ಮೂರು ವರ್ಷಗಳಾಗಿದ್ದು, ನಂತರ ಗರಿಷ್ಠ 70 ವರ್ಷ ವಯಸ್ಸಿನವರೆಗೆ ವರ್ಷದಿಂದ ವರ್ಷಕ್ಕೆ ಹೆಚ್ಚುವರಿ 02 ವರ್ಷಗಳಿಗೆ ವಿಸ್ತರಿಸಬಹುದು.
  2. ಅವಧಿ ಪೂರ್ಣಗೊಂಡ ನಂತರ ಗುತ್ತಿಗೆಯು ವಿಫಲವಾಗುತ್ತದೆ. ಆದಾಗ್ಯೂ ಯಾವುದೇ ಕಾರಣ ನೀಡದೆ ಯಾವುದೇ ಸಮಯದಲ್ಲಿ (ಎರಡೂ ಬದಿಯಲ್ಲಿ) ಒಂದು ತಿಂಗಳ ನೋಟಿಸ್ ಅಥವಾ ಒಂದು ತಿಂಗಳ ನೋಟಿಸ್ ಪಾವತಿಸಿ ಅಥವಾ ಒಂದು ತಿಂಗಳ ವೇತನ ಪಾವತಿಸಿ ಅಥವಾ ಸಕ್ಷಮ ಪ್ರಾಧಿಕಾರದ ತೃಪ್ತಿಯಡಿ ಮೂರು ತಿಂಗಳು ಪೂರ್ಣಗೊಳಿಸಲು ವಿಫಲರಾದಲ್ಲಿ ನೇಮಕಾತಿಯನ್ನು ವಜಾಗೊಳಿಸಲಾಗುವುದು.
  3. ಪಿಎಫ್, ಪಿಂಚಣಿ, ಗ್ರಾಚುಟಿ, ಮೆಡಿಕಲ್ ಅಟೆಂಡೆನ್ಸ್ ಟ್ರೀಟ್ ಮೆಂಟ್, ಹಿರಿತನ, ಪ್ರಮೋಷನ್ ಇತ್ಯಾದಿ ಸವಲತ್ತುಗಳು ಅಥವಾ ನಿಯಮ ಆಧಾರದ ಮೇಲೆ ಸರ್ಕಾರಿ ಸೇವಾ ನೇಮಕಾತಿ ಗೆ ಲಭ್ಯವಿರುವ ಯಾವುದೇ ಸವಲತ್ತುಗಳನ್ನು ನಿಯುಕ್ತ ವ್ಯಕ್ತಿ ಪಡೆಯುವುದಿಲ್ಲ. ನಿಯುಕ್ತ ವ್ಯಕ್ತಿಯು ಸಿಆರ್ ಫಿಎಫ್ ನಡಿ ಯಾವುದೇ ಹುದ್ದೆಗೆ ಖಾಯಂ ನೇಮಕಾತಿಗೆ ಯಾವುದೇ ಕ್ಲೇಮು/ ಹಕ್ಕನ್ನು ಹೊಂದಿರುವುದಿಲ್ಲ.
  4. ನಿಯುಕ್ತ ವ್ಯಕ್ತಿಯ ಕೆಲಸದ ಅವಧಿಯು ಸಿಆರ್ ಪಿಎಫ್ ಆಸ್ಪತ್ರೆಗಳು/ ಸ್ಥಾಪನೆ ಅಥವಾ ಸಕ್ಷಮ ಪ್ರಾಧಿಕಾರದಿಂದ ಸ್ಥಿರಗೊಳಿಸಲಾದ ಅನ್ವಯ ಇರುತ್ತದೆ.
  5. ನೇಮಕಾತಿ ಯು ದೇಶದ ಯಾವುದೇ ಭಾಗದಲ್ಲಿ ಸೇವೆ ಮಾಡಲು ಬಾಧ್ಯವಾಗಿರುತ್ತದೆ.
    ನಿಯುಕ್ತ ವ್ಯಕ್ತಿಯು ಆತ/ಆಕೆಗೆ ನೀಡಲಾದ ಕೆಲಸವನ್ನು ನಿಭಾಯಿಸಬೇಕು. ಸಕ್ಷಮ ಪ್ರಾಧಿಕಾರವು ಅಗತ್ಯವಿದ್ದಲ್ಲಿ ಯಾವುದೇ ಕೆಲಸ ನೀಡುವ ಹಕ್ಕನ್ನು ಕಾಯ್ದಿರಿಸಿಕೊಂಡಿದೆ. ಇಂತಹ ಪರಿಸ್ಥಿತಿಯಲ್ಲಿ ಹೆಚ್ಚುವರಿ/ಅಧಿಕ ಭತ್ಯೆಗಳನ್ನು ನೀಡಲಾಗುವುದಿಲ್ಲ.
  6. ನಿಯುಕ್ತ ವ್ಯಕ್ತಿಯ ಲೀವ್ ಎಂಟೈಟಲ್ ಮೆಂಟನ್ನು ಆಗಿಂದಾಗ್ಗೆ ತಿದ್ದುಪಡಿಯಾದ ಡಿಒಪಿ ಮತ್ತು ಟಿ ಓ ಎಂ ನಂ. 12016/3/84- ಸ್ಥಾಪನೆ (ಎಲ್) ದಿನಾಂಕ 12 ನೇ ಎಪ್ರಿಲ್ 1985, ಓ.ಎಂ.ನಂ. 12016/1/90-ಸ್ಥಾಪನೆ (ಎಲ್) ದಿನಾಂಕ 05 ಜುಲೈ 1990 ಮತ್ತು ಓ.ಎಂ.ನಂ.12016/2/99-ಸ್ಥಾಪನೆ (ಎಲ್) ದಿನಾಂಕ 12 ಜುಲೈ 1999ರನ್ವಯ ನಿರ್ವಹಿಸಲಾಗುವುದು.
  7. ನೇರ ಸಂದರ್ಶನದ ವೇಳೆ ಯಾವುದೇ ಟಿಎ/ಡಿಎ ಮತ್ತು ಬೋರ್ಡಿಂಗ್ /ಲಾಡ್ಜಿಂಗ್ ನ ನೀಡಲಾಗುವುದಿಲ್ಲ.
  8. ಗುತ್ತಿಗೆ/ಹೈಯರಿಂಗ್ ಆಧಾರದ ಮೇಲೆ ಸಿಆರ್ ಪಿಎಫ್ ನಲ್ಲಿ ನಿಯೋಜಿತ ಅವಧಿಯಲ್ಲಿ ಯಾವುದೇ ಟಿಎ/ಡಿಎ ಪಾವತಿಸುವುದಿಲ್ಲ.
    ಗುತ್ತಿಗೆ ಅವಧಿಯಲ್ಲಿ ಆತ/ಆಕೆಯ ಆಡಳಿತ ಪ್ರಾಧಿಕಾರದ ಆದೇಶಗಳನ್ನು ಶಿಸ್ತುಬದ್ಧವಾಗಿ ಲಿಖಿತ ಅಥವಾ ಮೌಖಿಕವಾಗಿ ಪಾಲಿಸಬೇಕು.
  9. ಆಸಕ್ತ ಅಭ್ಯರ್ಥಿಗಳು ಜಿಡಿಎಂಗಳು ಮತ್ತಯ ವಿಶೇಷ ಎಂಒ ಗಳ ಗುತ್ತಿಗೆ ನೇಮಕಾತಿಗಾಗಿ ಪೂರ್ಣ ಷರತ್ತು ಮತ್ತು ನಿಬಂಧನೆಗಳ ಪೂರ್ಣ ವಿವರಗಳಿಗಾಗಿ ನಮ್ಮ ವೆಬ್‌ಸೈಟ್‌ www.crpf.gov.in ಗೆ ಭೇಟಿ ನೀಡಿ.
  10. ನೇರ ಸಂದರ್ಶನ ಹಾಜರಾತಿಗೆ ಅಭ್ಯರ್ಥಿಗಳು ತಮ್ಮ ಮೂಲ ಮತ್ತು ಸಂಬಂಧಿತ ದಾಖಲೆಗಳಾದ ಡಿಗ್ರಿ ವಯಸ್ಸು ಪುರಾವೆ ಮತ್ತು ಹಳೆ ಅನುಭವ ಪ್ರಮಾಣ ಪತ್ರ ಇತ್ಯಾದಿ ನಕಲು ಪ್ರತಿಗಳನ್ನು ಅಭ್ಯರ್ಥಿಯು ಹೆಸರು ಮತ್ತು ಹುದ್ದೆಯ ವಿವರಗಳನ್ನು ಬಿಳಿ ಹಾಳೆಯ ಮೇಲೆ ಸೂಪರ್ ಸ್ಕ್ರಿಪ್ಟ್ ಮಾಡಿ ಹಾಗೂ ಐದು ಇತ್ತೀಚಿನ ಭಾವಚಿತ್ರವನ್ನು ತರಬೇಕು. ಸಂದರ್ಶನವು ವೈದ್ಯಕೀಯ ತಪಾಸಣೆಯಿಂದ ಪ್ರಾರಂಭವಾಗುವುದು.

Leave a Comment