ಕೆಪಿಎಸ್ ಸಿ ಪ್ರವೇಶ ಪತ್ರ ರದ್ದು – ಪ್ರಕಟಣೆ

Advertisements

ಕರ್ನಾಟಕ ಲೋಕಸೇವಾ ಆಯೋಗವು 2019 ನೇ ಸಾಲಿನ ರಾಜ್ಯದ ವಿವಿಧ ಇಲಾಖೆಗಳಲ್ಲಿನ ಮತ್ತು ಕರ್ನಾಟಕ ಭವನ ದೆಹಲಿಯ ಉಳಿಕೆ‌ ಮೂಲ ವೃಂದದ ಮತ್ತು ಹೈದ್ರಬಾದ್ ಕರ್ನಾಟಕ ವೃಂದದ ‌ಸಹಾಯಕ/ಪ್ರಥಮ ದರ್ಜೆ ಸಹಾಯಕರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ದಿನಾಂಕ : 24.01.2021 (ಭಾನುವಾರ ) ರ ಸ್ಪರ್ಧಾತ್ಮಕ ಪರೀಕ್ಷೆ ಗಾಗಿ ಜಾರಿಗೊಳಿಸಲಾಗಿದ್ದ ಪ್ರವೇಶ ಪತ್ರವನ್ನು ರದ್ದುಪಡಿಸಿದೆ ಎಂದು ತಿಳಿಸಿದೆ.

ಪ್ರಸ್ತುತ, ಸದರಿ ಪರೀಕ್ಷೆಯ ಅಭ್ಯರ್ಥಿಗಳಿಗೆ ಮರು ನಿಗದಿಯಾದ ದಿನಾಂಕ : 28.02.2021 ರ ಸ್ಪರ್ಧಾತ್ಮಕ ಪರೀಕ್ಷೆಗೆ ಪ್ರವೇಶ ಪತ್ರಗಳನ್ನು ಬಿಡುಗಡೆಗೊಳಿಸಿದ್ದು, ಅಭ್ಯರ್ಥಿಗಳು ಆಯೋಗದ ವೆಬ್‌ಸೈಟ್‌ http://kpsc.kar.nic.in ನಲ್ಲಿ ” ಸಹಾಯಕರು/ಪ್ರಥಮ ದರ್ಜೆ ಸಹಾಯಕರ ಹುದ್ದೆಗಳ ದಿನಾಂಕ : 28.02.2021 (ಭಾನುವಾರ) ಕ್ಕೆ ಪರಿಷ್ಕೃತ ಪ್ರವೇಶಪತ್ರಗಳು” ಎಂಬ ಶೀರ್ಷಿಕೆ ಅಡಿಯಲ್ಲಿ ಯ್ಯೂಸರ್ ನೇಮ್ ಮತ್ತು ಪಾಸ್ ವರ್ಡ್ಅನ್ನು ಉಪಯೋಗಿಸಿಕೊಂಡು ಪರಿಷ್ಕೃತ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಲು ದಿನಾಂಕ : 21.02.2021 ರಿಂದ ಅವಕಾಶ ಕಲ್ಪಿಸಲಾಗಿದೆ.
ಯಾವುದೇ ಕಾರಣಕ್ಕೂ ದಿನಾಂಕ 24.01.2021 ರ ಪ್ರವೇಶ ಪತ್ರವನ್ನು ಸದರಿ ಸ್ಪರ್ಧಾತ್ಮಕ ಪರೀಕ್ಷೆಗೆ ಪರಿಗಣಿಸಲಾಗುವುದಿಲ್ಲ. ಒಂದುವೇಳೆ ಅಭ್ಯರ್ಥಿಗಳು ಪರಿಷ್ಕೃತ ಪ್ರವೇಶಪತ್ರವನ್ನು ಹಾಜರುಪಡಿಸಿದ್ದಲ್ಲಿ ಅಥವಾ ದಿನಾಂಕ 24.01.2021 ಸ್ಪರ್ಧಾತ್ಮಕ ಪರೀಕ್ಷೆಯ ಪ್ರವೇಶ ಪತ್ರವನ್ನು ಹಾಜರುಪಡಿಸಿದ್ದಲ್ಲಿ ಅನುಮತಿ ನೀಡಲಾಗುವುದಿಲ್ಲ. ಆದ್ದರಿಂದ, ಅಭ್ಯರ್ಥಿಗಳು ‌ಕಡ್ಡಾಯವಾಗಿ ದಿನಾಂಕ : 28.02.2021 ರ ಸ್ಪರ್ಧಾತ್ಮಕ ಪರೀಕ್ಷೆಗೆ ಜಾರಿಗೊಳಿಸಲಾದ ಪರಿಷ್ಕೃತ ಪ್ರವೇಶ ಪಾತ್ರಗಳೊಂದಿಗೆ ಮಾತ್ರ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಬೇಕು. ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಲು ತಾಂತ್ರಿಕ ಸಮಸ್ಯೆ ತೊಂದರೆ ಎದುರಾದಲ್ಲಿ ಸಹಾಯವಾಣಿ ಸಂಖ್ಯೆ : 18005728707 /(toll free) ಸಂಪರ್ಕಿಸುವಂತೆ ಸೂಚಿಸಿದೆ. ಉಳಿದಂತೆ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಆಯೋಗದ ವೆಬ್‌ಸೈಟ್‌ ನಲ್ಲಿ ಭಿತ್ತರಿಸಿರುವ ದಿನಾಂಕ : 20.02.2021 ರ ಪ್ರಕಟಣೆಯನ್ನು ಅವಲೋಕಿಸಬಹುದೆಂದು ಈ ಮೂಲಕ ಸೂಚಿಸಿದೆ.

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಾಡಿ.

ಎಫ್ ಡಿಎ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ?

ಅಭ್ಯರ್ಥಿಗಳು ಆಯೋಗದ ವೆಬ್‌ಸೈಟ್‌ ಗೆ ಭೇಟಿ ನೀಡಿ :
https://kpsc.kar.nic.in

ಹೋಮ್ ಪೇಜ್ ನಲ್ಲಿ ಡೌನ್‌ಲೋಡ್ ಅಸಿಸ್ಟೆಂಟ್/ಎಫ್ ಡಿಎ -2019 ರಿವೈಸ್ಡ್ ಅಡ್ಮಿಶನ್ ಟಿಕೆಟ್ ( ಪರೀಕ್ಷಾ ದಿನಾಂಕ ; 28/02/2021) ಎಂದಿರುವಲ್ಲಿ ಕ್ಲಿಕ್ ಮಾಡಿ

ಇನ್ನೊಂದು ಪೇಜ್ ಓಪನ್ ಆಗುತ್ತೆ.

ಯೂಸರ್ ನೇಮ್ ಪಾಸ್ವರ್ಡ್ ಹಾಕಿ ಲಾಗಿನ್ ಆಗಿ.

ಪ್ರವೇಶ ಪತ್ರ ಕಾಣಿಸುತ್ತದೆ.

ಡೌನ್‌ಲೋಡ್ ಮಾಡಿ ಪ್ರಿಂಟ್ ತೆಗೆದಿಡಿ

Leave a Comment