KPCL Recruitment 2024: ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಸಹಾಯಕ ಕಾನೂನು ಅಧಿಕಾರಿ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಗುತ್ತಿಗೆ ಆಧಾರದಲ್ಲಿ ಈ ಹುದ್ದೆಗಳ ನೇಮಕಾತಿ ಮಾಡಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಪ್ರಮುಖ ದಿನಾಂಕಗಳು;
ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ; 19-01-2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ; 19-02-2024
ಹುದ್ದೆಗಳ ವಿವರ:
ಸಹಾಯಕ ಕಾನೂನು ಅಧಿಕಾರಿ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ನಿಗಮದ ಕಾನೂನು ವಿಷಯಗಳಿಗೆ ಸಂಬಂಧಪಟ್ಟ ಕಾರ್ಯಗಳನ್ನು ನಿರ್ವಹಿಸಲು ಎರಡು ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೇಮಿಸಲು ನಿಗಮವು ಉದ್ದೇಶಿಸಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಹುದ್ದೆಗಳ ಸಂಖ್ಯೆ: ಒಟ್ಟು ಆರು ಹುದ್ದೆಗಳು ಖಾಲಿ ಇದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅರ್ಹತೆ ಮತ್ತು ಅನುಭವ: ಅಂಗೀಕೃತ ವಿಶ್ವವಿದ್ಯಾಲಯದಿಂದ (ಮೂರು ಅಥವಾ ಐದು ವರ್ಷಗಳ) ಕಾನೂನು ಪದವಿಯನ್ನು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪಡೆದಿರಬೇಕು. ಕನಿಷ್ಠ ಶೇ.40 ರಷ್ಟು ಅಂಕಗಳನ್ನು ಕಾನೂನು ಪದವಿಯಲ್ಲಿ ಗಳಿಸಿರಬೇಕು. ವಕೀಲ ವೃತ್ತಿಯಲ್ಲಿ ಕನಿಷ್ಠ ಐದು ವರ್ಷಗಳ ಅನುಭವವಿರಬೇಕು.
ವಯೋಮಿತಿ: ಈ ಮೇಲ್ಕಂಡ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿ 40 ವರ್ಷಕ್ಕಿಂತ ಮೇಲ್ಪಟ್ಟಿರಬೇಕು.
ವೇತನ: ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.40,000 ಮಾಸಿಕ ವೇತನ ಇರಲಿದೆ. ನೇಮಕ ಹೊಂದಿದ ಅಭ್ಯರ್ಥಿಗಳ ಪ್ರಯಾಣಕ್ಕೆ ನಿಗಮದ ಸಹಾಯಕ ಕಾನೂನು ಅಧಿಕಾರಿ/ಸಹಾಯಕ ಅಭಿಯಂತರರು ಹುದ್ದೆಗೆ ಅರ್ಹವಿರುವ TA/DA ಯನ್ನು ನೀಡಲಾಗುವುದು.
ಆಯ್ಕೆ ವಿಧಾನ: ಈ ಹುದ್ದೆಗೆ ಅಭ್ಯರ್ಥಿಗಳಿಗೆ ಸಂದರ್ಶನವನ್ನು ನಡೆಸಿ ಆಯ್ಕೆ ಮಾಡಲಾಗುವುದು. ವೃತ್ತಿಯಲ್ಲಿ ಅನುಭವವಿದ್ದವರಿಗೆ ಹಾಗೂ ಆಂಗ್ಲ ಭಾಷೆಯ ಕಂಪ್ಯೂಟರ್ ಹಾಗೂ ಬೆರಳಚ್ಚು ಅನುಭವವುಳ್ಳವರಿಗೆ ಆದ್ಯತೆ ನೀಡಲಾಗುವುದು.
ಗುತ್ತಿಗೆ ಅವಧಿ: ಎರಡು ವರ್ಷಗಳ ಅವಧಿಗೆ ಗುತ್ತಿಗೆ ನೇಮಕಾತಿ ನಡೆಯಲಿದ್ದು, ಸದರಿ ಹುದ್ದೆಯಲ್ಲಿ ತೃಪ್ತಿಕರವಾಗಿ ಕಾರ್ಯನಿರ್ವಹಿಸಿದ್ದಲ್ಲಿ ಮುಂದಿನ ಒಂದು ವರ್ಷ ಅವಧಿಗೆ ವಿಸ್ತರಿಸಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಅರ್ಜಿ ಸಲ್ಲಿಸುವ ವಿಧಾನ:
ಅಭ್ಯರ್ಥಿಗಳು ನಿಮಗದ ವೆಬ್‌ಸೈಟ್ ಗೆ ಭೇಟಿ ನೀಡಿ ಲಭ್ಯವಿರುವ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ವಿದ್ಯಾರ್ಹತೆ/ಅನುಭವ ದಾಖಲೆಗಳನ್ನು ಲಗತ್ತಿಸಿ [email protected] ಇ-ಮೇಲ್ ಗೆ ದಿನಾಂಕ 19-02-2024 ರ ಸಂಜೆ 5.30 ರೊಳಗಾಗಿ ಅರ್ಜಿಯನ್ನು ಸಲ್ಲಿಸತಕ್ಕದ್ದು. ನಿಗದಿತ ದಿನಾಂಕ/ಸಮಯದ ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಇತರೆ ಯಾವುದೇ ನಮೂನೆಯಲ್ಲಿ ಅರ್ಜಿ ಸ್ವೀಕಾರ ಮಾಡಲಾಗವುದಿಲ್ಲ.