ಪದವೀಧರರ ಸಹಕಾರ ಸಂಘದಲ್ಲಿ ಉದ್ಯೋಗವಕಾಶ

Written By Mallika

Lorem ipsum dolor sit amet consectetur pulvinar ligula augue quis venenatis. 

Advertisements

ಶಿವಮೊಗ್ಗ ಕುವೆಂಪು ಮಾರ್ಗದಲ್ಲಿನ ಪದವೀಧರರ ಸಹಕಾರ ಸಂಘ ನಿಯಮಿತದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಈಗಾಗಲೇ ಆರಂಭವಾಗಿದ್ದು ದಿನಾಂಕ ಮೇ 27, 2021 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಹುದ್ದೆಗಳ ವಿವರ, ವಯೋಮಿತಿ, ಅರ್ಜಿ ಶುಲ್ಕ ಇತ್ಯಾದಿಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ.

ಹುದ್ದೆ : ದ್ವಿತೀಯ ದರ್ಜೆ ಸಹಾಯಕ ಮತ್ತು 4 ನೇ ದರ್ಜೆ ನೌಕರರ ಭರ್ತಿಗೆ ನೇಮಕ ಪ್ರಕಟಣೆ ಹೊರಡಿಸಲಾಗಿದೆ.

ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 55 ಶೇಕಡ ಅಂಕಗಳನ್ನು ಅಂಗೀಕೃತ ವಿಶ್ವವಿದ್ಯಾಲಯದಿಂದ ಪಡೆದ ಪದವಿ ಕನಿಷ್ಠ ವಿದ್ಯಾರ್ಹತೆಯನ್ನು ಹೊಂದಿರಬೇಕು. ಕಂಪ್ಯೂಟರ್ ಜ್ಞಾನ ಕಡ್ಡಾಯ. ( ಬಿ.ಕಾಂ/ಬಿಬಿಎಂ/ಎಂ.ಕಾಂ/ಎಂ.ಬಿ.ಎ/ಎಲ್‌ಎಲ್‌ಬಿ ಮತ್ತು ಸಹಕಾರ ವಿಷಯದಲ್ಲಿ ಪದವಿ ಅಧ್ಯಯನ ಮಾಡಿದವರಿಗೆ ಮತ್ತು ಹೆಚ್ಚಿನ ವಿದ್ಯಾರ್ಹತೆ ಹಾಗೂ ಅನುಭವವುಳ್ಳವರಿಗೆ ಆದ್ಯತೆ ನೀಡಲಾಗುವುದು) ಈ ಹುದ್ದೆಗೆ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ ರೂ.2000/- ನ್ನು ಪಾವತಿಸಬೇಕಾಗುತ್ತದೆ.

4 ನೇ ದರ್ಜೆ ನೌಕರರ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ ನ್ನು ಶೇ.40 ಅಂಕಗಳೊಂದಿಗೆ ಪಾಸ್ ಮಾಡಿರಬೇಕು. ಈ ಹುದ್ದೆಗೆ ಅರ್ಜಿ ಶುಲ್ಕ ರೂ.1000/- ನ್ನು ಪಾವತಿಸಬೇಕು. ಅರ್ಜಿಸಲ್ಲಿಸುವ ಅಭ್ಯರ್ಥಿಗಳಿಗೆ ಕನ್ನಡ ಮಾತನಡಲು /ಓದಲು/ಬರೆಯಲು ತಿಳಿದಿರಬೇಕು.

ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಕನಿಷ್ಠ 18 ವರ್ಷ ತುಂಬಿರಬೇಕು. ಗರಿಷ್ಠ ವಯಸ್ಸು ಸಾಮಾನ್ಯ ವರ್ಗದವರಿಗೆ 35 ವರ್ಷ, ಇತರೆ ಅಭ್ಯರ್ಥಿಗಳಿಗೆ 40 ವರ್ಷ ಗರಿಷ್ಠ ವಯಸ್ಸು ನಿಗದಿಪಡಿಸಲಾಗಿದೆ.

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ಅಭ್ಯರ್ಥಿಗಳು ಶಿವಮೊಗ್ಗದ ಕುವೆಂಪು ಮಾರ್ಗದಲ್ಲಿನ ಪದವೀಧರರ ಸಹಕಾರ ಸಂಘದ ಕಚೇರಿಯ ವೇಳೆಯಲ್ಲಿ ಅರ್ಜಿಯನ್ನು ಪಡೆಯಬೇಕು. ಭರ್ತಿ ಮಾಡಿದ ಅರ್ಜಿಯ ಮೇಲ್ಭಾಗದಲ್ಲಿ ಇತ್ತೀಚಿನ ಪಾಸ್‌ಪೋರ್ಟ್‌ ಸೈಜಿನ ಫೊಟೋ ಅಂಟಿಸಿ ಎಲ್ಲಾ ದಾಖಲೆಗಳೊಂದಿಗೆ ಲಕೋಟೆಯನ್ನು ದಿನಾಂಕ 27-05-2021 ರಂದು ಸಂಜೆ 05 ಗಂಟೆಯೊಳಗೆ ಪದವೀಧರರ ಸಹಕಾರ ಸಂಘ ನಿ., ಕುವೆಂಪು ಮಾರ್ಗ, ಶಿವಮೊಗ್ಗ ಇಲ್ಲಿಗೆ ತಲುಪುವಂತೆ ಸಲ್ಲಿಸತಕ್ಕದ್ದು.

Leave a Comment