ಹೆಚ್ ಎಎಲ್ 475 ಟ್ರೇಡ್ ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಆಹ್ವಾನ

Written By Mallika

Lorem ipsum dolor sit amet consectetur pulvinar ligula augue quis venenatis. 

Advertisements

ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಹೆಚ್ ಎ ಎಲ್ )ನಲ್ಲಿ ಖಾಲಿ ಇರುವ  475 ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು 13 ಮಾರ್ಚ್ 2021 ಕೊನೆಯ ದಿನಾಂಕವಾಗಿದೆ. ಒಟ್ಟು ಹುದ್ದೆಗಳ ವಿವರ, ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಶುಲ್ಕ ಇತ್ಯಾದಿ ವಿವರಗಳನ್ನು ಮುಂದೆ ನೀಡಲಾಗಿದೆ.

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 20 ಫೆಬ್ರವರಿ 2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 13 ಮಾರ್ಚ್ 2021
ಅರ್ಜಿ ಶುಲ್ಕ: ಯಾವುದೇ ಅರ್ಜಿ ಶುಲ್ಕ ವಿಲ್ಲ.

ಅರ್ಜಿ ಸಲ್ಲಿಕೆ: ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಆನ್ಲೈನ್ ಹೊರತುಪಡಿಸಿ ಬೇರೆ ಯಾವುದೇ ವಿಧಾನದಲ್ಲಿ ಅರ್ಜಿ ಸಲ್ಲಿಸುವಂತೆ ಇಲ್ಲ.

ಹುದ್ದೆಗಳ ವಿವರ :ಫಿಟ್ಟರ್ – 210, ಟರ್ನರ್ 28,ಮೆಶಿನಿಸ್ಟ್ – 26, ಕಾರ್ಪೆಂಟರ್ – 03, ಮೆಶಿನಿಸ್ಟ್ ( ಗ್ರೈಂಡರ್) 06, ಎಲೆಕ್ಟ್ರಿಶಿಯನ್ – 78, ಡ್ರಾಫ್ಟ್ ಮ್ಯಾನ್ -08, ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ -08,ಪೈಂಟರ್ ಜನರಲ್ -05, ಶೀಟ್ ಮೆಟಲ್ ವರ್ಕರ್ – 04, ಮೆಕ್ಯಾನಿಕ್ -04,ಕಂಪ್ಯೂಟರ್ ಅಪರೇಟರ್ ಆಂಡ್ ಪ್ರೊಗ್ರಾಮಿಂಗ್ ಅಸಿಸ್ಟೆಂಟ್ – 77, ವೆಲ್ಡರ್ (ಗ್ಯಾಸ್ ಮತ್ತು ಎಲೆಕ್ಟ್ರಿಕ್) -10, ಸ್ಟೆನೋಗ್ರಾಫರ್ -08

ವಿದ್ಯಾರ್ಹತೆ : ಅಭ್ಯರ್ಥಿಗಳು ಯಾವುದೇ ಬೋರ್ಡ್ / ಸಂಸ್ಥೆ ಯಿಂದ ಐಟಿಐ ತೇರ್ಗಡೆ ಹೊಂದಿರಬೇಕು.

ವಯೋಮಿತಿ : ಹೆಚ್ ಎಎಲ್ ನೇಮಕಾತಿ ನಿಯಮಾನುಸಾರ ಅಭ್ಯರ್ಥಿಗಳು ವಯೋಮಿತಿ ಹೊಂದಿರಬೇಕು.

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ

Leave a Comment