ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಗ್ರಾಮೀಣ ಪ್ರದೇಶದಿಂದ ಹಾಲನ್ನು ಸಂಗ್ರಹಿಸಿ, ಸಂಸ್ಕರಿಸಿ ಉತ್ಕೃಷ್ಟ ಗುಣಮಟ್ಟದ ವಿವಿಧ ಹಾಲಿನ ಉತ್ಪನ್ನಗಳನ್ನು ತಯಾರಿಗೆ ಮಾಡಿ ಪಾಶ್ಚರೀಕರಿಸಿದ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಗ್ರಾಹಕರಿಗೆ ಸರಬರಾಜು ಮಾಡುವ FSSC 22000 Ver 5.0 ದೃಢೀಕರಣ ಪ್ರಮಾಣಪತ್ರ ಮತ್ತು FSSAI ಆಹಾರ ಸುರಕ್ಷತೆ ಮತ್ತು ಸಂರಕ್ಷಣೆ ಕಾಯಿದೆ 2006 ನಿಯಮ 2011 ರನ್ವಯ ನೋದಾವಣೆಗಾಗಿ ಲೈಸೆನ್ಸ್ ಹೊಂದಿದ ಹಾಗೂ ನ್ಯಾಷನಲ್ ಡೇರಿ ಡೆವಲಪ್‌ಮೆಂಟ್ ಬೋರ್ಡ್ ವತಿಯಿಂದ ಕ್ವಾಲಿಟಿ ಮಾರ್ಕ್ ಪ್ರಮಾಣ ಪತ್ರವನ್ನು ಹಾಗೂ ರಾಷ್ಟ್ರೀಯ ಮಟ್ಟದಲ್ಲಿ “ಎಕ್ಸೆಲೆನ್ಸಿ ಅವಾರ್ಡ್” ಪಡೆದ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಾಗಿರುತ್ತದೆ. ಸಂಸ್ಥೆಯ ಕಾರ್ಯಾಚರಣೆಯನ್ನು ಬಲಪಡಿಸಲು ಖಾಲಿ ಇರುವ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮುಖಾಂತರ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹುದ್ದೆಗಳ ವಿವರ ಈ ಕೆಳಗಿನಂತಿದೆ:
1. ಸಹಾಯಕ ವ್ಯವಸ್ಥಾಪಕರು -07
2. ತಾಂತ್ರಿಕಾಧಿಕಾರಿ (ಡಿ.ಟಿ) -04
3. ತಾಂತ್ರಿಕಾಧಿಕಾರಿ (ಪರಿಸರ) -01
4. ತಾಂತ್ರಿಕ ಅಧಿಕಾರಿ ( ಇಂಜಿನಿರಿಂಗ್) – 01
5. ವಿಸ್ತರಣಾಧಿಕಾರಿ ದರ್ಜೆ – 08
6. ಡೈರಿ ಸೂಪರ್‌ವೈಸರ್ ದರ್ಜೆ -05
7. ಆಡಳಿತ/ಮಾರುಕಟ್ಟೆ ಸಹಾಯಕರು ದರ್ಜೆ -10
8. ಕೆಮಿಸ್ಟ್ ದರ್ಜೆ -12
9. ಲೆಕ್ಕ ಸಹಾಯಕರು ದರ್ಜೆ – 02
10. ಕಿರಿಯ ತಾಂತ್ರಿಕರು – 30
ವಯೋಮಿತಿ : ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದಂದು ಕನಿಷ್ಠ ವಯೋಮಿತಿ 18 ವರ್ಷಗಳು ಮತ್ತು ಗರಿಷ್ಠ ವಯೋಮಿತಿ 1. ಸಾಮಾನ್ಯ ಅರ್ಹತೆ – 35 ವರ್ಷಗಳು, 2. ಪ್ರವರ್ಗ 2a, 2b,3a 3b ಅಭ್ಯರ್ಥಿಗಳಿಗೆ 38 ವರ್ಷಗಳು, 3. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ -1 – 40 ವರ್ಷಗಳು. ಅಂಗವಿಕಲರಿಗೆ ಮತ್ತು ವಿಧವರೆಯರಿಗೆ ವಯೋಮಿತಿಯಲ್ಲಿ ಗರಿಷ್ಠ ಹತ್ತು ವರ್ಷಗಳ ಸಡಿಲಿಕೆ ಇರುತ್ತದೆ.
ಅರ್ಜಿ ಶುಲ್ಕ : ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ 1 ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ರೂ. 500/- ( ಬ್ಯಾಂಕ್ ಶುಲ್ಕ ಪ್ರತ್ಯೇಕ) ಮತ್ತು ಇತರೆ ಅಭ್ಯರ್ಥಿಗಳಿಗೆ ರೂ. 800/- ( ಬ್ಯಾಂಕ್ ಶುಲ್ಕ ಪ್ರತ್ಯೇಕ )
ಹೆಚ್ಚಿನ ಎಲ್ಲಾ ವಿವರಗಳನ್ನು ಒಳಗೊಂಡ ನೇಮಕಾತಿ ಪ್ರಕಟಣೆ, ವಿವಿಧ ನಮೂನೆಗಳು ಮತ್ತು ಇತರೆ ವಿವರಗಳನ್ನು ಒಕ್ಕೂಟದ ವೆಬ್‌ಸೈಟ್ www.dkmul.comನಲ್ಲಿರುವ career menu ಕ್ಲಿಕ್ ಮಾಡಿ. ಅದರಲ್ಲಿರುವ ವಿವರವಾದ ನೇಮಕಾತಿ ಪ್ರಕಟಣೆಯನ್ನು ಓದಿ, ತದನಂತರ apply online ಲಿಂಕ್‌ನನ್ನು ಕ್ಲಿಕ್ ಮಾಡಿ. ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದಾಗಿದೆ. ಖುದ್ದಾಗಿ/ಅಂಚೆ ಮೂಲಕ ಬಂದ ಅರ್ಜಿಗಳನ್ನು ಸಲ್ಲಿಸಲು ಅವಕಾಶವಿರುವುದಿಲ್ಲ.
ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಪ್ರಾರಂಭವಾಗುವ ದಿನಾಂಕ : 28-04-2021
ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ : 28-05-2021
ಆನ್‌ಲೈನ್ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ : 29-05-2021 ಸಂಜೆ 5.30 ಗಂಟೆಯವರೆಗೆ