DHFWS Vijayanagara Recruitment 2024: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಉದ್ಯೋಗ; ಈ ಕೂಡಲೇ ಅರ್ಜಿ ಸಲ್ಲಿಸಿ,

Written By sarkari

Lorem ipsum dolor sit amet consectetur pulvinar ligula augue quis venenatis. 

Advertisements

DHFWS Vijayanagara Recruitment 2024: ರಾಷ್ಟ್ರೀಯ ಆರೋಗ್ಯ ಅಭಿಯಾನದ ಕಾರ್ಯಕ್ರಮದಡಿಯಲ್ಲಿ ವಿಜಯನಗರ ಜಿಲ್ಲೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಸಲ್ಲಿಸಲು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು.

ಪ್ರಮುಖ ದಿನಾಂಕಗಳು;
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ; 17/02/2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ; 23/02/2024

ಹುದ್ದೆಗಳ ವಿವರ;

  1. ಸ್ತ್ರೀರೋಗ ಪ್ರಸೂತಿ ತಜ್ಞರು- ಒಟ್ಟು ಎರಡು ಹುದ್ದೆಗಳಿದ್ದು, ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮಾಸಿಕ ರೂ.1,30,000 ವೇತನ ನೀಡಲಾಗುತ್ತದೆ.
    ಅರವಳಿಕೆ ತಜ್ಞರು- ಒಟ್ಟು ಒಂದು ಹುದ್ದೆಗಳಿದ್ದು, ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ .1,30,000 ವೇತನ ನೀಡಲಾಗುತ್ತದೆ.
  2. ಆರ್‌.ಬಿ.ಎಸ್‌.ಕೆ.ವೈದ್ಯಾಧಿಕಾರಿಗಳು-ಒಂದು ಹುದ್ದೆ, ರೂ.46,895 ಮಾಸಿಕ ವೇತನವಿರಲಿದೆ.
  3. ಆಡಿಯೋಮೆಟ್ರಿಕ್‌ ಸಹಾಯಕರು (ಎನ್‌.ಪಿ.ಪಿ.ಸಿ.ಡಿ) – ಒಂದು ಹುದ್ದೆ ಖಾಲಿ ಇದ್ದು, ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.15,000 ವೇತನವಿರಲಿದೆ.
  4. ಶ್ರವಣದೋಷವುಳ್ಳ ಮಕ್ಕಳ ಬೋಧಕರು- ಒಂದು ಹುದ್ದೆ ಖಾಲಿ ಇದೆ. ಈ ಹುದ್ದೆಗೆ ಆಯ್ಕೆಯಾದವರಿಗೆ ಮಾಸಿಕ ರೂ.35,000 ವೇತನವಿರಲಿದೆ.
  5. ಡಿಸ್ಟ್ರಿಕ್‌ ಹಾಸ್ಪಿಟಲ್‌ ಕ್ವಾಲಿಟಿ ಮ್ಯಾನೇಜರ್‌- ಒಂದು ಹುದ್ದೆ ಖಾಲಿ ಇದ್ದು, ಮಾಸಿಕ ರೂ.35,000 ವೇತನವಿರಲಿದೆ.
  6. ಪ್ರೋಗ್ರಾಂ ಮ್ಯಾನೇಜರ್‌ (RBSK)- ಒಂದು ಹುದ್ದೆ ಖಾಲಿ ಇದ್ದು, ಈ ಹುದ್ದೆಗೆ ಆಯ್ಕೆಯಾದವರಿಗೆ ಮಾಸಿಕ ರೂ.17,500 ವೇತನವಿರಲಿದೆ.
  7. ಬಯೋ ಮೆಡಿಕಲ್‌ ಇಂಜಿನಿಯರ್-‌ ಒಂದು ಹುದ್ದೆ ಖಾಲಿ ಇದ್ದು, ಈ ಹುದ್ದೆಗೆ ಆಯ್ಕೆಯಾದವರಿಗೆ ಮಾಸಿಕ ರೂ.25,000 ವೇತನವಿರಲಿದೆ.
  8. ಆರ್.ಕೆ.ಎಸ್‌.ಕೆ. ಆಪ್ತ ಸಮಾಲೋಚಕರು – ಒಂದು ಹುದ್ದೆ ಖಾಲಿ ಇದ್ದು, ರೂ.15,939 ಮಾಸಿಕ ವೇತನವಿರಲಿದೆ.
  9. ಆಪ್ತ ಸಮಾಲೋಚಕರು – ಒಂದು ಹುದ್ದೆ ಖಾಲಿ ಇದೆ. ಮಾಸಿಕ ರೂ.15,939 ವೇತನವಿರಲಿದೆ.
  10. ವೈದ್ಯಾಧಿಕಾರಿಗಳು (ಎನ್‌.ಆರ್‌.ಸಿ)- ಒಂದು ಹುದ್ದೆ ಖಾಲಿ ಇದೆ. ಮಾಸಿಕ ರೂ.50,000 ವೇತನ ಸಿಗಲಿದೆ.
  11. ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ- ಎರಡು ಹುದ್ದೆ ಖಾಲಿ ಇದ್ದು ಮಾಸಿಕ ರೂ.12,600 ವೇತನವಿರಲಿದೆ.

ವಿದ್ಯಾರ್ಹತೆ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹುದ್ದೆಗೆ ಅನುಗುಣವಾಗಿ ವಿದ್ಯಾರ್ಹತೆಯನ್ನು ಹೊಂದಿರಬೇಕು.

ವಯೋಮಿತಿ:
ಸ್ತ್ರೀರೋಗ-ಪ್ರಸೂತಿ ತಜ್ಞರು- 70ವರ್ಷ ಮೀರಿರಬಾರದು.
ಆರ್.ಬಿ.ಎಸ್.ಕೆ.ವೈದ್ಯಾಧಿಕಾರಿಗಳು,ಆಡಿಯೋಮೆಟ್ರಿಕ್‌ ಸಹಾಯಕರು (ಎನ್‌.ಪಿ.ಪಿ.ಸಿ.ಡಿ), ಶ್ರವಣದೋಷವುಳ್ಳ ಮಕ್ಕಳ ಬೋಧಕರು, ಡಿಸ್ಟ್ರಿಕ್ಟ್‌ ಹಾಸ್ಪಿಟಲ್‌ ಕ್ವಾಲಿಟಿ ಮ್ಯಾನೇಜರ್‌, ಬಯೋಮೆಡಿಕಲ್‌ ಇಂಜಿನಿಯರ್‌-45 ವರ್ಷ ಮೀರರಬಾರದು
ವೈದ್ಯಾಧಿಕಾರಿಗಳು (ಎನ್‌.ಆರ್.ಸಿ)- 70 ವರ್ಷ ಗರಿಷ್ಠ
ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ – 65 ವರ್ಷ ಗರಿಷ್ಠ

ಆಯ್ಕೆ ಪ್ರಕ್ರಿಯೆ: ವಿದ್ಯಾರ್ಹತೆಯಲ್ಲಿ ಪಡೆದ ಅಂಕಗಳ ಶೇಕಡ ಮತ್ತು ಕೋವಿಡ್‌ 19 ಸೇವಾ ಅವಧಿಯ ಕೃಪಾಂಕವನ್ನು ಒಟ್ಟುಗೂಡಿಸಿ, ಮೆರಿಟ್‌ ಲಿಸ್ಟನ್ನು ತಯಾರಿಸಲಾಗುವುದು. ಮತ್ತು ಹೊಸ ರೋಸ್ಟರ್‌ ಆಧಾರದ ಮೇಲೆ ಮೆರಿಟ್‌ ಕಂ ರೋಸ್ಟರ್‌ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ನೇಮಕಾತಿ ಮಾಡಲಾಗುವುದು.

ಅರ್ಹತೆ: ಈ ಮೇಲೆ ತಿಳಿಸಿದ ಹುದ್ದೆಗಳಿಗೆ ಕಂಪ್ಯೂಟರ್‌ನ ಸಾಕ್ಷರತೆಯನ್ನು ಕಡ್ಡಾಯವಾಗಿ ಅಭ್ಯರ್ಥಿಗಳು ಹೊಂದಿರತಕ್ಕದ್ದು. ಸರಕಾರದ ಮಾನ್ಯತೆ ಪಡೆದ ಸಂಸ್ಥೆಯಿಂದ ಪ್ರಮಾಣ ಪತ್ರ ಪಡೆದಿರಬೇಕು.( ತಜ್ಞ ವೈದ್ಯರು, ಮತ್ತು ಗ್ರೂಪ್‌ ಡಿ) ಹುದ್ದೆಗಳಿಗೆ ಅನ್ವಯಿಸುವುದಿಲ್ಲ. ಸ್ತ್ರೀ ರೋಗ-ಪ್ರಸೂತಿ ತಜ್ಞರು, ಅರವಳಿಕೆ ತಜ್ಞರು, ಎಂಬಿಬಿಎಸ್‌ ವೈದ್ಯಾಧಿಕಾರಿಗಳ ಹುದ್ದೆಗಳು, ಹಿರಿಯ ಪ್ರಾಥಮಿಕ ಆರೋಗ್ಯ ಸಂರಕ್ಷಣಾಧಿಕಾರಿ ಹುದ್ದೆಗಳ ಸಂಖ್ಯೆ ಭರ್ತಿ ಆಗುವವರೆಗೂ ಪ್ರತಿ ಮಂಗಳವಾರ ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಕಚೇರಿಯ ಸಮಯದಲ್ಲಿ ಜಿಲ್ಲಾ ಆರ್‌.ಸಿ.ಹೆಚ್‌ ಅಧಿಕಾರಿಗಳ ಕಚೇರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯ 60 ಹಾಸಿಗೆಯ ಎಮ್‌.ಸಿ.ಹೆಚ್‌ ಆಸ್ಪತ್ರೆ ಹಿಂಭಾಗ ಮಸೀದಿ ಹತ್ತಿರ, ಹೊಸಪೇಟೆ. ಸಂಜೆ 5.30 ರ ಒಳಗೆ ಅರ್ಜಿಗಳನ್ನು ಸ್ವೀಕರಿಸಲಾಗುವುದು. ಮತ್ತು ಈ ವಿಳಾಸದಲ್ಲೇ ಅರ್ಜಿ ಕೂಡಾ ದೊರೆಯಲಿದೆ.

ದಿನಾಂಕ 23/02/2024 ರ ಸಂಜೆ 5.30 ನಂತರ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ಅರ್ಜಿ ಸಲ್ಲಿಸುವ ವೇಳೆ ಸ್ವಯಂ ದೃಢೀಕರಿಸಿದ ಎಲ್ಲಾ ದಾಖಲಾತಿಗಳ ಪ್ರತಿಗಳನ್ನು ಅರ್ಜಿಗಳೊಂದಿಗೆ ಸಲ್ಲಿಸಲು ಅಧಿಸೂಚನೆಯಲ್ಲಿ ಸೂಚಿಸಲಾಗಿದೆ.