Category: State Govt Jobs

Karnataka Govt Jobs News in Kannada, Job news in kannada, employment news, kpsc update, karnataka police recruitment, bmtc driver jobs, ksrtc driver conductor jobs, gramapanchayiti jobs, bengaluru jobs, mysuru jobs, mangaluru jobs, hassan jobs, jobs in karnataka, jobs near me, ಕರ್ನಾಟಕ ಉದ್ಯೋಗ ವಾರ್ತೆ, ಕೆಪಿಎಸ್‌ಸಿ, ಸರಕಾರಿ ಉದ್ಯೋಗ, ಕನ್ನಡ ಉದ್ಯೋಗಾವಕಾಶ, ಉದ್ಯೋಗ ಮಾಹಿತಿ, ಜಾಬ್‌ ಸುದ್ದಿಗಳು

  • Success Story: ವಾಟ್ಸ್‌ಆ್ಯಪ್‌ ಸ್ಥಾಪಕ ಜಾನ್‌ ಕೋಮ್‌ ಯಶೋಗಾಥೆ

    Success Story: ವಾಟ್ಸ್‌ಆ್ಯಪ್‌ ಸ್ಥಾಪಕ ಜಾನ್‌ ಕೋಮ್‌ ಯಶೋಗಾಥೆ

    ಜಗತ್ತಿನ ಸುಮಾರು 109 ದೇಶಗಳಲ್ಲಿ ಜನಪ್ರಿಯತೆ ಪಡೆದಿರುವ ವಾಟ್ಸ್‌ಆ್ಯಪ್‌ ಬಗ್ಗೆ ಗೊತ್ತಿಲ್ಲದೆ ಇರುವವರು ಯಾರೂ ಇರಲಿಕ್ಕಿಲ್ಲ. ಇದನ್ನು ಬರೋಬ್ಬರಿ 1600 ಕೋಟಿ ಡಾಲರ್‌ ಕೊಟ್ಟು ಫೇಸ್‌ಬುಕ್‌ ಖರೀದಿಸಿತ್ತು.
    ಇಷ್ಟೊಂದು ದುಬಾರಿ ಮೊತ್ತಕ್ಕೆ ಬಿಕರಿಯಾದ ವಾಟ್ಸ್‌ಆ್ಯಪ್‌ ಅನ್ನು ಆರಂಭಿಸಿದ್ದು ಜಾನ್‌ ಕೋಮ್‌. ಈತನ ಬಾಲ್ಯ, ಬದುಕು, ಸಾಧನೆ ಎಲ್ಲರಿಗೂ ಸೂಧಿರ್ತಿ ನೀಡುವಂತದ್ದು.
    ಈತನ ಕತೆ ಆರಂಭವಾಗುವುದು ದೂರದ ಉಕ್ರೈನ್‌ನಿಂದ. ಅದು 1992ನೇ ಇಸವಿ. ಜಾನ್‌ ಕೋಮ್‌ ಎಂಬ ಬಾಲಕನಿಗೆ 16 ವರ್ಷ ವಯಸ್ಸು. ಅರ್ಥವ್ಯವಸ್ಥೆ ಕೆಟ್ಟದಾಗಿತ್ತು. ಯಾರ ಕೈಯಲ್ಲಿಯೂ ದುಡ್ಡಿರಲಿಲ್ಲ. ದಟ್ಟ ದರಿದ್ರ ಪರಿಸ್ಥಿತಿ. ಇಂತಹ ವಾತಾವರಣದಲ್ಲಿ ಮಗನ ಭವಿಷ್ಯ ರೂಪಿಸಲು ಸಾಧ್ಯವೇ ಇಲ್ಲವೆಂದು ಜಾನ್‌ ಕೋಮ್‌ ತಾಯಿಗೆ ತಿಳಿಯಿತು. ಆ ಕಡು ಬಡತನದಲ್ಲಿ ಆ ಮಹಾತಾಯಿ ಮಗನ ಭವಿಷ್ಯಕ್ಕಾಗಿ ಅಮೆರಿಕಕ್ಕೆ ವಲಸೆ ಹೋಗಲು ನಿರ್ಧರಿಸಿದರು. ತಂದೆ ಉಕ್ರೇನ್‌ನಲ್ಲಿಯ ಉಳಿದರು. ಮಗನ ಭವಿಷ್ಯಕ್ಕಾಗಿ ಅಪ್ಪ-ಅಮ್ಮ ದೂರದೂರ ಇರಬೇಕಾಯಿತು. ಅಮೆರಿಕಕ್ಕೆ ಬಂದಾಗ ಕೈಯಲ್ಲಿ ಹಣವಿಲ್ಲ. ಹೊಟ್ಟೆ ತುಂಬಲು ಸರಕಾರದ ರೇಷನ್‌ ಇತ್ತು. ಬಾಲಕ ಕೋಮ್‌ ದಿನಸಿ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಂಡ.

    ಪ್ರೋಗ್ರಾಮಿಂಗ್‌ ಪ್ರೀತಿ
    18ನೇ ವಯಸ್ಸಿಗೆ ಪ್ರೋಗ್ರಾಮಿಂಗ್‌ ಭಾಷೆ ಕಲಿಯಲು ಜಾನ್‌ ಬಯಸಿದ. ಕಾಲೇಜಿಗೆ ಹೋಗಿ ಕಲಿಯಲು ಅಷ್ಟೊಂದು ದುಡ್ಡೆಲ್ಲಿತ್ತು?. ಸೆಕೆಂಡ್‌ ಹ್ಯಾಂಡ್‌ ಬುಕ್‌ ಪುಸ್ತಕದಂಗಡಿಗಳಿಂದ ಪುಸ್ತಕಗಳನ್ನು ತಂದು ಓದತೊಡಗಿದ. ಓದಿದ ನಂತರ ಆ ಪುಸ್ತಕವನ್ನು ಅದೇ ಅಂಗಡಿಗಳಿಗೆ ವಾಪಸ್‌ ನೀಡುತ್ತಿದ್ದ. ಕಲಿಕೆ ಮತ್ತು ಗಳಿಕೆ ಜೊತೆಯಾಗಿ ಮಾಡುತ್ತಿದ್ದ. ಕೆಲವೇ ಸಮಯದಲ್ಲಿ ಶಾಲೆಗೆ ಹೋಗುವುದನ್ನು ಆತ ಇಷ್ಟಪಡಲಿಲ್ಲ. ಯಾಹೂನಲ್ಲಿ ಕೆಲಸ ಸಿಕ್ಕಿದಾಗ ಅಲ್ಲಿ ಮತ್ತೊಬ್ಬ ಗೆಳೆಯ ಸಿಕ್ಕ. ಅವನ ಹೆಸರು ಬ್ರೈನ್‌ ಆ್ಯಕ್ಟನ್‌.
    ಕೋಮ್‌ ತಾಯಿ ಕ್ಯಾನ್ಸರ್‌ನಿಂದ 2000ನೇ ಇಸವಿಯಲ್ಲಿ ಮೃತಪಟ್ಟರು. 1997ರಲ್ಲಿ ಉಕ್ರೇನ್‌ನಲ್ಲಿ ಆತನ ತಂದೆಯೂ ಇಲ್ಲವಾದರು. ಆತ ಒಂಟಿಯಾದ. ಆಗ ಆತನಿಗೆ ಆ್ಯಕ್ಟನ್‌ ಗೆಳೆತನವೇ ಬಂಧುಬಳಗವಾಯಿತು. ಇವರಿಬ್ಬರು ಯಾಹೂ ಕೆಲಸವನ್ನು ಎಂಜಾಯ್‌ ಮಾಡುತ್ತಿರಲಿಲ್ಲ. ಅತ್ಯುತ್ತಮ ಜಾಹೀರಾತು ತರಲು ಯಾಹೂ ಮಾಡಲು ಉದ್ದೇಶಿದಕ್ಕಿಂತ ಭಿನ್ನವಾಗಿ ಕೆಲಸ ಮಾಡತೊಡಗಿದರು. ಇದರಿಂದ ಕೆಲಸವನ್ನೂ ಬಿಡಬೇಕಾಯಿತು.

    2007ರಲ್ಲಿ ಕೋಮ್‌ ಮತ್ತು ಆ್ಯಕ್ಟನ್‌ ಯಾಹೂ ಬಿಟ್ಟರು. ಮುಂದೇನೂ ಎನ್ನುವುದು ಅವರಿಗೆ ಸ್ಪಷ್ಟವಾಗಲಿಲ್ಲ. ತಮ್ಮ ಮನಸ್ಸಿನ ಸಮಧಾನಕ್ಕಾಗಿ ಅವರು ಒಂದು ವರ್ಷ ದಕ್ಷಿಣ ಅಮೆರಿಕದ್ಯಾಂತ ಸುತ್ತಿದರು. ಆದರೂ, ಅವರಿಗೆ ಯಾವುದೇ ಐಡಿಯಾ ಸಿಗಲಿಲ್ಲ.
    2009ರಲ್ಲಿ ಕೋಮ್‌ ಒಂದು ಐಫೋನ್‌ ಖರೀದಿಸಿದರು. ಆ್ಯಪ್‌ ಸ್ಟೋರ್‌ ಎನ್ನುವುದು ಆಗಮಿಸಿ ಕೆಲವೇ ಸಮಯವಾಗಿತ್ತು. ಐಫೋನ್‌ ನೋಡುತ್ತಿದ್ದಂತೆ, ಕೋಮ್‌ ಮನಸ್ಸಲ್ಲಿ ಹೊಸ ಉದ್ಯಮವೊಂದರ ಕಲ್ಪನೆ ಕಣ್ಣ ಮುಂದೆ ಬಂತು. ಇದೆಲ್ಲ ಆಗೋಲ್ಲ ಬಿಡು ಎಂಬ ಭಾವ ಆತನಲ್ಲಿ ಇರಲಿಲ್ಲ. ಒಂದು ಹೊಸ ಆ್ಯಪ್‌ ಅಭಿವೃದ್ಧಿಪಡಿಸುವ ಕುರಿತು ಆಲೋಚನೆ ಆತನಿಗೆ ಬಂತು.
    ಐಫೋನ್‌ ಡೆವಲಪರ್‌ ಜೊತೆ ಸೇರಿ ಒಂದು ಆ್ಯಪ್‌ ರಚಿಸಿದರು. ಆದರೆ, ಅದು ಹೆಚ್ಚು ಜನರನ್ನು ತಲುಪಲಿಲ್ಲ.. 2009ರಲ್ಲಿ ಆ್ಯಪಲ್‌ ಫುಷ್‌ ನೋಟಿಫಿಕೇಷನ್‌ ಆರಂಭಿಸಿತು. ಆ ನೋಟಿಫಿಕೇಷನ್‌ ಮೂಲಕ ಈ ಆ್ಯಪ್‌ನ ಪ್ರಚಾರ ಮಾಡಿದರು. ಆತನ ಸ್ನೇಹಿತರು ಇದನ್ನು ನೋಡಿ ಜೋಕ್‌ ಮಾಡಿದರು. ಆದರೆ, ಕೆಲವೇ ದಿನಗಳಲ್ಲಿ ಈ ಆ್ಯಪ್‌ ಅನ್ನು 2.5 ಲಕ್ಷ ಜನರು ಡೌನ್‌ಲೋಡ್‌ ಮಾಡಿಕೊಂಡಿದ್ದರು. ಆ ಸಮಯದಲ್ಲಿ ಆ್ಯಕ್ಟನ್‌ ಇನ್ನೂ ನಿರುದ್ಯೋಗಿಯಾಗಿದ್ದ. ಕೋಮ್‌ ಆತನಿಗೆ ಈ ಆ್ಯಪ್‌ ಸಂಸ್ಥೆಗೆ ಸಹ-ಸ್ಥಾಪಕರಾಗುವಂತೆ ಆಫರ್‌ ನೀಡಿದರು. ಆ್ಯಕ್ಟನ್‌ ಮತ್ತು ಯಾಹೂನಲ್ಲಿದ್ದ ಆತನ ಸ್ನೇಹಿತರು 2,50,000 ಡಾಲರ್‌ ಹೂಡಿಕೆ ಮಾಡಿದರು. ಮುಂದೆ ನಡೆದದ್ದು ಇತಿಹಾಸ. ಕೋಮ್‌ ಮತ್ತು ಆ್ಯಕ್ಟನ್‌ ಅನ್ವೇಷಣೆಯ ಪ್ರತಿಫಲವೇ ನಮ್ಮನಿಮ್ಮೆಲ್ಲರ ಕೈಯಲ್ಲಿರುವ ವಾಟ್ಸ್‌ಆ್ಯಪ್‌ ಎಂಬ ಮೆಸೆಂಜರ್‌ ಆ್ಯಪ್‌. 900 ಮಿಲಿಯನ್‌ಗೂ ಅಧಿಕ ಬಳಕೆದಾರರನ್ನು ಹೊಂದಿರುವ ಇದನ್ನು ನಂತರ ಬಹುಕೋಟಿ ಡಾಲರ್‌ಗೆ ಫೇಸ್‌ಬುಕ್‌ ಖರೀದಿಸಿತು.
    ನೀತಿ: ನಾವು ಹುಟ್ಟುವಾಗ ಬಡವರಾಗಿರಬಹುದು. ನಾವು ಬಡವರೆಂದು ಹಳಿಯುತ್ತ ಕೂರುವುದು ಬೇಡ. ಕರಿಯರ್‌ ಕ್ಷೇತ್ರದಲ್ಲಿ ಈಗ ಅಗಾಧ ಅವಕಾಶಗಳಿವೆ. ನಿಂತಲ್ಲಿ ನಿಲ್ಲದೆ ಅತ್ಯುತ್ತಮ ಕರಿಯರ್‌ ಗುರಿ ಸಾಧಿಸಲು ಕಠಿಣ ಪರಿಶ್ರಮಪಟ್ಟರೆ ಯಶಸ್ಸು ಪಡೆದೇ ಪಡೆಯಬಹುದು.

  • NIACL Assistant Jobs: ನ್ಯೂ ಇಂಡಿಯಾ ಅಸ್ಯೂರೆನ್ಸ್‌ನಲ್ಲಿ ಉದ್ಯೋಗಾವಕಾಶ, 300 ಅಸಿಸ್ಟೆಂಟ್‌ ಹುದ್ದೆಗಳಿಗೆ ಫೆಬ್ರವರಿ 19ರ ಮೊದಲು ಅರ್ಜಿ ಸಲ್ಲಿಸಿ

    NIACL Assistant Jobs: ನ್ಯೂ ಇಂಡಿಯಾ ಅಸ್ಯೂರೆನ್ಸ್‌ನಲ್ಲಿ ಉದ್ಯೋಗಾವಕಾಶ, 300 ಅಸಿಸ್ಟೆಂಟ್‌ ಹುದ್ದೆಗಳಿಗೆ ಫೆಬ್ರವರಿ 19ರ ಮೊದಲು ಅರ್ಜಿ ಸಲ್ಲಿಸಿ

    ಭಾರತದ ಪ್ರಮುಖ ವಿಮಾ ಕಂಪನಿಯಾದ ನ್ಯೂ ಇಂಡಿಯಾ ಅಸ್ಯುರೆನ್ಸ್‌ ಕಂಪನಿ ಲಿಮಿಟೆಡ್‌ (NIACL Assistant Online Form 2024) ಅಸಿಸ್ಟೆಂಟ್‌ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಒಟ್ಟು 300 ಹುದ್ದೆಗಳಿವೆ. ಹುದ್ದೆಗಳ ವಿವರ, ವರ್ಗೀಕರಣ, ಅರ್ಜಿ ಸಲ್ಲಿಸುವ ವಿಧಾನ, ವಿದ್ಯಾರ್ಹತೆ, ವಯೋಮಿತಿ, ಅರ್ಜಿ ಶುಲ್ಕ, ಅಧಿಸೂಚನೆ ಸೇರಿದಂತೆ ಸಂಪೂರ್ಣ ವಿವರ ಇಲ್ಲಿದೆ.

    ಒಟ್ಟು ಹುದ್ದೆಗಳ ಸಂಖ್ಯೆ: 300
    ಹುದ್ದೆಯ ಹೆಸರು: ಅಸಿಸ್ಟೆಂಟ್‌
    ನೇಮಕ ಮಾಡುವ ಕಂಪನಿ: New India Assurance Company Limited (NIACL)

    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: ಫೆಬ್ರವರಿ 1, 2024
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಫೆಬ್ರವರಿ 15, 2024

    ಅರ್ಜಿ ಸಲ್ಲಿಸುವುದು ಹೇಗೆ?

    ಆನ್‌ಲೈನ್‌ ಮೂಲಕ

    ಅರ್ಜಿ ಸಲ್ಲಿಸಲು ವಯೋಮಿತಿ

    ಕನಿಷ್ಠ ವರ್ಷ: 21 ವರ್ಷ. ಗರಿಷ್ಠ ವಯೋಮಿತಿ 30 ವರ್ಷ. ವಯೋಮಿತಿಯಲ್ಲಿ ಸರಕಾರದ ನಿಯಮದಂತೆ ಅರ್ಹ ಅಭ್ಯರ್ಥಿಗಳಿಗೆ ಸಡಿಲಿಕೆ ನೀಡಲಾಗುತ್ತದೆ.

    ವಿದ್ಯಾರ್ಹತೆ ಏನು?

    ಯಾವುದೇ ವಿಷಯದಲ್ಲಿ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು. ವಿವರವಾದ ಅಧಿಸೂಚನೆ ಇನ್ನಷ್ಟೇ ಬಿಡುಗಡೆಯಾಗಬೇಕಾಗಿದೆ. ಹೆಚ್ಚಿನ ವಿವರ ಪಡೆಯಲು sarakarijobs.com ಗೆ ನಿಯಮಿತವಾಗಿ ಭೇಟಿ ನೀಡುತ್ತಿರಿ.

    ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ವಿವರ ಪಡೆಯಲು ಭೇಟಿ ನೀಡಬೇಕಾದ ನ್ಯೂ ಇಂಡಿಯಾ ಅಸ್ಯುರೆನ್ಸ್‌ ಕಂಪನಿಯ ವೆಬ್‌ ಸೈಟ್‌ ವಿಳಾಸ: https://www.newindia.co.in/

    ಅಧಿಸೂಚನೆ

  • ನಿಮ್ಹಾನ್ಸ್‌ನಲ್ಲಿ ಉದ್ಯೋಗಾವಕಾಶ, 40 ಸಾವಿರ ರೂಪಾಯಿ ವೇತನ

    ನಿಮ್ಹಾನ್ಸ್‌ನಲ್ಲಿ ಉದ್ಯೋಗಾವಕಾಶ, 40 ಸಾವಿರ ರೂಪಾಯಿ ವೇತನ

    ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಮಾನಸಿಕ ಆರೋಗ್ಯ ಸಂಸ್ಥೆ (ನಿಮ್ಹಾನ್ಸ್‌)ಯಲ್ಲಿ 1 ಪ್ರಾಜೆಕ್ಟ್‌ ಅಸೋಸಿಯೇಟ್‌ ಹುದ್ದೆಯಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

    ವಿದ್ಯಾರ್ಹತೆ: ಪ್ರಾಜೆಕ್ಟ್‌ ಅಸೋಸಿಯೇಟ್‌ ಹುದ್ದೆಗೆ ಲೈಫ್‌ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿ/ ಬಯೊಲಾಜಿಕಲ್‌ ಸೈನ್ಸ್‌/ ಬಯೋ ಟೆಕ್ನಾಲಜಿಯಲ್ಲಿ ಸ್ನಾತಕೋತ್ತರ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು.

    ಅನುಭವಿಗಳಿಗೆ ಆದ್ಯತೆ: ಮಾಲಿಕ್ಯುಲರ್‌ ಬಯೋಲಜಿ ಟೆಕ್ನಿಕ್ಸ್‌- ಡಿಎನ್‌ಎ/ ಆರ್‌ಎನ್‌ಎ/ ಪ್ರೊಟಿನ್‌, ಟಿಸ್ಯೂ ಕಲ್ಚರ್‌, ಸೆಲ್‌ ಕಲ್ವರ್‌ ಟೆಕ್ನಿಕ್ಸ್‌ ಆಂಡ್‌ ಇಮೇಜಿಂಗ್‌ ಟೆಕ್ನಿಕ್ಸ್‌ ಮುಂತಾದ ಮಾಲಿಕ್ಯುಲರ್‌ ಬಯೋಲಜಿ ಟೆಕ್ನಿಕ್ಸ್‌ನಲ್ಲಿ ಆರು ತಿಂಗಳ ರಿಸರ್ಚ್‌ ಅನುಭವ ಇರುವವರಿಗೆ ಆದ್ಯತೆ ನೀಡಲಾಗುತ್ತದೆ.

    ವಯೋಮಿತಿ: ಅರ್ಜಿ ಸಲ್ಲಿಸಲು ಗರಿಷ್ಠ 30 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.

    ವೇತನ: ತಿಂಗಳಿಗೆ 40 ಸಾವಿರ ರೂಪಾಯಿ ವೇತನ ನೀಡಲಾಗುತ್ತದೆ.

    ಕೆಲಸದ ಅವಧಿ: ಒಂದು ವರ್ಷ

    ಆಯ್ಕೆ ಪ್ರಕ್ರಿಯೆ: ನೇರ ಸಂದರ್ಶನ

    ಸಂದರ್ಶನ ದಿನಾಂಕ: ಜನವರಿ 29, 2024

    ಸಂದರ್ಶನ ನಡೆಯುವ ಸ್ಥಳ: Committee Room, beside old Registrar Office, Administrative Block, NIMHANS,
    Bengaluru-29

    ಲಿಖಿತ ಪರೀಕ್ಷೆ/ಸ್ಕಿಲ್‌ ಟೆಸ್ಟ್‌ ನಡೆಯುವ ಹತ್ತು ನಿಮಿಷದ ಮೊದಲು ಅಭ್ಯರ್ಥಿಗಳು ಸ್ಥಳದಲ್ಲಿ ಹಾಜರಿರಬೇಕು. ಹೆಚ್ಚಿನ ಮಾಹಿತಿಗೆ ಭೇಟಿ ನೀಡಬೇಕಾದ ವೆಬ್‌ಸೈಟ್‌ ವಿಳಾಸ: nimhans.ac.in

    Download Notification

  • ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ತಯಾರಿ ಹೇಗಿರಬೇಕು?

    ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ತಯಾರಿ ಹೇಗಿರಬೇಕು?

    ಪ್ರತಿವರ್ಷ ರೈಲ್ವೆ, ಬ್ಯಾಂಕ್‌, ಕೆಪಿಎಸ್‌ಸಿ, ಯುಪಿಎಸ್‌ಸಿ, ಪಿಡಿಒ, ಪೊಲೀಸ್‌ ನೇಮಕ ಪರೀಕ್ಷೆ ಸೇರಿದಂತೆ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಅಭ್ಯರ್ಥಿಗಳು ಎದುರಿಸಬೇಕಿರುತ್ತದೆ. ಬಹುತೇಕರು ಸರಕಾರಿ ಉದ್ಯೋಗ ಸಿಕ್ಕರೆ ಸಿಗಲಿ ಎಂಬ ಆಸೆಯಿಂದ ಅರ್ಜಿ ಸಲ್ಲಿಸುತ್ತಾರೆ. ಯಾವುದೇ ಸಮರ್ಪಕ ಸಿದ್ಧತೆ ಇಲ್ಲದೆ ಪರೀಕ್ಷೆ ಬರೆದು ಫಲಿತಾಂಶದಲ್ಲಿ ಹೆಸರು ಇಲ್ಲದೆ ಇರುವುದನ್ನು ‘ಸರಕಾರಿ ಜಾಬ್ಸ್‌ ಸಿಗುವುದು ಸುಲಭವಲ್ಲ’ ಎಂದುಕೊಳ್ಳುತ್ತಾರೆ.
    ಉದ್ಯೋಗ ಮಾರುಕಟ್ಟೆಯಲ್ಲೀಗ ಸ್ಪರ್ಧೆ ಹೆಚ್ಚಿದೆ. ಯಾವುದೇ ಜಾಬ್‌ ನೋಟಿಫಿಕೇಷನ್‌ ಪ್ರಕಟವಾಗಲಿ. ಇರುವುದು ಕೆಲವೇ ಹುದ್ದೆಗಳಾಗಿದ್ದರೂ ಸಾವಿರ, ಲಕ್ಷ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸುತ್ತಾರೆ. ಸರಕಾರಿ ನೌಕರಿಗಿರುವ ಸೆಳೆತ ಅಂತಹದ್ದು. ಕಠಿಣ ಪರಿಶ್ರಮವಿದ್ದರೆ ಇಂತಹ ಉದ್ಯೋಗಗಳನ್ನು ನೀವು ಪಡೆಯಬಹುದಾಗಿದೆ.

    ಸ್ಟಡಿ ಮೆಟಿರಿಯಲ್ಸ್‌

    ಅಭ್ಯರ್ಥಿಗಳು ಇತ್ತೀಚಿನ ಮತ್ತು ಪರಿಷ್ಕೃತ ಅಧ್ಯಯನ ಸಾಮಾಗ್ರಿಗಳನ್ನು ಸಂಗ್ರಹಿಸಿ ತಯಾರಿ ನಡೆಸಬೇಕು. ಅಂದರೆ, ಅಧ್ಯಯನ ನಡೆಸುವ ಮಾಹಿತಿಗಳು ಈಗಿನ ಪರೀಕ್ಷಾ ರೀತಿ ಮತ್ತು ಸಿಲೆಬಸ್‌ಗೆ ಹೊಂದಿಕೊಳ್ಳುವಂತೆ ಇರಬೇಕು. ಆಯಾ ಅಧಿಸೂಚನೆಗಳಲ್ಲಿ ಸಿಲೆಬಸ್‌ ಮಾಹಿತಿ ಇರುತ್ತದೆ. ಯಾವ ವಿಷಯಗಳ ಕುರಿತು ಪ್ರಶ್ನೆಗಳನ್ನು ಕೇಳಲಾಗುತ್ತದೆ ಎಂದ ಮಾಹಿತಿ ಇರುತ್ತದೆ. ಇದೆಲ್ಲವನ್ನು ಸರಿಯಾಗಿ ಅರ್ಥಮಾಡಿಕೊಂಡು ಅದಕ್ಕೆ ತಕ್ಕಂತೆ ಅಧ್ಯಯನ ನಡೆಸಿ.

    ಪರೀಕ್ಷಾ ಮಾರ್ಗದರ್ಶಿಗಳು

    ಪ್ರತಿಯೊಂದು ಪರೀಕ್ಷೆಗಳು ಸಹ ವಿಶೇಷ ವಿಧಾನಗಳನ್ನು ಒಳಗೊಂಡಿರುತ್ತವೆ. ಅಂದರೆ, ಅವುಗಳಲ್ಲಿ ನೀಡಲಾಗುವ ಪ್ರಶ್ನೆಗಳ ಸಂಖ್ಯೆ, ಪ್ರಶ್ನೆಗಳ ರೀತಿ, ಪರೀಕ್ಷಾ ಅವಧಿ, ನೆಗೆಟಿವ್‌ ಮಾರ್ಕ್ಸ್‌ ಇತ್ಯಾದಿಗಳು ಇರುತ್ತವೆ. ಇವೆಲ್ಲವನ್ನು ತಿಳಿದುಕೊಂಡು ಇದಕ್ಕೆ ತಕ್ಕಂತೆ ಅಧ್ಯಯನ ನಡೆಸಬೇಕು. ಇದಕ್ಕಾಗಿ ನಿಮಗೆ ಎಗ್ಸಾಂ ಗೈಡ್‌ಗಳು ಉಪಯುಕ್ತ. ಗೈಡ್‌ಗಳನ್ನು ನೋಡಿಕೊಂಡು ನಿಗದಿತ ಸಮಯದೊಳಗೆ ಸಮರ್ಪಕ ಉತ್ತರ ಬರೆಯುವ ಸಾಮರ್ಥ್ಯ‌ವನ್ನು ಪರಿಶೀಲಿಸಿಕೊಳ್ಳಬಹುದು.

    ವೇಳಾಪಟ್ಟಿಯಂತೆ ಅಧ್ಯಯನ

    ಬದುಕಿನಲ್ಲಿ ಶಿಸ್ತು ಇದ್ದರೆ ಗೆಲುವು ನಿಶ್ಚಿತ. ನೀವು ದಿನದಲ್ಲಿ ಎಷ್ಟು ಗಂಟೆ ಅಧ್ಯಯನ ಮಾಡಬೇಕೆಂದು ಟೈಂಟೇಬಲ್‌ ರಚಿಸಿಕೊಳ್ಳಿ. ದಿನದಲ್ಲಿ ಇಷ್ಟು ಗಂಟೆ ಎಗ್ಸಾಂ ತಯಾರಿಗೆ ಎಂದು ಮೀಸಲಿಟ್ಟು ಶ್ರದ್ಧೆಯಿಂದ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು.

    ರಿವಿಜನ್‌ ಮಾಡಿ

    ಓದಿದ ವಿಚಾರಗಳನ್ನು ಮೆಲುಕು ಹಾಕುವ ಅಭ್ಯಾಸ ಇರಲಿ. ಅಂದರೆ, ಇಸವಿಗಳು, ಫಾರ್ಮುಲಾಗಳು, ವ್ಯಾಖ್ಯಾನಗಳನ್ನು ಆಗಾಗ ನೆನಪಿಸುತ್ತ ಇರಿ. ಹಗಲುಕನಸನ್ನು ಪಕ್ಕಕ್ಕೆ ಇರಿಸಿ ಸಮಯ ಸಿಕ್ಕಾಗಲೆಲ್ಲ ಓದಿದ ವಿಚಾರಗಳನ್ನು ನೆನಪಿಸಿಕೊಳ್ಳುತ್ತ ಇರಿ.

    ಟಿಪ್ಪಣಿ ಬರೆಯುವುದು

    ಓದುವಾಗ ಅತ್ಯಮೂಲ್ಯ ಅನಿಸಿದ ಅಂಶಗಳನ್ನು ನೋಟ್ಸ್‌ನಲ್ಲಿ ಬರೆದಿಟ್ಟುಕೊಳ್ಳಿ. ಮರೆತು ಹೋಗಬಹುದಾದ ಸಂಗತಿಗಳನ್ನು ಹೀಗೆ ಬರೆದಿಟ್ಟರೆ ಆಗಾಗ ಓದಿಕೊಳ್ಳಬಹುದು. ಪರೀಕ್ಷೆಗೆ ಕೆಲವು ದಿನಗಳಿರುವಾಗ ಇಂತಹ ನೋಟ್ಸ್‌ ಮೇಲೆ ಕಣ್ಣಾಡಿಸುತ್ತಿದ್ದರೆ ಸಾಕು.

    ಪರಿಣತರಿಂದ ಮಾಹಿತಿ

    ನೀವು ಏಕಲವ್ಯನಂತೆ ಸಾಧನೆ ಮಾಡಬಹುದು ಅಥವಾ ಕಾಂಪಿಟೀಟಿವ್‌ ಎಗ್ಸಾಂನಲ್ಲಿ ಪರಿಣತಿ ಪಡೆದ ತಜ್ಞರಿಂದ ತರಬೇತಿ ಪಡೆಯಬಹುದು. ತಜ್ಞರ ಮಾರ್ಗದರ್ಶನವಿದ್ದರೆ ಪರೀಕ್ಷೆ ಬರೆಯುವ ಟೆಕ್ನಿಕ್‌ ತಿಳಿಯುತ್ತದೆ.

    ಸುದ್ದಿ ಪತ್ರಿಕೆಗಳನ್ನು ಓದಿ

    ದಿನನಿತ್ಯ ಹಲವಾರು ದಿನಪತ್ರಿಕೆಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಿ. ಈ ಮಾಹಿತಿಯನ್ನು ಪರೀಕ್ಷೆಯಲ್ಲಿ ಕೇಳಬಹುದೇ ಎಂದು ಯೋಚಿಸುತ್ತ ಪತ್ರಿಕೆಗಳನ್ನು ಓದಿರಿ. ದಿನಪತ್ರಿಕೆಗಳಲ್ಲಿ ಪ್ರಮುಖವೆನಿಸುವ ಮಾಹಿತಿಗಳನ್ನು ನೋಟ್‌ ಮಾಡಿಟ್ಟುಕೊಳ್ಳಿ. ಅಂದರೆ, ಪ್ರಮುಖರ ನೇಮಕ, ಪ್ರಮುಖ ಒಪ್ಪಂದಗಳು, ಅಂತಾರಾಷ್ಟ್ರೀಯ ಸಂಬಂಧ ಸೇರಿದಂತೆ ಪ್ರಚಲಿತ ವಿದ್ಯಾಮಾನಗಳ ಮಾಹಿತಿಯನ್ನು ಪಡೆಯುತ್ತಿರಿ.

    ಹಳೆಯ ಪ್ರಶ್ನೆಪತ್ರಿಕೆಗಳು

    ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಈ ಹಿಂದಿನ ವರ್ಷಗಳ ಪ್ರಶ್ನೆಪತ್ರಿಕೆಗಳು ಆನ್‌ಲೈನ್‌ನಲ್ಲಿ ಲಭ್ಯವಿರುತ್ತವೆ. ಅವುಗಳಲ್ಲಿ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ. ಯಾವ ರೀತಿಯ ಪ್ರಶ್ನೆಗಳನ್ನು ಕೇಳಲಾಗುತ್ತದೆ ಎಂದು ತಿಳಿದುಕೊಳ್ಳಿ.

    ತಂತ್ರಜ್ಞಾನದ ಸದ್ಭಳಕೆ

    ಇಂಟರ್‌ನೆಟ್‌ ಅನ್ನು ನಿಮ್ಮ ಜ್ಞಾನ ಹೆಚ್ಚಿಸುವ ಸಾಧನವಾಗಿ ಬಳಸಿ. ಸ್ಮಾರ್ಟ್‌ಫೋನ್‌ನಲ್ಲಿ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ಆ್ಯಪ್‌ಗಳನ್ನು ಡೌನ್‌ಲೋಡ್‌ ಮಾಡಿ ಬಳಸಿ. ಪ್ರಮುಖ ವಿಷಯಗಳನ್ನು ಬುಕ್‌ಮಾರ್ಕ್‌ ಮಾಡಿಟ್ಟುಕೊಳ್ಳಿ. ಇಂಟರ್‌ನೆಟ್‌ನಲ್ಲಿ ಲಭ್ಯವಿರುವ ಅಣಕು ಪರೀಕ್ಷೆಗಳನ್ನು ತೆಗೆದುಕೊಳ್ಳಿ. ಇಂಟರ್‌ನೆಟ್‌ನಲ್ಲಿ ಸಮಯ ಹಾಳು ಮಾಡುವ ವಿಷಯಗಳಿಂದ ದೂರವಿರಿ.

  • Social Skills: ವೃತ್ತಿ ಮತ್ತು ವೈಯಕ್ತಿಕ ಜೀವನದ ಯಶಸ್ಸಿಗೆ ಅವಶ್ಯವಾಗಿ ಬೇಕಾದ ಕೌಶಲಗಳ ವಿವರ

    ಕರಿಯರ್‌ನಲ್ಲಿ ಪ್ರಗತಿ ಕಾಣಲು ಕೇವಲ ಬಾಹ್ಯ ಅಂದ ಸಾಕಾಗದು. ಯಶಸ್ಸಿಗೆ ಸೋಷಿಯಲ್‌ ಸ್ಕಿಲ್ಸ್‌ ಅವಶ್ಯವಾಗಿದೆ. ಬಾಹ್ಯ ಅಂದವೆಂದರೆ ಶೋಕೇಸ್‌ನಲ್ಲಿರುವ ಗೊಂಬೆ, ಸೋಷಿಯಲ್‌ ಕೌಶಲವೆನ್ನುವುದು ಮನೆಯಲ್ಲಿ ಲವಲವಿಕೆಯಿಂದ ಓಡಾಡುವ ಪುಟ್ಟ ಮಗು. ನಿಮ್ಮ ಬಗ್ಗೆ ನಿಮಗಿರುವ ಸ್ವಯಂ ಭರವಸೆ, ಸಕಾರಾತ್ಮಕ ವರ್ತನೆ, ಉತ್ತಮ ಬಾಡಿ ಲ್ಯಾಂಗ್ವೇಜ್‌, ಐ ಕಾಂಟ್ಯಾಕ್ಟ್, ಅತ್ಯುತ್ತಮ ಸಂವಹನ ಕೌಶಲ ಇತ್ಯಾದಿಗಳು ಕರಿಯರ್‌ ಪ್ರಗತಿಗೆ ಸಾಥ್‌ ನೀಡುತ್ತವೆ.

    • ಜನರೊಂದಿಗೆ ಬೆರೆಯಿರಿ
      ಸೋಷಿಯಲ್‌ ಕೌಶಲಗಳು ಮಾತ್ರವಲ್ಲದೆ, ಸೋಷಿಯಲ್‌ ಇಂಟರಾರ‍ಯಕ್ಷನ್‌ ಕಡೆಗೂ ಗಮನ ನೀಡಿ. ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ. ನೀವು ಜನರೊಂದಿಗೆ ಚರ್ಚೆಯಲ್ಲಿ ಕಡಿಮೆ ಭಾಗಿಯಾದಷ್ಟು ನೀವು ಕಡಿಮೆ ಆಕರ್ಷಕರಾಗುವಿರಿ.
    • ನಿಮ್ಮ ಸ್ವಂತ ಸ್ಟೈಲ್‌ ಇರಲಿ
      ನೀವು ಯಾರದ್ದೋ ರೀತಿ ಆಗಲು ಹೋಗಬೇಡಿ. ನಿಮ್ಮ ಸ್ವಂತಿಕೆ ಇರಲಿ. ನಿಮ್ಮ ಸ್ವಂತ ಸ್ಟೈಲ್‌ ರೂಪಿಸಿ. ನಿಮಗೆ ಹೆಚ್ಚು ಆರಾಮದಾಯಕವೆನಿಸುವ ಸ್ಟೈಲ್‌ ಹುಡುಕಿ ಮತ್ತು ಅದನ್ನು ನಿತ್ಯ ಅನುಸರಿಸಿ. ಇಂತಹ ಸ್ಟೈಲ್‌ ಅನ್ನು ಅನ್ವಯಿಸುವಾಗ ನಿಮ್ಮ ಸ್ವಂತಿಕೆ ಕಳೆದುಕೊಳ್ಳಬೇಡಿ. ಯಾವತ್ತಿಗೂ ನೀವು ನೀವಾಗಿಯೇ ಇರಲಿ. ಮುಖವಾಡ ಹಾಕಿಕೊಂಡು ಜೀವಿಸಬೇಡಿ.
    • ಸ್ಮಾರ್ಟ್‌ ಆಗಿರಿ, ಕೂಲಾಗಿರಿ
      ನಿಮ್ಮ ಮನಸ್ಸಿನೊಳಗೆ ನೂರಾರು ಒತ್ತಡಗಳು ಇರಬಹುದು. ಇಂತಹ ಸ್ಥಿತಿಯಲ್ಲಿಯೂ ಕೂಲ್‌ ಆಗಿ ಹೊರಗೆ ಕಾಣಿಸಲು ಪ್ರಯತ್ನಿಸಿ. ಸದಾ ಏನಾದರೂ ದೂರುತ್ತ, ಸಮಸ್ಯೆ ಹೇಳುತ್ತ ಇರುವವರನ್ನು ನೀವು ನೋಡಿರಬಹುದು. ಅಂತಹ ನಕಾರಾತ್ಮಕ ವ್ಯಕ್ತಿತ್ವ ನಿಮ್ಮದಾಗುವುದು ಬೇಡ.
    • ನಿಮ್ಮ ಬಗ್ಗೆ ನಿಮಗೆ ಸಂಶಯ ಬೇಡ
      ನಿಮ್ಮ ಮೇಲೆ ನಿಮಗೆ ನಂಬಿಕೆ ಇರದೆ ಇದ್ದರೆ ಇತರರು ಹೇಗೆ ನಿಮ್ಮನ್ನು ನಂಬುತ್ತಾರೆ. ನೀವು ಮಾಡುವ ಕೆಲಸ, ನೀವು ತೆಗೆದುಕೊಳ್ಳುವ ನಿರ್ಧಾರ ಇತ್ಯಾದಿಗಳಲ್ಲಿ ಭರವಸೆ ಇರಲಿ. ನಿಮ್ಮ ಸ್ವಂತ ತೀರ್ಮಾನದ ಮೇಲೆ ನಂಬಿಕೆ ಇರಲಿ. ನಿಮಗೆ ನಿಮ್ಮ ನಿರ್ಧಾರಗಳ ಕುರಿತು ಸಂದೇಹಗಳಿದ್ದರೆ ಯಾರಾದರೂ ಮೆಂಟರ್‌ ಬಳಿ ಅಭಿಪ್ರಾಯ ಕೇಳಬಹುದು. ನಿಮ್ಮಲ್ಲಿರುವ ಇಂತಹ ಗುಣವು ನಿಮ್ಮನ್ನು ಲೀಡರ್‌ ಆಗಿಸುತ್ತದೆ.
    • ಆಶಾವಾದಿಯಾಗಿರಿ
      ಆಶಾವಾದವು ಸಾಂಕ್ರಾಮಿಕ. ನೀವು ಆಶಾವಾದಿಯಾಗಿದ್ದರೆ ನಿಮ್ಮ ಜೊತೆಗಿದ್ದವರೂ ಆಶಾವಾದಿಯಾಗುತ್ತಾರೆ. ಸದಾ ನಕಾರಾತ್ಮಕವಾಗಿ ಚಿಂತಿಸುವ, ಮಾತನಾಡುವ ವ್ಯಕ್ತಿಗಳು ಯಾರಿಗೂ ಇಷ್ಟವಾಗುವುದಿಲ್ಲ. ಯಾವುದೇ ಸಮಯದಲ್ಲಿಯೂ, ಸ್ಥಿತಿಯಲ್ಲಿಯೂ ಆಶಾವಾದ ಕಳೆದುಕೊಳ್ಳದೆ ಇರುವವರು ಎಲ್ಲರಿಗೂ ಇಷ್ಟವಾಗುತ್ತಾರೆ.
    • ನಿಮ್ಮ ಕೆಲಸದ ಕುರಿತು ಉತ್ಸಾಹದಿಂದಿರಿ
      ಉತ್ಸಾಹರಹಿತ ವ್ಯಕ್ತಿಗಳು ಯಾರಿಗೂ ಇಷ್ಟವಾಗುವುದಿಲ್ಲ. ಕೆಲಸದ ಕುರಿತು, ಕರಿಯರ್‌ ಕುರಿತು ಸದಾ ಕಂಪ್ಲೇಟ್‌ ಹೇಳುವವರೂ ಇಷ್ಟವಾಗುವುದಿಲ್ಲ. ಹೀಗಾಗಿ, ನೀವು ಮಾಡುವ ಕೆಲಸವನ್ನು ಖುಷಿಯಿಂದ, ಶ್ರದ್ಧೆಯಿಂದ ಮಾಡಿ. ಎಲ್ಲಾದರೂ ನೀವು ಮಾಡುವ ಕೆಲಸದಲ್ಲಿ ನಿಮಗೆ ಖುಷಿ ಸಿಗುತ್ತಿಲ್ಲವೆಂದಾದರೆ ನೀವು ತಪ್ಪು ಕರಿಯರ್‌ ಆಯ್ಕೆ ಮಾಡಿಕೊಂಡಿದ್ದೀರಿ ಎಂದರ್ಥ. ಅದರ ಕುರಿತು ದೂರುವುದನ್ನು ನಿಲ್ಲಿಸಿ ನಿಮಗೆ ಆಸಕ್ತಿ ಇರುವ ಕ್ಷೇತ್ರಕ್ಕೆ ಕಾಲಿಡಿ. ನಿಮ್ಮ ಉತ್ಸಾಹ, ಲವಲವಿಕೆ ನಿಮಗೆ ಮಾತ್ರವಲ್ಲದೆ ಇತರರಿಗೂ ಸೂಧಿರ್ತಿ ನೀಡುತ್ತದೆ.
    • ಅಗ್ರೇಸಿವ್‌ ಆಗಿರಬೇಡಿ
      ಸದಾ ಆಕ್ರಮಣಕಾರಿಯಾಗಿ ವರ್ತಿಸುವವರಿಂದ ಜನರು ದೂರ ಹೋಗುತ್ತಾರೆ. ಇದು ನಿಮ್ಮ ಸೋಷಿಯಲ್‌ ಮತ್ತು ಪ್ರೊಫೆಷನಲ್‌ ಲೈಫ್‌ಗೆ ತಡೆಗೋಡೆಯಾಗಬಹುದು. ನಿಮ್ಮಲ್ಲಿ ಇರುವ, ಇರಬಹುದಾದ ಇಂತಹ ಆಕರ್ಷಕವಲ್ಲದ ಗುಣಗಳಿಗೆ ಕೊಕ್‌ ನೀಡಿ. ಜೀವನದಲ್ಲಿ ನೀವು ಏನಾಗಬೇಕು ಎನ್ನುವುದನ್ನು ಸಾವಧಾನವಾಗಿ ಯೋಚಿಸಿ, ಆ ದಿಕ್ಕಿನಲ್ಲಿ ಸಾಗಿ.
    • ಹಸನ್ಮುಖಿಯಾಗಿರಿ
      ಬೋರಿಂಗ್‌ ಮತ್ತು ಅತ್ಯಧಿಕ ಸೀರಿಯಸ್‌ ಆಗಿ ವರ್ತಿಸುವರು ಯಾರಿಗೂ ಇಷ್ಟವಾಗುವುದಿಲ್ಲ. ಸದಾ ಹಸನ್ಮುಖಿಯಾಗಿದ್ದರೆ ನಿಮಗೆ ಆತ್ಮೀಯರು ಹೆಚ್ಚುತ್ತಾರೆ. ನಿಮ್ಮ ಕಂಪೆನಿಯನ್ನು ಜನರು ಇಷ್ಟಪಡುತ್ತಾರೆ. ಜನರಿಗೆ ಕೇಳಿದಾಗ ಖುಷಿಯಾಗುವಂತಹ ಹಾಸ್ಯ ಸನ್ನಿವೇಶ ಅಥವಾ ಕತೆಗಳನ್ನು ನಿಮ್ಮಲ್ಲಿ ಇಟ್ಟುಕೊಳ್ಳಿ.
    • ಸ್ಥಿರತೆ ಇರಲಿ
      ನಿಮ್ಮ ಗುರಿ ಸಾಧನೆಯತ್ತ ಲಕ್ಷ್ಯವಿರಲಿ. ನಿಮ್ಮ ದಿನನಿತ್ಯದ ಚಟುವಟಿಕೆಗಳ ಜೊತೆಗೆ ಭವಿಷ್ಯದಲ್ಲಿ ಏನಾಗಬೇಕು ಎನ್ನುವ ಕುರಿತು ಗಮನ ಇರಲಿ. ಸೋಷಿಯಲ್‌ ಆಗಿರಬೇಕೆಂದು ಬೇಕಾಬಿಟ್ಟಿಯಾಗಿ ಬದುಕಬೇಡಿ.
    • ಅತ್ಯುತ್ತಮ ಕೇಳುಗರಾಗಿ
    • ನಂಬಿಕಸ್ಥರಾಗಿ
    • ಭರವಸೆ ಇರಲಿ
    • ಸೂಕ್ತವಾದ ಉಡುಗೆ ತೊಡಿ
    • ನಿಮ್ಮ ಬಗ್ಗೆ ಕಾಳಜಿ ಇರಲಿ
    • ಕೆಟ್ಟ ಅಭ್ಯಾಸಗಳಿಂದ ದೂರವಿರಿ.
  • ಕರ್ನಾಟಕ ಪಿಎಸ್‌ಐ ನೇಮಕಾತಿ ಮರು ಪರೀಕ್ಷೆ: ಅಭ್ಯರ್ಥಿಗಳು ಆತಂಕಪಡುವುದು ಬೇಡ

    ಬೆಂಗಳೂರು (ಜ.20):- ಪಿಎಸ್‌ಐ ನೇಮಕಾತಿ ಮರು ಪರೀಕ್ಷೆಗೆ ಸಂಬಂಧಿಸಿದಂತೆ ಗುಪ್ತದಳದ (ಇಂಟಲಿಜೆನ್ಸ್) ಪರಿಶೀಲನೆ ವೇಳೆ ಮಾಹಿತಿ ಹೊರಬಿದ್ದಿದ್ದು, ಸಿಸಿಬಿ ಪೊಲೀಸರು ಕೂಲಂಕುಶವಾಗಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದರು.

    ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಆರೋಪದ ಹಿನ್ನೆಲೆಯಲ್ಲಿ ಸಿಸಿಬಿಯವರು ವಿಚಾರಣೆಗೆ ಒಳಪಡಿಸಿದ್ದಾರೆ. ಯಾವುದೇ ರೀತಿಯ ಅಕ್ರಮ ನಡೆದಿಲ್ಲ. ಅಕ್ರಮದ ಬಗ್ಗೆ ಮಾಹಿತಿ ಸಂಗ್ರಹಿಸಲು ನಕಲಿ ಕರೆ ಮಾಡಿರುವುದಾಗಿ ಆರೋಪಿತ ಹೇಳಿಕೆ ನೀಡಿದ್ದಾನೆ. ಸತ್ಯಾಸತ್ಯತೆಯ ಬಗ್ಗೆ ಕುಲಂಕುಶವಾಗಿ ಪರಿಶೀಲನೆ ನಡೆಸಲಾಗುತ್ತಿದೆ. ಸುರಕ್ಷಿತವಾಗಿ ಪರೀಕ್ಷೆ ನಡೆಯಲಿದ್ದು, ಅಭ್ಯರ್ಥಿಗಳು ಆತಂಕಪಡುವುದು ಬೇಡ ಎಂದರು.

    ಹರಿಪ್ರಸಾದ್ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚು ಪ್ರತಿಕ್ರಿಯಿಸಲು ಹೋಗುವುದಿಲ್ಲ. ಅವರ ಹೇಳಿಕೆಗೆ ಸಂಬಂಧಿಸಿದ ಸುದ್ದಿ ರಾಜ್ಯಪಾಲರ ಗಮನಕ್ಕೆ ಬಂದಿತ್ತು. ಈ ಬಗ್ಗೆ ವಿಚಾರಣೆ ನಡೆಸಿ ವರದಿ ನೀಡುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ಸೂಚಿಸಿದ್ದರು. ಅದರನ್ವಯ ಕಾನೂನು ಚೌಕಟ್ಟಿನಲ್ಲಿ ಏನು ಕೆಲಸ ಮಾಡಬೇಕು ಅದನ್ನು ಪೊಲೀಸರು ಮಾಡಿದ್ದಾರೆ. ಹರಿಪ್ರಾದ್ ಅವರ ವಿರುದ್ಧ ಯಾರು ಒಳ ಸಂಚಾಗಲಿ, ಪಿತೂರಿ ನಡೆಸುತ್ತಿಲ್ಲ. ಅವರಿಗೆ ತೊಂದರೆ ಮಾಡಬೇಕು ಎಂಬ ಉದ್ದೇಶ ಯಾರಿಗೂ ಇಲ್ಲ ಎಂದು ತಿಳಿಸಿದರು.

    ಸಂಸದ ಅನಂತ್ ಕುಮಾರ್ ಹೆಗಡೆ ಅವರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಕಲ್ಲಡ್ಕ ಪ್ರಭಾಕರ್ ಭಟ್ ಅವರ ಪ್ರಕರಣದ ತನಿಖೆ ಮುಂದುವರಿದಿದೆ. ನ್ಯಾಯಾಲಯಕ್ಕೆ ದೋಷರೋಪಣಾಪಟ್ಟಿ ಸಲ್ಲಿಸಲಾಗುತ್ತಿದೆ ಎಂದರು.

    ಒಳಮೀಸಲಾತಿ ವಿಚಾರದ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಒಳ ಮೀಸಲಾತಿಗೆ ತಿದ್ದುಪಡಿ ತರಲು ರಾಜ್ಯ ಸರ್ಕಾರಕ್ಕೆ ಸಾಧದಯವಿಲ್ಲ ಎಂದು ಕೇಂದ್ರ ಸಚಿವ ನಾರಾಯಣಸ್ವಾಮಿ ಅವರು ರಾಜ್ಯಸಭೆಯ ಸದನದಲ್ಲಿ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ 341 (3) ಸಂವಿಧಾನಿಕ ತಿದ್ದುಪಡಿ ತಂದು ಒಳ ಮೀಸಲಾತಿಗೆ ಅವಕಾಶ ಮಾಡಿಕೊಡುವಂತೆ, ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದೇವೆ. ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿದರೆ ರಾಜ್ಯದಲ್ಲಿ ಅನುಷ್ಠಾನಗೊಳಿಸುತ್ತೇವೆ ಎಂದರು.