ಸರಕಾರಿ ಸ್ವಾಮ್ಯದ ಆಯಿಲ್ ಇಂಡಿಯಾ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗೆ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ.
ಆಯಿಲ್ ಇಂಡಿಯಾ ಲಿಮಿಟೆಡ್ ಜ್ಯೂನಿಯರ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಿದೆ.
ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ : ಜುಲೈ 01, 2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಆಗಸ್ಟ್ 15, 2021
ದುಲಿಯಾಜನ್ ನಲ್ಲಿರುವ ಕೇಂದ್ರ ಕಚೇರಿಯಿಂದ 120 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಬಳಿಕ ಆಯ್ಕೆಯಾದ ಅಭ್ಯರ್ಥಿಗಳನ್ನು ಅಸ್ಸಾಂ ಮತ್ತು ಅರುಣಾಚಲ ಪ್ರದೇಶದ ಉತ್ಪಾದನೆ ಮತ್ತು ಪರಿಶೋಧನಾ ಪ್ರದೇಶಗಳಲ್ಲಿ oil ಘಟಕಗಳಲ್ಲಿ ಕೆಲಸಕ್ಕೆ ನಿಯೋಜಿಸಲಾಗುವುದು.
ವಿದ್ಯಾರ್ಹತೆ : ಅಭ್ಯರ್ಥಿಗಳು ಮಾನ್ಯತೆ ಪಡೆದ ಬೋರ್ಡ್ ಅಥವಾ ಯುನಿವರ್ಸಿಟಿ ಯಿಂದ 12 ನೇ ತರಗತಿ ಅಥವಾ ಪಿಯುಸಿಯಲ್ಲಿ ಶೇ.40 ರಷ್ಟು ಅಂಕ ಗಳಿಸಿ ಪಾಸಾಗಿರಬೇಕು.
ಕನಿಷ್ಠ 06 ತಿಂಗಳ ಅವಧಿಯ ಕಂಪ್ಯೂಟರ್ ಅಪ್ಲಿಕೇಶನ್ ನಲ್ಲಿ ಡಿಪ್ಲೋಮಾ ಅಥವಾ ಪ್ರಮಾಣ ಪತ್ರವನ್ನು ಹೊಂದಿರಬೇಕು. ಎಂಎಸ್ ವರ್ಡ್, ಎಂಎಸ್ ಎಕ್ಸೆಲ್, ಎಂಎಸ್ ಪವರ್ ಪಾಯಿಂಟ್ ಇತ್ಯಾದಿಗಳನ್ನು ಸಂಪೂರ್ಣವಾಗಿ ಬಲ್ಲವರಾಗಿರಬೇಕು.
ವಯೋಮಿತಿ : ಜನರಲ್ ಕೆಟಗರಿ ಅಭ್ಯರ್ಥಿಗಳಿಗೆ 18 ರಿಂದ 30 ವರ್ಷ. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 18 ರಿಂದ 35 ವರ್ಷ ವಯಸ್ಸು, ಒಬಿಸಿ( ಹಿಂದುಳಿದ ವರ್ಗ) ಅಭ್ಯರ್ಥಿಯ ವಯಸ್ಸು 18 ರಿಂದ 33 ವರ್ಷಗಳ ಒಳಗಿರಬೇಕು.
ಅರ್ಜಿ ಶುಲ್ಕ : ಒಬಿಸಿ ಮತ್ತು ಜನರಲ್ ವರ್ಗದ ಅಭ್ಯರ್ಥಿಗಳು ರೂ.200 ಪಾವತಿಸಬೇಕಾಗುತ್ತದೆ. ಎಸ್ ಸಿ/ ಎಸ್ ಟಿ/ಇಡಬ್ಲುಎಸ್/ ಬೆಂಚ್ ಮಾರ್ಕ್/ ವಿಕಲಾಂಗ ವ್ಯಕ್ತಿಗಳು/ಮಾಜಿ ಸೈನಿಕರ ಅಭ್ಯರ್ಥಿಗಳಿಗೆ ಆನ್ಲೈನ್ ಅರ್ಜಿ ಶುಲ್ಕದಲ್ಲಿ ವಿನಾಯಿತಿ ನೀಡಲಾಗಿದೆ.
ಸಿಬಿಟಿ ( ಕಂಪ್ಯೂಟರ್ ಆಧಾರಿತ ಪರೀಕ್ಷೆ) ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ. ಇದರಲ್ಲಿ ಒಟ್ಟು 40% ಅರ್ಹತಾ ಅಂಕಗಳನ್ನು ಗಳಿಸಬೇಕು. ಪರೀಕ್ಷೆಯು ಬಹು ಆಯ್ಕೆ ಪ್ರಶ್ನೆ ಪತ್ರಿಕೆ ( ಎಂಸಿಕ್ಯೂ) ಮಾದರಿ ಪ್ರಶ್ನೆಯನ್ನು ಒಳಗೊಂಡಿರುತ್ತದೆ.
ನೇಮಕವಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 26,600 ಯಿಂದ ರೂ. 90,000 ಗಳವರೆಗೆ ವೇತನ ನಿಗದಿಪಡಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ.
ಅಧಿಕೃತ ವೆಬ್‌ಸೈಟ್ ಗಾಗಿ ಈ ಲಿಂಕ್ ಕ್ಲಿಕ್ ಮಾಡಿ