HGML Recruitment 2024: ಹಟ್ಟಿ ಚಿನ್ನದ ಗಣಿಯ ಕಂಪನಿಗಳಲ್ಲಿ ಹುದ್ದೆ; 168 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಾಳೆ ಕೊನೆಯ ದಿನ

Written By sarkari

Lorem ipsum dolor sit amet consectetur pulvinar ligula augue quis venenatis. 

Advertisements

HGML Recruitment 2024: ಹಟ್ಟಿ ಗೋಲ್ಡ್‌ ಮೈನ್ಸ್‌ ಕಂಪನಿ ಲಿ.,ನಿಂದ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಒಟ್ಟು 168 ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ HGML ಅಧಿಕೃತ ಅಧಿಸೂಚನೆಯ ಮೂಲಕ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿತ್ತು. ಸಹಾಯಕ ಫೋರ್‌ಮನ್, ITI ಫಿಟ್ಟರ್ ಪೋಸ್ಟ್‌ಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಇದೀಗ 03-ಮೇ-2024 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು, ಆಸಕ್ತ ಅಭ್ಯರ್ಥಿಗಳು ನಾಳೆಯೊಳಗೆ ಅರ್ಜಿ ಸಲ್ಲಿಸಿ. ಹುದ್ದೆಯ ಕುರಿತು ಸವಿವರ ಮಾಹಿತಿ ಇಲ್ಲಿದೆ.

ಪ್ರಮುಖ ದಿನಾಂಕಗಳು;
ಆನ್‌ಲೈನ್‌ ನಲ್ಲಿ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 19-03-2024
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಹಾಗೂ ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 03-05-2024

ಹುದ್ದೆಯ ವಿವರ ಈ ಕೆಳಗೆ ನೀಡಲಾಗಿದೆ;
ಹುದ್ದೆಯ ಹೆಸರು: ಹಟ್ಟಿ ಗೋಲ್ಡ್ ಮೈನ್ಸ್ ಕಂಪನಿ ಲಿಮಿಟೆಡ್ (HGML) ನಲ್ಲಿ ಒಟ್ಟು 168 ಹುದ್ದೆಗಳು ಖಾಲಿ ಇದ್ದು, ಸಹಾಯಕ ಫೋರ್‌ಮನ್‌, ಐಟಿಐ ಫಿಟ್ಟರ್‌ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ವೇತನ: ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.20920-48020/- ವೇತನ ಸಿಗಲಿದೆ

HGML ಹುದ್ದೆಯ ಕಂಪ್ಲೀಟ್‌ ವಿವರ ಇಲ್ಲಿದೆ.
ಸಹಾಯಕ ಫೋರ್‌ಮನ್ (ಗಣಿ) 16 ಹುದ್ದೆಗಳು, ಸಹಾಯಕ ಫೋರ್‌ಮ್ಯಾನ್ (ಲೋಹಶಾಸ್ತ್ರ) 7 ಹುದ್ದೆಗಳು, ಲ್ಯಾಬ್ ಅಸಿಸ್ಟೆಂಟ್ 1 ಹುದ್ದೆ, ಸಹಾಯಕ ಫೋರ್‌ಮ್ಯಾನ್ (ಭೂವಿಜ್ಞಾನ) 3 ಹುದ್ದೆಗಳು, ಸಹಾಯಕ ಫೋರ್‌ಮನ್ (ಡೈಮಂಡ್ ಡ್ರಿಲ್ಲಿಂಗ್/ಅಂಡರ್‌ಗ್ರೌಂಡ್) 2 ಹುದ್ದೆಗಳು, ಸಹಾಯಕ ಫೋರ್‌ಮನ್ (ಮೆಕ್ಯಾನಿಕಲ್) 19 ಹುದ್ದೆಗಳು, ITI ಫಿಟ್ಟರ್ (ಗಣಿಗಾರಿಕೆ) 56 ಹುದ್ದೆಗಳು, ITI ಫಿಟ್ಟರ್ (ಲೋಹ) 26 ಹುದ್ದೆಗಳು, ITI ಎಲೆಕ್ಟ್ರಿಕಲ್ 4 ಹುದ್ದೆಗಳು, ಸಹಾಯಕ ಫೋರ್‌ಮನ್ (ಸಿವಿಲ್) 1 ಹುದ್ದೆ, ಸಹಾಯಕ ಫೋರ್‌ಮ್ಯಾನ್ (ಎಲೆಕ್ಟ್ರಿಕಲ್) 1 ಹುದ್ದೆ, ಭದ್ರತಾ ನಿರೀಕ್ಷಕ 6 ಹುದ್ದೆಗಳು, ITI ಫಿಟ್ಟರ್ (ಸಮೀಕ್ಷೆ) 2 ಹುದ್ದೆಗಳು,
ಭದ್ರತಾ ಸಿಬ್ಬಂದಿ 24 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಶೈಕ್ಷಣಿಕ ಅರ್ಹತೆ: ಹುದ್ದೆಗೆ ಅನುಸಾರವಾಗಿ ಅಭ್ಯರ್ಥಿಗಳು ವಿದ್ಯಾರ್ಹತೆಯನ್ನು ಹೊಂದಿರಬೇಕು.

ವಯೋಮಿತಿ: ಅಭ್ಯರ್ಥಿಗಳ ವಯೋಮಿತಿಯು 35 ವರ್ಷ ಮೀರಿರಬಾರದು. CAT-2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ 03 ವರ್ಷ, SC/ST/Cat-1 ಅಭ್ಯರ್ಥಿಗಳಿಗೆ 05 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

ಅರ್ಜಿ ಶುಲ್ಕ: SC/ST/Cat-I/Ex-Servicemen/PWD ಅಭ್ಯರ್ಥಿಗಳಿಗೆ ರೂ.100/-, CAT-2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ ರೂ.300/-, ಸಾಮಾನ್ಯ ಅಭ್ಯರ್ಥಿಗಳಿಗೆ ರೂ.600/- ಅರ್ಜಿ ಶುಲ್ಕ ವಿಧಿಸಲಾಗಿದೆ. ಆನ್‌ಲೈನ್‌ ಮೂಲಕ ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿಸಬೇಕು.

ಆಯ್ಕೆ ಪ್ರಕ್ರಿಯೆ: ಮೇಲ್ಕಂಡ ಎಲ್ಲಾ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ವೇತನ: ಸಹಾಯಕ ಫೋರ್‌ಮನ್ (ಗಣಿ), ಸಹಾಯಕ ಫೋರ್‌ಮನ್ (ಲೋಹಶಾಸ್ತ್ರ), ಲ್ಯಾಬ್ ಸಹಾಯಕ, ಸಹಾಯಕ ಫೋರ್‌ಮ್ಯಾನ್ (ಭೂವಿಜ್ಞಾನ), ಸಹಾಯಕ ಫೋರ್‌ಮನ್ (ಡೈಮಂಡ್ ಡ್ರಿಲ್ಲಿಂಗ್/ಅಂಡರ್‌ಗ್ರೌಂಡ್), ಸಹಾಯಕ ಫೋರ್‌ಮನ್ (ಮೆಕ್ಯಾನಿಕಲ್) ಹುದ್ದೆಗಳಿಗೆ ಮಾಸಿಕ ರೂ. 25000-48020/- ವೇತನ ಸಿಗಲಿದೆ.
ITI ಫಿಟ್ಟರ್ (ಗಣಿಗಾರಿಕೆ), ITI ಫಿಟ್ಟರ್ (ಲೋಹ), ಐಟಿಐ ಎಲೆಕ್ಟ್ರಿಕಲ್ ಹುದ್ದೆಗಳಿಗೆ ಆಯ್ಕೆಯಾದವರಿಗೆ ರೂ.20920-42660/- ವೇತನ ಸಿಗಲಿದೆ.
ಸಹಾಯಕ ಫೋರ್‌ಮನ್ (ಸಿವಿಲ್), ಸಹಾಯಕ ಫೋರ್‌ಮ್ಯಾನ್ (ಎಲೆಕ್ಟ್ರಿಕಲ್), ಭದ್ರತಾ ನಿರೀಕ್ಷಕ ಹುದ್ದೆಗೆ ರೂ.25000-48020/- ಮಾಸಿಕ ವೇತನವಿರಲಿದೆ.
ITI ಫಿಟ್ಟರ್ (ಸರ್ವೆ), ಭದ್ರತಾ ಸಿಬ್ಬಂದಿ ರೂ.20920-42660/- ಮಾಸಿಕ ವೇತನವಿರಲಿದೆ.

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್‌ ಕ್ಲಿಕ್‌ ಮಾಡಿ. non local application ಈ ಲಿಂಕ್‌ ಕ್ಲಿಕ್‌ ಮಾಡಿ