Category: ksp recruitment 2019

  • KSP 3533 ಸಿವಿಲ್ ಪೊಲೀಸ್ ಹುದ್ದೆ : ಇಲ್ಲಿದೆ ಸಂಪೂರ್ಣ ವಿವರ

    KSP 3533 ಸಿವಿಲ್ ಪೊಲೀಸ್ ಹುದ್ದೆ : ಇಲ್ಲಿದೆ ಸಂಪೂರ್ಣ ವಿವರ

    ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಕಾನ್ಸ್‌ಟೇಬಲ್ ನಾಗರಿಕ ( ಪುರುಷ ಮತ್ತು ಮಹಿಳಾ೦ (ಮಿಕ್ಕುಳಿದ) ಮತ್ತು ಕಲ್ಯಾಣ ಕರ್ನಾಟಕ ಪ್ರದೇಶದ ಸ್ಥಳೀಯ ಹುದ್ದೆಗಳನ್ನು ಒಳಗೊಂಡಂತೆ ಖಾಲಿ ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಜಿಯನ್ನು ಆಹ್ವಾನಿಸಿದೆ.

    ಅರ್ಜಿಗಳನ್ನು ಇಲಾಖೆಯ ಅಧಿಕೃತ ವೆಬ್‌ಸೈಟ್ ಆನ್‌ಲೈನ್ ಮುಖಾಂತರ ಮಾತ್ರ ಸಲ್ಲಿಸತಕ್ಕದ್ದು. ಅರ್ಜಿಗಳನ್ನು ಖುದ್ದಾಗಿ ಅಥವಾ ಅಂಚೆ ಮೂಲಕಪ್ರತ್ಯೇಕವಾಗಿ ಸಲ್ಲಿಸಲು ಅವಕಾಶವಿಲ್ಲ.

    ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ 25-೦5-2೦21 ಬೆಳಗ್ಗೆ 1೦.೦೦ ಗಂಟೆಯಿಂದ
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 25-೦6-2021 ಸಂಜೆ 6.೦೦ ಗಂಟೆಯವರೆಗೆ
    ಅಧಿಕೃತ ಬ್ಯಾಂಕ್ ಶಾಖೆಗಳ /ಅಂಚೆ ಕಚೇರಿ ವೇಳೆಯಲ್ಲಿ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ 25-06-2021

    (ಮಿಕ್ಕುಳಿದ ವೃಂದದ ಹುದ್ದೆಗಳು ) ಕಲ್ಯಾಣ ಕರ್ನಾಟಕ ಪ್ರದೇಶದ 2೦% ಮಿಕ್ಕುಳಿದ ವೃಂದದ ಹುದ್ದೆಗಳು ಸೇರಿದಂತೆ:
    ಹುದ್ದೆಗಳ ವಿವರ : ಪೊಲೀಸ್ ಕಾನ್ಸ್‌ಟೇಬಲ್ ( ನಾಗರಿಕ) (ಪುರುಷ) (ಮಿಕ್ಕುಳಿದ ವೃಂದ) -2393
    ಪೊಲೀಸ್ ಕಾನ್ಸ್‌ಟೇಬಲ್ (ನಾಗರಿಕ) (ಮಹಿಳಾ) (ಮಿಕ್ಕುಳಿದ ವೃಂದ) – 799
    ಒಟ್ಟು ಹುದ್ದೆ 3192

    ಕಲ್ಯಾಣ ಕರ್ನಾಟಕ ಪ್ರದೇಶದ 8೦% ಸ್ಥಳೀಯ ವೃಂದದ ಹುದ್ದೆಗಳು:
    ಪೊಲೀಸ್ ಕಾನ್ಸ್‌ಟೇಬಲ್(ನಾಗರಿಕ)(ಪುರುಷ)(ಸ್ಥಳೀಯ) – 266
    ಪೊಲೀಸ್ನಕಾನ್ಸ್‌ಟೇಬಲ್ (ನಾಗರಿಕ) (ಮಹಿಳಾ) (ಸ್ಥಳೀಯ)-75
    ಒಟ್ಟು ಹುದ್ದೆಗಳು 341

    ವಯೋಮಿತಿ : ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಂದರೆ 25-06-2021 ಕ್ಕೆ ಅಭ್ಯರ್ಥಿಗೆ ಕನಿಷ್ಠ 19 ವರ್ಷ ವಯಸ್ಸಾಗಿರಬೇಕು. ಹಾಗೂ ಈ ಕೆಳಕಂಡ ವಯಸ್ಸು ಮೀರಿರಬಾರದು.

    ಸಾಮಾನ್ಯ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ
    ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ 27 ವರ್ಷಗಳು.
    ಇತರೆ ಅಭ್ಯರ್ಥಿಗಳಿಗೆ 25 ವರ್ಷಗಳು.
    ಕರ್ನಾಟಕ ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬುಡಕಟ್ಟು ಅಭ್ಯರ್ಥಿಗಳಿಗೆ 30 ವರ್ಷಗಳು.

    ಪರೀಕ್ಷೆಗಳ ದಿನಾಂಕವನ್ನು ಮುಂದೆ ಜಾಹೀರಾತು ಪಡಿಸಲಾಗುವುದು. ಹಾಗೂ ಪೊಲೀಸ್ ಇಲಾಖೆಯ ಅಧಿಕೃತ ವೆಬ್‌ಸೈಟ್‌ ನಲ್ಲಿ ಪ್ರಕಟಿಸಲಾಗುವುದು. ಆದ್ದರಿಂದ ಅಭ್ಯರ್ಥಿಗಳು ಇಲಾಖೆಯ ವೆಬ್‌ಸೈಟ್‌ನ್ನು ದಿನನಿತ್ಯ ನೋಡಲು ತಿಳಿಸಲಾಗಿದೆ.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

  • 2672 KSRP PC ನೇಮಕ : ಆಯ್ಕೆ ಪಟ್ಟಿ ಪ್ರಕಟ

    2672 KSRP PC ನೇಮಕ : ಆಯ್ಕೆ ಪಟ್ಟಿ ಪ್ರಕಟ

    ಕರ್ನಾಟಕ ಪೊಲೀಸ್ ಇಲಾಖೆಯು 2672 ವಿಶೇಷ ರಿಸರ್ವ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಹಾಗೆ ವಿವಿಧ ವಲಯಗಳಿಗೆ ಅಂತಿಮ‌ ಪಟ್ಟಿಯನ್ನು ಭಾಗಶಃ ಪ್ರಕಟಿಸಿದೆ. ಈ ಆಯ್ಕೆ ಪಟ್ಟಿಯನ್ನು ಕೆಎಸ್ ಪಿ ವೆಬ್‌ಸೈಟ್‌ ನಲ್ಲಿ ವೀಕ್ಷಿಸಬಹುದು.

    ಪ್ರಸ್ತುತ ಬೆಂಗಳೂರು ವಲಯದ 4 ನೇ ಪಡೆ ಮತ್ತು 3 ನೇ ಪಡೆ ಕೆಎಸ್ ಆರ್ ಪಿ ಯ ವಿಶೇಷ ಮೀಸಲು ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಭಾಗಶಃ ಪ್ರಕಟಿಸಲಾಗಿದೆ.

    ಅಭ್ಯರ್ಥಿಗಳು ಸದರಿ ಆಯ್ಕೆ ಪಟ್ಟಿಯನ್ನು ಈ ಲಿಂಕ್ ಕ್ಲಿಕ್ ಮಾಡಬಹುದು

  • KSP DV ಪ್ರವೇಶ ಪತ್ರ ಪ್ರಕಟ

    KSP DV ಪ್ರವೇಶ ಪತ್ರ ಪ್ರಕಟ

    ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಹುದ್ದೆಗಳ ದಾಖಲೆ ಪರಿಶೀಲನೆಯ ಪ್ರವೇಶ ಪತ್ರ ಪ್ರಕಟಿಸಿದೆ.

    ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ನೀಡಿ, ನಂತರ srpc reserve police constable recruitment 2021 ಗೆ ಲಿಂಕ್ ಮೇಲೆ ಕ್ಲಿಕ್ ಮಾಡಿ, ನಂತರ my application ಗೆ ಕ್ಲಿಕ್ ಮಾಡಿ, ಆನಂತರ ಅಭ್ಯರ್ಥಿಗಳು ಅರ್ಜಿ ಸಂಖ್ಯೆ ಜನ್ಮ ದಿನಾಂಕ ನಮೂದಿಸಿ. ಪ್ರವೇಶ ಪತ್ರ ಪ್ರಕಟವಾಗುತ್ತದೆ.

    ಅಧಿಕೃತ ವೆಬ್‌ಸೈಟ್‌ ಲಿಂಕ್

  • ವಿಶೇಷ ರಿಸರ್ವ್ ಪೊಲೀಸ್ ಪ್ರಾಕ್ಟಿಕಲ್ ಅಡ್ಮಿಟ್ ಕಾರ್ಡ್ ಪ್ರಕಟ

    ವಿಶೇಷ ರಿಸರ್ವ್ ಪೊಲೀಸ್ ಪ್ರಾಕ್ಟಿಕಲ್ ಅಡ್ಮಿಟ್ ಕಾರ್ಡ್ ಪ್ರಕಟ

    ಕರ್ನಾಟಕ ಪೊಲೀಸ್ ಇಲಾಖೆಯು 2672 ವಿಶೇಷ ರಿಸರ್ವ್ ಕಾನ್ಸ್‌ಟೇಬಲ್ ಹುದ್ದೆಗಳ ನೇನಕಾತಿಗೆ ಸಂಬಂಧಿಸಿದಂತೆ ಪ್ರಾಕ್ಟಿಕಲ್ ಪರೀಕ್ಷೆ ಪ್ರವೇಶ ಪತ್ರವನ್ನು ಬಿಡುಗಡೆ ಮಾಡಿದೆ.

    ಪ್ರವೇಶ ಪತ್ರದಲ್ಲಿ ನೀಡಲಾದ ದಿನಾಂಕದಂದು ಪ್ರಾಕ್ಟಿಕಲ್ ಪರೀಕ್ಷೆಗೆ ಹಾಜರಾಗಲು ಸೂಚನೆ.

    ಎಎಸ್ ಆರ್ ಪಿಸಿ ಪ್ರಾಕ್ಟಿಕಲ್ ಪರೀಕ್ಷೆ ಅಡ್ಮಿಟ್ ಕಾರ್ಡ್ ಡೌನ್‌ಲೋಡ್ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ

    http://srpc20.ksp-online.in/Login.aspx

  • 50 ಸಶಸ್ತ್ರ ಪಿಸಿ ಹುದ್ದೆಯ ಆಯ್ಕೆ ಪಟ್ಟಿ ಪ್ರಕಟ

    50 ಸಶಸ್ತ್ರ ಪಿಸಿ ಹುದ್ದೆಯ ಆಯ್ಕೆ ಪಟ್ಟಿ ಪ್ರಕಟ

    ಕರ್ನಾಟಕ ಪೊಲೀಸ್ ಇಲಾಖೆಯು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಖಾಲಿ ಇರುವ 50 ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ 2ನೇ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಬಿಡುಗಡೆ ಮಾಡಿದೆ.

    ಕೆಎಸ್ ಪಿ ಯು ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗೆ 2020 ಮೇ ತಿಂಗಳಲ್ಲಿ ಅಧಿಸೂಚನೆ ಹೊರಡಿಸಿತ್ತು. 18-10-2020 ರಂದು ಲಿಖಿತ ಪರೀಕ್ಷೆ ನಡೆಸಿತ್ತು. ಆನಂತರ 2020 ಡಿಸೆಂಬರ್ 19,24 ಹಾಗೂ ಜನವರಿ 2021 ರ 08 ರಂದು ಸಹಿಷ್ಣುತೆ, ದೇಹದಾರ್ಢ್ಯತೆ ಪರೀಕ್ಷೆಯನ್ನು ನಡೆಸಿತ್ತು.

    ವೃಂದ ಮತ್ತು ನೇಮಕಾತಿ ನಿಯಮದನ್ವಯ ಅರ್ಹತಾ ಪಟ್ಟಿಯನ್ನು ಪ್ರಕಟಿಸಿತ್ತು. ದಾಖಲಾತಿ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಗೆ ಗೈರು ಹಾಜರಾಗಿರುವ ಅಭ್ಯರ್ಥಿಗಳನ್ನು ಆಯ್ಕೆಪಟ್ಟಿಯಿಂದ ಬಿಡಲಾಗಿದೆ.

    ಪೊಲೀಸ್ ಇಲಾಖೆಯು ಬಿಡುಗಡೆ ಮಾಡಿದ 2 ನೇ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ವೀಕ್ಷಿಸಲು ಈ ಲಿಂಕ್ ಕ್ಲಿಕ್ ಮಾಡಿ.

    http://rec20.ksp-online.in/

  • 402 ಕೆಎಸ್‌ಪಿ ಸಿವಿಲ್ ಪಿಎಸ್‌ಐ ಹುದ್ದೆಗೆ ಅರ್ಜಿ ಆಹ್ವಾನ

    402 ಕೆಎಸ್‌ಪಿ ಸಿವಿಲ್ ಪಿಎಸ್‌ಐ ಹುದ್ದೆಗೆ ಅರ್ಜಿ ಆಹ್ವಾನ

    ಕರ್ನಾಟಕ ಸ್ಟೇಟ್ ಪೊಲೀಸ್(ಕೆಎಸ್ ಪಿ)ನಲ್ಲಿ ವಿವಿಧ ಹುದ್ದೆಗಳಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು 03 ಮೇ , 2021ಕೊನೆಯ ದಿನಾಂಕವಾಗಿದೆ. ಒಟ್ಟು ಹುದ್ದೆಗಳ ವಿವರ, ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಶುಲ್ಕ ಇತ್ಯಾದಿ ವಿವರಗಳನ್ನು ಮುಂದೆ ನೀಡಲಾಗಿದೆ.

    ಕ್ವಿಕ್ ಲುಕ್
    ಅರ್ಜಿ ಸಲ್ಲಿಸುವುದು ಹೇಗೆ?: ಆನ್ಲೈನ್ ಮೂಲಕ
    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 01-04-2021(10am)
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 03-05-2021(6pm)
    ಅರ್ಜಿ ಶುಲ್ಕ ಸಲ್ಲಿಸಲು ಕೊನೆಯ ದಿನಾಂಕ : 05-05-2021

    ಕೆಎಸ್ ಪಿ ನಲ್ಲಿ ಒಟ್ಟಿ 402 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

    ಸಿವಿಲ್ ಪಿಎಸ್ ಐ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ವೇತನ : ರೂ.37,900/-ರಿಂದ ರೂ.70,850 ನಿಗದಿಪಡಿಸಲಾಗಿದೆ.

    ಕೆಎಸ್ ಪಿ ಯು ಸಿವಿಲ್ ಪಿಎಸ್ ಐ ಹುದ್ದೆಗಳ ನೇಮಕಾತಿಗೆ ಅರ್ಜಿಯನ್ನು ಆಸಕ್ತ ಅಭ್ಯರ್ಥಿಗಳಿಂದ ಆಹ್ವಾನಿಸಿದೆ.

    ಕೆಎಸ್ ಪಿ ನಲ್ಲಿರುವ ಹುದ್ದೆಗಳಿಗೆ ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಆನ್ಲೈನ್ ಹೊರತುಪಡಿಸಿ ಬೇರೆ ಯಾವುದೇ ವಿಧಾನದಲ್ಲಿ ಅರ್ಜಿ ಸಲ್ಲಿಸುವಂತೆ ಇಲ್ಲ.

    ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಆನ್ಲೈನ್ ಪಾವತಿ ವಿಧಾನದ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಬಹುದು.

    ಜನರಲ್ ಅಭ್ಯರ್ಥಿಗಳಿಗೆ ರೂ.500/-,2A,2B,3A ಹಾಗೂ 3B , ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ರೂ.250/- ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ.

    ಆಯ್ಕೆ ಪ್ರಕ್ರಿಯೆ : ಅಭ್ಯರ್ಥಿಗಳ ನ್ನು ಲಿಖಿತ ಪರೀಕ್ಷೆ, ಇಟಿ ಟೆಸ್ಟ್, ಫಿಸಿಕಲ್ ಸ್ಟ್ಯಾಂಡರ್ಡ್ ಟೆಸ್ಟ್ ಮೂಲಕ ಆಯ್ಕೆ ಮಾಡಲಾಗುತ್ತದೆ.

    ವಯೋಮಿತಿ: ಸಿವಿಲ್ ಪಿಎಸ್ ಐ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 21 ಹಾಗೂ ಗರಿಷ್ಠ 30 ವಯೋಮಿತಿ ಹೊಂದಿರಬೇಕು.

    ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ,ಪಿಡ್ಬ್ಯುಡಿ ಅಭ್ಯರ್ಥಿಗಳಿಗೆ 10 ವರ್ಷ,OBC, 2A, 2B, 3A and 3B ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

    ವಿದ್ಯಾರ್ಹತೆ: ಅಭ್ಯರ್ಥಿಗಳು ಅಂಗೀಕೃತ ಯುನಿವರ್ಸಿಟಿ/ಬೋರ್ಡ್ ನಿಂದ ಡಿಗ್ರಿಯನ್ನು ಪಡೆದಿರಬೇಕು.

    ಅಭ್ಯರ್ಥಿಗಳು ಕೆಎಸ್ ಪಿ ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ನೀಡಿ ಅರ್ಜಿ ಡೌನ್‌ಲೋಡ್ ಮಾಡಿ, ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಸಲ್ಲಿಸಬೇಕು.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ.

    ನೋಟಿಫಿಕೇಶನ್ ಗಾಗಿ ಈ ಲಿಂಕ್ ಕ್ಲಿಕ್ ಮಾಡಿ