MRPL Recruitment 2024: ಮಂಗಳೂರು ರಿಫೈನರಿ ಪೆಟ್ರೋಕೆಮಿಕಲ್ಸ್‌ ಲಿಮಿಟೆಡ್‌ನಲ್ಲಿ ಹುದ್ದೆ; 50 ಸಾವಿರದಿಂದ 1 ಲಕ್ಷದ 60 ಸಾವಿರದವರಗೆ ವೇತನ!

Advertisements

MRPL Recruitment 2024: ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ಜನವರಿ 2024 ರ MRPL ರ ಅಧಿಸೂಚನೆಯ ಮೂಲಕ ಸಹಾಯಕ ಕಾರ್ಯನಿರ್ವಾಹಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಮಂಗಳೂರು – ಕರ್ನಾಟಕ ಭಾಗದಲ್ಲಿ ಕೆಲಸ ಮಾಡಲು ಇಚ್ಛಿಸುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ತಮ್ಮದಾಗಿಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಫೆ.24 ರೊಳಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆಯ ಕುರಿತಾದ ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ. ಆಸಕ್ತರು ಈ ಕೆಳಗಿನ ವಿವರಗಳನ್ನು ಓದಿ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ 25-01-2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 24-02-2024

ಹುದ್ದೆ: ಸಹಾಯಕ ಕಾರ್ಯನಿರ್ವಾಹಕ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು ಒಟ್ಟು 11 ಹುದ್ದೆಗಳಿದೆ.

ವಿದ್ಯಾರ್ಹತೆ: ಎಂಆರ್‌ಪಿಎಲ್‌ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಮಾರ್ಕೆಟಿಂಗ್/ಆಪರೇಷನ್ ಮ್ಯಾನೇಜ್‌ಮೆಂಟ್/ಸಪ್ಲೈ ಚೈನ್/ಬಿಸಿನೆಸ್ ಮ್ಯಾನೇಜ್‌ಮೆಂಟ್/ಅನಾಲಿಟಿಕ್ಸ್/ಇಂಟರ್‌ನ್ಯಾಶನಲ್ ಟ್ರೇಡ್‌ನಲ್ಲಿ ಎರಡು ವರ್ಷಗಳ ಎಂಬಿಎ ಅಥವಾ ಮಾರ್ಕೆಟಿಂಗ್/ಇಂಟರ್‌ನ್ಯಾಶನಲ್ ಟ್ರೇಡ್/ಸಪ್ಲೈ ಚೈನ್‌ನಲ್ಲಿ ಎರಡು ವರ್ಷದ ಸ್ನಾತಕೋತ್ತರ ಡಿಪ್ಲೊಮಾದೊಂದಿಗೆ ಪದವಿ ಪಡೆದಿರಬೇಕು.

ವೇತನ: ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್‌ ಲಿಮಿಟೆಡ್‌ ಅಧಿಸೂಚನೆಯ ಪ್ರಕಾರ ಸಹಾಯಕ ಕಾರ್ಯನಿರ್ವಾಹಕ ಹುದ್ದೆಗಳಿಗೆ 50,000 ರಿಂದ 1,60,000 ರೂ. ವೇತನ ನೀಡಲಾಗುತ್ತದೆ.

ಅರ್ಜಿ ಶುಲ್ಕ: ಸಾಮಾನ್ಯ, OBC, EWS ವರ್ಗದ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಶುಲ್ಕ ರೂ.118 (ರೂ. 100 ಅರ್ಜಿ ಶುಲ್ಕ ಮತ್ತು ರೂ. 18 ಜಿಎಸ್‌ಟಿ) ಪಾವತಿಸಬೇಕಾಗುತ್ತದೆ. ಯಾವುದೇ ಹೆಚ್ಚುವರಿ ಶುಲ್ಕಗಳನ್ನು (ಬ್ಯಾಂಕ್ ಸೇವಾ ಶುಲ್ಕಗಳು ಇತ್ಯಾದಿ) ಅರ್ಜಿದಾರರು ಭರಿಸಬೇಕಾಗುತ್ತದೆ
SC/ST/PwBD/ ಮಾಜಿ ಸೈನಿಕ ವರ್ಗಗಳಿಗೆ ಅರ್ಜಿ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.

ವಯೋಮಿತಿ: ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 27 ವರ್ಷ ಮೀರಿರಬಾರದು.
OBC (NCL) ಅಭ್ಯರ್ಥಿಗಳಿಗೆ 03 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.
ಯುಆರ್/ಇಡಬ್ಲ್ಯೂಎಸ್/ಒಬಿಸಿ(ಎನ್‌ಸಿಎಲ್) ಅಭ್ಯರ್ಥಿಗಳಿಗೆ ಮೇಲೆ ನಿರ್ದಿಷ್ಟಪಡಿಸಿದ ಗರಿಷ್ಠ ವಯಸ್ಸಿನ ಮಿತಿಯ ಜೊತೆಗೆ, 10 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ.
ಮಾಜಿ ಸೈನಿಕರಿಗೆ ವಯೋಮಿತಿಯಲ್ಲಿ ಸಡಿಲಿಕೆಯು ಭಾರತ ಸರ್ಕಾರದ ನಿಯಮಗಳ ಪ್ರಕಾರ ಇರುತ್ತದೆ.

ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ