ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ 6,100 ಹುದ್ದೆ, ಆಸಕ್ತರು ಅರ್ಜಿ ಸಲ್ಲಿಸಿ

Written By Mallika

Lorem ipsum dolor sit amet consectetur pulvinar ligula augue quis venenatis. 

Advertisements

ಭಾರತೀಯ ಸ್ಟೇಟ್ ಬ್ಯಾಂಕ್ ದೇಶದಾದ್ಯಂತ ತನ್ನ ಶಾಖೆಗಳಲ್ಲಿ 6100 ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ವಿವರಗಳನ್ನು ತಿಳಿದು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಇವುಗಳಲ್ಲಿ ಕರ್ನಾಟಕದಲ್ಲಿ ೨೦೦ ಅಪ್ರೆಂಟಿಸ್‌ ತರಬೇತಿ ಹುದ್ದೆಗಳಿವೆ.

ಎಸ್ ಬಿಐ ಅಪ್ರೆಂಟಿಸ್ ಹುದ್ದೆಗಳ ಸಂಖ್ಯೆ : 6100

ಕರ್ನಾಟಕದಲ್ಲಿ ಎಸ್ ಬಿಐ ಅಪ್ರೆಂಟಿಸ್ ಹುದ್ದೆಗಳ ಸಂಖ್ಯೆ : 200

ಅರ್ಜಿ ಸಲ್ಲಿಕೆಗೆ ಪ್ರಮುಖ ದಿನಾಂಕ :

ಅರ್ಜಿ‌‌ ಸಲ್ಲಿಕೆಗೆ ಆರಂಭಿಕ ದಿನಾಂಕ : 06-07-2021
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ : 26-07-2021
ಆನ್ಲೈನ್ ಪರೀಕ್ಷೆ ದಿನ : ಆಗಸ್ಟ್ ,2021

ಅಪ್ಲಿಕೇಶನ್ ಶುಲ್ಕ ಎಷ್ಟು ?
ಸಾಮಾನ್ಯ, ಒಬಿಸಿ ಮತ್ತು ಇಡ್ಬ್ಯುಎಸ್ ಅಭ್ಯರ್ಥಿಗಳಿಗೆ ರೂ.300!-
ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ ಪಿಡ್ಬ್ಯುಡಿ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

ಯಾವುದೇ ಯುನಿವರ್ಸಿಟಿ ಅಥವಾ ಇನ್ಸ್ಟಿಟ್ಯೂಟ್ ನಿಂದ ಪದವಿ ಪಡೆದವರು ಅರ್ಜಿಯನ್ನು ಸಲ್ಲಿಸಬಹುದು.

ವಯೋಮಿತಿ : ಅರ್ಜಿ ಸಲ್ಲಿಸಬಯಸುವ ವ್ಯಕ್ತಿಗಳ ವಯಸ್ಸು 20 ವರ್ಷದಿಂದ 28 ವರ್ಷಗಳ ನಡುವೆ ಇರಬೇಕು. ಎಸ್ ಸಿ/ ಎಸ್ ಟಿ/ಒಬಿಸಿ/ ಪಿಡ್ಬ್ಯುಬಿಡಿ ಅಭ್ಯರ್ಥಿಗಳಿಗೆ ಭಾರತೀಯ ಸರಕಾರದ ನಿಯಮಾವಳಿ ಪ್ರಕಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗುತ್ತದೆ.

ನೇಮಕಾತಿ ವಿಧಾನ‌: ಅಭ್ಯರ್ಥಿಗಳಿಗೆ ಆನ್ಲೈನ್ ಲಿಖಿತ ಪರೀಕ್ಷೆ ಮತ್ತು ಸ್ಥಳೀಯ ಭಾಷೆ ಪರೀಕ್ಷೆ ನಡೆಸಿ ಆಯ್ಕೆ ನಡೆಸಲಾಗುತ್ತದೆ. ಆನ್ಲೈನ್ ಲಿಖಿತ ಪರೀಕ್ಷೆ 100 ಅಂಕಗಳ 100 ಅಬ್ಜೆಕ್ಟಿವ್ ಟೈಪ್ ಪ್ರಶ್ನೆಗಳಿಗೆ ನಡೆಸಲಾಗುತ್ತದೆ. ಪರೀಕ್ಷೆಯನ್ನು ಈ ಕೆಳಗಿನ 4 ಸೆಕ್ಷನ್ ಗಳಲ್ಲಿ ನಡೆಸಲಾಗುತ್ತದೆ. ಪ್ರತಿ ಸೆಕ್ಷನ್ ನಲ್ಲಿ 25 ಪ್ರಶ್ನೆಗಳು ಮತ್ತು 25 ಅಂಕಗಳು ಇರುತ್ತವೆ.

ಜೆನೆರಲ್/ ಫೈನಾನ್ಷಿಯಲ್ ಅವಾರ್ ನೆಸ್
ಜೆನಡರಲ್ ಇಂಗ್ಲೀಷ್
ಕ್ವಾಂಟಿಟೇಟಿವ್ ಅಪ್ಟಿಟ್ಯೂಡ್
ರೀಸನಿಂಗ್ ಎಬಿಲಿಟಿ ಮತ್ತು ಕಂಪ್ಯೂಟರ್ ಅಪ್ಟಿಟ್ಯೂಡ್

ಅಪ್ರೆಂಟಿಸ್ ಹುದ್ದೆಗೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಮೊದಲ ವರ್ಷ ಮಾಸಿಕ ರೂ.15,000/- ನೀಡಲಾಗುತ್ತದೆ.

ಅಪ್ರೆಂಟಿಸ್ ಹುದ್ದೆಯ ಅವಧಿ : 1 ವರ್ಷ.

ಅರ್ಜಿ ಸಲ್ಲಿಕೆ ಹೇಗೆ? ಅಭ್ಯರ್ಥಿಗಳು ವೆಬ್ ಸೈಟ್ https://sbi/careers ಅಥವಾ https://sbi.co.in/careers ಗೆ ಭೇಟಿ ನೀಡಿರಿ.

ಬೇಸಿಕ್ ಮಾಹಿತಿಗಳಾದ ಹೆಸರು, ಮೊಬೈಲ್ ನಂಬರ್, ಇ- ಮೇಲ್ ವಿಳಾಸ ನೀಡಿ ರಿಜಿಸ್ಟರ್ ಆಗಿ, ನಂತರ ಅರ್ಜಿ ಸಲ್ಲಿಸಲು ವಿದ್ಯಾರ್ಹತೆ ಮಾಹಿತಿಗಳನ್ನು ನೀಡಬೇಕು. ಅಗತ್ಯ ಸ್ಕ್ಯಾನ್ ಕಾಪಿಗಳಾದ ಭಾವಚಿತ್ರ, ಸಹಿ ಅಪ್ ಲೋಡ್ ಮಾಡಬೇಕಾಗುತ್ತದೆ. ನಂತರ ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಿ ಅಂತಿಮವಾಗಿ ಅರ್ಜಿ‌ಸಲ್ಲಿಕೆ ಪೂರ್ಣಗೊಳಿಸಬಹುದು.

ಅರ್ಜಿ ಶುಲ್ಕವನ್ನು ನಿಗದಿತ ದಿನಾಂಕದೊಳಗೆ ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್, ಡೆಬಿಟ್ ಕಾರ್ಡ್ ಮೂಲಕ ಪಾವತಿಸಬಹುದು.

ರಾಜ್ಯದಲ್ಲಿ ಎಷ್ಟು ಹುದ್ದೆಗಳಿವೆ?: ರಾಜ್ಯದಲ್ಲಿ ಒಟ್ಟು ೨೦೦ ಹುದ್ದೆಗಳಿದ್ದು, ಜಿಲ್ಲಾವಾರು ಮಾಹಿತಿ ಈ ಕೆಳಗಿನಂತೆ ಇದೆ.

Bagalkot-8, Bangalore Rural-10, Bangalore Urban-10, Belgaum-10, Bellary-10, Bidar-5, Chickmagaluru-5, Chikkaballapur-5, Chitradurga-5, Dakshina Kannada-10, Davangere-5, Dharwad-10, Gadag-5, Kalaburagi-10, Hassan-5, Haveri-5, Kodagu-5, Kolar-5, Koppal-5, Mandya-5, Mysore-5, Raichur-5, Ramanagaram-5, Shimoga-5, Tumkur-9, Vijapura-10, Udupi-5, Uttar KANNADA-8, YADGIR-5.

ನೋಟಿಫಿಕೇಶನ್

Leave a Comment