ರೈಲು ಮೂಲಸೌಲಭ್ಯ ಅಭಿವೃದ್ಧಿ ಕಂಪನಿ( ಕರ್ನಾಟಕ ) ನಿಯಮಿತ (ಕೆಆರ್ ಐಡಿಯು) ನಲ್ಲಿ ಖಾಲಿ ಹುದ್ದೆಗಳಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು 19 ಮಾರ್ಚ್ 2021 ಕೊನೆಯ ದಿನಾಂಕವಾಗಿದೆ. ಒಟ್ಟು ಹುದ್ದೆಗಳ ವಿವರ, ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಶುಲ್ಕ ಇತ್ಯಾದಿ ವಿವರಗಳನ್ನು ಮುಂದೆ ನೀಡಲಾಗಿದೆ.
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 19-02-2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 19-03-2021
ಅರ್ಜಿ ಶುಲ್ಕ: ಯಾವುದೇ ಅರ್ಜಿ ಶುಲ್ಕವಿಲ್ಲ.
(ಕೆಆರ್ ಐಡಿ)ಯು –
ಜನರಲ್ ಮ್ಯಾನೇಜರ್ (ಎಲೆಕ್ಟ್ರಿಕಲ್ ಒಎಚ್ ಇ) -01
ಜನರಲ್ ಮ್ಯಾನೇಜರ್ (ರೋಲಿಂಗ್ ಸ್ಟಾಕ್)-01
ಸೀನಿಯರ್ ಡಿಜಿಎಂ/ಜೆಜಿಎಂ-01 ಹುದ್ದೆಗಳಿಗೆ ಅರ್ಜಿ ಯನ್ನು ಆಹ್ವಾನಿಸಿದೆ.
ವಿದ್ಯಾರ್ಹತೆ :
ಜನರಲ್ ಮ್ಯಾನೇಜರ್ (ಎಲೆಕ್ಟ್ರಿಕಲ್ ಒಎಚ್ ಇ)ಜನರಲ್ ಮ್ಯಾನೇಜರ್ (ರೋಲಿಂಗ್ ಸ್ಟಾಕ್) ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬ್ಯಾಚುಲರ್ ಡಿಗ್ರಿ ಹೊಂದಿರಬೇಕು. ಸೀನಿಯರ್ ಡಿಜಿಎಂ/ಜೆಜಿಎಂ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಗ್ರಾಜ್ಯುಯೇಟ್ ಇನ್ ಲಾ ಪಡೆದಿರಬೇಕು.
ವಯೋಮಿತಿ : ಅಭ್ಯರ್ಥಿಗಳು ಗರಿಷ್ಠ 57 ವಯಸ್ಸು ಹೊಂದಿರಬೇಕು.
ವೇತನ : ಜನರಲ್ ಮ್ಯಾನೇಜರ್ ( ಎಲೆಕ್ಟ್ರಿಕಲ್ ಒಎಚ್ ಇ) ಹಾಗೂ ಜನರಲ್ ಮ್ಯಾನೇಜರ್ (ರೋಲಿಂಗ್ ಸ್ಟಾಕ್) ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗೆ ರೂ. 161250 /- ತಿಂಗಳ ವೇತನ ನಿಗದಿಪಡಿಸಲಾಗಿದೆ.
ಮತ್ತು ಸೀನಿಯರ್ ಡಿಜಿಎಂ/ಜೆಜಿಎಂ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗೆ ರೂ. 147250/- ಹಾಗೂ ರೂ.14250/- ವೇತನ ಪಡೆಯಲು ಅರ್ಹರಾಗಿರುತ್ತಾರೆ.
ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ ಅರ್ಜಿ ಡೌನ್‌ಲೋಡ್ ಮಾಡಿ, ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಈ ಕೆಳಗಿನ ವಿಳಾಸಕ್ಕೆ ದಿನಾಂಕ 19-03-2021 ರೊಳಗೆ ಸ್ಪೀಡ್ ಪೋಸ್ಟ್ ಅಥವಾ ರಿಜಿಸ್ಟರ್ ಪೋಸ್ಟ್ ಮೂಲಕ ಸಲ್ಲಿಸಬೇಕು.
ವಿಳಾಸ : Managing Director, Rail Infrastructure development company Karnataka limited, Samparkha Soudha,1 st Floor, Survey No.8(BEP Premises)Opp.Orion Mall, Dr.Rajkumar Road, Rajajinagar, 1st block, Bangalore-560052,Karnataka, India
ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ