NVS Recruitment 2024: ನವೋದಯ ವಿದ್ಯಾಲಯ ಸಮಿತಿಯು (NVS) ತನ್ನ ಅಧಿಕೃತ ಅಧಿಸೂಚನೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿತ್ತು. ಒಟ್ಟು 1377 ಬೋಧಕೇತರ ಹುದ್ದೆಗಳಿಗೆ ಈಗಾಗಲೇ ಅರ್ಜಿ ಆಹ್ವಾನಿಸಿತ್ತು. ಈ ಮೊದಲು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು 30-Apr-2024 ಎಂದು ನಿಗದಿಯಾಗಿತ್ತು. ಇದೀಗ ಈ ಆನ್ಲೈನ್ ಅರ್ಜಿ ಸಲ್ಲಿಕೆಯ ದಿನಾಂಕವನ್ನು 07-05-2024 ವರೆಗೆ ವಿಸ್ತರಿಸಲಾಗಿದೆ.
ಪ್ರಮುಖ ದಿನಾಂಕಗಳು;
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 22-03-2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 07th May 2024
ವೆಬ್ಸೈಟ್ನಲ್ಲಿ ಅರ್ಜಿ ನಮೂನೆ ತಿದ್ದುಪಡಿ ಮಾಡಲು ಕೊನೆಯ ದಿನಾಂಕ: 09 ರಿಂದ 11 ಮೇ 2024
ಪೋಸ್ಟ್ ಹೆಸರು ಸಂಖ್ಯೆ
ಮಹಿಳಾ ಸಿಬ್ಬಂದಿ ನರ್ಸ್ 121 ಹುದ್ದೆಗಳು
ಸಹಾಯಕ ವಿಭಾಗ ಅಧಿಕಾರಿ (ASO) 5 ಹುದ್ದೆಗಳು
ಆಡಿಟ್ ಸಹಾಯಕ 12 ಹುದ್ದೆಗಳು
ಜೂನಿಯರ್ ಅನುವಾದ ಅಧಿಕಾರಿ 4 ಹುದ್ದೆಗಳು
ಕಾನೂನು ಸಹಾಯಕ 1 ಹುದ್ದೆಗಳು
ಸ್ಟೆನೋಗ್ರಾಫರ್ 23ಹುದ್ದೆಗಳು
ಕಂಪ್ಯೂಟರ್ ಆಪರೇಟರ್ 2 ಹುದ್ದೆಗಳು
ಅಡುಗೆ ಮೇಲ್ವಿಚಾರಕ 78 ಹುದ್ದೆಗಳು
ಜೂನಿಯರ್ ಸೆಕ್ರೆಟರಿಯೇಟ್ ಸಹಾಯಕ (JSA) 381 ಹುದ್ದೆಗಳು
ಎಲೆಕ್ಟ್ರಿಷಿಯನ್ ಮತ್ತು ಪ್ಲಂಬರ್ 128 ಹುದ್ದೆಗಳು
ಲ್ಯಾಬ್ ಅಟೆಂಡೆಂಟ್ 161 ಹುದ್ದೆಗಳು
ಮೆಸ್ ಸಹಾಯಕ 442 ಹುದ್ದೆಗಳು
ಮಲ್ಟಿ ಟಾಸ್ಕಿಂಗ್ ಸ್ಟಾಫ್ (MTS) 19 ಹುದ್ದೆಗಳು
ವಿದ್ಯಾರ್ಹತೆ:
ಮಹಿಳಾ ಸ್ಟಾಫ್ ನರ್ಸ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಬಿ.ಎಸ್ಸಿ ತೇರ್ಗಡೆ ಹೊಂದಿರಬೇಕು.
ಸಹಾಯಕ ವಿಭಾಗ ಅಧಿಕಾರಿ (ASO) ಹುದ್ದೆಗೆ ಅರ್ಜಿ ಸಲ್ಲಿಸುವವರು ಪದವಿ ಮಾಡಿರಬೇಕು.
ಲೆಕ್ಕ ಪರಿಶೋಧನಾ ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸುವವರು ಬಿ.ಕಾಂ ತೇರ್ಗಡೆ ಹೊಂದಿರಬೇಕು.
ಜೂನಿಯರ್ ಅನುವಾದ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸ್ನಾತಕೋತ್ತರ ಪದವಿ ಪಡೆದಿರಬೇಕು.
ಕಾನೂನು ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸುವವರು LLB ಮಾಡಿರಬೇಕು.
ಸ್ಟೆನೋಗ್ರಾಫರ್ ಹುದ್ದೆಗೆ ಅರ್ಜಿ ಸಲ್ಲಿಸುವವರು 12 ನೇ ತರಗತಿ ಪಾಸ್ ಮಾಡಿರಬೇಕು.
ಕಂಪ್ಯೂಟರ್ ಆಪರೇಟರ್ ಹುದ್ದೆಗೆ BCA, B.Sc, B.E ಅಥವಾ B.Tech ಆಗಿರುವವರು ಅರ್ಜಿ ಸಲ್ಲಿಸಬಹುದು.
ಅಡುಗೆ ಮೇಲ್ವಿಚಾರಕ ಹುದ್ದೆಗೆ ಪದವಿ ಮಾಡಿರಬೇಕು.
ಜೂನಿಯರ್ ಸೆಕ್ರೆಟರಿಯೇಟ್ ಸಹಾಯಕ (JSA) ಹುದ್ದೆಗೆ 12 ನೇ ತರಗತಿ ಪಾಸ್ ಆಗಿರಬೇಕು.
ಎಲೆಕ್ಟ್ರಿಷಿಯನ್ ಮತ್ತು ಪ್ಲಂಬರ್ ಹುದ್ದೆಗೆ 10ನೇ, ITI ಮಾಡಿರುವವರು ಅರ್ಜಿ ಸಲ್ಲಿಸಬಹುದು.
ಲ್ಯಾಬ್ ಅಟೆಂಡೆಂಟ್ ಹುದ್ದೆಗೆ ಅರ್ಜಿ ಸಲ್ಲಿಸುವವರು 10ನೇ, 12ನೇ, ಡಿಪ್ಲೊಮಾ ಮಾಡಿರುವವರು ಅರ್ಜಿ ಸಲ್ಲಿಸಬಹುದು.
ಮೆಸ್ ಸಹಾಯಕ ಹುದ್ದೆಗೆ 10 ನೇ ತರಗತಿ ಪಾಸ್ ಆಗಿರಬೇಕು.
ಮಲ್ಟಿ ಟಾಸ್ಕಿಂಗ್ ಸ್ಟಾಫ್ (MTS) ಹುದ್ದೆಗೆ 10 ನೇ ತರಗತಿ ಪಾಸ್ ಆಗಿರಬೇಕು.
ವಯೋಮಿತಿ:
ಮಹಿಳಾ ಸಿಬ್ಬಂದಿ ನರ್ಸ್ 35 ವರ್ಷ
ಸಹಾಯಕ ವಿಭಾಗ ಅಧಿಕಾರಿ (ASO) 23-33 ವರ್ಷದೊಳಗಿರಬೇಕು.
ಆಡಿಟ್ ಸಹಾಯಕ 18-30 ವರ್ಷದೊಳಗಿನವರು ಅರ್ಜಿ ಸಲ್ಲಿಸಬೇಕು.
ಜೂನಿಯರ್ ಅನುವಾದ ಅಧಿಕಾರಿ 32 ಗರಿಷ್ಠ ವಯೋಮಿತಿ ಉಳ್ಳವರಾಗಿರಬೇಕು.
ಕಾನೂನು ಸಹಾಯಕ 23-35 ವರ್ಷದೊಳಗಿನವರಾಗಿರಬೇಕು
ಸ್ಟೆನೋಗ್ರಾಫರ್ 18-27 ವರ್ಷದೊಳಗಿನವರು ಅರ್ಜಿ ಸಲ್ಲಿಸಬೇಕು.
ಕಂಪ್ಯೂಟರ್ ಆಪರೇಟರ್ 18-30 ವರ್ಷದೊಳಗಿನವರಾಗಿರಬೇಕು.
ಅಡುಗೆ ಮೇಲ್ವಿಚಾರಕರು 35 ಗರಿಷ್ಠ ವಯೋಮಿತಿ ಆಗಿರಬೇಕು.
ಜೂನಿಯರ್ ಸೆಕ್ರೆಟರಿಯೇಟ್ ಸಹಾಯಕ (JSA) 18-27 ಗರಿಷ್ಠ ವಯೋಮಿತಿ ಉಳ್ಳವರಾಗಿರಬೇಕು.
ಎಲೆಕ್ಟ್ರಿಷಿಯನ್ ಮತ್ತು ಪ್ಲಂಬರ್ 18-40 ವರ್ಷ ವಯೋಮಿತಿ ಉಳ್ಳವರು ಅರ್ಜಿ ಸಲ್ಲಿಸಬಹುದು.
ಲ್ಯಾಬ್ ಅಟೆಂಡೆಂಟ್ , ಮೆಸ್ ಸಹಾಯಕ, ಮಲ್ಟಿ ಟಾಸ್ಕಿಂಗ್ ಸ್ಟಾಫ್ (MTS) ಹುದ್ದೆಗೆ 18-30 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು.
OBC (NCL) ಅಭ್ಯರ್ಥಿಗಳಿಗೆ 03 ವರ್ಷ, SC/ST ಅಭ್ಯರ್ಥಿಗಳಿಗೆ 05 ವರ್ಷ, PwD (ಸಾಮಾನ್ಯ) ಅಭ್ಯರ್ಥಿಗಳಿಗೆ 10 ವರ್ಷ, PwD [OBC (NCL)] ಅಭ್ಯರ್ಥಿಗಳಿಗೆ 13 ವರ್ಷ, PwD (SC/ST) ಅಭ್ಯರ್ಥಿಗಳಿಗೆ 15 ವರ್ಷ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.
ಅರ್ಜಿ ಶುಲ್ಕ:
SC/ST/PwBD ಅಭ್ಯರ್ಥಿಗಳು: ರೂ.500/-, ಸಾಮಾನ್ಯ/EWS/OBC (NCL) ಅಭ್ಯರ್ಥಿಗಳಿಗೆ, ಮಹಿಳಾ ಸಿಬ್ಬಂದಿ ನರ್ಸ್ ಹುದ್ದೆಗಳ ಅಭ್ಯರ್ಥಿಗಳಿಗೆ ರೂ.1500/-, ಉಳಿದ ಹುದ್ದೆಗಳಿಗೆ ರೂ.1000/- ಅರ್ಜಿ ಶುಲ್ಕ ವಿಧಿಸಲಾಗಿದೆ. ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿ ಮಾಡಬೇಕು.
ಆಯ್ಕೆ ಪ್ರಕ್ರಿಯೆ: ಮೇಲ್ಕಂಡ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ಕೌಶಲ್ಯ ಪರೀಕ್ಷೆ, ಟ್ರೇಡ್ ಪರೀಕ್ಷೆ, ದಾಖಲೆ ಪರಿಶೀಲನೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
ವೇತನ;
ಮಹಿಳಾ ಸಿಬ್ಬಂದಿ ನರ್ಸ್ ರೂ.44900-142400/- ಮಾಸಿಕ ವೇತನವಿರಲಿದೆ
ಸಹಾಯಕ ವಿಭಾಗ ಅಧಿಕಾರಿ (ASO), ಆಡಿಟ್ ಸಹಾಯಕ, ಜೂನಿಯರ್ ಅನುವಾದ ಅಧಿಕಾರಿ, ಕಾನೂನು ಸಹಾಯಕ ರೂ.35400-112400/- ಮಾಸಿಕ ವೇತನವಿರಲಿದೆ.
ಸ್ಟೆನೋಗ್ರಾಫರ್, ಕಂಪ್ಯೂಟರ್ ಆಪರೇಟರ್, ಅಡುಗೆ ಮೇಲ್ವಿಚಾರಕ ಹುದ್ದೆಗಳಿಗೆ ಮಾಸಿಕ ರೂ.25500-81100/- ವೇತನವಿರಲಿದೆ.
ಜೂನಿಯರ್ ಸೆಕ್ರೆಟರಿಯೇಟ್ ಸಹಾಯಕ (JSA), ಎಲೆಕ್ಟ್ರಿಷಿಯನ್ ಮತ್ತು ಪ್ಲಂಬರ್, ಹುದ್ದೆಗಳಿಗೆ ರೂ.19900-63200/- ವೇತನ ಮಾಸಿಕವಾಗಿ ದೊರಕಲಿದೆ.
ಲ್ಯಾಬ್ ಅಟೆಂಡೆಂಟ್, ಮೆಸ್ ಸಹಾಯಕ, ಮಲ್ಟಿ ಟಾಸ್ಕಿಂಗ್ ಸ್ಟಾಫ್ (MTS) ಹುದ್ದೆಗಳಿಗೆ ಮಾಸಿಕ ರೂ.18000-56900/- ವೇತನವಿರಲಿದೆ.
ಹೊಸ ನೋಟಿಫಿಕೇಶನ್ಗಾಗಿ ಈ ಲಿಂಕ್ ಕ್ಲಿಕ್ ಮಾಡಿ