Category: State Govt Jobs

Karnataka Govt Jobs News in Kannada, Job news in kannada, employment news, kpsc update, karnataka police recruitment, bmtc driver jobs, ksrtc driver conductor jobs, gramapanchayiti jobs, bengaluru jobs, mysuru jobs, mangaluru jobs, hassan jobs, jobs in karnataka, jobs near me, ಕರ್ನಾಟಕ ಉದ್ಯೋಗ ವಾರ್ತೆ, ಕೆಪಿಎಸ್‌ಸಿ, ಸರಕಾರಿ ಉದ್ಯೋಗ, ಕನ್ನಡ ಉದ್ಯೋಗಾವಕಾಶ, ಉದ್ಯೋಗ ಮಾಹಿತಿ, ಜಾಬ್‌ ಸುದ್ದಿಗಳು

  • NIMHANS Recruitment 2024: ಡಾಟಾ ಎಂಟ್ರಿ ಅಪರೇಟರ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ, ಮಾಸಿಕ ರೂ.18 ಸಾವಿರ ಸಂಬಳ, ಈ ಕೂಡಲೇ ಅಪ್ಲೈ ಮಾಡಿ

    NIMHANS Recruitment 2024: ಡಾಟಾ ಎಂಟ್ರಿ ಅಪರೇಟರ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ, ಮಾಸಿಕ ರೂ.18 ಸಾವಿರ ಸಂಬಳ, ಈ ಕೂಡಲೇ ಅಪ್ಲೈ ಮಾಡಿ

    NIMHANS Recruitment 2024: ನಿಮ್ಹಾನ್ಸ್‌ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 1 ಡೇಟಾ ಎಂಟ್ರಿ ಅಪರೇಟರ್‌ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಅಭ್ಯರ್ಥಿಗಳು ಫೆ.23, 2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಗುತ್ತಿಗೆ ಆಧಾರದ ಮೇಲೆ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಬೆಂಗಳೂರಿನಲ್ಲಿ ಉದ್ಯೋಗ ಅರಸುವವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್‌ ನಡೆಯಲಿದೆ.

    ಪ್ರಮುಖ ದಿನಾಂಕಗಳು;
    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 09-02-2024
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 23-02-2024

    ಹುದ್ದೆ ಹೆಸರು: ನಿಮ್ಹಾನ್ಸ್‌ನಲ್ಲಿ ಖಾಲಿ ಇರುವ ಡಾಟಾ ಎಂಟ್ರಿ ಅಪರೇಟರ್‌ (DEO) ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

    ಹುದ್ದೆ ಸಂಖ್ಯೆ: 01 ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

    ವಿದ್ಯಾರ್ಹತೆ: ನಿಮ್ಹಾನ್ಸ್‌ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ ಪೂರ್ಣಗೊಳಿಸರಬೇಕು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ರೋಗಿಗಳು ಮತ್ತು ಡೇಟಾ ಎಂಟ್ರಿ (ಜಿಸಿಪಿ ತರಬೇತಿ, ಕ್ಲಿನಿಕಲ್‌ ರಿಸರ್ಚ್‌ ಎಕ್ಸ್‌ಪೋಸರ್‌) ಒಳಗೊಂಡ ಆರು ತಿಂಗಳ ಸಂಶೋಧನಾ ಅನುಭವವನ್ನು ಹೊಂದಿರಬೇಕು.

    ವಯೋಮಿತಿ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿಯು 40 ವರ್ಷ ಮೀರಿರಬಾರದು.

    ಆಯ್ಕೆ ವಿಧಾನ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಲಿಖಿತ ಪರೀಕ್ಷೆ, ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

    ವೇತನ: ಡಾಟಾ ಎಂಟ್ರಿ ಅಪರೇಟರ್‌ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.18,000 ವೇತನ ದೊರಕಲಿದೆ.

    ಅರ್ಜಿ ಸಲ್ಲಿಸುವ ವಿಧಾನ: ಅಭ್ಯರ್ಥಿಗಳು ಆಫ್‌ಲೈನ್‌/ಪೋಸ್ಟ್‌ ಮೂಲಕ ಅರ್ಜಿ ಸಲ್ಲಿಸಬೇಕೆಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ ದೃಢೀಕರಿಸಿದ ದಾಖಲೆಗಳೊಂದಿಗೆ The Director, NIMHANS, P.B. No. 2900, D.R.College Post, Hosur Road. Bengaluru-560 029 ಇಲ್ಲಿಗೆ ಕಳುಹಿಸಬೇಕು. ಅಥವಾ [email protected] ಗೆ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.

    ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು, ಅಧಿಸೂಚನೆ ಸಂಖ್ಯೆ, ದಿನಾಂಕ, ಇಮೇಲ್ ಐಡಿ, ಸಂಪರ್ಕ ಸಂಖ್ಯೆ ಮತ್ತು ಅಂಚೆ ವಿಳಾಸವನ್ನು ನಮೂದಿಸಬೇಕು, ಇಲ್ಲದಿದ್ದರೆ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ. ಸಂಬಂಧಿತ ದಾಖಲೆಗಳೊಂದಿಗೆ ಅರ್ಜಿಗಳನ್ನು ನಿಗದಿಪಡಿಸಿದ ಕೊನೆಯ ದಿನಾಂಕದ ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

  • KPCL Recruitment 2024: ಕರ್ನಾಟಕ ವಿದ್ಯುತ್‌ ನಿಗಮ ನೇಮಕಾತಿ- ಆಸಕ್ತರು ಇವತ್ತೇ ಅರ್ಜಿ ಸಲ್ಲಿಸಿ

    KPCL Recruitment 2024: ಕರ್ನಾಟಕ ವಿದ್ಯುತ್‌ ನಿಗಮ ನೇಮಕಾತಿ- ಆಸಕ್ತರು ಇವತ್ತೇ ಅರ್ಜಿ ಸಲ್ಲಿಸಿ

    KPCL Recruitment 2024: ಕರ್ನಾಟಕ ವಿದ್ಯುತ್‌ ನಿಗಮ ನಿಯಮಿತ ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಸಹಾಯಕ ಕಾನೂನು ಅಧಿಕಾರಿ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಗುತ್ತಿಗೆ ಆಧಾರದಲ್ಲಿ ಈ ಹುದ್ದೆಗಳ ನೇಮಕಾತಿ ಮಾಡಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

    ಪ್ರಮುಖ ದಿನಾಂಕಗಳು;
    ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ; 19-01-2024
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ; 19-02-2024

    ಹುದ್ದೆಗಳ ವಿವರ:
    ಸಹಾಯಕ ಕಾನೂನು ಅಧಿಕಾರಿ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ನಿಗಮದ ಕಾನೂನು ವಿಷಯಗಳಿಗೆ ಸಂಬಂಧಪಟ್ಟ ಕಾರ್ಯಗಳನ್ನು ನಿರ್ವಹಿಸಲು ಎರಡು ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೇಮಿಸಲು ನಿಗಮವು ಉದ್ದೇಶಿಸಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

    ಹುದ್ದೆಗಳ ಸಂಖ್ಯೆ: ಒಟ್ಟು ಆರು ಹುದ್ದೆಗಳು ಖಾಲಿ ಇದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

    ಅರ್ಹತೆ ಮತ್ತು ಅನುಭವ: ಅಂಗೀಕೃತ ವಿಶ್ವವಿದ್ಯಾಲಯದಿಂದ (ಮೂರು ಅಥವಾ ಐದು ವರ್ಷಗಳ) ಕಾನೂನು ಪದವಿಯನ್ನು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪಡೆದಿರಬೇಕು. ಕನಿಷ್ಠ ಶೇ.40 ರಷ್ಟು ಅಂಕಗಳನ್ನು ಕಾನೂನು ಪದವಿಯಲ್ಲಿ ಗಳಿಸಿರಬೇಕು. ವಕೀಲ ವೃತ್ತಿಯಲ್ಲಿ ಕನಿಷ್ಠ ಐದು ವರ್ಷಗಳ ಅನುಭವವಿರಬೇಕು.

    ವಯೋಮಿತಿ: ಈ ಮೇಲ್ಕಂಡ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿ 40 ವರ್ಷಕ್ಕಿಂತ ಮೇಲ್ಪಟ್ಟಿರಬೇಕು.

    ವೇತನ: ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.40,000 ಮಾಸಿಕ ವೇತನ ಇರಲಿದೆ. ನೇಮಕ ಹೊಂದಿದ ಅಭ್ಯರ್ಥಿಗಳ ಪ್ರಯಾಣಕ್ಕೆ ನಿಗಮದ ಸಹಾಯಕ ಕಾನೂನು ಅಧಿಕಾರಿ/ಸಹಾಯಕ ಅಭಿಯಂತರರು ಹುದ್ದೆಗೆ ಅರ್ಹವಿರುವ TA/DA ಯನ್ನು ನೀಡಲಾಗುವುದು.

    ಆಯ್ಕೆ ವಿಧಾನ: ಈ ಹುದ್ದೆಗೆ ಅಭ್ಯರ್ಥಿಗಳಿಗೆ ಸಂದರ್ಶನವನ್ನು ನಡೆಸಿ ಆಯ್ಕೆ ಮಾಡಲಾಗುವುದು. ವೃತ್ತಿಯಲ್ಲಿ ಅನುಭವವಿದ್ದವರಿಗೆ ಹಾಗೂ ಆಂಗ್ಲ ಭಾಷೆಯ ಕಂಪ್ಯೂಟರ್‌ ಹಾಗೂ ಬೆರಳಚ್ಚು ಅನುಭವವುಳ್ಳವರಿಗೆ ಆದ್ಯತೆ ನೀಡಲಾಗುವುದು.

    ಗುತ್ತಿಗೆ ಅವಧಿ: ಎರಡು ವರ್ಷಗಳ ಅವಧಿಗೆ ಗುತ್ತಿಗೆ ನೇಮಕಾತಿ ನಡೆಯಲಿದ್ದು, ಸದರಿ ಹುದ್ದೆಯಲ್ಲಿ ತೃಪ್ತಿಕರವಾಗಿ ಕಾರ್ಯನಿರ್ವಹಿಸಿದ್ದಲ್ಲಿ ಮುಂದಿನ ಒಂದು ವರ್ಷ ಅವಧಿಗೆ ವಿಸ್ತರಿಸಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

    ಅರ್ಜಿ ಸಲ್ಲಿಸುವ ವಿಧಾನ:
    ಅಭ್ಯರ್ಥಿಗಳು ನಿಮಗದ ವೆಬ್‌ಸೈಟ್‌ ಗೆ ಭೇಟಿ ನೀಡಿ ಲಭ್ಯವಿರುವ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ವಿದ್ಯಾರ್ಹತೆ/ಅನುಭವ ದಾಖಲೆಗಳನ್ನು ಲಗತ್ತಿಸಿ [email protected] ಇ-ಮೇಲ್‌ ಗೆ ದಿನಾಂಕ 19-02-2024 ರ ಸಂಜೆ 5.30 ರೊಳಗಾಗಿ ಅರ್ಜಿಯನ್ನು ಸಲ್ಲಿಸತಕ್ಕದ್ದು. ನಿಗದಿತ ದಿನಾಂಕ/ಸಮಯದ ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಇತರೆ ಯಾವುದೇ ನಮೂನೆಯಲ್ಲಿ ಅರ್ಜಿ ಸ್ವೀಕಾರ ಮಾಡಲಾಗವುದಿಲ್ಲ.

  • DHFWS Vijayanagara Recruitment 2024: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಉದ್ಯೋಗ; ಈ ಕೂಡಲೇ ಅರ್ಜಿ ಸಲ್ಲಿಸಿ,

    DHFWS Vijayanagara Recruitment 2024: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಉದ್ಯೋಗ; ಈ ಕೂಡಲೇ ಅರ್ಜಿ ಸಲ್ಲಿಸಿ,

    DHFWS Vijayanagara Recruitment 2024: ರಾಷ್ಟ್ರೀಯ ಆರೋಗ್ಯ ಅಭಿಯಾನದ ಕಾರ್ಯಕ್ರಮದಡಿಯಲ್ಲಿ ವಿಜಯನಗರ ಜಿಲ್ಲೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಸಲ್ಲಿಸಲು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು.

    ಪ್ರಮುಖ ದಿನಾಂಕಗಳು;
    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ; 17/02/2024
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ; 23/02/2024

    ಹುದ್ದೆಗಳ ವಿವರ;

    1. ಸ್ತ್ರೀರೋಗ ಪ್ರಸೂತಿ ತಜ್ಞರು- ಒಟ್ಟು ಎರಡು ಹುದ್ದೆಗಳಿದ್ದು, ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮಾಸಿಕ ರೂ.1,30,000 ವೇತನ ನೀಡಲಾಗುತ್ತದೆ.
      ಅರವಳಿಕೆ ತಜ್ಞರು- ಒಟ್ಟು ಒಂದು ಹುದ್ದೆಗಳಿದ್ದು, ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ .1,30,000 ವೇತನ ನೀಡಲಾಗುತ್ತದೆ.
    2. ಆರ್‌.ಬಿ.ಎಸ್‌.ಕೆ.ವೈದ್ಯಾಧಿಕಾರಿಗಳು-ಒಂದು ಹುದ್ದೆ, ರೂ.46,895 ಮಾಸಿಕ ವೇತನವಿರಲಿದೆ.
    3. ಆಡಿಯೋಮೆಟ್ರಿಕ್‌ ಸಹಾಯಕರು (ಎನ್‌.ಪಿ.ಪಿ.ಸಿ.ಡಿ) – ಒಂದು ಹುದ್ದೆ ಖಾಲಿ ಇದ್ದು, ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.15,000 ವೇತನವಿರಲಿದೆ.
    4. ಶ್ರವಣದೋಷವುಳ್ಳ ಮಕ್ಕಳ ಬೋಧಕರು- ಒಂದು ಹುದ್ದೆ ಖಾಲಿ ಇದೆ. ಈ ಹುದ್ದೆಗೆ ಆಯ್ಕೆಯಾದವರಿಗೆ ಮಾಸಿಕ ರೂ.35,000 ವೇತನವಿರಲಿದೆ.
    5. ಡಿಸ್ಟ್ರಿಕ್‌ ಹಾಸ್ಪಿಟಲ್‌ ಕ್ವಾಲಿಟಿ ಮ್ಯಾನೇಜರ್‌- ಒಂದು ಹುದ್ದೆ ಖಾಲಿ ಇದ್ದು, ಮಾಸಿಕ ರೂ.35,000 ವೇತನವಿರಲಿದೆ.
    6. ಪ್ರೋಗ್ರಾಂ ಮ್ಯಾನೇಜರ್‌ (RBSK)- ಒಂದು ಹುದ್ದೆ ಖಾಲಿ ಇದ್ದು, ಈ ಹುದ್ದೆಗೆ ಆಯ್ಕೆಯಾದವರಿಗೆ ಮಾಸಿಕ ರೂ.17,500 ವೇತನವಿರಲಿದೆ.
    7. ಬಯೋ ಮೆಡಿಕಲ್‌ ಇಂಜಿನಿಯರ್-‌ ಒಂದು ಹುದ್ದೆ ಖಾಲಿ ಇದ್ದು, ಈ ಹುದ್ದೆಗೆ ಆಯ್ಕೆಯಾದವರಿಗೆ ಮಾಸಿಕ ರೂ.25,000 ವೇತನವಿರಲಿದೆ.
    8. ಆರ್.ಕೆ.ಎಸ್‌.ಕೆ. ಆಪ್ತ ಸಮಾಲೋಚಕರು – ಒಂದು ಹುದ್ದೆ ಖಾಲಿ ಇದ್ದು, ರೂ.15,939 ಮಾಸಿಕ ವೇತನವಿರಲಿದೆ.
    9. ಆಪ್ತ ಸಮಾಲೋಚಕರು – ಒಂದು ಹುದ್ದೆ ಖಾಲಿ ಇದೆ. ಮಾಸಿಕ ರೂ.15,939 ವೇತನವಿರಲಿದೆ.
    10. ವೈದ್ಯಾಧಿಕಾರಿಗಳು (ಎನ್‌.ಆರ್‌.ಸಿ)- ಒಂದು ಹುದ್ದೆ ಖಾಲಿ ಇದೆ. ಮಾಸಿಕ ರೂ.50,000 ವೇತನ ಸಿಗಲಿದೆ.
    11. ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ- ಎರಡು ಹುದ್ದೆ ಖಾಲಿ ಇದ್ದು ಮಾಸಿಕ ರೂ.12,600 ವೇತನವಿರಲಿದೆ.

    ವಿದ್ಯಾರ್ಹತೆ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹುದ್ದೆಗೆ ಅನುಗುಣವಾಗಿ ವಿದ್ಯಾರ್ಹತೆಯನ್ನು ಹೊಂದಿರಬೇಕು.

    ವಯೋಮಿತಿ:
    ಸ್ತ್ರೀರೋಗ-ಪ್ರಸೂತಿ ತಜ್ಞರು- 70ವರ್ಷ ಮೀರಿರಬಾರದು.
    ಆರ್.ಬಿ.ಎಸ್.ಕೆ.ವೈದ್ಯಾಧಿಕಾರಿಗಳು,ಆಡಿಯೋಮೆಟ್ರಿಕ್‌ ಸಹಾಯಕರು (ಎನ್‌.ಪಿ.ಪಿ.ಸಿ.ಡಿ), ಶ್ರವಣದೋಷವುಳ್ಳ ಮಕ್ಕಳ ಬೋಧಕರು, ಡಿಸ್ಟ್ರಿಕ್ಟ್‌ ಹಾಸ್ಪಿಟಲ್‌ ಕ್ವಾಲಿಟಿ ಮ್ಯಾನೇಜರ್‌, ಬಯೋಮೆಡಿಕಲ್‌ ಇಂಜಿನಿಯರ್‌-45 ವರ್ಷ ಮೀರರಬಾರದು
    ವೈದ್ಯಾಧಿಕಾರಿಗಳು (ಎನ್‌.ಆರ್.ಸಿ)- 70 ವರ್ಷ ಗರಿಷ್ಠ
    ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ – 65 ವರ್ಷ ಗರಿಷ್ಠ

    ಆಯ್ಕೆ ಪ್ರಕ್ರಿಯೆ: ವಿದ್ಯಾರ್ಹತೆಯಲ್ಲಿ ಪಡೆದ ಅಂಕಗಳ ಶೇಕಡ ಮತ್ತು ಕೋವಿಡ್‌ 19 ಸೇವಾ ಅವಧಿಯ ಕೃಪಾಂಕವನ್ನು ಒಟ್ಟುಗೂಡಿಸಿ, ಮೆರಿಟ್‌ ಲಿಸ್ಟನ್ನು ತಯಾರಿಸಲಾಗುವುದು. ಮತ್ತು ಹೊಸ ರೋಸ್ಟರ್‌ ಆಧಾರದ ಮೇಲೆ ಮೆರಿಟ್‌ ಕಂ ರೋಸ್ಟರ್‌ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ನೇಮಕಾತಿ ಮಾಡಲಾಗುವುದು.

    ಅರ್ಹತೆ: ಈ ಮೇಲೆ ತಿಳಿಸಿದ ಹುದ್ದೆಗಳಿಗೆ ಕಂಪ್ಯೂಟರ್‌ನ ಸಾಕ್ಷರತೆಯನ್ನು ಕಡ್ಡಾಯವಾಗಿ ಅಭ್ಯರ್ಥಿಗಳು ಹೊಂದಿರತಕ್ಕದ್ದು. ಸರಕಾರದ ಮಾನ್ಯತೆ ಪಡೆದ ಸಂಸ್ಥೆಯಿಂದ ಪ್ರಮಾಣ ಪತ್ರ ಪಡೆದಿರಬೇಕು.( ತಜ್ಞ ವೈದ್ಯರು, ಮತ್ತು ಗ್ರೂಪ್‌ ಡಿ) ಹುದ್ದೆಗಳಿಗೆ ಅನ್ವಯಿಸುವುದಿಲ್ಲ. ಸ್ತ್ರೀ ರೋಗ-ಪ್ರಸೂತಿ ತಜ್ಞರು, ಅರವಳಿಕೆ ತಜ್ಞರು, ಎಂಬಿಬಿಎಸ್‌ ವೈದ್ಯಾಧಿಕಾರಿಗಳ ಹುದ್ದೆಗಳು, ಹಿರಿಯ ಪ್ರಾಥಮಿಕ ಆರೋಗ್ಯ ಸಂರಕ್ಷಣಾಧಿಕಾರಿ ಹುದ್ದೆಗಳ ಸಂಖ್ಯೆ ಭರ್ತಿ ಆಗುವವರೆಗೂ ಪ್ರತಿ ಮಂಗಳವಾರ ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

    ಕಚೇರಿಯ ಸಮಯದಲ್ಲಿ ಜಿಲ್ಲಾ ಆರ್‌.ಸಿ.ಹೆಚ್‌ ಅಧಿಕಾರಿಗಳ ಕಚೇರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯ 60 ಹಾಸಿಗೆಯ ಎಮ್‌.ಸಿ.ಹೆಚ್‌ ಆಸ್ಪತ್ರೆ ಹಿಂಭಾಗ ಮಸೀದಿ ಹತ್ತಿರ, ಹೊಸಪೇಟೆ. ಸಂಜೆ 5.30 ರ ಒಳಗೆ ಅರ್ಜಿಗಳನ್ನು ಸ್ವೀಕರಿಸಲಾಗುವುದು. ಮತ್ತು ಈ ವಿಳಾಸದಲ್ಲೇ ಅರ್ಜಿ ಕೂಡಾ ದೊರೆಯಲಿದೆ.

    ದಿನಾಂಕ 23/02/2024 ರ ಸಂಜೆ 5.30 ನಂತರ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ಅರ್ಜಿ ಸಲ್ಲಿಸುವ ವೇಳೆ ಸ್ವಯಂ ದೃಢೀಕರಿಸಿದ ಎಲ್ಲಾ ದಾಖಲಾತಿಗಳ ಪ್ರತಿಗಳನ್ನು ಅರ್ಜಿಗಳೊಂದಿಗೆ ಸಲ್ಲಿಸಲು ಅಧಿಸೂಚನೆಯಲ್ಲಿ ಸೂಚಿಸಲಾಗಿದೆ.

  • Panchayat raj Recruitment 2024: 300 FDA, SDA ಪೋಸ್ಟ್‌ಗಳಿಗೆ ಅರ್ಜಿ ಆಹ್ವಾನ, ಶೀಘ್ರದಲ್ಲೇ ಅಧಿಸೂಚನೆ ಬಿಡುಗಡೆ

    Panchayat raj Recruitment 2024: 300 FDA, SDA ಪೋಸ್ಟ್‌ಗಳಿಗೆ ಅರ್ಜಿ ಆಹ್ವಾನ, ಶೀಘ್ರದಲ್ಲೇ ಅಧಿಸೂಚನೆ ಬಿಡುಗಡೆ

    FDA SDA Recruitment 2024: ಕರ್ನಾಟಕ ಪಂಚಾಯತ್‌ ರಾಜ್‌ ಕಮಿಷನರೇಟ್‌ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಮುಂದಿನ ದಿನಗಳಲ್ಲಿ ಅತಿ ಶೀಘ್ರದಲ್ಲೇ ಅಧಿಸೂಚನೆಯನ್ನು ಪ್ರಕಟಿಸಲಿದೆ. 300 ಎಫ್‌ಡಿಎ, ಎಸ್‌ಡಿಎ ಹುದ್ದೆಗಳು ಖಾಲಿ ಇದ್ದು, ಕರ್ನಾಟಕ ಸರಕಾರದಲ್ಲಿ ಕೆಲಸ ಹುಡುಕುವವರಿಗೆ ಇದೊಂದು ಸುವರ್ಣವಕಾಶ ಎಂದೇ ಹೇಳಬಹುದು. ಹುದ್ದೆಯ ಕುರಿತ ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಯನ್ನು ಓದಿ ಮುಂದಿನ ದಿನಗಳಲ್ಲಿ ಅರ್ಜಿ ಸಲ್ಲಿಸಬಹುದು.

    ಪ್ರಮುಖ ದಿನಾಂಕಗಳು:
    ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: ಶೀಘ್ರದಲ್ಲೇ ಅಧಿಸೂಚನೆಯಲ್ಲಿ ತಿಳಿಸಲಾಗುವುದು
    ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಅಧಿಸೂಚನೆಯಲ್ಲಿ ತಿಳಿಸಲಾಗುವುದು

    ಹುದ್ದೆಗಳ ವಿವರ: ಒಟ್ಟು 300 ಹುದ್ದೆಗಳಿದೆ.
    ಹುದ್ದೆ ಹೆಸರು: ಎಫ್‌ಡಿಎ, ಎಸ್‌ಡಿಎ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ವೇತನ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕರ್ನಟಕ ಪಂಚಾಯತ್‌ ರಾಜ್‌ ಕಮಿಷನರೇಟ್‌ ನಿಯಮಗಳ ಪ್ರಕಾರ ವೇತನ ನೀಡಲಾಗುವುದು.

    ಎಲ್ಲೆಲ್ಲಿ ಎಷ್ಟು ಹುದ್ದೆಗಳಿವೆ?
    ಬಾಗಲಕೋಟೆ-ಎಫ್‌ಡಿಎ ಹುದ್ದೆ- 1, ಎಸ್‌ಡಿಎ ಹುದ್ದೆ-6
    ಬೆಂಗಳೂರು ರೂರಲ್‌-ಎಫ್‌ಡಿಎ ಹುದ್ದೆ-0, ಎಸ್‌ಡಿಎ ಹುದ್ದೆ-3
    ಬೆಂಗಳೂರು ಅರ್ಬನ್‌- ಎಫ್‌ಡಿಎ ಹುದ್ದೆ-01, ಎಸ್‌ಡಿಎ ಹುದ್ದೆ-5
    ದಕ್ಷಿಣ ಕನ್ನಡ-ಎಫ್‌ಡಿಎ ಹುದ್ದೆ -06, ಎಸ್‌ಡಿಎ ಹುದ್ದೆ-13
    ಬೆಳಗಾವಿ-ಎಫ್‌ಡಿಎ ಹುದ್ದೆ – 01, ಎಸ್‌ಡಿಎ ಹುದ್ದೆ- 4
    ಚಿಕ್ಕಮಗಳೂರು-ಎಫ್‌ಡಿಎ ಹುದ್ದೆ-06 ಹುದ್ದೆ, ಎಸ್‌ಡಿಎ ಹುದ್ದೆ-13
    ಚಿತ್ರದುರ್ಗ -ಎಫ್‌ಡಿಎ ಹುದ್ದೆ- 04 ಹುದ್ದೆ, ಎಸ್‌ಡಿಎ ಹುದ್ದೆ- 4
    ವಿಜಯಪುರ-ಎಫ್‌ಡಿಎ ಹುದ್ದೆ- 04 ಹುದ್ದೆ, ಎಸ್‌ಡಿಎ ಹುದ್ದೆ-13
    ಚಾಮರಾಜನಗರ-ಎಫ್‌ಡಿಎ ಹುದ್ದೆ-04 ಹುದ್ದೆ, ಎಸ್‌ಡಿಎ ಹುದ್ದೆ-09
    ದಾವಣಗೆರೆ – ಎಫ್‌ಡಿಎ ಹುದ್ದೆ-2 ಹುದ್ದೆ, ಎಸ್‌ಡಿಎ ಹುದ್ದೆ-7
    ಧಾರವಾಡ- ಎಫ್‌ಡಿಎ ಹುದ್ದೆ-1 ಹುದ್ದೆ, ಎಸ್‌ಡಿಎ ಹುದ್ದೆ-7
    ಗದಗ-ಎಫ್‌ಡಿಎ ಹುದ್ದೆ-4 ಹುದ್ದೆ, ಎಸ್‌ಡಿಎ ಹುದ್ದೆ-10
    ಹಾಸನ-ಎಫ್‌ಡಿಎ ಹುದ್ದೆ-4 ಹುದ್ದೆ, ಎಸ್‌ಡಿಎ ಹುದ್ದೆ-16
    ಕೊಡಗು-ಎಫ್‌ಡಿಎ ಹುದ್ದೆ-7 ಹುದ್ದೆ, ಎಸ್‌ಡಿಎ ಹುದ್ದೆ-10
    ಕೋಲಾರ-ಎಫ್‌ಡಿಎ ಹುದ್ದೆ-4 ಹುದ್ದೆ, ಎಸ್‌ಡಿಎ ಹುದ್ದೆ-7
    ಮಂಡ್ಯ-ಎಫ್‌ಡಿಎ ಹುದ್ದೆ-4 ಹುದ್ದೆ, ಎಸ್‌ಡಿಎ ಹುದ್ದೆ-6
    ಮೈಸೂರು-ಎಫ್‌ಡಿಎ ಹುದ್ದೆ-4 ಹುದ್ದೆ, ಎಸ್‌ಡಿಎ ಹುದ್ದೆ-09
    ಶಿವಮೊಗ್ಗ-ಎಫ್‌ಡಿಎ ಹುದ್ದೆ-7 ಹುದ್ದೆ, ಎಸ್‌ಡಿಎ ಹುದ್ದೆ-09
    ತುಮಕೂರು-ಎಫ್‌ಡಿಎ ಹುದ್ದೆ-7 ಹುದ್ದೆ, ಎಸ್‌ಡಿಎ ಹುದ್ದೆ-09
    ಉಡುಪಿ-ಎಫ್‌ಡಿಎ ಹುದ್ದೆ-4 ಹುದ್ದೆ, ಎಸ್‌ಡಿಎ ಹುದ್ದೆ-12
    ಚಿಕ್ಕಬಳ್ಳಾಪುರ-ಎಫ್‌ಡಿಎ ಹುದ್ದೆ-4 ಹುದ್ದೆ, ಎಸ್‌ಡಿಎ ಹುದ್ದೆ-5
    ರಾಮನಗರ -ಎಫ್‌ಡಿಎ ಹುದ್ದೆ-6 ಹುದ್ದೆ, ಎಸ್‌ಡಿಎ ಹುದ್ದೆ-3
    ಉತ್ತರಕನ್ನಡ-ಎಫ್‌ಡಿಎ ಹುದ್ದೆ-11 ಹುದ್ದೆ, ಎಸ್‌ಡಿಎ ಹುದ್ದೆ-11

    ಶೈಕ್ಷಣಿಕ ಅರ್ಹತೆ ಮತ್ತು ವಯಸ್ಸಿನ ಮಿತಿ: ಕರ್ನಾಟಕ ಪಂಚಾಯತ್ ರಾಜ್ ಕಮಿಷನರೇಟ್ ನಿಯಮಗಳ ಪ್ರಕಾರ

    ಆಯ್ಕೆ ಪ್ರಕ್ರಿಯೆ: ಎಫ್‌ಡಿಎ, ಎಸ್‌ಡಿಎ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

    ಹೆಚ್ಚಿನ ಮಾಹಿತಿಯನ್ನು ಅಭ್ಯರ್ಥಿಗಳು ಶೀಘ್ರದಲ್ಲೇ ಬಿಡುಗಡೆಯಾಗುವ ನೋಟಿಫಿಕೇಶನ್‌ ಮೂಲಕ ಪಡೆದುಕೊಳ್ಳಬಹುದು.

  • ESIC Karnataka Jobs: ಇಎಸ್‌ಐಸಿಯಲ್ಲಿ ಪ್ರೊಫೆಸರ್‌ ಹುದ್ದೆಗಳ ನೇಮಕಾತಿ, ಆಸಕ್ತರು ಫೆ.22, 2024 ರಂದು ನಡೆಯುವ ಸಂದರ್ಶನದಲ್ಲಿ ಪಾಲ್ಗೊಳ್ಳಿ

    ESIC Karnataka Jobs: ಇಎಸ್‌ಐಸಿಯಲ್ಲಿ ಪ್ರೊಫೆಸರ್‌ ಹುದ್ದೆಗಳ ನೇಮಕಾತಿ, ಆಸಕ್ತರು ಫೆ.22, 2024 ರಂದು ನಡೆಯುವ ಸಂದರ್ಶನದಲ್ಲಿ ಪಾಲ್ಗೊಳ್ಳಿ

    ESIC Karnataka Recruitment 2024: ಉದ್ಯೋಗಿಗಳ ರಾಜ್ಯ ವಿಮಾ ನಿಗಮ ಕರ್ನಾಟಕ (ESIC) ತನ್ನ ಅಧಿಕೃತ ಅಧಿಸೂಚನೆಯ ಮೂಲಕ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಈ ಮೂಲಕ ಪ್ರೊಫೆಸರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಯಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಬೆಂಗಳೂರು – ಕರ್ನಾಟಕ ಸರ್ಕಾರದಲ್ಲಿ ವೃತ್ತಿಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ತಮ್ಮದಾಗಿಸಿಕೊಳ್ಳಬಹುದು. ಈ ಹುದ್ದೆಗೆ 22-Feb-2024 ರಂದು ನಡೆಯುವ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

    ಪ್ರಮುಖ ದಿನಾಂಕಗಳು
    ನೋಟಿಫಿಕೇಶನ್‌ ಬಿಡುಗಡೆಗೊಂಡ ದಿನಾಂಕ: 12-02-2024
    ನೇರ ಸಂದರ್ಶನಕ್ಕೆ ಹಾಜರಾಗಬೇಕಾದ ದಿನಾಂಕ: 22-02-2024

    ಹುದ್ದೆಗಳ ವಿವರ ಈ ಕೆಳಗೆ ನೀಡಲಾಗಿದೆ
    ಹುದ್ದೆ ಹೆಸರು: ಪ್ರೊಫೆಸರ್‌ -03
    ಅಸೋಸಿಯೇಟ್‌ ಪ್ರೊಫೆಸರ್‌ -09
    ಅಸಿಸ್ಟೆಂಟ್‌ ಪ್ರೊಫೆಸರ್‌ -01 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಒಟ್ಟು 13 ಹುದ್ದೆಗಳಿದೆ.

    ವೇತನ: ಪ್ರೊಫೆಸರ್‌ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮಾಸಿಕ ರೂ.2,39,607 ವೇತನ ಸಿಗುತ್ತದೆ
    ಅಸೋಸಿಯೇಟ್‌ ಪ್ರೊಫೆಸರ್‌ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.1,59,334/- ವೇತನ ಇರಲಿದೆ.
    ಅಸಿಸ್ಟೆಂಟ್‌ ಪ್ರೊಫೆಸರ್‌ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.1,36,880/- ವೇತನ ಸಿಗಲಿದೆ.

    ವಯೋಮಿತಿ: ಉದ್ಯೋಗಿಗಳ ರಾಜ್ಯ ವಿಮಾ ನಿಗಮದ ಕರ್ನಾಟಕ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 22-02-2024 ರಂತೆ 67 ವರ್ಷಗಳನ್ನು ಮೀರಿರಬಾರದು. ನೌಕರರ ರಾಜ್ಯ ವಿಮಾ ನಿಗಮ ಕರ್ನಾಟಕ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗುವುದು.

    ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಕೆಳಗಿನ ಸ್ಥಳದಲ್ಲಿ ಅಗತ್ಯ ದಾಖಲೆಗಳೊಂದಿಗೆ ಈ ಕೆಳಗಿನ ವಿಳಾಸಕ್ಕೆ ವಾಕ್-ಇನ್-ಇಂಟರ್ವ್ಯೂಗೆ ಹಾಜರಾಗಬಹುದು: The Dean, ESIC Medical College PGIMSR & Model Hospital, Rajajinagar, Bangalore- 560010 ಇಲ್ಲಿಗೆ ದಿನಾಂಕ ಫೆ.22 ರಂದು ನೇರ ಸಂದರ್ಶನಕ್ಕೆ ಹಾಜರಾಗಬೇಕು.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್‌ ಕ್ಲಿಕ್‌ ಮಾಡಿ

  • Recruitment 2024: ಆಯುಷ್‌ ಇಲಾಖೆಯಲ್ಲಿ ನೇಮಕಾತಿ; ಈ ಕೂಡಲೇ ಅರ್ಜಿ ಸಲ್ಲಿಸಿ

    Recruitment 2024: ಆಯುಷ್‌ ಇಲಾಖೆಯಲ್ಲಿ ನೇಮಕಾತಿ; ಈ ಕೂಡಲೇ ಅರ್ಜಿ ಸಲ್ಲಿಸಿ

    Ayush Department Chikkaballapura Recruitment 2024: ಜಿಲ್ಲಾ ಆಯುಷ್‌ ಚಿಕ್ಕಬಳ್ಳಾಪುರ ರಾಷ್ಟ್ರೀಯ ಆಯುಷ್‌ ಅಭಿಯಾನದಡಿಯಲ್ಲಿ ಅಭಿವೃದ್ಧಿಪಡಿಸಲಾದ ಆಯುಷ್‌ ಆರೋಗ್ಯ ಮತ್ತು ಕ್ಷೇಮ ಕೇಂದ್ರ, ಸೋಮೇನಹಳ್ಳಿ ಇಲ್ಲಿಗೆ ಖಾಲಿ ಇರುವ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಕಮ್ಯೂನಿಟಿ ಆಯುಷ್‌ ಆಫೀಸರ್‌ (CHO) (ಸಮುದಾಯ ಆರೋಗ್ಯ ಅಧಿಕಾರಿ) ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಹುದ್ದೆಯನ್ನು ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲಾಗುವುದೆಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

    ಪ್ರಮುಖ ದಿನಾಂಕಗಳು
    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 09-02-2024
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 21-02-2024 (ಸಂಜೆ 4.00 ಗಂಟೆಯೊಳಗೆ)

    ಹುದ್ದೆಗಳ ವಿವರ:
    ಸಂಸ್ಥೆಯ ಹೆಸರು: ಜಿಲ್ಲಾ ಆಯುಷ್ ಕಛೇರಿ ಚಿಕ್ಕಬಳ್ಳಾಪುರ (ಜಿಲ್ಲಾ ಆಯುಷ್ ಕಛೇರಿ ಚಿಕ್ಕಬಳ್ಳಾಪುರ)
    ಹುದ್ದೆಗಳ ಸಂಖ್ಯೆ: ನಿರ್ದಿಷ್ಟಪಡಿಸಲಾಗಿಲ್ಲ
    ಉದ್ಯೋಗ ಸ್ಥಳ: ಚಿಕ್ಕಬಳ್ಳಾಪುರ – ಕರ್ನಾಟಕ
    ಹುದ್ದೆಯ ಹೆಸರು: ಸಮುದಾಯ ಆರೋಗ್ಯ ಅಧಿಕಾರಿ (CHO)

    ವೇತನ: ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.40000/- ವೇತನ ನೀಡಲಾಗುವುದು.

    ಶೈಕ್ಷಣಿಕ ಅರ್ಹತೆ: ಜಿಲ್ಲಾ ಆಯುಷ್ ಕಚೇರಿ ಚಿಕ್ಕಬಳ್ಳಾಪುರದ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಬಿಎಎಂಎಸ್ ತೇರ್ಗಡೆ ಹೊಂದಿರಬೇಕು
    ವಯೋಮಿತಿ: ಜಿಲ್ಲಾ ಆಯುಷ್ ಕಛೇರಿ ಚಿಕ್ಕಬಳ್ಳಾಪುರ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಜಿಲ್ಲಾ ಆಯುಷ್ ಕಚೇರಿ ಚಿಕ್ಕಬಳ್ಳಾಪುರದ ನಿಯಮಗಳ ಪ್ರಕಾರ ವಯಸ್ಸಿನ ಮಿತಿಯನ್ನು ಹೊಂದಿರಬೇಕು.

    ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳು ಸಲ್ಲಿಸಿರುವ ಅರ್ಜಿಗಳನ್ನು ಪರಿಶೀಲಿಸಿ, ಹುದ್ದೆಗೆ ನಿಗದಿಪಡಿಸಿದ ವಿದ್ಯಾರ್ಹತೆಯಲ್ಲಿ ಅಭ್ಯರ್ಥಿಯು ಹೊಂದಿರುವ ಮೆರಿಟ್‌ ಮತ್ತು ರೋಸ್ಟರ್‌ ಪರಿಗಣಿಸಿ ಪ್ರಕಟಿಸಿರುವ ಹುದ್ದೆಗೆ ಅನುಗುಣವಾಗಿ ನಿಯಮಾನುಸರ ನಿರ್ದಿಷ್ಟ ಅನುಪಾತದಲ್ಲಿ ಅರ್ಹ ಅಭ್ಯರ್ಥಿಗಳನ್ನು ಪಟ್ಟಿ ಮಾಡಿ ಅವರ ಮೂಲ ದಾಖಲೆಗಳನ್ನು ಪರಿಶೀಲನೆಗೆ ಕರೆಯಲಾಗುವುದು. ಮೂಲ ದಾಖಲೆಗಳನ್ನು ಪರಿಶೀಲಿಸಿ, ಅರ್ಹರಾದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುವುದು. ಹುದ್ದೆಗೆ ನಿಗದಿಪಡಿಸಿದ ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳು, ಸಂದರ್ಶನದಲ್ಲಿ ಗಳಿಸಿದ ಅಂಕಗಳನ್ನು ಆಧರಿಸಿ ನೇಮಕಾತಿ ಮಾಡಿಕೊಳ್ಳಲಾಗುವುದು.

    ಅರ್ಜಿ ಸಲ್ಲಿಸುವುದು ಹೇಗೆ?
    ಅಭ್ಯರ್ಥಿಗಳು ಜಿಲ್ಲಾಧಿಕಾರಿಗಳು ಚಿಕ್ಕಬಳ್ಳಾಪುರ ರವರ ಎನ್‌ಐಸಿ ವೆಬ್‌ಸೈಟ್‌ನಿಂದ ಅರ್ಜಿಯನ್ನು ಡೌನ್‌ಲೋಡ್‌ ಮಾಡಿಕೊಂಡು ಸೂಚನೆಗಳನ್ನು ಓದಿಕೊಂಡು ಅರ್ಜಿಯಲ್ಲಿ ಕೋರಿರುವ ಮಾಹಿತಯನ್ನು ಕ್ರಮಬದ್ಧವಾಗಿ ನಮೂದಿಸಬೇಕು.
    ಅರ್ಜಿಯಲ್ಲಿ ಕೋರಿದಂತೆ ಭಾವಚಿತ್ರ/ಸಹಿ/ವಯೋಮಿತಿ/ವಿದ್ಯಾರ್ಹತೆ/ಅನುಭವ ಇತ್ಯಾದಿ ಎಲ್ಲಾ ವಿವರಗಳನ್ನು ಕಡ್ಡಾಯವಗಿ ಭರ್ತಿ ಮಾಡಬೇಕು.

    ಅಭ್ಯರ್ಥಿಗಳು ಸ್ವ-ವಿವರಗಳನ್ನು ಹೊಂದಿದ ತಮ್ಮ ವೈಯಕ್ತಿಕ ವಿವರಗಳನ್ನು, ದಾಖಲಾತಿಗಳೊಂದಿಗೆ ಅರ್ಜಿಗಳನ್ನು ಜಿಲ್ಲಾಧಿಕಾರಿಗಳು ಚಿಕ್ಕಬಳ್ಳಾಪುರರವರ ಎನ್‌ಐಸಿ ವೆಬ್‌ಸೈಟ್‌ https://chikkaballapur.nic.in ನಿಂದ ಅರ್ಜಿಯನ್ನು ಡೌನ್‌ಲೋಡ್‌ ಮಾಡಿಕೊಂಡು ಸೂಚನೆಗಳನ್ನು ಓದಿ ಅರ್ಜಿ ಸಲ್ಲಿಸಬೇಕು.
    ಅರ್ಜಿ ಸಲ್ಲಿಸಬೇಕಾದ ವಿಳಾಸ;
    ಜಿಲ್ಲಾ ಆಯುಷ್‌ ಕಚೇರಿ, ಜಿಲ್ಲಾಡಳಿತ ಭವನ, ಚಿಕ್ಕಬಳ್ಳಾಪುರ

    ಅಭ್ಯರ್ಥಿಗಳು ಈ ವಿಳಾಸಕ್ಕೆ ಕೊನೆಯ ದಿನಾಂಕದೊಳಗೆ ತಲುಪುವಂತೆ ನೇರವಾಗಿ ಅಥವಾ ರಿಜಿಸ್ಟರ್‌ ಅಂಚೆಯ ಮೂಲಕ ಸಲ್ಲಿಸಲು ಸೂಚಿಸಲಾಗಿದೆ. ಕೊನೆಯ ದಿನಾಂಕದ ನಂತರ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಳು ಮೊಬೈಲ್‌ ಸಂಖ್ಯೆ; 9902045775 ಇಲ್ಲಿಗೆ ಸಂಪರ್ಕಿಸಲು ಸೂಚಿಸಲಾಗಿದೆ.